Navakarnataka Vijnana Tantrajnana Padasampada (2011)
Navakarnataka Publications Private Limited
ಸ್ವಾಯತ್ತ ನರಮಂಡಲ
(ಪ್ರಾ) ಕಶೇರುಕಗಳಲ್ಲಿ ದೇಹದ ನಯಸ್ನಾಯುಗಳಿಗೂ ಗ್ರಂಥಿಗಳಿಗೂ ಪೂರೈಕೆಯಾಗಿರುವ ಚಾಲಕ ನರತಂತುಗಳ ವ್ಯವಸ್ಥೆ. ನಿರಿಚ್ಛಾ ನರಮಂಡಲ. ಸ್ವನಿಯಂತ್ರಿತ ನರಮಂಡಲ
ಸ್ವಾಲೋ ಹಕ್ಕಿ
(ಪ್ರಾ) ನೋಡಿ : ಕವಲುತೋಕೆ ಹಕ್ಕಿ
ಸ್ವಾಸ್ಥ್ಯಕಾರಿ
(ವೈ) ಚಿತ್ತಕ್ಷೋಭೆಯನ್ನು ಶಮನಿಸುವ, ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮದ್ದು
ಸ್ವಿಚ್
(ತಂ) ವಿದ್ಯುನ್ಮಂಡಲದಲ್ಲಿ ಸಂಪರ್ಕ ಕೂಡಿಸಲು ಅಥವಾ ತಪ್ಪಿಸಲು ಬಳಸುವ ಸಾಧನ. ಗುಂಡಿ
ಸ್ವಿವೆಲ್
(ತಂ) ಎರಡು ಭಾಗಗಳಲ್ಲಿ ಒಂದು ತಿರುಗದೆ ಇನ್ನೊಂದನ್ನು ತಿರುಗಿಸಲಾಗುವಂತೆ ಅಳವಡಿಸಿರುವ ವ್ಯವಸ್ಥೆ. ತಿರುಪುಕೊಂಡಿ. ತಿರುಗಣೆ
ಸ್ವೀಕಾರಿ
(ರ) ಪ್ರೇರಿತ ಕ್ರಿಯೆಯಲ್ಲಿಯ ಅಭಿಕಾರಕ; ಪ್ರೇರಕ ಇಲ್ಲಿ ಇರುವುದರಿಂದಾಗಿ ಈ ಅಭಿಕಾರಕ ಮೂರನೆಯ ಪದಾರ್ಥವೊಂದರ ಜೊತೆ ವರ್ತಿಸುವ ದರ ಏರುತ್ತದೆ. (ತಂ) ಸ್ಫಟಿಕೀಯ ಅರೆವಾಹಕದಲ್ಲಿ ಅಶುದ್ಧ ಪರಮಾಣುಗಳನ್ನು ಸ್ವಲ್ಪ ಪ್ರಮಾಣಗಳಲ್ಲಿ ಸೇರಿಸಿ ಉಂಟುಮಾಡುವ (ಎಲೆಕ್ಟ್ರಾನ್ ರಹಿತ) ತೆರಪುಗಳು. ಇವು ಎಲೆಕ್ಟ್ರಾನ್ಗಳನ್ನು ಆಕರ್ಷಿಸಿ ಸ್ವೀಕರಿಸುವುದರಿಂದ ಅರೆವಾಹಕದ ವಾಹಕತೆ ಹೆಚ್ಚುತ್ತದೆ
ಸ್ವೀಕೃತಿ ಪ್ರತಿಚಯನ
(ಸಂ) ಉತ್ಪಾದಿತ ವಸ್ತುಗಳನ್ನು ಸ್ವೀಕರಿಸುವ ಮೊದಲು ಅವುಗಳ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲು ವಸ್ತುಗಳನ್ನು ಯಾದೃಚ್ಛಿಕವಾಗಿ ಆಯುವ, ಪರೀಕ್ಷಿಸುವ ಹಾಗೂ ನಿರ್ಧಾರವನ್ನು ಕೈಗೊಳ್ಳುವ ವಿಧಿವಿಧಾನಗಳು. ಇವುಗಳ ಬಳಕೆ ಹೆಚ್ಚಾಗಿ ಕೈಗಾರಿಕಾ ಉತ್ಪನ್ನಗಳಿಗೆ ಅನ್ವಯಿಸುತ್ತದೆ
ಸ್ವೀಟ್ ಕಾಸ್ವಸ್
(ಸ) ನೋಡಿ : ಚಂಗಲ ಕೋಷ್ಠ
ಸ್ವೇಚ್ಛೆ
(ಗ) ಅನಿರ್ಬಂಧಿತ. ಇಷ್ಟಬಂದಂತೆ. ಇತರ ಮೌಲ್ಯಗಳ ನೆರವಿನಿಂದ ಬಂದಿರದ ತೀರ್ಮಾನದಿಂದ ಗೊತ್ತು ಪಡಿಸಿದ (ಮೌಲ್ಯಗಳು)
ಸ್ವೇದ ಗ್ರಂಥಿ
(ವೈ) ಸ್ತನಿಚರ್ಮದಲ್ಲಿ ಬೆವರು ಸ್ರವಿಸುವ ಪುಟ್ಟ ಗ್ರಂಥಿ. ಪ್ರಭೇದದಿಂದ ಪ್ರಭೇದಕ್ಕೆ ಸ್ವೇದ ಗ್ರಂಥಿಗಳ ವಿತರಣೆ ಬದಲಾಗುತ್ತದೆ. ಮನುಷ್ಯನ ಮತ್ತು ಉನ್ನತ ಪ್ರೈಮೇಟ್ಗಳ ಚರ್ಮದ ಮೇಲೆ ಹೆಚ್ಚು ಕಡಿಮೆ ಪೂರ್ತಿಯಾಗಿ ವ್ಯಾಪಿಸಿವೆ. ಇತರ ಸ್ತನಿಗಳಲ್ಲಿ ವಿತರಣೆ ಸೀಮಿತ
ಸ್ವ್ಯಾಬ್