भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಜಾತೀಯ ಮಿಶ್ರಣ

(ರ) ಗುಣ ಲಕ್ಷಣಗಳಲ್ಲಿ ಒಂದೇ ತೆರನಾಗಿರುವ – ಅಂದರೆ ಯಾವುದೇ ಭಾಗದಲ್ಲಿ ಏನೇ ಭಿನ್ನತೆ ಪ್ರಕಟವಾಗದಿರುವ – ಪದಾರ್ಥ

ಸಜಾತೀಯವಿಜ್ಞಾನ

(ಜೀ) ಡಿಎನ್‌ಎ ಶ್ರೇಣಿಗಳಲ್ಲಿ ಅಥವಾ ಪೆಪ್ಟೈಡ್ ಶ್ರೇಣಿಗಳಲ್ಲಿ ಕಂಡುಬರುವ ಸಾದೃಶ್ಯದ ಪ್ರಮಾಣ ವನ್ನು ಅಭ್ಯಸಿಸುವ ವಿಜ್ಞಾನ (ರ) ಆವರ್ತ ಕೋಷ್ಟಕದಲ್ಲಿ ಅದೇ ಗುಂಪು/ಕುಟುಂಬದ ಧಾತುಗಳ ನಡುವಿನ ಸಂಬಂಧದ ಅಧ್ಯಯನ

ಸಜ್ಜು

(ಕಂ) ಕಂಪ್ಯೂಟರನ್ನು ಕಾರ್ಯನಿರ್ವಹಣೆಗೆ ಸಿದ್ಧ ಪಡಿಸುವುದು, ಕಂಪ್ಯೂಟರನ್ನು ಚಾಲನೆಗೊಳಿಸಿ ಸ್ಮೃತಿ ಕೋಶವನ್ನು ಖಾಲಿ ಮಾಡಿ ಕಾರ್ಯಾನ್ವಯ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಕ್ರಿಯೆಯನ್ನು ಇದು ಒಳಗೊಂಡಿರುತ್ತದೆ

ಸಂಜ್ಞಾಜ್ಯೋತಿ

(ಭೂ) ದೂರ ದೂರ ಪ್ರದೇಶಗಳಿಗೂ ಸ್ಪಷ್ಟವಾಗಿ ಗೋಚರಿಸುತ್ತ ಅಲ್ಲಿ ಸಂಚರಿಸುತ್ತಿರುವವರು ತಮ್ಮ ಸ್ಥಾನಗಳನ್ನು ನಿರ್ಧರಿಸಲು ನೆರವಾಗುವಂತೆ ಉನ್ನತ ಗೋಪುರಾಗ್ರದಲ್ಲಿ ನೆಲೆಗೊಳಿಸಿದ ಪ್ರಖರ ಪ್ರಕಾಶದ ಬೆಳಕು. ಮುಖ್ಯವಾಗಿ ರಾತ್ರಿವೇಳೆ ಸಮುದ್ರ ಸಂಚಾರಿ ನಾವಿಕರಿಗೆ ಸಹಾಯಕ. ತೋರು ಬೆಳಕು

ಸಂಜ್ಞೆ

(ಭೌ) ಮಾಹಿತಿಯನ್ನು ಒಳಗೊಂಡಿದ್ದು ಎಲೆಕ್ಟ್ರಾನಿಕ್ ವ್ಯವಸ್ಥೆ ಅಥವಾ ಮಂಡಲದಲ್ಲಿ ಆ ಮಾಹಿತಿಯನ್ನು ಪ್ರೇಕ್ಷಿಸ ಬಹುದಾದ ಚರ ಪ್ರಾಚಲ (ಪರಾಮೀಟರ್)

ಸಣ್ಣ ಕರುಳು

(ಪ್ರಾ) ಸ್ತನಿ, ಹಕ್ಕಿ, ಸರೀಸೃಪಗಳ ಕರುಳಿನ ಎರಡು ವಿಭಾಗಗಳಲ್ಲಿ ಮೊದಲನೆ ವಿಭಾಗ. ಎರಡನೆಯದು ದೊಡ್ಡ ಕರುಳು. ಸಣ್ಣ ಕರುಳು ಡಿಯೊಡಿನಮ್, ಜೆಜುನಮ್, ಇಲಿಯಮ್‌ಗಳಿಂದ ಆದುದು. ೫ರಿಂದ ೭ ಮೀ ಉದ್ದವಾಗಿ ಇದ್ದು ಇಕ್ಕಟ್ಟಾಗಿರುತ್ತದೆ. ಇದರಲ್ಲಿ ಪಚನಕ್ರಿಯೆ ಜರಗುತ್ತದೆ. ಸಣ್ಣ ಅಂತ್ರ. ನೋಡಿ: ದೊಡ್ಡ ಕರುಳು

ಸತತ

(ಜೀ) ಸಾಧಾರಣ ಕಾಲಾವಧಿ ಮುಗಿದ ನಂತರವೂ ಬೆಳವಣಿಗೆ ಹಾಗೂ ಅಭಿವರ್ಧನೆ ಮುಂದುವರಿಯು ತ್ತಿರುವುದು. ಉದಾ : ಕೊಂಬು, ಕೂದಲು, ಎಲೆ ಇತ್ಯಾದಿ

ಸಂತತ ಭಿನ್ನ

(ಗ) ಸಾಂತ ಅಥವಾ ಅನಂತ ಭಿನ್ನಗಳನ್ನು ನಿರ್ದಿಷ್ಟ ಕ್ರಮದಲ್ಲಿ ಸಂಕಲಿಸುವುದು: ಆರಂಭದ ಸಂಖ್ಯೆಗೆ ಒಂದು ಭಿನ್ನ ಕೂಡಿಸಬೇಕು, ಈ ಭಿನ್ನದ ಭಿನ್ನಕ್ಕೆ ಇನ್ನೊಂದು ಭಿನ್ನವನ್ನು ಕೂಡಿಸಬೇಕು. ಇತ್ಯಾದಿ. ಉದಾ: < page 623.tif> ಇದನ್ನು ಸಂಕ್ಷೇಪವಾಗಿ ನಿರೂಪಿಸುವ ಕ್ರಮ. < page 623a.tif>

ಸಂತತಿ ವೃದ್ಧಿ

(ಜೀ) ಜೀವಕಣಗಳು ಬೇರೆ ಬೇರೆ ಭಾಗಗಳಾಗಿ ಒಡೆದು ಸ್ವತಂತ್ರ ಕಣಗಳಾಗಿ ಮಾರ್ಪಟ್ಟು ಸಂತಾನ ಬೆಳೆಯುವುದು. ಪ್ರಚುರೋದ್ಭವ

ಸತಂತು

(ಜೀ) ತಂತು/ಎಳೆ ಅಥವಾ ಕುಡಿಗಳಿಂದ ಕೂಡಿದ

ಸಂತಾನ ಪರ್ಯಯನ

(ಜೀ) ಪರ್ಯಾಯ ಸಂತತಿ ಉತ್ಪಾದನೆ. ಮೊದಲನೆಯ ಪೀಳಿಗೆಯನ್ನು ಲೈಂಗಿಕ ಕ್ರಿಯೆಯಿಂದ, ಎರಡನೆಯದನ್ನು ಅಲೈಂಗಿಕ ವಿಧಾನದಿಂದ, ಮೂರನೆಯದನ್ನು ಲೈಂಗಿಕ ಕ್ರಿಯೆಯಿಂದ, ಹೀಗೆ ಪಡೆಯುತ್ತ ಹೋಗುವುದು. ತಳಿ/ಇಳುವರಿ ಅಭಿವೃದ್ಧಿಗಾಗಿ ಪ್ರಾಣಿ/ಸಸ್ಯಗಳಲ್ಲಿ ಇದನ್ನು ಅನುಸರಿಸುವುದುಂಟು. ನೋಡಿ : ಪರ್ಯಾಯ ಜನನ

ಸಂತಾನವೃದ್ಧಿ

(ಸ) ತೋಟಗಾರಿಕೆಯಲ್ಲಿ ಅಲೈಂಗಿಕ ಅಥವಾ ಲೈಂಗಿಕ ವಿಧಾನಗಳ ಮೂಲಕ ಸಸ್ಯದ ಸಂತಾನ ವೃದ್ಧಿ

ಸಂತಾನೋತ್ಪತ್ತಿ ಸಾಮರ್ಥ್ಯ

(ಜೀ) ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಸಂತಾನ ವೃದ್ಧಿಸಿಕೊಳ್ಳುವ ಸಾಮರ್ಥ್ಯ. ಜೀವಿಯಿಂದ ಜೀವಿಗೆ ಇದು ಭಿನ್ನ. ಉದಾ: ಆನೆಗೆ ಹೋಲಿಸಿದರೆ ಇಲಿಗಳ ಸಂತಾನೋತ್ಪತ್ತಿ ಸಾಮರ್ಥ್ಯ ಅಧಿಕ

ಸಂತಾನೋತ್ಪಾದಕ ಅಂಶ

(ಪ್ರಾ) ಜನ್ಮದಾತೃಗಳ ರೂಪವನ್ನೇ ಹೋಲುವಂಥ ಹೊಸ ವ್ಯಕ್ತಿಗಳಿಗೆ ಜನ್ಮ ನೀಡುವುದಕ್ಕೆ ನೆರವಾಗುವ ಅಂಶ

ಸಂತಾನೋತ್ಪಾದನೆ

(ಪ್ರಾ) ಪ್ರಭೇದದ ಪ್ರಜನನ ಕ್ರಿಯೆಯಲ್ಲಿ ಹೊಸ ವ್ಯಕ್ತಿಗಳಿಗೆ ಜನ್ಮ ನೀಡುವುದು

ಸಂತುಲನ ಕೋಶ

(ಪ್ರಾ) ೧. ಅನೇಕ ಜಲವಾಸಿ ಅಕಶೇರುಕ ಗಳಲ್ಲಿ, ಸಂವೇದೀ ಕೂದಲೆಳೆಗಳ ಒಳಾವರಣ ಉಳ್ಳ ಹಾಗೂ ತರಲದಿಂದ ತುಂಬಿದ ಒಂದು ವಿಧದ ಚೀಲ (ಕೋಶ). ಈ ಚೀಲದಲ್ಲಿ ಕ್ಯಾಲ್ಸಿಯಮ್ ಹಾಗೂ ಸಿಲಿಕಗಳ ಕರ್ಣಾಶ್ಮಗಳು ಇರುವುವು. ಇವು ಪ್ರಾಣಿಗೆ ಸಂತುಲ ಏರ್ಪಡಿಸಿಕೊಳ್ಳಲು ನೆರವಾಗುತ್ತವೆ. ೨. ಕಶೇರುಕಗಳಲ್ಲಿ ಇದೇ ರೀತಿ ರಚಿತವಾದ ಒಳಗಿವಿಯಲ್ಲಿಯ ಸಣ್ಣ ಚೀಲ

ಸಂತುಲಿತ ದ್ರಾವಣ

(ರ) ಬಿಡಿ ಲವಣಗಳ ವಿಷಕರ ಪರಿಣಾಮಗಳು ಪರಸ್ಪರ ರದ್ದಾಗುವಂಥ ಪ್ರಮಾಣಗಳಲ್ಲಿ ಎರಡು ಅಥವಾ ಹೆಚ್ಚು ಲವಣಗಳ ದ್ರಾವಣ. ಉದಾ: ಕಡಲ ನೀರು

ಸತುವು

(ರ) ಗಡಸು ಬಿಳಿ ಲೋಹೀಯ ಧಾತು. ನೀಲಿಛಾಯೆ. ಪ್ರತೀಕ zn. ಪಸಂ ೩೦; ಸಾಪರಾ ೬೫.೩೭; ೨೦0 ಸೆಯಲ್ಲಿ ಸಾಪೇಕ್ಷ ಸಾಂದ್ರತೆ ೭.೧೨; ದ್ರಬಿಂ ೪೧೮0 ಸೆ; ಕುಬಿಂ ೯೦೭0 ಸೆ. ಸ್ವತಃ ನಶಿಸಿ ಹೋಗಿ ಕಬ್ಬಿಣವನ್ನು ಕ್ಷಯಿಸದಂತೆ ರಕ್ಷಿಸುವ ಕಾರಣ ಸತುವನ್ನು ಕಬ್ಬಿಣಕ್ಕೆ ಲೇಪಿಸಲಾಗುವುದು. ಇದೇ ಗಾಲ್ವನೀಕರಣ

ಸತ್ತ ಕಾಯ

(ವೈ) ಸತ್ತ ಪ್ರಾಣಿ ದೇಹ. ಶವ. ಮೃತದೇಹ. ಹೆಣ

ಸದಸ್ಯ

(ಸ) ಸ್ವರೂಪ ವಿಜ್ಞಾನ ದೃಷ್ಟಿಯಿಂದ ಪರಿಗಣಿಸಿದ ಸಸ್ಯದ ಯಾವುದೇ ಒಂದು ಭಾಗ (ಪ್ರಾ) ಶರೀರದ ಒಂದು ಅಂಗ. ವಿಶೇಷವಾಗಿ ಒಂದು ಉಪಾಂಗ

Search Dictionaries

Loading Results

Follow Us :   
  Download Bharatavani App
  Bharatavani Windows App