भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಂಕೋಚಕ ಊತಕ

(ಜೀ) ಅಂಗೋಪಾಂಗ ಗಳ ಸಂಕೋಚನೆಗೆ ಕಾರಣವಾಗುವ ಅಂಗಾಂಶಗಳ ಸಮುದಾಯ

ಸಂಕೋಚಕತೆ

(ಸಾ) ಕುಗ್ಗಬಲ್ಲ ಗುಣ

ಸಂಕೋಚನ ಒತ್ತಡ

(ವೈ) ಹೃದಯದ ವ್ಯಾಕೋಚನ ಸಂಕೋಚನ ಕ್ರಿಯಾಚಕ್ರದಲ್ಲಿ ಹೃದಯದ ಕುಹರಗಳು ಸಂಕುಚಿಸಿ ರಕ್ತವನ್ನು ಧಮನಿಗಳೊಳಕ್ಕೆ ತಳ್ಳುವ ಮಜಲು. ಆಗ ಧಮನಿಯಲ್ಲಿ ರಕ್ತದೊತ್ತಡ ಗರಿಷ್ಠವಾಗುತ್ತದೆ. ನೋಡಿ : ವ್ಯಾಕೋಚನ ಒತ್ತಡ

ಸಂಕೋಚನೆ

(ಸಾ) ಕುಗ್ಗುವಿಕೆ. ಗಾತ್ರ ಕಿರಿದಾಗುವಿಕೆ

ಸಂಕೋಚಿಸು

(ಸಾ) ಕುಗ್ಗು. ಕಿರಿದಾಗು, ಚಿಕ್ಕದಾಗು

ಸಂಕೋಚಿಸುತ್ತಿರುವ ವಿಶ್ವ

(ಖ) ಈಗ ಹಿಗ್ಗುತ್ತಿರುವ ಅಥವಾ ವ್ಯಾಕೋಚಿಸುತ್ತಿರುವ ವಿಶ್ವ ಹಲವು ಕೋಟಿ ವರ್ಷಗಳ ನಂತರ ಸ್ಥಗಿತವಾಗಿ ಬಳಿಕ ಕುಗ್ಗಲು/ಸಂಕೋಚಿಸಲು ತೊಡಗಲಿದೆ ಎಂಬ ವಾದ. ನೋಡಿ : ವ್ಯಾಕೋಚಿಸುತ್ತಿರುವ ವಿಶ್ವ

ಸಂಕೋಚ್ಯ

(ವೈ) ದೇಹದ ಯಾವುದೇ ಭಾಗದಲ್ಲಿ ಸ್ನಾಯುಗಳ ಸೆಡೆತ ಇಲ್ಲವೇ ವ್ಯಾಘಾತದ ಪರಿಣಾಮವಾಗಿ ತಲೆದೋರುವ ವಿರೂಪ. ಸೆಡವು

ಸಕ್ಕರೆ

(ರ) ನೀರಿನಲ್ಲಿ ವಿಲೀನವಾಗುವ, ಸಿಹಿರುಚಿಯ ಸಾಪೇಕ್ಷವಾಗಿ ಕಡಿಮೆ ಅಣುತೂಕದ ಕಾರ್ಬೊಹೈಡ್ರೇಟ್‌ಗಳು. ಸರಳ ಸಕ್ಕರೆಗಳು ಮಾನೊಸ್ಯಾಕರೈಡ್ ಅಥವಾ ಡೈಸ್ಯಾಕರೈಡ್. C12H22O11. ತಮ್ಮ ಸಂಯೋಜನೆಗೆ ಅನುಗುಣವಾಗಿ ಗ್ಲೂಕೋಸ್ ಗಳೆಂದೂ (ದ್ರಾಕ್ಷಿಯ ಸಕ್ಕರೆ) ಸುಕ್ರೋಸ್‌ಗಳೆಂದೂ (ಕಬ್ಬಿನ ಅಥವಾ ಬೀಟ್‌ರೂಟ್ ಸಕ್ಕರೆ) ವಿಂಗಡವಾಗುವ ಹಲವು ಬಗೆಯ ಸಕ್ಕರೆ. ಶರ್ಕರ

ಸಕ್ಕರೆ ರೋಗ

(ವೈ) ನೋಡಿ : ಮಧುಮೇಹ

ಸಂಕ್ರಮ

(ಖ) ಒಂದು ಆಕಾಶಕಾಯ ಇನ್ನೊಂದರಿಂದ ಮರೆ ಆಗುವ ಘಟನೆ. ಉದಾ: ಸೂರ್ಯಗ್ರಹಣ. ಇದರಲ್ಲಿ ಸೂರ್ಯನನ್ನು ಚಂದ್ರ ಮರೆಮಾಡುತ್ತದೆ; ಎಂದೇ ಇದು ಚಂದ್ರನಿಂದ ಸೂರ್ಯಸಂಕ್ರಮ

ಸಂಕ್ರಮ ಮಾಪಕ

(ಖ) ಯಾವುದೇ ಆಕಾಶಕಾಯ ನಿರ್ದಿಷ್ಟ ರೇಖಾಂಶ ವೃತ್ತವನ್ನು ಅಡ್ಡಹಾಯುವ ಘಟನೆಯನ್ನು ವೀಕ್ಷಿಸಲು ಬಳಸುವ ಸಾಧನ

ಸಂಕ್ರಮಣ

(ಖ) ೧. ಒಂದು ಆಕಾಶಕಾಯವು ಒಂದು ಸ್ಥಳದ ಮಧ್ಯಾಹ್ನರೇಖೆಯನ್ನು ಹಾದುಹೋಗುವಂತೆ ಕಾಣುವುದು. ೨. (ಬುಧ, ಶುಕ್ರ ಮೊದಲಾದ) ಆಕಾಶಕಾಯವು (ಸೂರ್ಯನಂಥ ಅಥವಾ ಉಪಗ್ರಹದಂಥ) ಆಕಾಶಕಾಯದ ಮಂಡಲ ಹಾದು ಹೋಗುವಂತೆ ಕಾಣುವುದು

ಸಂಕ್ರಮಣ ಉಷ್ಣತೆ

(ಭೌ) ವಸ್ತುವಿನ ಒಂದು ಸ್ಫಟಿಕೀಯ ರೂಪ ಮತ್ತೊಂದಕ್ಕೆ ವ್ಯತ್ಯಯವಾಗುವ ಉಷ್ಣತಾ ಬಿಂದು. ವಸ್ತುವಿನ ಪ್ರಾವಸ್ಥೆ ವ್ಯತ್ಯಯವಾಗುವ ಉಷ್ಣತೆ. ವಸ್ತುವೊಂದು ಅಧಿಕವಾಹಕತ್ವ ಪಡೆಯುವ ಉಷ್ಣತೆ. ವಸ್ತುವಿನಲ್ಲಿ ಕಾಂತತ್ವದಂಥ ಗುಣಗಳು ವ್ಯತ್ಯಯವಾಗುವ ಉಷ್ಣತೆ

ಸಂಕ್ರಮಣ ಧಾತುಗಳು

(ರ) ಆವರ್ತ ಕೋಷ್ಟಕದ ಅಡ್ಡಸಾಲುಗಳಲ್ಲಿ ತಮ್ಮ ಅಕ್ಕಪಕ್ಕದವುಗಳ ರಾಸಾಯನಿಕ ಗುಣಗಳನ್ನು ಹೋಲುವ ಧಾತುಗಳು. ಇವುಗಳ ಆಂತರಿಕ ಎಲೆಕ್ಟ್ರಾನ್ ಚಿಪ್ಪುಗಳು ಅಸಂಪೂರ್ಣ ಮತ್ತು ಇವು ತಮ್ಮ ಚರ ವೇಲೆನ್ಸ್‌ಗಳಿಂದ ಲಕ್ಷಣೀಕೃತವಾಗಿವೆ. ಆವರ್ತ ಕೋಷ್ಟಕದ ದೀರ್ಘ ಅವಧಿಗಳ ನಡುವಿನಲ್ಲಿ ಇವುಗಳ ನೆಲೆ. ಸ್ಕ್ಯಾಂಡಿಯಮ್‌ನಿಂದ ಸತುವಿನ, ಯಿಟ್ರಿಯಮ್‌ನಿಂದ ಕ್ಯಾಡ್ಮಿಯಮ್‌ನ, ಲ್ಯಾಂಥನಮ್ ನಿಂದ ಪಾದರಸದವರೆಗಿನ ಧಾತುಗಳಿವು. ಈ ಶ್ರೇಣಿಯ ಅನೇಕ ಧಾತುಗಳು ಮತ್ತು ಅವುಗಳ ಲವಣಗಳು ಅನುಕಾಂತೀಯ ಲಕ್ಷಣ ಪ್ರದರ್ಶಿಸುತ್ತವೆ. ಸಂಕ್ರಮಣ ಧಾತುಗಳಲ್ಲಿ ಎರಡು ಬಗೆ. ಹೊರಕವಚದ ಹಿಂದಿನ ಕವಚ ಅಪೂರ್ಣವಾಗಿದ್ದರೆ ಸಂಕ್ರಮಣ ಧಾತುಗಳೆಂದೂ ಹೊರಕವಚದ ಹಿಂದಿನ ಕವಚದ ಹಿಂದಿನ ಕವಚ ಅಪೂರ್ಣವಾಗಿದ್ದರೆ ಒಳಸಂಕ್ರಮಣ ಧಾತುಗಳೆಂದೂ ಹೇಳಲಾಗುತ್ತದೆ

ಸಕ್ರಿಯ ರಾಶಿ

(ರ) ರಾಸಾಯನಿಕ ಉಷ್ಣಗತಿ ವಿಜ್ಞಾನ ದಲ್ಲಿ ವಿಶಿಷ್ಟ ಅರ್ಥವಿರುವ ಪದ. ಸ್ಥೂಲವಾಗಿ ಕ್ರಿಯಾಭಾಗಿಯ ಮೋಲಾರತೆ – ಅಂದರೆ ಪದಾರ್ಥದ ಮೋಲ್‌ಗಳ ಸಂಖ್ಯೆ/ಲೀಟರ್

ಸಂಕ್ಷಾರಕ

(ರ) ತುಕ್ಕು ಹಿಡಿಸುವ, ತಿಂದು ಹಾಕುವ, ನಾಶಕಾರಿ. ತೇವ, ಗಾಳಿ ಅಥವಾ ರಾಸಾಯನಿಕಗಳ ನೆರವಿನಿಂದ ವಸ್ತುಗಳ ಮೇಲೆ, ವಿಶೇಷವಾಗಿ ಲೋಹಗಳ ಮೇಲೆ ರಾಸಾಯನಿಕ ಕ್ರಿಯೆ ಜರಗಿಸುವ (ಪದಾರ್ಥ). ನಶಿಸುವಂತಹ

ಸಂಕ್ಷಾರಣ

(ರ) ಘನಪದಾರ್ಥಗಳು ರಾಸಾಯನಿಕ ದಾಳಿಯಿಂದ ನಿಧಾನವಾಗಿ ಕ್ಷಯಿಸುವುದು. (ಭೂವಿ) ಅಗ್ನಿಶಿಲೆ ಘನೀಭವಿಸುವ ತರುಣದಲ್ಲಿ ರೂಪುಗೊಂಡ ಸ್ಪಟಿಕಗಳ ಮೇಲೆ ಶೇಷ ಮ್ಯಾಗ್ಮ ವರ್ತಿಸಿದಾಗ ಕಂಡುಬರುವ ಪರಿವರ್ತನೆ. ಕೊರೆತ. ಕ್ಷಯ. ಲೋಹಜೀರಣ

ಸಂಕ್ಷಾರಣ ನಿರೋಧಕ

(ರ) ಲೋಹಗಳ ನಶಿಸಿಕೆಯನ್ನು ನಿರೋಧಿಸಲು ಬಳಕೆಯಾಗುವ ಸಂಯುಕ್ತ. ಇದು ಲೋಹದ ಹೊರಮೈಮೇಲೆ ಆಕಾವಿಕ ಪದರವಾಗಿ ನಶಿಸಿಕೆ ತಡೆಗಟ್ಟುವುದೆಂದು ನಂಬಲಾಗಿದೆ. ಅಲ್ಯೂಮಿನಿಯಮ್‌ನಂಥ ಕೆಲವು ಲೋಹಗಳು ಸಂಕ್ಷಾರಣ ನಿರೋಧಕಗಳು

ಸಂಕ್ಷೇಪ

(ಸಾ) ದೀರ್ಘಪದದ ಹ್ರಸ್ವರೂಪ; ಉದಾ: ಕಿಮೀ (ಕಿಲೋಮೀಟರ್) ಉದಾ (ಉದಾಹರಣೆ) ಸಾಪರಾ (ಸಾಪೇಕ್ಷ ಪರಮಾಣು ರಾಶಿ)

ಸಂಕ್ಷೇಪನ ಸೂತ್ರಗಳು

(ಗ) (ಅನುಕಲನದಲ್ಲಿ) ಒಂದು ಅನುಕಲವನ್ನು ಕೆಲವು ಸರಳ ಅನುಕಲಗಳ ಮೂಲಕ ವ್ಯಕ್ತಪಡಿಸುವ ಸೂತ್ರಗಳು. ಉದಾ: < page 620.tif> ಆಗಿರುವಾಗ ಸಂಕ್ಷೇಪನ ಸೂತ್ರದ ಅನ್ವಯದಿಂದ < page 620a.tif> ದೊರೆಯುತ್ತದೆ. (ತ್ರಿಕೋಣ ಮಿತಿಯಲ್ಲಿ) ಯಾವುದೇ ಕೋನದ ತ್ರಿಕೋಣಮಿತಿ ಫಲನ ಮೌಲ್ಯವನ್ನು ಅದರ ಲಘುಕೋನದ ಮೂಲಕ ವ್ಯಕ್ತಪಡಿಸುವ ಸೂತ್ರಗಳು. ಉದಾ : sin (900 +  ) = cos), sin (1800 +  ) = + sin ಇತ್ಯಾದಿ

Search Dictionaries

Loading Results

Follow Us :   
  Download Bharatavani App
  Bharatavani Windows App