भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶೂಲೆ

(ವೈ) ಅನಾರೋಗ್ಯದ ದೆಸೆಯಿಂದ ದೇಹದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಬಾಧೆ ಕೊಡುವ ವೇದನೆ

ಶೃಂಖಲಾ ವಿಧಿ

(for differentiation) (ಗ) ಸಂಘಟಿತ ಫಲನದ ನಿಷ್ಪನ್ನವನ್ನು ಪಡೆಯುವ ವಿಧಾನ. y = f (u), u = g(x) ಆಗಿದ್ದರೆ ಆಗ < page 612.tif>

ಶೃಂಗ

(ಗ) ಬಹುಭುಜ ಇಲ್ಲವೇ ಬಹು ಫಲಕದಲ್ಲಿ ಎರಡು ಅಥವಾ ಹೆಚ್ಚು ಅಂಚುಗಳು ಸಂಧಿಸುವ ಬಿಂದು. ಅಗ್ರ

ಶೃಂಗ

(ಖ) ಬಾಲಚಂದ್ರ ಬಿಂಬದಲ್ಲಿ ಎರಡು (ಅಗ್ರ) ಬಿಂದುಗಳ ಪೈಕಿ ಯಾವುದೇ ಒಂದು

ಶೃಂಗ

(ಭೌ) ಅಲೆಯ ಏರುಚಲನೆಯಲ್ಲಿ ನೆತ್ತಿಬಿಂದು. ಶಿಖರ

ಶೃಂಗ

(ಸ) ಅಂಗದ ಕೊನೆ ಅಥವಾ ತುದಿ. (ವೈ) ಹಲ್ಲಿನ ಬೇರು. ಫುಪ್ಪುಸದ ಮೇಲು ಹಾಲೆಯ ಅಗ್ರ. ಎಡಹೃತ್ಕುಕ್ಷಿಯ ದುಂಡಗಿನ ಕೊನೆ

ಶೃಂಗತೆ

(ಸಂ) ದತ್ತಾಂಶಗಳ ವಿತರಣೆಯು ಪ್ರಸಾಮಾನ್ಯ ವಿತರಣೆಗೆ ಹೋಲಿಸಿದಂತೆ ಹೆಚ್ಚು ಯಾ ಕಡಿಮೆ ಶೃಂಗತೆಯನ್ನು ಹೊಂದಿದೆಯೇ ಎನ್ನುವ ಅಂಶ. ಶಿಖರತೆ

ಶೆರರ‍್ಡೀಕರಿಸು

(ರ) ಕಬ್ಬಿಣ ಹಾಗೂ ಉಕ್ಕುಗಳಿಗೆ ತುಕ್ಕು ಹಿಡಿಯದಂತೆ ಮಾಡಲು ಬಣ್ಣ ಹಚ್ಚುವ ಬದಲು ಆ ಲೋಹಗಳನ್ನು ಕಬ್ಬಿಣ-ಸತುವಿನ ಮಿಶ್ರಲೋಹದಿಂದ ಸಂಸ್ಕರಿಸುವುದು. ಇದಕ್ಕಾಗಿ ಆ ಲೋಹಗಳನ್ನು ಸತುವಿನ ಪುಡಿ ಹಾಗೂ ಸ್ವಲ್ಪ ಸತುವಿನ ಆಕ್ಸೈಡ್‌ನೊಂದಿಗೆ ೩೦೦0 ಸೆ.ಗೆ ಕಾಸಲಾಗುವುದು. ಶೆರರ‍್ಡ್ ಕೌಪರ್-ಕೋಲ್ಸ್ (ಮ-೧೯೩೫) ಆವಿಷ್ಕರಿಸಿದುದು

ಶೇಕಡಾ

(ಗ) ಪ್ರಮಾಣ ಸೂಚಕ ಪದ. ಒಂದು ಸಂಖ್ಯೆಯ ಶೇಕಡಾ n ಎಂದರೆ ಆ ಸಂಖ್ಯೆಯ n ನೂರನೇ ಒಂದು ಪಾಲು ಎಂದರ್ಥ. ಪ್ರತೀಕ %. ಸೇಕಡಾ.

ಶೇಲ್ ಎಣ್ಣೆ

(ತಂ) ಬಿಟ್ಯೂಮಿನ್ ಕೂಡಿದ ಜೇಡು ಶಿಲೆಯಿಂದ ವಿನಾಶಕ ಆಸವನದ ಮೂಲಕ ಪಡೆದ ಒಂದು ಬಗೆಯ ನ್ಯಾಫ್ತ ಎಣ್ಣೆ. ಇದನ್ನು ಮತ್ತಷ್ಟು ಶುದ್ಧೀಕರಿಸಿ ಪೆಟ್ರೋಲಿಯಮ್ ಉತ್ಪನ್ನಗಳನ್ನು ಪಡೆಯಲಾಗುತ್ತದೆ

ಶೇಷ

(ರ) ಬಾಷ್ಪೀಭವನದ ನಂತರ ಇಲ್ಲವೇ ದ್ರಾವಕವೊಂದನ್ನು ಸೇರಿಸಿ ಕಲಸಿದ ನಂತರ ಉಳಿಯುವ ಘನವಸ್ತು. ಅವಿಲೇಯಕ ಘನ. (ಭೂವಿ) ಶಿಥಿಲೀಕರಣವು ಅತ್ಯಂತ ಕಡಿಮೆ ವಿಲೀನತೆಯ ಪದಾರ್ಥಗಳನ್ನು ಬಿಟ್ಟು ಉಳಿದೆಲ್ಲವನ್ನು ತೊಡೆದುಹಾಕಿದ ಬಳಿಕ ಆ ಸ್ಥಳದಲ್ಲಿ ಉಳಿಯುವ ಶಿಲಾಖಂಡರಾಶಿಗಳ ಸಂಚಯ. ಅವಶೇಷ

ಶೇಷ

(ಗ) ವ್ಯವಕಲನದನಂತರ ಉಳಿದದ್ದು. ಒಂದು ಪೂರ್ಣಾಂಕವನ್ನು ಮತ್ತೊಂದರಿಂದ ಭಾಗಿಸಿದಾಗ ಉಳಿಯುವ ಪೂರ್ಣಾಂಕ. ನೋಡಿ : ಭಾಗಾಹಾರ

ಶೇಷ ನಿಕ್ಷೇಪ

(ಭೂವಿ) ಶಿಲೆಗಳು ಶಿಥಿಲೀಕರಣ ಗೊಂಡು ವಿಘಟಿಸಿದ ಅನಂತರವೂ ಅಥವಾ ಕೊಚ್ಚಿಹೋದ ಅನಂತರವೂ ಅದೇ ಸ್ಥಳದಲ್ಲಿ ಇನ್ನೂ ಉಳಿದುಕೊಂಡಿರುವ ಶಿಲೆಯ ಘಟಕಗಳು. ಅವಶಿಷ್ಟ ನಿಕ್ಷೇಪ

ಶೇಷ ಪ್ರಮೇಯ

(ಗ) ಯಾವುದೇ ಬಹುಪದಿ f(x)ನ್ನು (x-a)ಯಿಂದ ಭಾಗಿಸಿದಾಗ ದೊರೆಯುವ ಶೇಷ x = aಯಲ್ಲಿ f(x)ನ ಬೆಲೆ, ಅಂದರೆ f(a). ಉದಾ: f(x) = (x2-4x+7)ನ್ನು (x-2)ಯಿಂದ ಭಾಗಿಸಿದಾಗ ಬರುವ ಶೇಷ f(2) = 3

ಶೇಷಕಾಂತತೆ

(ಭೌ) ಅನ್ವಿತ ಕಾಂತಪ್ರೇರಕ ಬಲವನ್ನು ವಿಸ್ಥಾಪಿಸಿದನಂತರ ಫೆರ್ರೋಕಾಂತೀಯ ವಸ್ತುವಿನಲ್ಲಿ ಉಳಿಯುವ ಕಾಂತ ಅಭಿವಾಹ ಸಾಂದ್ರತೆ

ಶೈತ್ಯಕಾರಿ

(ತಂ) ನೀರು, ಸೋಡ, ಎಣ್ಣೆ ಮತ್ತು ಮೆದು ಸಾಬೂನು ಇವುಗಳ ಮಿಶ್ರಣ. ಯಂತ್ರ ಕರ್ಮಾಗಾರಗಳಲ್ಲಿ ಘರ್ಷಣೆ, ಶಾಖ ಮುಂತಾದವನ್ನು ನಿವಾರಿಸಲು/ಕಡಿಮೆ ಮಾಡಲು ಕೀಲೆಣ್ಣೆಯಾಗಿ, ತಣ್ಪುಗೊಳಿಸುವ ದ್ರವವಾಗಿ ಉಪಯೋಗ.

ಶೈತ್ಯಕಾರಿ ಗೋಪುರ

(ಎಂ) ಬಿಸಿ ಅನಿಲ ಅಥವಾ ಬಿಸಿ ದ್ರವಗಳನ್ನು ತಣಿಸಲು ಬಳಸಿದ ನೀರು ಬಿಸಿಯಾದಾಗ, ಅದರ ಮರುಬಳಕೆಗಾಗಿ ಅದನ್ನು ತಂಪಾಗಿಸಲು ನಿರ್ಮಿಸಿರುವ ರಚನೆ. ವಿದ್ಯುದಾಗಾರಗಳಲ್ಲಿ ಹವೆ ನಿಯಂತ್ರಣ ಸ್ಥಾವರಗಳಲ್ಲಿ ಇದರ ಬಳಕೆ. ಈ ಗೋಪುರವನ್ನು ಸಾಮಾನ್ಯವಾಗಿ ಮರ, ಕಾಂಕ್ರೀಟ್ ಇತ್ಯಾದಿ ಗಳಿಂದ ರಚಿಸಲಾಗಿರುತ್ತದೆ. ತಂಪಾಗಿಸ ಬೇಕಾದ ಬಿಸಿ ನೀರನ್ನು ಇದರಲ್ಲಿನ ದಬ್ಬೆಗಳ ಮೂಲಕ ಹನಿ ಹನಿಯಾಗಿ ಹರಿಸಲಾಗುತ್ತದೆ

ಶೈತ್ಯಜನನ ವಿಜ್ಞಾನ

(ಭೌ) ನೋಡಿ : ಅತಿಶೈತ್ಯ ವಿಜ್ಞಾನ

ಶೈತ್ಯಾಗಾರ

(ಸಾ) ತಂಪುಗೂಡು, ಶೀತಲ ಉಗ್ರಾಣ. ಸಾಮಾನ್ಯ ಉಷ್ಣತೆಯಲ್ಲಿ ಕೆಡುವಂಥ ಪದಾರ್ಥಗಳನ್ನು ಕಡಿಮೆ ಉಷ್ಣತೆಯಲ್ಲಿರಿಸಿ ಹೆಚ್ಚುಕಾಲ ಸುಸ್ಥಿತಿಯಲ್ಲಿರುವಂತೆ ಮಾಡಲು ಉಪಯೋಗಿಸುವ ತಂತ್ರ

ಶೈತ್ಯೀಕರಣ

(ತಂ) ಆಹಾರ ಪದಾರ್ಥಗಳು ಬೇಗ ಕೆಡದಂತೆ ಸಂರಕ್ಷಿಸಿ ಇಡಲು ಯಾವುದೇ ಭೌತಿಕ ಅಥವಾ ರಾಸಾಯನಿಕ ಪ್ರಕ್ರಿಯೆಗಳ ಮೂಲಕ (ಶಾಖವನ್ನು ಬಳಸಿಕೊಂಡು ಆವಿಯಾಗುವ ದ್ರವವೊಂದನ್ನು ಹಠಾತ್ತಾಗಿ ಆವಿಯಾಗಿಸುವ ಮೂಲಕ, ಇಲ್ಲವೇ ಒತ್ತಡಕ್ಕೊಳಗಾದ ಆವಿಯನ್ನು ವಿಸ್ತರಣೆ ಗೊಳಿಸುವ ಮೂಲಕ) ಭಾರೀ ಶೈತ್ಯಸ್ಥಿತಿಯನ್ನುಂಟುಮಾಡುವುದು. ಯಾವುದೇ ವಸ್ತುವನ್ನು ಸುತ್ತಮುತ್ತಲಿನ ಉಷ್ಣತೆಗಿಂತ ಕಡಿಮೆ ಉಷ್ಣತೆಗೆ ತಗ್ಗಿಸಿ ಅದೇ ಶೈತ್ಯಸ್ಥಿತಿಯಲ್ಲಿ ಇರಿಸುವ ಪ್ರಕ್ರಿಯೆ

Search Dictionaries

Loading Results

Follow Us :   
  Download Bharatavani App
  Bharatavani Windows App