भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸ್ವಯಂರಕ್ಷಾ ವ್ಯಾಧಿಗಳು

(ವೈ) ಆತಿಥೇಯದ ಊತಕಗಳ ಮೇಲೆಯೇ ಪ್ರತಿಜನಕ/ಪ್ರತಿಕಾಯ ಉಂಟುಮಾಡುವ ಪ್ರತಿಕ್ರಿಯೆಗಳಿಂದಾಗುವ ರೋಗಸಮೂಹ

ಸ್ವಯಂವಿಭಜನೆ

(ರ) ಕೋಶ ಉತ್ಪಾದಿಸಿದ ಕಿಣ್ವಗಳೇ ಅದೇ ಕೋಶದ ಮೇಲೆ ವರ್ತಿಸಿ ಅದರ ವಿಭಜನೆಗೆ ಕಾರಣ ಆಗುವುದು. ಸ್ವಪಚನ

ಸ್ವಯುಗ್ಮನ

(ಸ) ಸ್ವಂತ ಪರಾಗದಿಂದ ಪುಷ್ಪ ನಿಷೇಚಿತ ವಾಗುವುದು. (ಪ್ರಾ) ಒಂದೇ ಕೋಶ ಉತ್ಪಾದಿಸಿದ ಯುಗ್ಮಕಗಳು/ಬೀಜಕಗಳು ಒಂದುಗೂಡುವುದು

ಸ್ವರ

(ಭೌ) ನಿರ್ದಿಷ್ಟ ಶ್ರುತಿಯ ಧ್ವನಿ

ಸ್ವರ

(ಗ) ಗಣಿತಶಾಸ್ತ್ರದಲ್ಲಿ ಬಹುವೇಳೆ ಕ್ರಮಯೋಜನೆ ಹಾಗೂ ವಿಕಲ್ಪ ಸಮಸ್ಯೆಗಳಲ್ಲಿ ಸ್ವರ-ವ್ಯಂಜನಗಳ ಬಳಕೆ ಇರುತ್ತದೆ. (ಸಾ) ೧.ಆಂಗ್ಲ ಅಕ್ಷರಮಾಲೆಯಲ್ಲಿ (ಆಲ್ಫಬೆಟ್ಸ್) a, e, i, o, u ಎಂಬ ಐದು ಅಕ್ಷರಗಳು ಸ್ವರಗಳು, ೨. ಕನ್ನಡ ಅಕ್ಷರಮಾಲೆಯಲ್ಲಿ ಅ, ಇ, ಉ, ಋ, ಎ, ಒ ಎಂಬುವು ಹ್ರಸ್ವ ಸ್ವರಗಳು ಮತ್ತು ಆ, ಈ ಊ, ೠ, ಏ, ಐ, ಓ, ಔ ಎಂಬುವು ದೀರ್ಘಸ್ವರಗಳು, ೩. ಸಂಸ್ಕೃತ ಅಕ್ಷರಮಾಲೆಯಲ್ಲಿ ಕನ್ನಡ ಅಕ್ಷರಮಾಲೆಯಲ್ಲಿರುವಂತೆ ಎ, ಒ ಎಂಬ ಹ್ರಸ್ವ ಸ್ವರಗಳಿಲ್ಲ

ಸ್ವರಕ್ಷಣ ಉಪಾಯ/ತಂತ್ರ

(ವೈ) ವ್ಯಕ್ತಿಯಲ್ಲಿ ಉದ್ವೇಗ, ಭಯ, ಆತಂಕ ಮುಂತಾದವನ್ನು ನಿವಾರಿಸಲು / ಕಡಿಮೆ ಗೊಳಿಸಲು ಅವುಗಳಿಗೆ ಕಾರಣವಾದ ಆಕರವನ್ನು ಆತನ ಪ್ರಜ್ಞೆಯಿಂದ ದೂರವಿರಿಸುವ ಅನೇಕ ನಿರಿಚ್ಛಾ ಪ್ರತಿಕ್ರಿಯೆಗಳ ಸಮುಚ್ಚಯ

ಸ್ವರಗ್ರಾಮ

(ಸಾ) ಸಂಗೀತದ ಉದ್ದೇಶಗಳಿಗಾಗಿ ನಿರ್ದಿಷ್ಟ ಅಂತರಗಳಲ್ಲಿ ವ್ಯವಸ್ಥೆಗೊಳಿಸಿದ, ಕೆಳಗಿನಿಂದ ಹಿಡಿದು ಮೇಲಿನ ಸ್ಥಾಯಿಗಳವರೆಗಿನ ಸ್ವರಶ್ರೇಣಿ

ಸ್ವರಮೇಳ

(ಭೌ) ಏಕಕಾಲದಲ್ಲಿ ವಿವಿಧ ಸ್ವರಗಳನ್ನು ಸಂಯೋಜಿಸಿ ಸೃಷ್ಟಿಸಿದ ಇಂಪಾದ ನಾದ

ಸ್ವರ್ಣಛೇದ

(ಗ) ದೀರ್ಘಖಂಡ ಮತ್ತು ಹ್ರಸ್ವಖಂಡ ಇವುಗಳ ನಡುವಿನ ನಿಷ್ಪತ್ತಿ ಸಮಗ್ರರೇಖೆ ಮತ್ತು ದೀರ್ಘಖಂಡ ಇವುಗಳ ನಡುವಿನ ನಿಷ್ಪತ್ತಿಗೆ ಸಮವಾಗಿರುವಂತೆ ಸರಳರೇಖೆಯೊಂದನ್ನು ಆಂತರಿಕವಾಗಿ ವಿಭಾಗಿಸುವುದು. A______P____B ಅಂದರೆ AP / BP = AB / AP ಅಥವಾ AP2 = AB.PB. ನೋಡಿ: ಮಾಧ್ಯಛೇದ

ಸ್ವವಿದಲಿತ

(ಭೂವಿ) ಅಖಂಡ ಶಿಲೆ ಸ್ವಸ್ಥಾನದಲ್ಲೇ ಅಸಂಖ್ಯ ಚೂರುಗಳಾಗಿ ಒಡೆದಿರುವುದು

ಸ್ವವಿಷ

(ವೈ) ದೇಹದೊಳಗೇ ಉಂಟಾಗುವ ವ್ಯತ್ಯಯಗಳ ಕಾರಣವಾಗಿ ಹುಟ್ಟುವ ವಿಷ ಪದಾರ್ಥ

ಸ್ವಾಂಗಕಸಿ

(ಜೀ) ಜೀವಿಯ ದೇಹದ ಒಂದು ಭಾಗದಿಂದ ಕತ್ತರಿಸಿ ತೆಗೆದ ಊತಕ ರಾಶಿಯನ್ನು/ಅಂಗವನ್ನು ಅದೇ ದೇಹದ ಇನ್ನೊಂದು ಭಾಗಕ್ಕೆ ಜೋಡಿಸುವುದು

ಸ್ವಾಂಗೋಚ್ಛೇದನ

(ಪ್ರಾ) ದೇಹದ ಒಂದು ಭಾಗವನ್ನು ಸ್ವಇಚ್ಛೆಗೆ ಅನುಗುಣವಾಗಿ ಬೇರ್ಪಡಿಸುವುದು. ಉದಾ : ಕೆಲವು ವಲಯವಂತಗಳು, ಸಂಧಿಪದಿಗಳು, ಕಂಟಕಚರ್ಮಿ ಹಲ್ಲಿಗಳು ಇತ್ಯಾದಿಗಳು ಅಂಗ/ಬಾಲವನ್ನು ಸ್ವೇಚ್ಛೆಯಿಂದ ಕಳಚಿಕೊಳ್ಳುವುದು

ಸ್ವಾತಂತ್ರ್ಯಾಂಕಗಳು

(ತಂ) ವಸ್ತು ಅಥವಾ ವ್ಯವಸ್ಥೆ ಚಲಿಸಬಹುದಾದ ಸ್ವತಂತ್ರ ವಿಭಾಗಗಳ ಸಂಖ್ಯೆ. ನಿರ್ದಿಷ್ಟ ಆಕೃತಿ ಇರುವ ಘನವಸ್ತುವಿಗೆ ಈ ಸಂಖ್ಯೆ ೬. ಪರಸ್ಪರ ಲಂಬವಾಗಿರುವ ಮೂರು ನಿರ್ದೇಶಕ ಅಕ್ಷಗಳ ನೇರ ಸ್ವತಂತ್ರ ಚಲನೆ ೩. ಈ ಅಕ್ಷಗಳ ಸುತ್ತ ಸ್ವತಂತ್ರ ಆವರ್ತನೆ ೩. (ಭೌ) ಅಣುವಿನಲ್ಲಿ ಶಕ್ತಿ ನಿಹಿತವಾಗಲು ಅದಕ್ಕೆ ಒದಗಬೇಕಾದ ಸ್ವತಂತ್ರ ಚಲನೆಗಳ ಸಂಖ್ಯೆ ೩: ನೇರ ರೇಖೆಯ ಮೇಲೆ ಚಲನೆ, ಆವರ್ತನೆ ಮತ್ತು ಕಂಪನ. ಯಾವುದೇ ಭೌತ ಅಥವಾ ರಾಸಾಯನಿಕ ವ್ಯವಸ್ಥೆಯಲ್ಲಿ ನಮಗೆ ಇಷ್ಟ ಬಂದಂತೆ ಸ್ವತಂತ್ರವಾಗಿ ನಿಯಂತ್ರಿಸಬಲ್ಲ ವಿವಿಧ ನಿರ್ಬಂಧಗಳು: ಉಷ್ಣತೆ, ಒತ್ತಡ, ಸಾರತೆ ಇತ್ಯಾದಿ

ಸ್ವಾನುರಕ್ತಿ

(ವೈ) ಸ್ವಶರೀರ ಮೆಚ್ಚಿಕೆಯಲ್ಲಿ ಅತ್ಯಾಸಕ್ತಿ. ಮನೋವಿಕಾರ ಪ್ರೇರಕಶಕ್ತಿಯನ್ನು ಸ್ವಶರೀರ ಮೋಹಕತೆಯಲ್ಲಿ ತೊಡಗಿಸುವುದು. ಆತ್ಮರತಿ

ಸ್ವಾನುರಕ್ತಿ ಮನೋಭ್ರಾಂತಿ/ಅರಿಮೆ

(ವೈ) ವ್ಯಕ್ತಿಯೊಬ್ಬ ಪ್ರತಿಯೊಂದು ವಸ್ತು ವಿಷಯವನ್ನೂ ಬೇರೆ ವ್ಯಕ್ತಿ ಅಥವಾ ವಸ್ತುಗಳಿಗೂ ಸಂಬಂಧಿಸಿದಂತೆ ಪರಿಗಣಿಸದೆ ತನಗಷ್ಟೆ ಸಂಬಂಧಿಸಿದಂತೆ ಪರಿಗಣಿಸುವ ಮನೋವಿಕಾರ. ತನ್ನ ಸ್ವಂತ ರೂಪ ಆಕೃತಿಗಳಲ್ಲಿ ವಿಪರೀತ ಇಲ್ಲವೇ ಕಾಮಾತ್ಮಕ ಆಸಕ್ತಿಯುಳ್ಳ ಮನೋಧರ್ಮ. ಆತ್ಮರತಿ

ಸ್ವಾಭಾವಿಕ

(ಸಾ) ನೈಸರ್ಗಿಕ ಪ್ರಕ್ರಿಯೆಗಳಿಂದುಂಟಾದ. ಪ್ರಾಕೃತಿಕ. ಮನುಷ್ಯನಿಂದಾದುದು ಅಲ್ಲ ಅಥವಾ ಅವನನ್ನು ಅವಲಂಬಿಸಿದುದು ಅಲ್ಲ ಅಥವಾ ಅವನಿಂದ ಬದಲಿಸಲ್ಪಟ್ಟುದೂ ಅಲ್ಲ. (ಮನುಷ್ಯನ ಗುಣಕ್ಕೆ ಸಂಬಂಧಿಸಿ) ಹುಟ್ಟಿನಿಂದ ಬಂದುದು, ಶಿಕ್ಷಣ/ತರಬೇತಿನಿಂದಾದುದಲ್ಲ

ಸ್ವಾಭಾವಿಕ ಆವೃತ್ತಿ

(ಭೌ) ಯಾವುದೇ ವ್ಯವಸ್ಥೆಯ ಮುಕ್ತ ಆಂದೋಲನದ ಆವೃತ್ತಿ. ಬಾಹ್ಯ ಬಲದ ಪರಿಣಾಮವಾಗಿಯಲ್ಲದೆ ಸ್ವತಃ ಕಂಪಿಸುತ್ತಿರುವ ಕಾಯವೊಂದರ ಕಂಪನಗಳ ಆವೃತ್ತಿ. ವಿದ್ಯುನ್ಮಂಡಲದಲ್ಲಿ ಯಾವ ಆವೃತ್ತಿಯಲ್ಲಿ ಅನುರಣನೆ ಉಂಟಾಗುತ್ತದೋ ಆ ಆವೃತ್ತಿ

ಸ್ವಾಮ್ಯ ಸನ್ನದು

(ಸಾ) ನೋಡಿ : ಪೇಟೆಂಟ್

ಸ್ವಾಯತ್ತ

(ಸಾ) ಬಾಹ್ಯಕಾರಕದ ಪ್ರಭಾವವಿಲ್ಲದೆ ತಾನೇ ತಾನಾಗಿ ವರ್ತಿಸಬಲ್ಲ. ನಿರಿಚ್ಛಾ

Search Dictionaries

Loading Results

Follow Us :   
  Download Bharatavani App
  Bharatavani Windows App