Navakarnataka Vijnana Tantrajnana Padasampada (2011)
Navakarnataka Publications Private Limited
ಶುದ್ಧ
(ಭೂವಿ) (ಚಿನ್ನದ ವಿಷಯದಲ್ಲಿ) ೨೪ ಕ್ಯಾರಟ್ ಶುದ್ಧ ಚಿನ್ನ. ಚೊಕ್ಕ, ಆಪ್ಪಟ, ಸ್ವಚ್ಛ, ಶುಭ್ರ
ಶುದ್ಧ ಆರೋಹಣ
(ಖ) ನೋಡಿ: ವಿಷುವದಂಶ
ಶುದ್ಧ ಗಣಿತ
(ಗ) ಫಲಿತಾಂಶಗಳನ್ನು ಪ್ರಾಯೋಗಿಕ ಉದ್ದೇಶಗಳಿಗೆ ಬಳಸುವ ಪರಿಗಣನೆಯಿಲ್ಲದೆ ಗಣಿತವೈಜ್ಞಾನಿಕ ರಚನೆಗಳನ್ನು ಸಹಜ ರೀತಿಯಲ್ಲಿ ಅಭ್ಯಸಿಸುವ ಗಣಿತ ವಿಜ್ಞಾನ ವಿಭಾಗ
ಶುದ್ಧೀಕರಣ
(ರ) ಯಾವುದೇ ವಸ್ತುವಿನಿಂದ ಅನಪೇಕ್ಷಿತ ಘಟಕಗಳನ್ನು ತೆಗೆದುಹಾಕುವುದು
ಶುದ್ಧೀಕೃತ ಸ್ಪಿರಿಟ್
(ರ) ಎಥೆನಾಲ್ (೯೫.೬%) ಹಾಗೂ ನೀರು (೪.೪%) ಇರುವ ಸತತವಾಗಿ ಕುದಿಯುತ್ತಿರುವ ಮಿಶ್ರಣ. ಆಸವನದಿಂದ ಲಭ್ಯ. ನೋಡಿ: ಈಥೈಲ್ ಆಲ್ಕಹಾಲ್
ಶುಶ್ರೂಷಾ ಕೋಶಗಳು
(ಪ್ರಾ) ಪೋಷಣ ಕಾರ್ಯ ನಿರ್ವಹಣೆಗಾಗಿ (ಆಹಾರ ಉತ್ಪಾದನೆಗಾಗಿ) ಅಂಡವನ್ನು ಸುತ್ತು ವರಿದಿರುವ ಅಥವಾ ಅದಕ್ಕೆ ಸೇರಿಕೊಂಡಿರುವ ಕೋಶಗಳು
ಶುಶ್ರೂಷೆ
(ವೈ) ಜನರ ಭೌತಿಕ ಹಾಗೂ ಮಾನಸಿಕ ಆರೋಗ್ಯಪಾಲನೆಯಲ್ಲಿ ಭೌತ, ಜೈವ ಹಾಗೂ ಸಾಮಾಜಿಕ ವಿಜ್ಞಾನ ಸೂತ್ರಗಳ ಅನ್ವಯ
ಶುಷ್ಕ ಬರ್ಫ
(ತಂ) ಘನೀಕೃತ ಕಾರ್ಬನ್ ಡೈಆಕ್ಸೈಡ್. ಸುಲಭವಾಗಿ ಕರಗದೆ ನಿಧಾನವಾಗಿ -೭೮ಂಸೆ. (೧೯೫K)ನಲ್ಲಷ್ಟೆ ನೇರವಾಗಿ ಅನಿಲರೂಪಕ್ಕೆ ಪರಿವರ್ತನೆಯಾಗುವುದರಿಂದ ರೆಫ್ರಿಜರೇಟರಿನಲ್ಲಿ ಬಳಕೆ
ಶುಷ್ಕ ವಲಯ
(ಭೂ) ಉತ್ತರ ಮತ್ತು ದಕ್ಷಿಣ ಅಕ್ಷಾಂಶ ಗಳಲ್ಲಿ ೧೫0-೩೦0 ವಲಯ; ಇಲ್ಲಿ ಮಳೆ ತೀರ ಕಡಿಮೆಯಾದ್ದರಿಂದ ಮರುಭೂಮಿಯ ಮತ್ತು ಅರೆಮರುಭೂಮಿಯ ಸಸ್ಯ ಮಾತ್ರ ಬೆಳೆಯುತ್ತದೆ. ನಿರಾರ್ದ್ರ ವಲಯ
ಶುಷ್ಕಕೋಶ
(ಭೌ) ವಿದ್ಯುತ್ಕೋಶ. ಇದರಲ್ಲಿ ಎಲೆಕ್ಟ್ರೊ ಲೈಟ್ಗಳು ಸರಿ (ಪೇಸ್ಟ್) ರೂಪದಲ್ಲಿ ಇರುತ್ತವೆ. ಟಾರ್ಚ್, ರೇಡಿಯೋ ಹಾಗೂ ಕ್ಯಾಲ್ಕ್ಯುಲೇಟರ್ಗಳ ಬ್ಯಾಟರಿ ಗಳೆಲ್ಲ ಒಂದು ರೀತಿಯ ಲೆಕ್ಲಾಂಚೆ ಕೋಶಗಳು. ಇವುಗಳಲ್ಲಿ ಎಲೆಕ್ಟ್ರೊಲೈಟು ಅಮೋನಿಯಮ್ ಕ್ಲೋರೈಡ್ ಪೇಸ್ಟ್ ಆಗಿರುತ್ತದೆ. ಧಾರಕವು ಋಣಾತ್ಮಕ ಸತುವಿನ ಎಲೆಕ್ಟ್ರೋಡ್ ಆಗಿರುತ್ತದೆ. ಇದಕ್ಕೆ ಬಾಹ್ಯ ಪ್ಲಾಸ್ಟಿಕ್ ಕವಚವಿರುತ್ತದೆ. ನೋಡಿ : ಲೆಕ್ಲಾಂಚೆ ಕೋಶ
ಶುಷ್ಕನ
(ರ) ಪದಾರ್ಥದಿಂದ ತೇವಾಂಶ ನಿರ್ಮೂಲನ. ನಿರ್ಜಲೀಕರಣ
ಶುಷ್ಕಸಸ್ಯ
(ಸ) ಮರುಭೂಮಿ ಮುಂತಾದ ಒಣ ಹವೆ ಗಳಲ್ಲಿ ಬೆಳೆಯುವ ಸಸ್ಯ. – ಕತ್ತಾಳೆ, ಪಾಪಾಸುಕಳ್ಳಿ. ಕ್ಸಿರೋಫೈಟ್
ಶೂನ್ಯ
(ಭೂವಿ) ಶಿಲೆ ಅಥವಾ ಮಣ್ಣಿನಲ್ಲಿ ಕಣಗಳ ನಡುವಿನ ತೆರಪು. (ಖ) ಆಕಾಶಕಾಯಗಳ ನಡುವಿನ ಖಾಲಿಪ್ರದೇಶ. (ಗ) ಸೊನ್ನೆ
ಶೂನ್ಯ
(ಭೌ) ನೋಡಿ: ನಿರ್ವಾತ
ಶೂನ್ಯ ಸದಿಶ
(ಗ) ā> ಎಂಬ ಒಂದು ಸದಿಶದ ಬೆಲೆ ಶೂನ್ಯವಾಗಿದ್ದರೆ ಅಂದರೆ, | ā> |= 0 ಆಗಿದ್ದರೆ, ಆ ಸದಿಶವನ್ನು ಶೂನ್ಯ ಸದಿಶ ಎನ್ನಲಾಗುವುದು
ಶೂನ್ಯಕಾರಿ
(ಗ) yx = 0 ಆದಾಗ xನ ಶೂನ್ಯಕಾರಿ y. ಹಾಗೆಯೇ x ಗಣದ ಪ್ರತಿಯೊಂದೂ ಪದದ ಶೂನ್ಯಕಾರಿ y ಆಗಿದ್ದರೆ ಆಗ y ಆ x ಗಣದ ಶೂನ್ಯಕಾರಿ
ಶೂನ್ಯಗಾಮಿ
(ಗ) ) ೦
ಶೂನ್ಯಗುರುತ್ವ
(ಭೌ) ನೋಡಿ : ತೂಕರಾಹಿತ್ಯ
ಶೂನ್ಯಬಿಂದು ಶಕ್ತಿ
(ಭೌ) ನಿರಪೇಕ್ಷ ಶೂನ್ಯ ಉಷ್ಣತೆ (0 K) ಸ್ಥಿತಿಯಲ್ಲಿಯೂ ಅಣುಗಳು ಆವರ್ತನೆ ಮತ್ತು ಕಂಪನದಿಂದಾಗಿ ಪಡೆದಿರುವ ಶಕ್ತಿ. ಇದು ಕ್ವಾಂಟಮ್ (ಶಬಲ) ಸಿದ್ಧಾಂತಕ್ಕೆ ಅನುಗುಣವಾಗಿದೆ
ಶೂನ್ಯೀಕರಿಸು