Navakarnataka Vijnana Tantrajnana Padasampada (2011)
Navakarnataka Publications Private Limited
ಶಿಂಬಿಕಾ
(ಪ್ರಾ) ಪ್ರಾಣಿಗಳಲ್ಲಿ, ಕೆಲವು ವೇಳೆ ಮನುಷ್ಯನಲ್ಲೂ, ಮಂಡಿಯ ಕೋನದ ಸ್ನಾಯುವಿನಲ್ಲಿರುವ ಮೃದ್ವಸ್ಥಿಯ ಚಿಕ್ಕ ತುಂಡು. ಇದು ಬಹುವೇಳೆ ಎಲುಬಾಗಿ ಮಾರ್ಪಾಟಾಗುತ್ತದೆ
ಶಿಬಿರ
(ಸಾ) ಯಾವುದೋ ಉದ್ದೇಶಾರ್ಥ ಎಲ್ಲಿಗೋ ಪಯಣಿಸುವಾಗ ಹಾದಿಯಲ್ಲಿ ಹೂಡುವ ತಾತ್ಕಾಲಿಕ ನೆಲೆ
ಶಿಂಬೆ
(ಸ) ೧. ದ್ವಿದಳ ಧಾನ್ಯ ಸಸ್ಯದ (ತಿಂಗಳ ಹುರುಳಿ, ಅವರೆ, ತೊಗರಿ, ಬಟಾಣಿ ಇತ್ಯಾದಿಗಳ) ಕಾಯಿ, ಬೀಜಕೋಶ. ೨. ಯಾವುದೇ ದ್ವಿದಳ ಧಾನ್ಯದ ಸಸ್ಯ ಅಥವಾ ತರಕಾರಿ
ಶಿರ
(ತಂ) ೧. ಕಾಂತೀಯ ಟೇಪ್ನ ಮೇಲೆ ಧ್ವನಿ ಸಂಕೇತ ಗಳನ್ನು ಮುದ್ರಿಸುವ ಅಥವಾ ಮುದ್ರಿತ ಸಂಕೇತಗಳನ್ನು ಪುನರುತ್ಪಾದಿಸುವ ಸಾಧನ. ಇದರಲ್ಲಿ ಉತ್ತೇಜಕ ಸುರುಳಿಗಳು, ಲೋಹದ ರೇಕು ಅಂಟಿಸಿದ ಫಲಕ, ಅದರೊಳಗೆ ಒಂದು ಸಣ್ಣ ತೆರಪು ಇರುತ್ತದೆ. ಈ ತೆರಪಿನ ಮೂಲಕ ಅಭಿವಾಹವು ಟೇಪು ತಲಪಿ ಅದನ್ನು ಅನುಲಂಬವಾಗಿ ಕಾಂತೀಕರಿಸುತ್ತದೆ. ೨. ರೆಕಾರ್ಡ್ ಪ್ಲೇಯರ್ನಲ್ಲಿ ಕಾರ್ಟ್ರಿಡ್ಜ್ ಮತ್ತು ಸ್ಟೈಲಸ್ಸನ್ನು ಹೊತ್ತಿರುವ ವಿಭಾಗ
ಶಿರದ/ಕಪಾಲದ
(ಜೀ) ಶಿರಸಂಬಂಧಿ. ತಲೆಗೆ ಸಂಬಂಧಿಸಿದ
ಶಿರಾಭಿಮುಖ ಕೋನಗಳು
(ಗ) ಎರಡು ಸರಳರೇಖೆಗಳು ಛೇದಿಸಿದಾಗ ನಾಲ್ಕು ಕೋನಗಳು ಏರ್ಪಡುತ್ತವೆ. ಇಲ್ಲಿಯ ಯಾವುದೇ ಎದುರುಬದರು ಶೃಂಗೀಯ ಜೋಡಿಕೋನಗಳಿಗೆ ಶಿರ- ಅಭಿಮುಖಕೋನಗಳು ಎಂದು ಹೆಸರು. ಇವು ಪರಸ್ಪರ ಸಮ
ಶಿರೋಕರಣ
(ವೈ) ದ್ವಿಪಾರ್ಶ್ವೀಯ ಸಮ್ಮತಿ ಇರುವ ಪ್ರಾಣಿಯ ಮುಖಭಾಗದ ಅಂಗಗಳು – ಬಾಯ ನೆಲೆ, ಪ್ರಧಾನ ಸಂವೇದನಾಂಗಗಳು ಮತ್ತು ಕೇಂದ್ರ ನರಮಂಡಲದ ಪ್ರಧಾನ ನರಗ್ರಂಥಿಗಳು – ತಮ್ಮ ವೈಶಿಷ್ಟ್ಯ ಪಡೆಯುವುದು. ತಲೆ ರೂಪುಗೊಳ್ಳುವುದು
ಶಿರೋವಕ್ಷ
(ಪ್ರಾ) ಜೇಡ, ಏಡಿ ಮುಂತಾದ
ಶಿಲಾ ಪರಿವರ್ತನೆ
(ಭೂವಿ) ಗಾಳಿ ಮತ್ತು ನೀರು ಶಿಲೆಯ ಮೇಲೆ ಕ್ರಿಯೆ ಜರಗಿಸಿ ಅದರಲ್ಲಿ ಉಂಟುಮಾಡುವ ಭೌತಿಕ ಹಾಗೂ ರಾಸಾಯನಿಕ ಬದಲಾವಣೆಗಳು
ಶಿಲಾ ರೂಪಣೆ
(ಭೂವಿ) ನೋಡಿ : ಜಲಜ/ಅವಸಾದನ ಶಿಲೆ. ರೂಪಾಂತರಿತ ಶಿಲೆ, ಅಗ್ನಿಶಿಲೆ
ಶಿಲಾ ಸಮೂಹ
(ಭೂವಿ) ಕಾಲಸ್ತರ ವೈಜ್ಞಾನಿಕ ವರ್ಗೀಕರಣದ ಮೂಲಭೂತ ಏಕಮಾನ. ಭೂವೈಜ್ಞಾನಿಕ ಯುಗದಲ್ಲಿ ರೂಪುಗೊಂಡ ಶಿಲೆಗಳನ್ನು ಕುರಿತ ಪದ
ಶಿಲಾ ಹೊರಚಾಚು
(ಭೂವಿ) ಭೂಸ್ತರ, ಬಂಡೆ ಅಥವಾ ಶಿಲಾಪದರ ನೆಲದಿಂದ ಮೇಲೆದ್ದು ಪ್ರಕಟವಾಗುವ ದೃಶ್ಯ
ಶಿಲಾಕುಳಿ
(ಭೂವಿ) ಲಾವಾರಸ ಘನೀಭವಿಸುವಾಗ ವಿಮೋಚನೆಗೊಳ್ಳುವ ಅನಿಲಗಳು ಗುಳ್ಳೆಗಳಾಗಿ ಒಡೆಯುವು ದರಿಂದ ಮೈದಳೆಯುವ ಕುಹರಗಳು
ಶಿಲಾಗೋಳ
(ಭೂವಿ) ಭೂಮಿಯ ಹೊರಚಿಪ್ಪಿನ ಗಡಸು ಭಾಗ. ಅಸ್ತೆನೋಗೋಳದ ಮೇಲೆ ನಿಂತಿರುವ ಶಿಲಾ ವಲಯ. ಖಂಡ ಹಾಗೂ ಸಾಗರದಡಿ ಶಿಲಾಗೋಳದ ಮಂದವು ವ್ಯತ್ಯಾಸವಾಗುತ್ತದೆ. ಪ್ರಧಾನವಾಗಿ ಸಿಲಿಕ, ಅಲ್ಯುಮಿನಿಯಮ್ ಮತ್ತು ಮೆಗ್ನೀಸಿಯಮ್ ಧಾತುಗಳಿಂದಾಗಿದೆ
ಶಿಲಾಜನನ
(ಭೂವಿ) ವಿವಿಧ ಭೌತ-ರಾಸಾಯನಿಕ ಕ್ರಿಯೆ, ಪರಿಸರ ಹಾಗೂ ನಾನಾ ಬಲಗಳ ಪ್ರಭಾವದಲ್ಲಿ ಶಿಲೆ ಮೈದಳೆಯುವಿಕೆ
ಶಿಲಾಪಾಕ
(ಭೂವಿ) ಭೂಚಿಪ್ಪಿನೊಳಗೆ ಅಥವಾ ಹೊರ ಕವಚದೊಳಗೆ ಉಂಟಾಗುವ, ಜಲ ಅನಿಲ ಲೀನವಾದ, ಶಾಖದಿಂದ ಕೂಡಿದ ದ್ರವೀಯ ಸಾಮಗ್ರಿ. ತಂಪಾಗಿ ಘನೀಕರಿಸಿದಾಗ ಅಗ್ನಿಶಿಲೆ ಯಾಗುತ್ತದೆ. ನಿಲಂಬಿತ ಸ್ಫಟಿಕಗಳುಳ್ಳ ಸಿಲಿಕೇಟುಗಳಿಂದಲೂ ವಿಲೀನಗೊಂಡ ಅನಿಲಗಳಿಂದಲೂ ಕೂಡಿರುತ್ತದೆ. ಅಗ್ನಿಪರ್ವತಗಳು ಇದನ್ನು ಲಾವಾರೂಪದಲ್ಲಿ ಭೂಮಿ ಮೇಲ್ಮೈಗೆ ಚಿಮ್ಮುತ್ತವೆ. ಮ್ಯಾಗ್ಮ
ಶಿಲಾಭಂಗ
(ಭೂವಿ) ತುಯ್ತದ ಪರಿಣಾಮವಾಗಿ ಶಿಲೆಯಲ್ಲಿ ಮೂಡುವ ಬಿರುಕು
ಶಿಲಾಯುಗ
(ಸಾ) ಶಿಲೆಯ ಉಪಕರಣಗಳೂ ಆಯುಧಗಳೂ ಬಳಕೆಯಲ್ಲಿದ್ದ, ಲೋಹಗಳ ಬಳಕೆ ತಿಳಿಯದಿದ್ದ ನಾಗರಿಕತೆಯ ಯುಗ. ಇದರಲ್ಲಿ ಪ್ರಾಕ್ ಶಿಲಾಯುಗ, ಮಧ್ಯಶಿಲಾ ಯುಗ ಮತ್ತು ನವಶಿಲಾಯುಗ ಎಂದು ಮೂರು ವಿಭಾಗಗಳುಂಟು
ಶಿಲಾರಚನೆ
(ಭೂವಿ) ಭೂಪದರಗಳಲ್ಲಿ ಸಮಾನ ವೈಲಕ್ಷಣ್ಯವಿರುವ ಶಿಲಾಘಟಕ. ಶಿಲೆಯನ್ನು ಗುರುತಿಸಲು ಆಧಾರವಾಗಿ ಬಳಸಲಾಗುತ್ತದೆ
ಶಿಲಾರಾಳ