भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶಾಖನ

(ಭೌ) ವಿಕಿರಣಪಟು ಬೀಜಕವು ಕ್ಷಯಿಸಲು ಎರಡು ಅಥವಾ ಹೆಚ್ಚು ಭಿನ್ನ ಮಾರ್ಗಗಳಿರುವುದು.

ಶಾಖನ ಅನುಪಾತ

(ಭೌ) ವಿಕಿರಣಪಟು ಧಾತು ಒಂದಕ್ಕಿಂತ ಹೆಚ್ಚು ಬಗೆಗಳಲ್ಲಿ ವಿಘಟಿಸುವುದು ಸಾಧ್ಯವಿರುವಾಗ ಈ ಒಂದೊಂದು ಬಗೆಯಲ್ಲಿಯೂ ವಿಘಟನೆಗೆ ಈಡಾಗುವ ವಿಕಿರಣಪಟುವಿನ ರಾಶಿಗಳ ಅನುಪಾತ. ಕ್ಷಯ ದರ ಪ್ರಮಾಣ

ಶಾಖಮುಖ

(ಪವಿ) ತಣ್ಣನೆ ಗಾಳಿಯನ್ನು ಹಾದು ಮೇಲಕ್ಕೇರುವ ಬಿಸಿಗಾಳಿಯ ಮುಂತುದಿ

ಶಾಖೆ

(ಸ) ಮರದ ಕಾಂಡದ ಮೇಲೆ ಚಿಗುರಿದ ಅಂಗ, ದ್ವಿತೀಯಕ ಕಾಂಡ. ಕವಲು, ಟಿಸಿಲು

ಶಾಖೆಗಳ ಮಿಲನ

(ಪ್ರಾ.ವೈ) ರಕ್ತನಾಳಗಳು/ನರಗಳು ಸೇರಿ ಬಲೆಯಂಥ ರಚನೆ ರೂಪುಗೊಳ್ಳುವುದು. ರಕ್ತನಾಳಗಳ/ನರಗಳ ನಡುವಿನ ಉಭಯಸಾಮಾನ್ಯ ತಡೆಯನ್ನು ಒಡೆದು ಅವು ಸೇರಿಕೊಳ್ಳುವಂತೆ ಮಾಡುವುದು. ಎರಡು ರಕ್ತನಾಳಗಳ ನಡುವಿನ ಸಂಪರ್ಕ. ಆಹಾರ ನಾಳದ ಯಾವುವೇ ಎರಡು ಭಾಗಗಳ ನಡುವೆ ಶಸ್ತ್ರಕ್ರಿಯೆ ಮೂಲಕ ಏರ್ಪಡಿಸಿದ ಕೃತಕ ಸಂಪರ್ಕ. ಅಡ್ಡಕೂಡಿಕೆ

ಶಾಬ್ದಿಕ ಪ್ರತಿಬಿಂಬ

(ವೈ) ಒಂದು ಪದವನ್ನು ಹೇಳುವಾಗ ಅದರ ರೂಪ ಅಥವಾ ಶಬ್ದ ಅಥವಾ ಭಾವನೆಗಳನ್ನು ಮನಸ್ಸಿನಲ್ಲಿ ಮೂಡಿಸುವ ಬಿಂಬ

ಶಾಮಕ

(ವೈ) ಕೇಂದ್ರ ನರವ್ಯೂಹದ ಮೇಲೆ ಪ್ರಭಾವ ಬೀರಿ ನರಕ್ಷೋಭೆ ಹಾಗೂ ಚಿತ್ತಕೆರಳಿಕೆಯನ್ನು ಕಡಿಮೆ ಮಾಡುವ, ನೋವನ್ನು ನಿವಾರಿಸುವ, ಸುಪ್ತಿಕಾರಕ ಮದ್ದು

ಶಾಮಕ

(ವೈ) ತುರಿಕೆ ಇತ್ಯಾದಿ ಶಾರೀರಕ ತೊಂದರೆಗಳನ್ನು ಶಮನಗೊಳಿಸುವ ಔಷಧ

ಶಾಮಕತೆ

(ವೈ) ವಿಶೇಷವಾಗಿ ಶಾಮಕಗಳ ಬಳಕೆಯಿಂದ ನರಕ್ಷೋಭೆಯನ್ನು ಶಮನಗೊಳಿಸಿ ನೋವು ನಿವಾರಿಸುವ ಪ್ರಕ್ರಿಯೆ

ಶಾರೀರ

(ವೈ) (ಮುಖ್ಯವಾಗಿ ಮನುಷ್ಯರ) ಉಚ್ಚಾರಣೆಯ ಧ್ವನಿ. ಕಂಠ. ಧ್ವನಿಪೆಟ್ಟಿಗೆ ಹಾಗೂ ಊರ್ಧ್ವ ಶ್ವಾಸನಾಳದ ಮೂಲಕ ಸಾಗುವ ಗಾಳಿ ಮಾಡುವ ಶಬ್ದ. ಈ ಸಮಯದಲ್ಲಿ ದನಿತಂತುಗಳು ಪರಸ್ಪರ ಹತ್ತಿರಕ್ಕೆ ಬಂದು ಬಿಗುಪಾಗಿರುತ್ತವೆ

ಶಾಶ್ವತ ಅನಿಲ

(ರ) ಸಾಮಾನ್ಯ ಉಷ್ಣತೆಯಲ್ಲಿ ಒತ್ತಡದಿಂದಷ್ಟೆ ದ್ರವೀಕರಿಸಲಾಗದಂಥ ಅನಿಲ. ಅಂದರೆ ಕೊಠಡಿ ಉಷ್ಣತೆಗೂ ಕಡಿಮೆ ಕ್ರಾಂತಿ ಉಷ್ಣತೆಯುಳ್ಳ ಅನಿಲ. ಹಿಂದೆ ಆಕ್ಸಿಜನ್ ಹಾಗೂ ನೈಟ್ರೊಜನ್‌ಗಳನ್ನು ದ್ರವೀಕರಿಸಲಾಗದ ಶಾಶ್ವತ ಅನಿಲಗಳೆಂದು ಭಾವಿಸಲಾಗಿತ್ತು

ಶಾಶ್ವತ ಕಾಠಿಣ್ಯ

(ರ) ನೀರನ್ನು ದೀರ್ಘಕಾಲ ಕುದಿಸಿದ ಮೇಲೂ ಉಳಿಯುವ ಗಡಸುತನ. ಅದರಲ್ಲಿ ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಕ್ಲೋರೈಡ್ ಅಥವಾ ಸಲ್ಫೇಟ್‌ಗಳು ಬೆರೆತಿರುವುದರಿಂದ ಈ ಗಡಸುತನ ಉಂಟಾಗಿರುತ್ತದೆ

ಶಾಶ್ವತ ಕಾಂತ

(ಭೌ) ಪ್ರಬಲ ಕಾಂತೀಯ ಗುಣವಿದ್ದು ಉದ್ರೇಚನ ನಿಂತ ಮೇಲೂ ಕಾಂತೀಯತೆಯನ್ನು ಅನಿರ್ದಿಷ್ಟ ಕಾಲದವರೆಗೆ ಉಳಿಸಿಕೊಂಡಿರಬಲ್ಲ ಉಕ್ಕು ಅಥವಾ ಇತರ ಕಾಂತೀಯ ಪದಾರ್ಥದಿಂದ ರಚಿತವಾದ ಕಾಂತ. ಧ್ವನಿವರ್ಧಕ, ರಿಲೇ, ಪುಟ್ಟ ಮೋಟರ್‌ಗಳು, ಮ್ಯಾಗ್ನೆಟ್ರಾನ್ ಇತ್ಯಾದಿಗಳಲ್ಲಿ ಬಳಕೆ

ಶಾಶ್ವತ ಹಿಮ

(ಭೂವಿ) ಶಾಶ್ವತವಾಗಿ ಹಿಮಾವೃತ ವಾಗಿರುವ ಪ್ರದೇಶ. ಉದಾ : ಧ್ರುವಪ್ರದೇಶ

ಶಿಖರ

(ಗ) ಯಾವುದೇ ಜ್ಯಾಮಿತೀಯ ಆಕೃತಿಯಲ್ಲಿ ಆಧಾರ ವಾಗಿ ಪರಿಗಣಿಸಲ್ಪಡುವ ಭುಜ ಅಥವಾ ಸಮತಲದ ಎದುರಿನ ಅತ್ಯುಚ್ಚ ಬಿಂದು. ಉದಾ: ಶಂಕುವಿನ ಅಥವಾ ಪಿರಮಿಡ್‌ನ ಶೃಂಗ ಅಥವಾ ತ್ರಿಭುಜದ ಶೃಂಗ

ಶಿಖರ

(ಭೂವಿ) ಪರ್ವತದ ಮೊನಚಾದ ತುತ್ತತುದಿ

ಶಿಂಗಲ್

(ಭೂವಿ) ಕಡಲತೀರದ ಮೇಲುಭಾಗಗಳಲ್ಲಿ ವಿಶೇಷವಾಗಿ ಕಂಡುಬರುವ, ಸಾಮಾನ್ಯ ನೊರಜುಗಲ್ಲಿಗಿಂತ ಹೆಚ್ಚು ದಪ್ಪ ಕಣಗಳುಳ್ಳ ಪುಡಿಗಲ್ಲು

ಶಿಜಾಯ್ಡ್

(ವೈ) ಇಚ್ಚಿತ್ತ ಮನೋವೈಕಲ್ಯ ಪ್ರವೃತ್ತಿಯುಳ್ಳ ವ್ಯಕ್ತಿ. ಸಾಮಾನ್ಯವಾಗಿ ಅಂತರ್ಮುಖಿ

ಶಿಜೊಫೈಟ

(ಸ) ಕೆಳವರ್ಗದ ಸಸ್ಯಗಳನ್ನು ಒಳಗೊಂಡ ಒಂದು ವಿಭಾಗ. ನೀಲಿ-ಹಸಿರು ಆಲ್ಗೇ (ಪಾಚಿ) ಈ ವಿಭಾಗಕ್ಕೆ ಸೇರುತ್ತದೆ

ಶಿಥಿಲೀಕರಣ

(ಭೂವಿ) ಹವೆಯ ಕಾರಣವಾಗಿ ಶಿಲೆಗಳಲ್ಲೂ ಖನಿಜಗಳಲ್ಲೂ ಉಂಟಾಗುವ ಭೌತಿಕ ವಿಘಟನೆ ಹಾಗೂ ರಾಸಾಯನಿಕ ವಿಸಂಯೋಜನೆ. ಜೀವಿಗಳಿಂದ ಕೂಡ ಈ ಪ್ರಕ್ರಿಯೆಗಳು ಸಂಭವಿಸುವುದುಂಟು. ಅವಕ್ಷಯ

Search Dictionaries

Loading Results

Follow Us :   
  Download Bharatavani App
  Bharatavani Windows App