भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಷಟಲ್

(ಭೌ) ಬೈಜಿಕ ಕ್ರಿಯಾಕಾರಿಗಳಲ್ಲಿ ಮಾದರಿಗಳನ್ನು ಇರಿಸಲು, ಮತ್ತೆ ಹಿಂತೆಗೆದುಕೊಳ್ಳಲು ಉಪಯೋಗಿಸುವ ಧಾರಕ. ಇದರಲ್ಲಿ ಇರಿಸಿದ ಮಾದರಿಗಳನ್ನು ನ್ಯೂಟ್ರಾನ್‌ಗಳ ವಿಕಿರಣದ ಮೂಲಕ ವಿಕಿರಣಪಟುಗಳನ್ನಾಗಿ ಮಾಡಲಾಗುತ್ತದೆ

ಷಡ್ಭುಜ

(ಗ) ನೋಡಿ: ಷಷ್ಠಭುಜ

ಷರತ್ತು

(ಗ) ನೋಡಿ : ನಿರ್ಬಂಧ

ಷಷ್ಟ್ಯಂಶ

(ಗ) ಈ ಪದ್ಧತಿಯಲ್ಲಿ ಒಂದು ಮಾನವನ್ನು ೬೦ ಸಮಭಾಗಗಳನ್ನಾಗಿ ವಿಭಜಿಸಿ ಅಂತಹ ಒಂದು ಸಣ್ಣ ಭಾಗವನ್ನು ಉಪ-ಮಾನವಾಗಿ ಪರಿಗಣಿಸಲಾಗುತ್ತದೆ. ಉದಾ: (೧) ೧ ಡಿಗ್ರಿ (ಅಂಶ)=೬೦ ಮಿನಿಟುಗಳು (ಕಲಾ); ೧ ಮಿನಿಟು (ಕಲಾ) = ೬೦ ಸೆಕೆಂಡುಗಳು (ವಿಕಲಾ) ಎಂಬುದು ‘ಕೋನ’ಮಾನದ ಷಷ್ಟ್ಯಂಶ ಪದ್ಧತಿ. (೨) ಆಧುನಿಕ ಕಾಲಮಾನ ಷಷ್ಟ್ಯಂಶ ಪದ್ಧತಿಯಲ್ಲಿ ೧ ಗಂಟೆ = ೬೦ ನಿಮಿಷಗಳು, ೧ ನಿಮಿಷ = ೬೦ ಸೆಕೆಂಡುಗಳು. (೩) ಭಾರತೀಯ ಕಾಲಮಾನದ ಷಷ್ಟ್ಯಂಶ ಪದ್ಧತಿಯಲ್ಲಿ ೧ ದಿನ = ೬೦ ಘಟಿ (ನಾಡಿ)ಗಳು, ೧ ಘಟಿ (ನಾಡಿ) = ೬೦ ವಿಘಟಿ (ವಿನಾಡಿ)ಗಳು

ಷಷ್ಠಕ

(ಗ) ವೃತ್ತದ ಆರನೆಯ ಒಂದು ಭಾಗ, ೩೬೦0¸೬=೬೦0. ಕೋನಾಂತರ ಅಳೆಯಲು ಬಳಸುವ ಒಂದು ಸಲಕರಣೆ. ನೋಡಿ: ಸೆಕ್ಸ್ ಟಂಟ್

ಷಷ್ಠದಶಮಾನ

(ಕಂ.ಗ.) ಹದಿನಾರು ವಿವಿಧ ಪ್ರತೀಕಗಳಿಂದ ಸಂಖ್ಯೆಗಳನ್ನು ನಿರೂಪಿಸುವ ಪದ್ಧತಿ: ೦, ೧, ೨, ೩, ೪, ೫, ೬, ೭, ೮, ೯, a, b, c, d, e, f. ದಶಮಾನ ಪದ್ಧತಿಯಲ್ಲಾದರೋ ಹತ್ತು ಪ್ರತೀಕಗಳು. ದ್ವಿಮಾನದಲ್ಲಿ ಎರಡು ಪ್ರತೀಕಗಳು. ಷಷ್ಠದಶಮಾನ ಪದ್ಧತಿಯಲ್ಲಿ ಸಂಖ್ಯಾ ನಿರೂಪಣೆ ದ್ವಿಮಾನ ಪದ್ಧತಿಯಲ್ಲಿಯದಕ್ಕಿಂತ ಹ್ರಸ್ವವಾದುದರಿಂದ ಕಂಪ್ಯೂಟರ್ ಗಳಲ್ಲಿ ಈ ಪದ್ಧತಿಯನ್ನು ಬಳಸುವುದುಂಟು. ಷೋಡಶಮಾನ ಪದ್ಧತಿ

ಷಷ್ಠಫಲಕ

(ಗ) ಆರು ಮುಖಗಳುಳ್ಳ ಘನಾಕೃತಿ – ಷಣ್ಮುಖ. ನೋಡಿ: ಬಹುಫಲಕ

ಷಷ್ಠಭುಜ

(ಗ) ಆರು ಮುಖಗಳುಳ್ಳ ಬಹುಭುಜಾಕೃತಿ. ನೋಡಿ: ಬಹುಭುಜ

ಷಾಕ್ ಅಬ್ಸಾರ್ಬರ್

(ತಂ) ವಾಹನಗಳು ಹಳ್ಳತಿಟ್ಟುಗಳಿರುವ ರಸ್ತೆಯಲ್ಲಿ ವೇಗವಾಗಿ ಚಲಿಸುವಾಗ ಸ್ಪ್ರಿಂಗುಗಳ ಮೇಲೆ ಬೀಳುವ ಒತ್ತಡವನ್ನು ಹೀರಿಕೊಂಡು ವಾಹನ ಸಲೀಸಾಗಿ ಚಲಿಸುವಂತೆ ಮಾಡಲು ಚಾಸಿಸ್‌ನಲ್ಲಿ ಅಳವಡಿಸಿರುವ ಸಾಧನ

ಷಾರ್ಕ್‌ಮೀನು

(ಪ್ರಾ) ಉಷ್ಣ ಹಾಗೂ ಉಪೋಷ್ಣವಲಯ ಸಾಗರಗಳಲ್ಲಿ ಕಂಡು ಬರುವ ಇಲಾಸ್ಮೊಬ್ರ್ಯಾಂಕ್ ಉಪವರ್ಗದ ಮಾಂಸಾಹಾರಿ ಮೀನುಗಳ ಸುಮಾರು ೨೨೫ ಪ್ರಭೇದಗಳ ಪೈಕಿ ಒಂದು. ಇದರ ಒಡಲಿನ ಎರಡು ತುದಿಗಳೂ ಚೂಪಾಗಿದ್ದು ಕದಿರಿನ ಆಕಾರದಲ್ಲಿರುತ್ತವೆ. ಬೂದು, ಹಳದಿ, ಕಪ್ಪು ಬಣ್ಣದ್ದು. ಚರ್ಮವು ಗಂಟು ಅಥವಾ ಕ್ಷಯಗಂತಿಗಳಿಂದ ಕೂಡಿ ಒರಟಾಗಿರುತ್ತದೆ. ಮೂತಿ ಬಾಯಿಗಿಂತ ಮುಂದಕ್ಕೆ ಚಾಚಿರುತ್ತದೆ. ಈ ಮೀನಿನ ಯಕೃತ್ತಿನ ಎಣ್ಣೆಯನ್ನು ಎ ವೈಟಮಿನ್‌ನ ಆಕರವಾಗಿ ಬಳಸಲಾಗುತ್ತದೆ. ಟೈಗರ್ ಷಾರ್ಕ್ ಸುಮಾರು ೨೫ಮೀ. ಉದ್ದ ಬೆಳೆಯುತ್ತದೆ. ಸೊರಮೀನು

ಷೂಟ್

(ತಂ) ಇಳಿಜಾರಿನಲ್ಲಿ ನೀರಿನ ಹರಿವು. ಪದಾರ್ಥ ಗಳನ್ನು ಕೆಳಮಟ್ಟಕ್ಕೆ ಸಾಗಿಸಲು ಅನುಕೂಲಿಸುವ ನೀರಿರುವ ಅಥವಾ ನೀರಿಲ್ಲದ ಇಳಿಗಾಲುವೆ, ಜಾರು ದಾರಿ. ಜಾರುಬಂಡಿ ಚಲಿಸುವ ಮಾರ್ಗ

ಷೆವ್ರೋಟೇನ್

(ಪ್ರಾ) ಟ್ರಾಗ್ಯುಲಸ್ ಜಾತಿ, ಟ್ರಾಗ್ಯುಲಿಡೀ ಕುಟುಂಬಕ್ಕೆ ಸೇರಿದ ಕಸ್ತೂರಿ ಮೃಗವನ್ನು ಹೋಲುವ ಚಿಕ್ಕ ಪ್ರಾಣಿ. ಕೊಂಬಿಲ್ಲ. ಆಫ್ರಿಕ ಮತ್ತು ಏಷ್ಯ ನಿವಾಸಿ. ಕೂರುಹಂದಿ

ಷ್ಯಾಮ್ವಾಯ್

(ಪ್ರಾ) ಯೂರೋಪ್ ಮತ್ತು ಏಷ್ಯ ಬೆಟ್ಟಗುಡ್ಡಗಳಲ್ಲಿ ಇರುವ ಬೋವಿಡೀ ಕುಟುಂಬಕ್ಕೆ ಸೇರಿದ ಚಿಗರೆಗಳ ಒಂದು ಪ್ರಭೇದ. ರೂಪಿಕಾಪ್ರ ರೂಪಿಕಾಪ್ರ ವೈಜ್ಞಾನಿಕ ನಾಮ. ಮೇಕೆಯ ಅರ್ಧ ಗಾತ್ರದ ಪುಟ್ಟ ಪ್ರಾಣಿ. ಇದು ೫ ಮೀ ಅಗಲದ ಕಂದಕ ವನ್ನೂ ಒಂದೇ ಜಿಗಿತದಲ್ಲಿ ಹಾರಬಲ್ಲದು. ಮೆರಗು ಕೊಡಲು ಬಳಸುವ ಇದರ ತೊಗಲಿಗೆ ಚರ್ಮ ಕೈಗಾರಿಕೆಯಲ್ಲಿ ಪ್ರಾಶಸ್ತ್ಯ.. ಕಾಡು ಎರಳೆ. ಬೆಟ್ಟದ ಕಾಡುಜಿಂಕೆ

ಷ್ರಾಪ್ನೆಲ್

(ತಂ) ಗುರಿ ಮುಟ್ಟುವುದಕ್ಕಿಂತ ಕೊಂಚ ಮೊದಲಲ್ಲಿ ಸಿಡಿದು ಒಳಗಿನ ಗುಂಡುಗಳನ್ನು ಸುತ್ತಲೂ ಎರಚುವ ಅಸ್ತ್ರ. ಪೆನಿನ್ಸುಲಾರ್ ಯುದ್ಧ ಸಮಯದಲ್ಲಿ ಇದನ್ನು ನಿರ್ಮಿಸಿದ ಹೆನ್ರಿ ಷ್ರಾಪ್ನೆಲ್‌ನ (೧೭೬೧-೧೮೪೨) ಹೆಸರನ್ನೇ ಈ ಅಸ್ತ್ರಕ್ಕೆ ನೀಡಲಾಗಿದೆ. ಎರಚು ಸಿಡಿಗುಂಡು

Search Dictionaries

Loading Results

Follow Us :   
  Download Bharatavani App
  Bharatavani Windows App