भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಂಗ್ರಹ ಬ್ಯಾಟರಿ

(ತಂ) ವಿದ್ಯುತ್ ಪ್ರವಾಹಕ್ಕೆ ಭಂಗವಾಗದಂತೆ ಸರಣಿಯಲ್ಲಿ ಸಂಬಂಧಿತವಾದ ವಿದ್ಯುತ್ ಸಂಗ್ರಾಹಕ ಕೋಶಗಳ ಸಮೂಹ. ನೋಡಿ : ಸಂಚಯಕ

ಸಂಗ್ರಹಕೋಶ

(ತಂ) ರಾಸಾಯನಿಕ ಕ್ರಿಯೆಯಿಂದ ವಿದ್ಯುಚ್ಛಕ್ತಿ ಉತ್ಪಾದಿಸುವ ಕೋಶ. ಇದರಲ್ಲಿ ವಿದ್ಯುಚ್ಛಕ್ತಿ ಬರಿದಾದ ಬಳಿಕ ಇದರ ಮೂಲಕ ವಿರುದ್ಧ ದಿಕ್ಕಿನಲ್ಲಿ ಪ್ರವಾಹ ಹರಿಸಿ ಕೋಶವನ್ನು ಮರುಭರ್ತಿ ಮಾಡಬಹುದು

ಸಂಗ್ರಾಹಕ

(ತಂ) ಎಲೆಕ್ಟ್ರಾನ್ ನಳಿಕೆಯಲ್ಲಿ ತಮ್ಮ ಪಾತ್ರ ಗಳನ್ನು ನಿರ್ವಹಿಸಿದ ಎಲೆಕ್ಟ್ರಾನ್‌ಗಳನ್ನು ಅಥವಾ ಅಯಾನ್‌ಗಳನ್ನು ಸಂಗ್ರಹಿಸುವ ಯಾವುದೇ ಎಲೆಕ್ಟ್ರೋಡ್

ಸಂಘಟನೆ

(ರ) ವಸ್ತುವಿನಲ್ಲಿ ಪರಮಾಣುಗಳ ಮತ್ತು/ಅಥವಾ ಅಯಾನ್‌ಗಳ ರಾಚನಿಕ ವಿತರಣೆ. ರಚನೆ. ಸಂಯೋಜನೆ. ವಿನ್ಯಾಸ

ಸಂಘಟ್ಟನ

(ತಂ) ಎರಡು ಕಾಯಗಳು ಬಲವಾಗಿ ಡಿಕ್ಕಿ ಹೊಡೆದಾಗ ಆಗುವ ಆಘಾತ/ಒಂದಕ್ಕೊಂದು ನೀಡಿದ ಹೊಡೆತ

ಸಂಘಟ್ಟನೆ

(ಭೌ) ಕಣಗಳ ನಡವಿನ ಈ ಅಂತರಕ್ರಿಯೆ ಯಲ್ಲಿ ಸಂವೇಗ ಸಂರಕ್ಷಿತವಾಗಿರುವುದು. ಅವುಗಳ ಚಲನ ಶಕ್ತಿಯೂ ಸಂರಕ್ಷಿತವಾಗಿದ್ದರೆ ಅದು ಪುಟಿತ ಸಂಘಟ್ಟನೆ, ಇಲ್ಲವಾದರೆ ಅಪುಟಿತ ಸಂಘಟ್ಟನೆ. ಡಿಕ್ಕಿ

ಸಂಘಟ್ಟಿಸು

(ಸಾ) ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆಯುವುದು. ಉದಾ : ಶಬ್ದ ಅಲೆಗಳು ಕಿವಿ ತಮಟೆಯನ್ನು ಸಂಘಟ್ಟಿಸುವುದು

ಸಂಘನನ

(ಭೂವಿ) ಭೂಸ್ತರಗಳು ಸಂಚಯನ ವಾದಂತೆ ಉದ್ಭವಿಸುವ ಒತ್ತಡಗಳ ಪರಿಣಾಮವಾಗಿ ಶಿಲೆಗಳು ಗಟ್ಟಿಕಟ್ಟುವ ಪ್ರಕ್ರಿಯೆ. ಕ್ರೋಡೀಕರಣ

ಸಂಚಯಕ

(ಭೌ) ಹೊರಗಿನ ಮೂಲದಿಂದ ಒದಗಿಸಿದ ವಿದ್ಯುತ್ತಿನಿಂದ ರಾಸಾಯನಿಕ ಕ್ರಮದಲ್ಲಿ ವಿದ್ಯುತ್ ಶಕ್ತಿಯನ್ನು ಶೇಖರಿಸಿಕೊಂಡು ಅದನ್ನು ಹೊರ ಹರಿಸುವ ಸಾಮರ್ಥ್ಯ ಉಳ್ಳ ವಿದ್ಯುತ್ ಸಂಗ್ರಹಣ ಕೋಶ. ವಿದ್ಯುತ್ಪೂರಣ ಮತ್ತು ವಿದ್ಯುತ್ ವಿಸರ್ಜನೆ ಮಾಡಬಹುದಾದ ವೋಲ್ಟಾಯಿಕ್ ಕೋಶ. ವಿದ್ಯುತ್ಪೂರಣದಲ್ಲಿ ವಿದ್ಯುತ್ತನ್ನು ಧನ ತುದಿಯಿಂದ ಋಣತುದಿಗೆ ಹರಿಸಿದಾಗ, ವಿದ್ಯುಚ್ಛಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತಿತವಾಗುತ್ತದೆ ಮತ್ತೆ ವಿದ್ಯುತ್ ವಿಸರ್ಜನೆಯಲ್ಲಿ ವಿಪರ್ಯಯ ಕ್ರಿಯೆ ಜರಗುತ್ತದೆ – ರಾಸಾಯನಿಕ ಶಕ್ತಿ ಉಪಯುಕ್ತ ವಿದ್ಯುಚ್ಛಕ್ತಿಯಾಗಿ ಮಾರ್ಪಡುತ್ತದೆ. ಹಾಗಾಗಿ ಸಂಚಯಕಗಳು ಉಪಯುಕ್ತ ಸುವಾಹ್ಯ ವಿದ್ಯುತ್ ಸರಬರಾಜು ಸಾಧನಗಳು. ಆದರೆ ಅನಾನುಕೂಲಗಳೆಂದರೆ ಅವು ಬಹುತೂಕದವು ಮತ್ತು ಹೆಚ್ಚೆಂದರೆ ಶೇ. ೭೦ರಷ್ಟು ಅಷ್ಟೆ ಸಮರ್ಥವಾದವು. ಲೆಡ್-ಆಸಿಡ್ ಹಾಗೂ ನಿಕಲ್-ಐರನ್ ಎಂಬ ಎರಡು ಮಾದರಿಗಳುಂಟು

ಸಂಚಯನ

(ಖ) ಆಗ ತಾನೆ ಮೈದಳೆದ ಪುಟ್ಟ ನಕ್ಷತ್ರದ/ಗ್ರಹದ ಗುರುತ್ವಾಕರ್ಷಣೆಯ ದೆಸೆಯಿಂದ ಆಸುಪಾಸಿನ ದ್ರವ್ಯ ಆ ಕಾಯದ ಸುತ್ತ ಸೇರಿಕೊಂಡು ಆ ಕಾಯವು ವೃದ್ಧಿಸುವುದು. (ಪ್ರಾ) ಹೊರಗಿನಿಂದ ಹೊಸ ಪದಾರ್ಥ ಬಂದು ಸೇರುವುದು ಮತ್ತು ಇಂಥ ಸೇರ್ಪಡೆಯಿಂದಾಗುವ ಬೆಳವಣಿಗೆ

ಸಂಚಯನ ಬಿಂದು

(ಗ) ಬಿಂದುಗಳ ಒಂದು ಗಣಕ್ಕೆ ಸಂಬಂಧಿಸಿದಂತೆ. ಇದರ ಪ್ರತಿಯೊಂದು ನೆರೆ ಪದವೂ ಕೊನೆಯ ಪಕ್ಷ ಗಣದ ಒಂದು ಬಿಂದುವನ್ನು ಒಳಗೊಂಡಿರುವುದು

ಸಂಚರಣೆ

(ಭೌ) ಸಾಮಾನ್ಯವಾಗಿ ಗೋಳೀಯವಾದ ಅಥವಾ ಗೋಳದ ಒಂದು ಭಾಗವಾದ ಇಲ್ಲವೇ ಸಮತಲವಾದ ತರಂಗಾಗ್ರಕ್ಕೆ ಲಂಬ ದಿಕ್ಕಿನಲ್ಲಿ ಅಲೆಗಳ ರೂಪದಲ್ಲಿ ಶಕ್ತಿಯ ಪ್ರಸರಣ. ಶಬ್ದ, ವಿದ್ಯುತ್ಕಾಂತ, ನೀರು ಇತ್ಯಾದಿ ಅಲೆಗಳಿಗೆ ಅನ್ವಯ

ಸಂಚಾರೀ ಕೋಶ

(ಪ್ರಾ) ವಲಸೆ ಹೋಗುವ ಅಮೀಬಾಯ್ಡ್ ಕೋಶಗಳು. ಲ್ಯೂಕೊಸೈಟ್‌ಗಳು ಇಲ್ಲವೇ ಫ್ಯಾಗೊಸೈಟ್‌ಗಳು ಆಗಿರಬಹುದು

ಸಂಚಿ

(ಜೀ) ಪ್ರಾಣಿ ಅಥವಾ ಸಸ್ಯದ ದೇಹದಲ್ಲಿರುವ ತೆಳುಪೊರೆಯ ಚೀಲ. ವಿಶೇಷ ತರಲ ತುಂಬಿರುತ್ತದೆ. ಸಾಮಾನ್ಯವಾಗಿ ಕಿರಿದಾದ ತೆರಪು ಇರಬಹುದು ಅಥವಾ ಇಲ್ಲದಿರಬಹುದು

ಸಂಚಿತ ಆವೃತ್ತಿ ವಕ್ರ

(ಸಂ) ಯಾವುದೇ ಚರ x ಎಂಬುದು ತೆಗೆದುಕೊಳ್ಳುವ ಮೌಲ್ಯಗಳು x1, x2,……xk ಆಗಿರುವಾಗ ನಿಗದಿತ ಮೌಲ್ಯಮಟ್ಟ xiಗಿಂತ ಕೆಳಗೆ ಎಷ್ಟು ಮೌಲ್ಯಗಳಿವೆ ಎಂಬುದನ್ನು ತೋರಿಸುವ ನಕ್ಷೆ.

ಸಂಚಿತ ಪರಿಣಾಮ

(ಸಾ) ನಾನಾ ವಿದ್ಯಮಾನಗಳ ಸಂಕಲಿತ ಪರಿಣಾಮ

ಸಂಚಿಹುಳು

(ಪ್ರಾ) ಸೈಕಿಡೀ ಕುಟುಂಬದ ಸದಸ್ಯ. ಸಸ್ಯಾವೇಶಗಳಿಂದ ತಯಾರಿಸಿದ ರೇಷ್ಮೆ ಕೋಶದ ಒಳ ಹೊಕ್ಕು, ಪತಂಗವಾಗಿ ರೂಪಾಂತರಗೊಂಡು ಹೊರಬಂದು, ಎಲೆ ತಿಂದು ಬದುಕುವ ಕೀಟ

ಸಂಚೀ ಇರುವೆ

(ಪ್ರಾ) ಮುಂದೆ ಎಂದಾದರೂ ತನ್ನ ಗುಂಪಿನ ಬಳಕೆಗಾಗಿ ಆಹಾರ ಸಂಗ್ರಹಿಸಿಡುವ ಚೀಲ ರಚನೆಯುಳ್ಳ ಒಂದು ಮಾದರಿಯ ಶ್ರಮಿಕ ಇರುವೆ

ಸಂಜನನ

(ಭೂವಿ) ಸಂಚಯನ ಶಿಲೆಗಳಿಗೆ ಸಂಬಂಧಿಸಿದಂತೆ ಅಸಂಘಟಿತ ಶಿಲೆಗಳ ರೂಪಣೆ. (ಸ) ಸಸ್ಯ ಘಟಕಗಳ ಪಾರ್ಶ್ವೀಯ ಬೆಸುಗೆ. ಸಹಜನನ

ಸಜಾತೀಯ ಫಲನ

(ಗ) ax2+2hxy+by2 ಇದು xyಗಳಲ್ಲಿ ೨ನೆಯ ಡಿಗ್ರಿ ಸಜಾತೀಯ ಫಲನ. ax2+2hxy+by2+2gx+2fy+c ಇದು x,yಗಳಲ್ಲಿ ೨ನೆಯ ಡಿಗ್ರಿಯ (ಸಜಾತೀಯವಲ್ಲದ) ಸಾರ್ವತ್ರಿಕ ಫಲನ

Search Dictionaries

Loading Results

Follow Us :   
  Download Bharatavani App
  Bharatavani Windows App