भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶಿಲಾವಿಜ್ಞಾನ

(ಭೂವಿ) ಶಿಲೆಗಳ, ವಿಶೇಷವಾಗಿ ಅಗ್ನಿಶಿಲೆ, ಜಲಜಶಿಲೆ ಹಾಗೂ ರೂಪಾಂತರಿತ ಶಿಲೆಗಳ, ಮೂಲ, ಇಂದಿನ ಸ್ಥಿತಿ, ರಾಸಾಯನಿಕ ಹಾಗೂ ಖನಿಜಯುತ ರಚನೆ, ರೂಪ ಪರಿವರ್ತನೆ, ಕ್ಷಯಿಸುವಿಕೆ ಇತ್ಯಾದಿ ಅಂಶಗಳನ್ನು ಅಧ್ಯಯಿಸುವ ಭೂವಿಜ್ಞಾನ ಶಾಖೆ

ಶಿಲಾವಿವರಣೆ

(ಭೂವಿ) ಪ್ರಕೃತಿ ವೀಕ್ಷಣೆಗಳ, ಕೈಯಲ್ಲಿ ಇರುವ ಮಾದರಿಗಳ ಅಭ್ಯಾಸದ ಮತ್ತು ಸೂಕ್ಷ್ಮದರ್ಶಕೀಯ ವೀಕ್ಷಣೆಗಳ ಮೂಲಕ ಶಿಲೆಗಳ ಉತ್ಪತ್ತಿ ಕ್ರಮ, ರಚನೆ, ವರ್ಗೀಕರಣ ಇವುಗಳ ವೈಜ್ಞಾನಿಕ ವಿವರಣೆ

ಶಿಲಾಶಾಸ್ತ್ರ

(ಭೂವಿ) ಶಿಲೆಯಲ್ಲಿ ಅಡಕವಾಗಿರುವ ಖನಿಜ, ಶಿಲಾ ರಚನೆ ಕಣದ ಗಾತ್ರ ಮತ್ತು ವಿನ್ಯಾಸ ಮುಂತಾದ ಗೋಚರ ಲಕ್ಷಣಗಳನ್ನು ಅಧ್ಯಯನ ಮಾಡುವ ಭೂವಿಜ್ಞಾನ ವಿಭಾಗ. ಸಾಮಾನ್ಯವಾಗಿ ಜಲಜಶಿಲೆ ಹಾಗೂ ಅವುಗಳ ಹೊರಚಾಚು ಕುರಿತು ಈ ಪದ ಅನ್ವಿತ

ಶಿಲಾಸಸ್ಯ

(ಸ) ಶಿಲೆಗಳನ್ನು ಆಧರಿಸಿ ಬೆಳೆಯುವ ಯಾವುದೇ ರೀತಿಯ ಸಸ್ಯ

ಶಿಲೀಕರಣ

(ಭೂವಿ) ಜೀವ್ಯವಶೇಷವಾಗುವ ಪ್ರಕ್ರಿಯೆ. ಸಸ್ಯದಂಥ ಜೈವಿಕ ರಚನೆಯು ಕಲ್ಲು ಅಥವಾ ಖನಿಜ ರೂಪವಾಗಿ ಬದಲಾಗುವುದು. ವಿಲೀನವಾದ ಜಲ ಸಂಯುಕ್ತ ಸಿಲಿಕ SiO2 ಸಸ್ಯದ ರಂಧ್ರಗಳೊಳಕ್ಕೆ ಪ್ರವೇಶಿಸಿ ಅಲ್ಲಿದ್ದುಕೊಂಡೇ ಕ್ರಮೇಣ ತನ್ನ ನೀರಿನ ಅಂಶವನ್ನು ಕಳೆದುಕೊಳ್ಳುವುದರಿಂದ ಶಿಲೀಕರಣ ಸಾಮಾನ್ಯವಾಗಿ ಆಗುತ್ತದೆ. ಇಯೊಸೀನ್ ಪರ್ವದಲ್ಲಿ ಇಂಥ ಘಟನೆಗಳು ವ್ಯಾಪಕವಾಗಿ ಸಂಭವಿಸಿವೆ. ನೋಡಿ : ಫಾಸಿಲ್

ಶಿಲೀಂಧ್ರ ಜನಕ

(ಸ) ಶಿಲೀಂಧ್ರ(ನಾಯಿಕೊಡೆ ಅಥವಾ ಅಣಬೆ)ದ ಮೈಸೀಲಿಯಮ್. ಅಣಬೆಗಳು ಉತ್ಪತ್ತಿಯಾಗುವ ಬೆಳ್ಳನೆಯ ನಾರು ಪದಾರ್ಥ

ಶಿಲೀಂಧ್ರ ನಂಜು

(ಸ) ಶಿಲೀಂಧ್ರ (ನಾಯಿಕೊಡೆ/ಅಣಬೆ)ದಿಂದ ಉತ್ಪತ್ತಿಯಾಗುವ ಯಾವುದೇ ವಿಷ. ಮನುಷ್ಯರ ಹಾಗೂ ಪ್ರಾಣಿಗಳ ಜೀವಾಂಗಗಳಿಗೆ ಹಾನಿ ಉಂಟುಮಾಡಬಹುದು

ಶಿಲೀಂಧ್ರನಾಶಕ

(ರ) ಶಿಲೀಂಧ್ರದ ಬೀಜಾಣುಗಳನ್ನು ಅಥವಾ ಮೈಸೀಲಿಯಮ್‌ಅನ್ನು ನಾಶಮಾಡುವ ವಸ್ತು

ಶಿಲೀಂಧ್ರವಿಜ್ಞಾನ

(ಸ) ಶಿಲೀಂಧ್ರಗಳ ಅಧ್ಯಯನ ನಡೆಸುವ ಸಸ್ಯವಿಜ್ಞಾನದ ಒಂದು ಶಾಖೆ. ಶೈವಲ ವಿಜ್ಞಾನ

ಶಿಲ್ಲರ್

(ಭೂವಿ) ಸ್ಫಟಿಕದಲ್ಲಿ ಅತಿಸೂಕ್ಷ್ಮ ಅಂತರ್ವೇಶನಗಳ ಕಾರಣ ಬೆಳಕು ಬಿದ್ದಾಗ ವಿವರ್ತನೆಯಿಂದಾಗಿ ವಿವಿಧ ವರ್ಣಗಳು ಪ್ರದರ್ಶನಗೊಳ್ಳುವಿಕೆ

ಶಿಶಿರ ಅಯನ ಸಂಧಿ

(ಖ) ವಾರ್ಷಿಕ ಚಲನೆಯಲ್ಲಿ ಸೂರ್ಯ ಉತ್ತರಕ್ಕೆ ಸರಿಯಲು ಪ್ರಾರಂಭಿಸುವ ಬಿಂದು

ಶಿಶಿರಸುಪ್ತಿ

(ಪ್ರಾ) ಕೆಲವು ಬಗೆಯ ಜೀವಿಗಳು (ಉದಾ: ಕರಡಿ) ಇಡೀ ಚಳಿಗಾಲವನ್ನು ಜಡತೆ ಅಥವಾ ನಿಷ್ಕ್ರಿಯತೆ ಯಲ್ಲಿ ಕಳೆಯುವ ವಿದ್ಯಮಾನ. ಶಿಶಿರಸ್ವಾಪ. ಶೀತ ನಿಷ್ಕ್ರಿಯತೆ

ಶಿಶು

(ಸಾ) ಇನ್ನೂ ಎರಡು ವರ್ಷ ತುಂಬದ ಮಗು. ಎಳೆಗೂಸು. ಹಸುಗೂಸು

ಶಿಶುದಂತವಿಜ್ಞಾನ

(ವೈ) ಮಕ್ಕಳ ಹಲ್ಲುಗಳಿಗೆ ಸಂಬಂಧಿಸಿದ ಅಧ್ಯಯನ ವಿಭಾಗ

ಶಿಶುಪ್ರಾಯತೆ

(ವೈ) ಪ್ರಾಪ್ತವಯಸ್ಕನಾದರೂ ವ್ಯಕ್ತಿಯಲ್ಲಿ ಬುದ್ಧಿಯ ಅಥವಾ ಶರೀರದ ತಕ್ಕ ಬೆಳವಣಿಗೆ ಇಲ್ಲದಿರುವುದು. ಎಳೆ ವಯಸ್ಸಿನಲ್ಲಿ ಸ್ವಾಭಾವಿಕ ಪ್ರವೃತ್ತಿಗಳ ಅತಿಯಾದ ದಮನದಿಂದಾಗಿ ಆ ಎಳೆ ಸ್ವಭಾವಗಳು ಹಾಗೆಯೇ ಉಳಿದಿರುವ ಸ್ಥಿತಿ

ಶಿಶುಮರಣ ದರ

(ಸಂ) ಒಂದು ವರ್ಷದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣಗಳ ಒಟ್ಟು ಸಂಖ್ಯೆಯನ್ನು ಜನನಗಳ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ದೊರೆಯುವ ದರ. ಶಿಶುಗಳ ಮರಣ ಪ್ರಮಾಣವನ್ನು ಅರಿಯಲು ಒಂದು ಉಪಯುಕ್ತ ದರವಿದು

ಶಿಶ್ನಕವಚ

(ವೈ) ಗರ್ಭ ನಿರೋಧಕ್ಕಾಗಿ/ರೋಗ ನಿರೋಧ ಕ್ಕಾಗಿ ಸಂಭೋಗ ಸಮಯದಲ್ಲಿ ಶಿಶ್ನಕ್ಕೆ ಹೊದಿಸುವ ರಬ್ಬರ್ ಚೀಲ

ಶಿಷ್ಟ

(ತಂ) ಒಂದು ಮಾದರಿಯೆಂದು ಅಥವಾ ಒಂದು ನಿಯಮವೆಂದು ಅಧಿಕೃತವಾಗಿ / ಸರ್ವಾನುಮತಿಯಿಂದ ಗೊತ್ತು ಮಾಡಲಾದ ವಸ್ತು, ಮಾನ ಅಥವಾ ಉಪಕರಣ. ಇದರೊಂದಿಗೆ ಹೋಲಿಸಿ ಅದೇ ಮಾದರಿಯ ಇತರ ವಸ್ತುಗಳ ಗುಣಮಟ್ಟವನ್ನು ಅಳೆಯಲಾಗುತ್ತದೆ ಅಥವಾ ಪರೀಕ್ಷಿಸಲಾಗುತ್ತದೆ. ಪ್ರಮಾಣಕ

ಶಿಷ್ಟ ಉಷ್ಣತೆ ಮತ್ತು ಒತ್ತಡ

(ಭೌ) s.t.p. ಅಥವಾ n.t.p. (normal temperature and pressure). ಅನಿಲಗಳ ಗುಣಗಳನ್ನು ಹೋಲಿಸಲು ಬಳಸುವ ಶಿಷ್ಟ ಪರಿಕಲ್ಪನೆಗಳು: ಅವು: ೨೭೩.೧೫ ಕೆಲ್ವಿನ್ (೦0 ಸೆ) ಮತ್ತು ೧೦೧.೩೨೫ ಪಾಸ್ಕಲ್ (೭೬೦ ಮಿಮೀ ಪಾದರಸ)

ಶಿಷ್ಟ ದ್ರಾವಣ

(ರ) ಖಚಿತವಾಗಿ ಗೊತ್ತಾದ ಸಾರ ನಿರ್ಧರಿತವಾಗಿರುವ ದ್ರಾವಣ. ಇದನ್ನು ಗಾತ್ರಮಾಪಕ ವಿಶ್ಲೇಷಣೆಯಲ್ಲಿ ಬಳಸಲಾಗುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App