भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಸಮದ್ವಿಬಾಹು ತ್ರಿಭುಜ

(ಗ) ಎರಡು ಸಮಬಾಹುಗಳಿರುವ ತ್ರಿಭುಜ. ಸಮಬಾಹುಗಳ ಎದುರು ಕೋನಗಳು ಸಮವಾಗಿರುತ್ತವೆ

ಸಮನತಿ

(ಭೂವಿ) ಯಾವುದೇ ಶಿಲಾ ಘಟಕದಲ್ಲಿ ಸ್ತರಗಳು ಒಂದೇ ಬಾಗು ತೋರುವಿಕೆ

ಸಮಪರಾಸರ ಒತ್ತಡದ

(ರ) ಪರಾಸರ (ಆಸ್ಮಾಟಿಕ್) ಒತ್ತಡ ಒಂದೇ ಆಗಿರುವ (ರಕ್ತ ಅಥವಾ ಕೋಶಗಳ ಜೀವರಸ). ಚುಚ್ಚುಮದ್ದುಗಳು ಸಮ ಪರಾಸರಿಗಳಾಗಿರುತ್ತವೆ

ಸಮಪರ್ಣಿ

(ಸ) ಒಂದೇ ರೂಪದ ಎಲೆಗಳಿರುವುದು

ಸಮಪಾದಿ

(ಪ್ರಾ) ಎದೆಯ ಭಾಗದಲ್ಲಿ ಸಮರೀತಿಯಲ್ಲಿ ಅಳವಡಿಸಿದ ಏಳು ಜೊತೆ ಒಂದೇ ಉದ್ದದ ಕಾಲುಗಳುಳ್ಳ ಪರಾವಲಂಬಿ ವಲ್ಕವಂತ ಪ್ರಾಣಿಗಳ ಗಣ. ಉದಾ : ಮರಹೇನು ಮತ್ತು ಅದೇ ಬಗೆಯ ಉಪ್ಪು ಹಾಗೂ ಸಿಹಿ ನೀರಿನ ಹುಳುಗಳು

ಸಮಪಾರಿಧಿಕ ಸಮಸ್ಯೆ

(ಗ) ದತ್ತ ಸುತ್ತಳತೆ ಇದ್ದು ಗರಿಷ್ಠ ಸಲೆಯನ್ನೊಳಗೊಂಡಿರುವ ವಕ್ರರೇಖೆಯ ಶೋಧನೆ. ಇದು ವೃತ್ತ. ಭಾಗಶಃ ಇದು ವಕ್ರರೇಖೆಯೂ ಸರಳರೇಖೆಯೂ ಇರುವುದಾದಲ್ಲಿ ವೃತ್ತಾರ್ಧ ದೊರೆಯುತ್ತದೆ

ಸಮಪ್ರಾವಸ್ಥೆ

(ಭೌ) ಒಂದೇ ಆವೃತ್ತಿಯ, ಸಂವಾದೀ ಮೌಲ್ಯಗಳ ಮೂಲಕ ಒಂದೇ ಹೊತ್ತಿನಲ್ಲಿ ಸಾಗಿಹೋಗುವ, ತರಂಗ ರೂಪಗಳಿಂದ ಕೂಡಿದ (ಮಂಡಲ)

ಸಮಬೀಜಕಗಳು

(ಜೀ) ಸಮಾನ ಗಾತ್ರದ ಹಾಗೂ ಅನಿಷೇಕಜನ್ಯಗಳೆಂದು ಭಾವಿಸಲಾದ ಬೀಜಕಗಳು

ಸಮಭರತ ರೇಖೆ

(ಪವಿ) ಯಾವುದೇ ಕ್ಷಣ ಭರತ ಸಂಭವಿಸುವ ಬಿಂದುಗಳನ್ನು ಪಟದಲ್ಲಿ ಜೋಡಿಸುವ ವಕ್ರರೇಖೆ

ಸಮಭಾಜಕ ವೃತ್ತ

(ಖ) ವಿಷುವದ್ವೃತ್ತ. ಭೂಮಧ್ಯ ರೇಖೆ. ನೋಡಿ: ಭೂಗೋಳ ಸಮಭಾಜಕ ವೃತ್ತ; ಖಗೋಳ ಸಮಭಾಜಕ ವೃತ್ತ

ಸಮಭಾಜ್ಯ ರಾಶಿಗಳು

(ಗ) ಏಕಭಾಜಕವಿರುವ ಸಂಖ್ಯೆಗಳ ಗಣ. ಉದಾ : ೩, ೧೨, ೧೫, ೧೮ ಮುಂತಾದವು. ೩ರ ಅಪವರ್ತ್ಯಗಳು. ಅಪವರ್ತ್ಯ ರಾಶಿಗಳು. ನೋಡಿ : ಅಸಮಭಾಜ್ಯ ರಾಶಿಗಳು

ಸಮಭುಜೀಯ

(ಗ) ತ್ರಿಭುಜದ ಎಲ್ಲ ಭುಜಗಳೂ ಸಮವಾಗಿರುವುದು (ಆಗ ಪ್ರತಿಯೊಂದು ಕೋನವೂ ೬೦0 ಆಗಿದ್ದು ಅದು ಸಮಕೋನೀಯವೂ ಆಗಿರುವುದು)

ಸಮಭೂಉಷ್ಣತಾರೇಖೆ / ತಲ

(ಭೂ) ಭೂಮಿಯ ಒಳಗಡೆ ಉಷ್ಣತೆ ಸಮವಾಗಿರುವ ಬಿಂದುಗಳನ್ನು ಸೇರಿಸುವ ಕಾಲ್ಪನಿಕ ರೇಖೆ/ತಲ

ಸಮಭ್ರಮಣಾಂಕೀಯ

(ಭೌ) ಜಡತ್ವ ಭ್ರಮಣಾಂಕಗಳು ಸಮವಾಗಿರುವ

ಸಮಯುಗ್ಮಕ

(ಜೀ) ಆಕಾರ, ಗಾತ್ರ ಅಥವಾ ಗುಣದಲ್ಲಿ ಒಂದೇ ತೆರನಾಗಿರುವ ಕೂಡಿಕೆ ಯುಗ್ಮಕಗಳಲ್ಲೊಂದು

ಸಮಯುಗ್ಮಜನ

(ಜೀ) ಪ್ರಾಣಿ ಅಥವಾ ಸಸ್ಯಗಳಲ್ಲಿ ಆನುವಂಶಿಕ ಲಕ್ಷಣ ನಿರ್ಧರಿಸುವ ಎರಡು ಜೀನ್‌ಗಳಲ್ಲಿ (ಅಲ್ಲೀಲ್, ಮಾರ್ಫಿಕ್) ಯಾವುದೇ ಒಂದನ್ನಷ್ಟೇ ತಾಯಿ ತಂದೆಯರಿಂದ ಪಡೆಯುವಿಕೆ. ಹಾಗಾಗಿ ಅದೇ ಗುಣ ಮುಂದಿನ ಎಲ್ಲ ಸಂತತಿಗಳಿಗೂ ಸಾಗಿಹೋಗುತ್ತದೆ

ಸಮರೂಪತೆ

(ಜೀ) ಹುಟ್ಟಿನಿಂದ ಮತ್ತು ರಚನಾ ರೂಪದಲ್ಲಿ ಸದೃಶವಾಗಿರದೆ ಹೊರ ರೂಪದಲ್ಲಿ ಅಥವಾ ಬಾಹ್ಯಾಕೃತಿಯಲ್ಲಿ ಮಾತ್ರ ಸಮವಾಗಿರುವುದು. (ಸ) ಕೇವಲ ಒಂದೇ ಬಗೆಯ ಪರಿಪೂರ್ಣ (ಅಂದರೆ ಎಲ್ಲ ನಾಲ್ಕು ಸುತ್ತುಗಳೂ ಉಳ್ಳ) ಪುಷ್ಪಗಳಿರುವುದು. (ಪ್ರಾ) ಚಿಕ್ಕ ಮತ್ತು ಬೆಳೆದ ಪ್ರಾಣಿಗಳ ನಡುವಿನ ಸಾಮ್ಯ, ಬೆಳವಣಿಗೆಯ ಘಟ್ಟಗಳಿಲ್ಲದಿರುವುದು

ಸಮರೂಪತೆ

(ಭೂವಿ) ಒಂದೇ ಸ್ಫಟಿಕ ರಚನೆಯುಳ್ಳ ಎರಡು ಅಥವಾ ಹೆಚ್ಚು ವಸ್ತುಗಳು (ಐಸೊಮಾರ್ಫ್‌ಗಳು) ಅಸ್ತಿತ್ವದಲ್ಲಿದ್ದು ಘನ ದ್ರಾವಣಗಳನ್ನು ರೂಪಿಸಬಲ್ಲ ಸಾಮರ್ಥ್ಯ ಅವುಗಳಿಗಿರುವುದು. (ಗ) ಉಭಯ ಚಿತ್ರಣ ಅನುಬಿಂಬನವು ಒಂದು ಸಮರೂಪತೆ. ನೋಡಿ : ಅನುಬಿಂಬನ

ಸಮರೂಪಿ

(ಭೂವಿ) ರಾಸಾಯನಿಕ ಸಂಯೋಜನೆ ಯಲ್ಲಿ ಭಿನ್ನವಾಗಿದ್ದು ರೂಪದಲ್ಲಿ ಏಕತೆ ತೋರುವ ಸ್ಫಟಿಕಗಳು

ಸಮರ್ಥರ ಉಳಿವು

(ಜೀ) ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸಿದ ‘ನೈಸರ್ಗಿಕ ಆಯ್ಕೆ’ಯ ಪರಿಣಾಮ. ಇದರಿಂದಾಗಿ ಯಾವುದೇ ಜೀವನ ಪರಿಸ್ಥಿತಿಗಳಲ್ಲಿ ತಮ್ಮ ರಕ್ಷಣೆಯನ್ನು ತಾವೇ ಅತ್ಯುತ್ತಮವಾಗಿ ಮಾಡಿಕೊಳ್ಳಬಹುದಾದಂಥ ಪ್ರಾಣಿಗಳೂ ಸಸ್ಯಗಳೂ ಉಳಿದುಕೊಳ್ಳುತ್ತವೆ ಎಂಬ ಸೂತ್ರ

Search Dictionaries

Loading Results

Follow Us :   
  Download Bharatavani App
  Bharatavani Windows App