भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಂಕ್ಷೇಪಿತ ರಾಶಿ

(ಭೌ) m ಮತ್ತು m ರಾಶಿಗಳುಳ್ಳ ಎರಡು ಕಣಗಳು ತಮ್ಮ ಸಾಮಾನ್ಯ ಗುರುತ್ವಕೇಂದ್ರ ಕುರಿತಂತೆ ನಡೆಸುವ ಸಾಪೇಕ್ಷ ಚಲನೆಯ ಅಧ್ಯಯನದಲ್ಲಿ ಬಳಸುವ mm / (m+M) ಎಂಬ ಪರಿಮಾಣ. ಇದನ್ನು ಚಿಕ್ಕ ರಾಶಿಯ ಸ್ಥಳದಲ್ಲಿ ಬಳಸಲಾಗುತ್ತದೆ; ಆಗ ದೊಡ್ಡ ರಾಶಿಯ ಚಲನೆಯನ್ನು ಉಪೇಕ್ಷಿಸಲಾಗುತ್ತದೆ

ಸಕ್ಸಿನಿಕ್ ಆಮ್ಲ

(ರ) HOOC.CH2.CH2, COOH. ದ್ವಿಪ್ರತ್ಯಾಮ್ಲೀಯ ಆಮ್ಲ; ದ್ರಬಿಂ ೧೮೫ಂ ಸೆ; ಕುಬಿಂ ೨೩೫0 ಸೆ; ಅನ್‌ಹೈಡ್ರೈಡ್‌ಗಳಾಗಿ ಭಾಗಶಃ ವಿಘಟಿಸುತ್ತದೆ, ಕಬ್ಬಿನ ರಸ, ಹರಳು ಗಿಡ ಹಾಗೂ ನಾನಾ ಪ್ರಾಣಿ ಊತಕಗಳಲ್ಲಿ ಕಂಡುಬರುತ್ತದೆ. ಪ್ರಾಣಿಗಳ ಉಪಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸುಗಂಧ ಎಸ್ಟರ್‌ಗಳ ತಯಾರಿಕೆಯಲ್ಲಿ ಮತ್ತು ರಾಸಾಯನಿಕ ಮಧ್ಯವರ್ತಿಯಾಗಿ ಬಳಕೆ

ಸಕ್ಸಿನೇಟ್

(ರ) ಸಕ್ಸಿನಿಕ್ ಆಮ್ಲದ ಲವಣ ಇಲ್ಲವೇ ಎಸ್ಟರ್. ಉದಾ : ಸಕ್ಸಿನಿಕ್ ಆಮ್ಲ ಹಾಗೂ ಸೋಡಿಯಮ್ ಹೈಡ್ರಾಕ್ಸೈಡ್‌ಗಳ ರಾಸಾಯನಿಕ ಕ್ರಿಯೆಯಿಂದಾದ ಸೋಡಿಯಮ್ ಸಕ್ಸಿನೇಟ್ Na2C4H4O4.6H2O

ಸಂಖ್ಯಾ ಸಾತತ್ಯ

(ಗ) ಪರಿಮೇಯ ಹಾಗೂ ಅಪರಿಮೇಯ ಸಂಖ್ಯೆಗಳ ಸಹಿತವಾದ ಸಮಗ್ರ ನೈಜ ಸಂಖ್ಯೆಗಳ ಸಮುದಾಯ

ಸಂಖ್ಯಾಕಲನ ವಿಜ್ಞಾನ

(ಗ) ಸಾಂಖ್ಯಕ ಮಾಹಿತಿಗಳನ್ನು / ದತ್ತಾಂಶಗಳನ್ನು ಸಂಗ್ರಹಿಸುವುದು, ಅವನ್ನು ಸಂಭಾವ್ಯತಾ ಸಿದ್ಧಾಂತಕ್ಕೆ ವಿಶೇಷ ಉಲ್ಲೇಖವಿರುವಂತೆ ಗಣಿತಪದಗಳಲ್ಲಿ ವ್ಯಾಖ್ಯಾನಿಸುವುದು

ಸಂಖ್ಯಾಕೋಷ್ಟಕ

(ಗ) ಮಿಲಿಯನ್ = ೧೦೬; ಬಿಲಿಯನ್ ೧೦೯; ಟ್ರಿಲಿಯನ್=೧೦೧೨; ಕ್ವಾಡ್ರಿಲಿಯನ್=೧೦೧೫; ಕ್ವಿಂಟಿಲಿಯನ್=೧೦೧೮; ಸೆಕ್ಸ್‌ಟಿಲಿಯನ್=೧೦೨೧’ ಸೆಪ್ಟೀಲಿಯನ್=೧೦೨೪; ಅಕ್ಟಿಲಿಯನ್=೧೦೨೭; ನೊನಿಲಿಯನ್=೧೦೩೦; ಡೆಸಿಲಿಯನ್=೨೦೩೩. ಭಾರತೀಯ ಕ್ರಮದಲ್ಲಿ : ೧ ಲಕ್ಷ=೧೦೫; ೧೦೦ ಲಕ್ಷ=೧ ಕೋಟಿ=೧೦೭; ೧೦೫ ಕೋಟಿ = ಲಕ್ಷ ಕೋಟಿ = ೧ ಶಂಖ = ೧೦೧೨; ೧೦೫ ಶಂಖ = ಲಕ್ಷಶಂಖ = ೧ ಮಹಾಶಂಖ = ೧೦೧೭; ೧೦೫ ಮಹಾಶಂಖ = ಲಕ್ಷ ಮಹಾಶಂಖ = ೧ ಬೃಂದ = ೧೦೨೨; ೧೦೫ ಬೃಂದ = ಲಕ್ಷ ಮಹಾಬೃಂದ = ೧ಮಹಾಬೃಂದ = ೧೦೨೭; ೧೦೫ ಮಹಾಬೃಂದ=ಲಕ್ಷ ಮಹಾಬೃಂದ = ೧ ಪದ್ಮ = ೧೦೩೨; ೧೦೫ ಪದ್ಮ = ಲಕ್ಷ ಪದ್ಮ = ೧ ಮಹಾಪದ್ಮ = ೧೦೩೭; ೧೦೫ ಮಹಾಪದ್ಮ = ಲಕ್ಷ ಮಹಾಪದ್ಮ = ೧ ಖರ್ವ = ೧೦೪೨; ೧೦೫ ಖರ್ವ = ಲಕ್ಷಖರ್ವ = ೧ ಮಹಾಖರ್ವ = ೧೦೪೭; ೧೦೩ ಮಹಾಖರ್ವ = ಸಾವಿರ ಮಹಾಖರ್ವ = ೧ ಸಮುದ್ರ = ೧೦೫೦; ೧೦೫ ಸಮುದ್ರ = ಲಕ್ಷ ಸಮುದ್ರ = ೧ ಓಘ = ೧೦೫೫; ೧೦೫ ಓಘ = ಲಕ್ಷ ಓಘ = ೧ ಮಹೌಘ = ೧೦೬೦. ಗೂಗಾಲ್=೧೦೧೦೦; ಗೂಗಾಲ್‌ಪ್ಲೆಕ್ಸ್ = ೧೦ಗೂಗಾಲ್

ಸಂಖ್ಯಾನ

(ಗ) ಸಂಖ್ಯೆಗಳನ್ನು ಅವುಗಳ ಸಹಜ ಕ್ರಮದಲ್ಲಿ ನಿರೂಪಿಸುವ ಪ್ರಕ್ರಿಯೆ

ಸಂಖ್ಯಾರೇಖೆ

(ಗ) ಪ್ರತಿಯೊಂದು ನೈಜ ಸಂಖ್ಯೆಗೂ ಸಂವಾದೀ ಬಿಂದುವನ್ನು ಗುರುತಿಸುವ ಕ್ಷಿತಿಜ ಸರಳರೇಖೆ. ಇದರಲ್ಲಿ ಆಸನ್ನ ಪೂರ್ಣಾಂಕಗಳ ಸಮವಾದೀ ಬಿಂದುಗಳು ಏಕಮಾನ ಅಂತರದಲ್ಲಿರುತ್ತವೆ

ಸಂಖ್ಯೆಗಳು

(ಗ) ಎಣಿಸಲು ಹಾಗೂ ಅಳೆಯಲು ಬಳಸುವ ಪ್ರತೀಕಗಳು. ಈಗ ಸಾರ್ವತ್ರಿಕ ಚಲಾವಣೆಯಲ್ಲಿ ಇರುವ ಹಿಂದೂ-ಅರ‍್ಯಾಬಿಕ್ ಸಂಖ್ಯಾ ಪದ್ಧತಿಯಲ್ಲಿ ಹತ್ತು ವಿಭಿನ್ನ ಪ್ರತೀಕಗಳಿವೆ. ಇವು ಅಂಕೆಗಳು. ೦, ೧, ೨, ೩…..೯ ಇವುಗಳ ವಿವಿಧ ಸಂಯೋಜನೆಗಳೇ ಸಂಖ್ಯೆಗಳು. ಪೂರ್ಣಾಂಕ : ಪರಿಮೇಯ ಸಂಖ್ಯೆಗಳಲ್ಲಿ ಭಿನ್ನರಾಶಿಯಲ್ಲದ ಯಾವುದೇ ಸಂಖ್ಯೆ. ಉದಾ : ೧, ೨,-೩, -೪…

ಸಂಗತ

(ಗ) ನೋಡಿ: ಅನುಬದ್ಧ

ಸಂಗತ

(ಸಾ) ಸಮಂಜಸ. ಹೊಂದು. ದೃಢ

ಸಂಗತ

(ಭೌ) ಯಾವುದೇ ಮೂಲಭೂತ ಸೈನುಸಾಯ್ಡಲ್ ಆಂದೋಲನದ (ತ್ರಿಕೋಣಮಿತೀಯ ಫಲನ ಸೈನ್ ಕ್ರಮವಾಗಿ ನಿರೂಪಿಸಬಹುದಾದ ಆಂದೋಲನ) ಸರಳ ಗುಣಿತ ಆವೃತ್ತಿ ಇರುವ ಆಂದೋಲನ. ಇಲ್ಲಿನ ಸೈನುಸಾಯ್ಡಲ್ ಆಂದೋಲನದ ಮೂಲಭೂತ ಆವೃತ್ತಿಗೆ ಮೊದಲ ಸಂಗತ ಎಂದು ಹೆಸರು. ಇದರ ಎರಡರಷ್ಟು ಇರುವುದು ಎರಡನೆಯ ಸಂಗತ. ಮೂರರಷ್ಟು ಇರುವುದು ಮೂರನೆಯ ಸಂಗತ, ಇತ್ಯಾದಿ. ಬಿಗಿ, ಎಳೆದಿಟ್ಟ ತಂತಿ ಅಥವಾ ಹಿಡಿದಿಟ್ಟ ವಾಯು ಸ್ತಂಭ (ತಂಬೂರಿ ಬುರುಡೆಯಲ್ಲಿಯಂತೆ) ಮೂಲಭೂತ ನಾದಗಳ ಜೊತೆಗೆ ಉನ್ನತ ಸಂಗತಗಳನ್ನು ಏಕಕಾಲದಲ್ಲಿ ಹೊಮ್ಮಿಸುತ್ತವೆ. ತಂತಿ ಅಥವಾ ಸ್ತಂಭ ನಿರ್ದಿಷ್ಟ ಖಂಡಗಳಾಗಿ ಬೇರ್ಪಟ್ಟು ಪ್ರತಿಯೊಂದು ಖಂಡವೂ ತಾನು ಅಖಂಡವೋ ಎಂಬ ತೆರದಲ್ಲಿ ಕಂಪಿಸುವುದೇ ಇದಕ್ಕೆ ಕಾರಣ. ಉನ್ನತ (ತಾರ) ಸಂಗತಗಳಿಗೆ ಅಧಿನಾದಗಳೆಂಬ ಹೆಸರೂ ಉಂಟು. ಇಲ್ಲಿ ಎರಡನೆಯ ಸಂಗತ ಮೊದಲನೆಯದರ ಅಧಿನಾದ, ಮೂರನೆಯ ಸಂಗತ ಎರಡನೆಯದರ ಅಧಿನಾದ, ಇತ್ಯಾದಿ. ಹರಾತ್ಮಕ. ಹಾರ್ಮಾನಿಕ್

ಸಂಗತ ಛೇದ

(ಗ) A, B, C, D ಎಂಬ ನಾಲ್ಕು ಏಕರೇಖಸ್ಥ ಬಿಂದುಗಳ ಪಾತಾನುಪಾತ – ೧ ಆಗಿದ್ದರೆ, ಅಂದರೆ (ABCD) = -1 ಆಗಿದ್ದರೆ ಆಗ < page 621a.tif> < page 621b.tif> ಆಗ B, D ಬಿಂದುಗಳು ACಯನ್ನು ಒಳಗೂ ಹೊರಗೂ ಒಂದೇ ನಿಷ್ಪತ್ತಿಯಲ್ಲಿ ಛೇದಿಸುತ್ತವೆ. ಅದೇ ರೀತಿ A, C ಬಿಂದುಗಳು BDಯನ್ನು ಕೂಡ. ACಯನ್ನು B, D ಅಂತೆಯೇ BDಯನ್ನು A, C ಸಂಗತವಾಗಿ ಛೇದಿಸುತ್ತವೆ ಎನ್ನುತ್ತೇವೆ

ಸಂಗತ ಮಾಧ್ಯ

(ಗ) a, b ದತ್ತ ರಾಶಿಗಳಾಗಿದ್ದು ಇವುಗಳ ನಡುವೆ hನ್ನು a, h, b ಹರಾತ್ಮಕ ಶ್ರೇಢಿಯಲ್ಲಿರುವಂತೆ ಆದೇಶಿಸಿದರೆ ಆಗ hಗೆ a ಮತ್ತು bಗಳ ಹರಾತ್ಮಕ ಮಾಧ್ಯ ಎಂದು ಹೆಸರು. a, h, b ಹರಾತ್ಮಕ ಶ್ರೇಢಿ: < page 621c.tif> ಸಮಾಂತರ ಶ್ರೇಢಿ: < page 621d.tif> < page 621e.tif> ಹರಾತ್ಮಕ ಮಾಧ್ಯ

ಸಂಗತ ವಿಶ್ಲೇಷಕ

(ಭೌ) ಸಂಕೀರ್ಣ ತರಂಗವನ್ನು ಅದರ ಘಟಕ ತರಂಗಗಳಾಗಿ ವಿಭಜಿಸುವ ಸಾಧನ. ಹರಾತ್ಮಕ ವಿಶ್ಲೇಷಕ

ಸಂಗತ ಸಂಯುಗ್ಮಿಗಳು

(ಗ) ನಾಲ್ಕು ಏಕರೇಖಾಸ್ಥ ಬಿಂದುಗಳ ಪಾತಾನುಪಾತ ಹರಾತ್ಮಕವಾಗಿದ್ದರೆ (ಅಂದರೆ ಮೌಲ್ಯ-೧ ಆಗಿದ್ದರೆ) ಆಗ ಯಾವುದೇ ಎರಡು ಬಿಂದುಗಳು ಉಳಿದೆರಡರ ಹರಾತ್ಮಕ ಸಂಯುಗ್ಮಿಗಳು. < page 622a.tif>< page 622b.tif> ಅಥವಾ (AB, CD) = -1 ಆಗಿದ್ದರೆ, ಆಗ C,D ಬಿಂದುಗಳು A,Bಯ ಸಂಗತ ಸಂಯುಗ್ಮಿಗಳು. ಹರಾತ್ಮಕ ಸಂಯುಗ್ಮಿಗಳು. ನೋಡಿ : ಪಾತಾನುಪಾತ

ಸಂಗಮ

(ಭೂವಿ) ಎರಡು ಅಥವಾ ಹೆಚ್ಚು ನದಿಗಳು ಕೂಡುವ ಸ್ಥಳ. ಕೂಡಲು

ಸಂಗಮ ಬಿಂದು

(ಗ) ಹಲವಾರು ಸರಳರೇಖೆಗಳು ಸಂಧಿಸುವ ಏಕಬಿಂದು. ಮಸೂರದಲ್ಲಿ ನಾಭಿ. ಅಭಿಸರಣ ಕೇಂದ್ರ

ಸಂಗಾತಿ ತಾರೆ

(ಖ) ಗುರುತ್ವಾತ್ಮಕವಾಗಿ ಬಂಧಿತ ವಾದ ಯಮಳ ನಕ್ಷತ್ರಗಳಲ್ಲಿ ಒಂದು ಇನ್ನೊಂದಕ್ಕೆ ಸಂಗಾತಿ ತಾರೆ. ಉದಾ : ಲುಬ್ಧಕವು Aಯ ಅಗೋಚರ ಸಂಗಾತಿ. ಇದು ಲುಬ್ಧಕ B

ಸಂಗಾಮೀ

(ಗ) ನೋಡಿ : ಏಕಬಿಂದುಸ್ಥ

Search Dictionaries

Loading Results

Follow Us :   
  Download Bharatavani App
  Bharatavani Windows App