भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567891213Next >

ಶಕ, ಕಲ್ಪ

(ಭೂವಿ) ಭೂವಿಜ್ಞಾನದಲ್ಲಿ ಅತ್ಯುನ್ನತ ದರ್ಜೆಯ ಕಾಲ ವಿಭಜನೆ. ಇದು ಒಂದು ಅಥವಾ ಹೆಚ್ಚು ಅವಧಿಗಳನ್ನು ಒಳ ಗೊಂಡಿರುತ್ತದೆ. ಮೂರು ಮುಖ್ಯ ಕಲ್ಪಗಳು : ಸೀನೋಜೋಯಿಕ್ (ವರ್ತಮಾನದಿಂದ ೬೫ ಮಿಲಿಯನ್ ವರ್ಷ ಪ್ರಾಚೀನ), ಮೀಸೊಜೋಯಿಕ್ (೬೫ ಮಿವಪ್ರಾ – ೨೪೮ಮಿವಪ್ರಾ) ಮತ್ತು ಪೇಲಿಯೊಜೋಯಿಕ್ (೨೪೮ ಮಿವಪ್ರಾ – ೫೯೦ ಮಿವಪ್ರಾ)

ಶಕಲ

(ಭೌ) ನೋಡಿ : ಕ್ವಾಂಟಮ್

ಶಕಲ ಸಂಖ್ಯೆಗಳು

(ಭೌ) ನೋಡಿ : ಕ್ವಾಂಟಮ್ ಸಂಖ್ಯೆಗಳು

ಶಕಲಬಲವಿಜ್ಞಾನ

(ಭೌ) ನೋಡಿ: ಕ್ವಾಂಟಮ್ ಮೆಕ್ಯಾನಿಕ್ಸ್/ಯಾಂತ್ರ

ಶಂಕುಜ

(ಗ) ವರ್ತುಳೀಯ ಶಂಕುವನ್ನು (ಇದು ಲಂಬ ವರ್ತುಳೀಯವೇ ಆಗಿರಬೇಕೆಂದೇನೂ ಇಲ್ಲ) ಸಮತಲ ಛೇದಿಸಿದಾಗ ದೊರೆಯುವ ಎರಡು ಆಯಾಮಗಳ ವಕ್ರ. ಶೃಂಗದಿಂದ ಉಭಯದಿಶೆಗಳಿಗೂ ಶಂಕು ವ್ಯಾಪಿಸಿದೆ ಎಂದು ಅಂಗೀಕರಿಸುತ್ತೇವೆ. ಛೇದಕ ತಲ ಶಂಕುವಿನ ಯಾವುದೇ ಜನಕ ರೇಖೆಗೆ ಸಮಾಂತರವಾಗಿಲ್ಲದಾಗ, ಶೃಂಗದ ಮೂಲಕ ಛೇದಕ ತಲಕ್ಕೆ ಸಮಾಂತರವಾಗಿ ಎಳೆದ ಸಮತಲ ಜನಕರೇಖೆಯೊಂದನ್ನೂ ಒಳಗೊಳ್ಳದಿದ್ದರೆ ದೀರ್ಘವೃತ್ತವೂ, ಎರಡು ರೇಖೆಗಳನ್ನೂ ಒಳಗೊಂಡಿದ್ದರೆ ಅತಿಪರವಲಯವೂ ದೊರೆಯುತ್ತದೆ. ಲಂಬ ವೃತ್ತೀಯ ಶಂಕುವಿನ ರಚನೆಗೆ ಪರ್ಯಾಯ ವಿಧಾನವುಂಟು. ದತ್ತ ಸಮತಲದಲ್ಲಿ S ಯಾವುದೇ ಸ್ಥಿರಬಿಂದುವಾಗಿರಲಿ, l ಇದರ ಮೂಲಕ ಸಾಗದ ಸ್ಥಿರರೇಖೆ ಆಗಿರಲಿ, ಮತ್ತು P ಎಂಬ ಚರಬಿಂದು ಈ ಸಮತಲದಲ್ಲಿ (ಒಂದು ಸ್ಥಿರಾಂಕ) ಆಗಿರುವಂತೆ ಚಲಿಸಲಿ. ಇಲ್ಲಿ Pಯಿಂದ l ಗೆ ಎಳೆದ ಲಂಬದ ಪಾದ M. ಈಗ ಮೂರು ಸನ್ನಿವೇಶಗಳು ಏರ್ಪಡುತ್ತವೆ: e<1 ಆಗಿರುವಾಗ Pಯ ಪಥ ದೀರ್ಘವೃತ್ತ; e =1ಆಗಿರುವಾಗ ಪರವಲಯ; e>1ಆಗಿರುವಾಗ ಅತಿಪರವಲಯ. ಇಲ್ಲಿ Sಗೆ ಶಂಕುಜದ ನಾಭಿ ಎಂದೂ lಗೆ ನಿಯತಾ ಎಂದೂ eಗೆ ಉತ್ಕೇಂದ್ರತೆ ಎಂದೂ ಹೆಸರು. SP / PM = e ಗುಣವನ್ನು ನಾಭೀ-ನಿಯತಾಗುಣ ಎನ್ನುತ್ತೇವೆ. e = 0 ಆಗುವಾಗ ಶಂಕುಜವು ವೃತ್ತವಾಗುತ್ತದೆ. ಛೇದಕ ತಲ ಆಧಾರವೃತ್ತಕ್ಕೆ ಸಮಾಂತರವಾಗಿ ಇರುವ ಸನ್ನಿವೇಶವಿದು. x, y ಚರಗಳಲ್ಲಿ ಯಾವುದೇ ಎರಡನೆಯ ಡಿಗ್ರಿ ಸಮೀಕರಣ, ಸಾಧಾರಣವಾಗಿ, ಶಂಕುಜವನ್ನು ಪ್ರತಿನಿಧಿಸುತ್ತದೆ. ax2+2 hxy+by2+ 2 gx+ 2 fy+c = 0

ಶಂಕುಜಜನಿತ

(ಗ) ಶಂಕುಜ ತನ್ನ ಒಂದು ಅಕ್ಷದ ಸುತ್ತ ಆವರ್ತಿಸಿದಾಗ ದೊರೆಯುವ ಘನಾಕೃತಿ: ಆವರ್ತಿತ ದೀರ್ಘ ವೃತ್ತಜ, ಆವರ್ತಿತ ಪರವಲಯಜ, ಆವರ್ತಿತ ಅತಿ ಪರವಲಯಜ

ಶಂಕುಧಾರಿ

(ಸ) ಪೈನೇಲೀಸ್ ಗಣಕ್ಕೆ ಸೇರಿದ ನಿತ್ಯ ಹರಿದ್ವರ್ಣ ಮರ. ಶಂಕು ಆಕಾರದ ಕಾಯಿ ಬಿಡುತ್ತದೆ. ಇಂಥ ಮರಗಳು ಉತ್ತರ ಧ್ರುವ ಸಮೀಪದ ಟಂಡ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಿತ್ಯಹರಿದ್ವರ್ಣ ಕಾಡು

ಶಕುನದ ಹಕ್ಕಿ

(ಪ್ರಾ) ನೋಡಿ: ಕಾಜಾಣ

ಶಂಕುಮುಂಡ

(ಗ) ಶಂಕುವಿನ ಮೇಲ್ಭಾಗವನ್ನು ಆಧಾರತಲಕ್ಕೆ ಸಮಾಂತರವಾಗಿ ಛೇದಿಸಿದಾಗ ಲಭಿಸುವ ಶಂಕು ಭಾಗ

ಶಕ್ತಿ

(ಭೌ) ಪ್ರತೀಕ E. ಕಾರ್ಯ ಮಾಡಬಲ್ಲ ಕ್ಷಮತೆ. ಇದರಲ್ಲಿ ವ್ಯಾಪಕವಾಗಿ ಎರಡು ವಿಭಾಗಗಳು: ವಿಭವಶಕ್ತಿ, ಚಲನಶಕ್ತಿ. ವಸ್ತುವಿನ ಸ್ಥಾನದಿಂದಾಗಿ ಅದರಲ್ಲಿ ನಿಹಿತವಾಗಿರುವ ಕಾರ್ಯಕ್ಷಮತೆ, ಕೋಶಗಳಲ್ಲಿ ಹಿಡಿದಿಟ್ಟಿರುವ ವಿದ್ಯುಚ್ಛಕ್ತಿ, ಪದಾರ್ಥಗಳಲ್ಲಿ ಅಂತರ್ಗತವಾಗಿರುವ ಬೈಜಿಕ ಶಕ್ತಿ ಎಲ್ಲವೂ ವಿಭವ ಶಕ್ತಿಗಳೇ. ಚಲಿಸುತ್ತಿರುವ ವಸ್ತುವಿನಲ್ಲಿ ನಿಹಿತವಾಗಿರುವ ಶಕ್ತಿ ಚಲನಶಕ್ತಿ. ಈ ಶಕ್ತಿಗಳು ಪರಸ್ಪರ ಪರಿವರ್ತನೀಯ. ಗುರುತ್ವ ವಿಭವಶಕ್ತಿಗೆ ಸೂತ್ರ mgh. ಚಲನ ಶಕ್ತಿಗೆ ಸೂತ್ರ ½ mv2. ಇಲ್ಲಿ m ವಸ್ತುವಿನ ರಾಶಿ, g ಗುರುತ್ವ ವೇಗೋತ್ಕರ್ಷ, h ವಸ್ತುವಿನ ಸ್ಥಾನೋನ್ನತಿ ಮತ್ತು v ಅದರ ವೇಗ. ಯಾಂತ್ರಿಕಶಕ್ತಿಯನ್ನು ಉಷ್ಣಶಕ್ತಿಯನ್ನಾಗಿಯೂ ಉಷ್ಣಶಕ್ತಿಯನ್ನು ದ್ಯುತಿಶಕ್ತಿಯನ್ನಾಗಿಯೂ ಇತ್ಯಾದಿ ಪರಿವರ್ತಿಸುವುದು ಸಾಧ್ಯ. ವಿದ್ಯುಚ್ಛಕ್ತಿಯನ್ನು ಧಾರಕ (ಕೆಪಾಸಿಟರ್)ಗಳಲ್ಲಿ ಸಂಗ್ರಹಿಸಿ ಇಡಬಹುದು. ಧಾರಕವನ್ನು ವಿಸರ್ಜಿಸಿ ಸಂಗ್ರಹಿಸಿದ್ದ ವಿದ್ಯುಚ್ಛಕ್ತಿಯನ್ನು ಪುನಃ ಪಡೆಯಬಹುದು. ಕಾಯವೊಂದು ವಿರೂಪಗೊಂಡಾಗ ಅಥವಾ ಅದರ ವಿನ್ಯಾಸ ಬದಲಿದಾಗ ಅದರಲ್ಲಿ ಸ್ಥಿತಿಸ್ಥಾಪಕ ವಿಭವಶಕ್ತಿ ದಾಸ್ತಾನಾಗುತ್ತದೆ (ಉದಾ: ಒತ್ತಿ ಹಿಡಿದ ಸ್ಪ್ರಿಂಗ್). ತರಂಗ ಚಲನೆಯ ಎಲ್ಲ ರೂಪಗಳಲ್ಲೂ ಶಕ್ತಿ ಇರುತ್ತದೆ. ವಿದ್ಯುತ್ಕಾಂತೀಯ ಅಲೆಗಳಲ್ಲಿ ಶಕ್ತಿಯು ವಿದ್ಯುತ್ ಹಾಗೂ ಕಾಂತೀಯ ಕ್ಷೇತ್ರಗಳಲ್ಲಿ ದಾಸ್ತಾನು ಆಗಿರುತ್ತದೆ. ಯಾವುದೇ ಸಂವೃತ ವ್ಯವಸ್ಥೆಯಲ್ಲಿ ಒಟ್ಟು ಶಕ್ತಿಯು ನಿಯತವಾಗಿರುತ್ತದೆ. ಇದೇ ಶಕ್ತಿ ಸಂರಕ್ಷಣ ನಿಯಮ. ಶಕ್ತಿ ಅವಿನಾಶಿನಿ. ಶಕ್ತಿಯ ಎಸ್‌ಐ ಏಕಮಾನ: ಜೂಲ್. ಸಿಜಿಎಸ್ ಏಕಮಾನ : ಅರ್ಗ್. ೧ ಅರ್ಗ್ = ೧೦-೭ ಜೂಲ್‌ಗಳು

ಶಕ್ತಿ

(ವೈ) ರೋಗ ಚಿಕಿತ್ಸಾ ವಿಜ್ಞಾನದಲ್ಲಿ ರಾಸಾಯನಿಕ ಸಂಯುಕ್ತ ವಸ್ತುವಿನ ಔಷಧೀಯ ಕ್ರಿಯಾತ್ಮಕತೆಯ ಪ್ರಮಾಣ

ಶಕ್ತಿ ಸಂರಕ್ಷಣ ನಿಯಮ

(ಭೌ) ಒಂದು ವ್ಯವಸ್ಥೆಯಲ್ಲಿ ಅಡಕವಾಗಿರುವ ಶಕ್ತಿಯೆಲ್ಲದರ ಮೊತ್ತ, ಆ ಶಕ್ತಿ ಎಷ್ಟು ಬಗೆಯಲ್ಲಿ ರೂಪಾಂತರ ಹೊಂದಿದರೂ ಎಂದಿಗೂ ಹೆಚ್ಚು ಕಡಿಮೆಯಾಗದೆ ಒಂದೇ ಆಗಿರುವುದು ಎಂಬ ನಿಯಮ. ಶಕ್ತಿಸ್ಥಾಯಿತ್ವ ತತ್ತ್ವ. ನೋಡಿ : ಶಕ್ತಿ ಸಂರಕ್ಷಣೆ

ಶಕ್ತಿ ಸಂರಕ್ಷಣೆ

(ಭೌ) ಪ್ರತ್ಯೇಕಿತ ವ್ಯವಸ್ಥೆಯಲ್ಲಿಯ ಸಮಗ್ರ ಶಕ್ತಿ ನಿಯತವಾಗಿರುತ್ತದೆ. ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಬಹುದು. ಆದರೆ ಅದರ ಸೃಷ್ಟಿ ಅಥವಾ ಲಯ ಅಸಾಧ್ಯ. ವ್ಯವಸ್ಥೆಯೊಂದರಲ್ಲಿ ಸಂರಕ್ಷಿತ ಬಲಗಳು ಮಾತ್ರ ಇರುವುವಾದರೆ ಅದರಲ್ಲಿಯ ಚಲನ ಮತ್ತು ವಿಭವಶಕ್ತಿಗಳ ಮೊತ್ತ (ಯಾಂತ್ರಿಕ ಶಕ್ತಿ) ನಿಯತವಾಗಿ ಇರುತ್ತದೆ. ಶಕ್ತಿ ನಿತ್ಯತೆ

ಶಕ್ತಿಮಟ್ಟ

(ಭೌ) ನ್ಯೂಕ್ಲಿಯಸ್‌ನ ಸುತ್ತ ಕಕ್ಷೆಗಳಲ್ಲಿ ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ ಸ್ಥಾನ ಸೂಚಕ. ನ್ಯೂಕ್ಲಿಯಸ್‌ಗೆ ಹತ್ತಿರವಾದಷ್ಟೂ ಶಕ್ತಿಮಟ್ಟ ಕಡಿಮೆ. ದೂರವಾದಷ್ಟೂ ಅಧಿಕ

ಶಕ್ತಿಮಾಪಕ

(ಸಾ) ನಿಯಂತ್ರಿತ ಪರಿಸ್ಥಿತಿಗಳಲ್ಲಿ ಸ್ನಾಯುಗಳ ಸಮೂಹ ನಿರ್ವಹಿಸಿದ ಕಾರ್ಯ ಅಳೆದು ದಾಖಲಿಸುವ ಸನ್ನಾಹವುಳ್ಳ ಸಾಧನ

ಶಕ್ತ್ಯಂತರ

(ಭೌ) ಘನ ವಸ್ತುವಿನಲ್ಲಿ ವೇಲೆನ್ಸಿ ಪಟ್ಟೆ ಮತ್ತು ವಹನ ಪಟ್ಟೆಗಳ ನಡುವೆ ಇರುವ ಶಕ್ತಿಯ ಅಂತರ. ವಾಹಕಗಳಲ್ಲಿ ಈ ಅಂತರವು ಸೊನ್ನೆಯಾಗಿರುತ್ತದೆ. ಅರೆವಾಹಕ ಗಳಲ್ಲಿ ಸುಮಾರು ೧-೩ e.v. ಹಾಗೂ ನಿರೋಧಕಗಳಲ್ಲಿ ೬ e.v.ಗಳಿಗಿಂತ ಹೆಚ್ಚಿರುತ್ತದೆ. ಈ ಶಕ್ತ್ಯಂತರಕ್ಕೆ ನಿರ್ಬಂಧಿತ ಅಂತರ ಎಂಬ ಹೆಸರೂ ಇದೆ. ಇಲ್ಲಿ ಯಾವುದೇ ಎಲೆಕ್ಟ್ರಾನುಗಳ ಶಕ್ತಿ ಸ್ಥಿತಿಯನ್ನು ಕಾಣಲು ಸಾಧ್ಯವಿಲ್ಲ

ಶಂಖ

(ವೈ) ಕರ್ಣ ಕುಹರ. ಕಿವಿಯ ಮಧ್ಯದ ಕುಳಿ. (ಪ್ರಾ) ಮೃದ್ವಂಗಿಯ ಹೊರಚಿಪ್ಪು

ಶಂಖಪಾಷಾಣ

(ರ) AS2O3. ಆರ್ಸೆನಿಕ್ ಟ್ರೈ ಆಕ್ಸೈಡ್. ಆರ್ಸೆನಿಕ್‌ನಿಂದ ತಯಾರಿಸುವ ಅತ್ಯಂತ ಮುಖ್ಯ ವಸ್ತು. ಬಿಳಿ ಪುಡಿ. ಉಗ್ರ ವಿಷ. ಇಲಿಗಳ ನಾಶಕ್ಕೆ ಬಳಕೆ. ಇಲಿ ಪಾಷಾಣ. ಗೌರಿಪಾಷಾಣ. ನೋಡಿ : ಆರ್ಸೆನಿಕ್

ಶಂಖವಿಜ್ಞಾನ

(ಪ್ರಾ) ಪ್ರಾಣಿ ಚಿಪ್ಪುಗಳ ಮತ್ತು ಚಿಪ್ಪು ಪ್ರಾಣಿಗಳ ಅಧ್ಯಯನ

ಶಂಖಹುಳು

(ಪ್ರಾ) ನಿಯೋಗ್ಯಾಸ್ಟ್ರೊಪೊಡ ಗಣಕ್ಕೆ ಸೇರಿದ ಉದರಪಾದಿ ಮೃದ್ವಂಗಿ. ಮಾಂಸಾಹಾರಿ
< previous1234567891213Next >

Search Dictionaries

Loading Results

Follow Us :   
  Download Bharatavani App
  Bharatavani Windows App