भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶಲಾಕ ಮಂಡಲ

(ಸ) ಹೂವಿನಲ್ಲಿ ಸ್ತ್ರೀ ಕೇಸರಗಳ ಸಮೂಹ. ಜಾಯಾಂಗ

ಶಲಾಕಾಗ್ರ

(ಸ) ಗರ್ಭಾದಾನದಲ್ಲಿ ಪರಾಗವನ್ನು ತೆಗೆದು ಕೊಳ್ಳುವ ಪುಷ್ಪ ಶಲಾಕೆಯ ಅಥವಾ ಅಂಡಾಶಯದ ಭಾಗ

ಶಲಾಕಾಶಯ

(ಸ) ಪುಷ್ಪದ ಸ್ತ್ರೀ ಅಂಗ. ಇದರೊಳಗೆ ಒಂದು/ಅಧಿಕ ಅಂಡಕಗಳಿರುವುವು. ಅಂಡಾಶಯ, ಶಲಾಕಾಗ್ರ ಮತ್ತು ಸಾಮಾನ್ಯವಾಗಿ ಶಲಾಕನಳಿಕೆ ಇದರ ಘಟಕಗಳು. ಶಲಾಕ ಕೋಶ

ಶಲ್ಕ

(ಸ) ಮರದ ತೊಗಟೆಯ ಹೊರಭಾಗ. (ಪ್ರಾ) ಮೀನು, ಸರೀಸೃಪ ಮೊದಲಾದವುಗಳ ಚರ್ಮವನ್ನು ರಕ್ಷಿಸುವ, ಹಂಚು ಹೊದಿಸಿದಂತೆ ಒಂದರ ಮೇಲೊಂದು ಜೋಡಣೆಯಾಗಿರುವ ಕೊಬ್ಬು ಪದಾರ್ಥದ ತೆಳು ಫಲಕ

ಶಲ್ಕ ಕೀಟ

(ಪ್ರಾ) ಸಸ್ಯಗಳಿಗೆ ಅಂಟಿಕೊಂಡು ಅವಕ್ಕೆ ಹಾನಿ ಮಾಡುವ ಕಾಕ್ಸಿಡೀ ವಂಶಕ್ಕೆ ಸೇರಿದ ಕೆಲವು ಬಗೆಯ ಪರೋಪಜೀವಿ ಕೀಟಗಳು. ಇವು ಗಿಡಕ್ಕೆ ಅಂಟಿಕೊಂಡಾಗ ಅದಕ್ಕೇ ಶಲ್ಕ ಮೂಡಿದೆಯೋ ಅನ್ನುವಂತೆ ಕಂಡುಬರುತ್ತದೆ. ಇವು ತಮ್ಮ ಮೈಯಿಂದ ಹೊರಸೂಸುವ ಅಂಟುದ್ರವವನ್ನೇ ಚಿಪ್ಪುಗಟ್ಟಿಸಿ ರಕ್ಷಾಕವಚವನ್ನಾಗಿ ಮಾಡಿಕೊಳ್ಳುತ್ತವೆ

ಶಲ್ಕೀ ತೊಗಟೆ

(ಸ) ಅಲ್ಲಿ ಇಲ್ಲಿ ಕ್ರಮರಹಿತವಾಗಿ ತೇಪೆ ಉಂಟುಮಾಡುತ್ತ ಕಿತ್ತುಹೋಗುವ ತೊಗಟೆ. ಸಾಮಾನ್ಯವಾಗಿ ದ್ರಾಕ್ಷಿ, ಕಿತ್ತಳೆ ಮುಂತಾದ ಸಸ್ಯಗಳಿಗೆ ತಗಲುವ ವೈರಸ್ ರೋಗದ ಪರಿಣಾಮ. ಸೊರೋಸಿಸ್ (psorosis) ಎಂಬ ಹೆಸರೂ ಉಂಟು

ಶಲ್ಕೀ ರೋಮ

(ಪ್ರಾ) ಚಪ್ಪಟೆಯಾದ ಶಲ್ಕದಂಥ ರಚನೆಯುಳ್ಳ ಕೂದಲು

ಶವ

(ವೈ) ಜೀವರಹಿತ ಮಾನವ ದೇಹ. ವಿಶೇಷವಾಗಿ ವೈದ್ಯಕೀಯ ಶಾಲೆಯಲ್ಲಿ ಶಸ್ತ್ರಛೇದನ ಮಾಡಿ ಅಧ್ಯಯನ ಮಾಡಲು ಬಳಸುವಂತಹುದು

ಶವ

(ಸಾ) ಮೃತಕಾಯ, ಸತ್ತ ಒಡಲು. ಘಟ, ಹೆಣ

ಶವಪ್ರಿಯತೆ

(ವೈ) ಶವದೊಂದಿಗೆ ಲೈಂಗಿಕ ಸಂಪರ್ಕ ಬಯಸುವ ಅಪಸಾಮಾನ್ಯ ಮನೋವೈಕಲ್ಯ

ಶವಭಕ್ಷಕ

(ಪ್ರಾ) ಸತ್ತ ಪ್ರಾಣಿಗಳನ್ನು ತಿನ್ನುವ

ಶವಭೀತಿ

(ವೈ) ಸಾವಿನ ಬಗೆಗೆ ಅಥವಾ ನಿರ್ಜೀವ ಕಾಯಗಳ ಬಗೆಗೆ ಅಪಾರ ಅಪಸಾಮಾನ್ಯ ಭೀತಿ

ಶವಾಗಾರ

(ಸಾ) ಸಾವಿನ ನಂತರ ಮೃತದೇಹವನ್ನು ವಿಲೇವಾರಿಗೆ ಮುನ್ನ ಆಸ್ಪತ್ರೆಗಳಲ್ಲಿ ಸ್ವಲ್ಪ ಕಾಲ ಇರಿಸಿರುವ ಸ್ಥಳ

ಶಸ್ತ್ರಕ್ರಿಯೆ

(ವೈ) ಶರೀರದ ಅಸಮರ್ಪಕ ಭಾಗಗಳನ್ನು ಛೇದಿಸುವ, ಹೊಸ ಸ್ಥಾನಗಳಿಗೆ ಹೊಂದಿಸುವ, ಹಿಗ್ಗಿಸುವ ಅಥವಾ ಚಲಿಸುವಂಥ ಶಾರೀರಿಕ ಅಳವಡಿಕೆಗಳ ಮೂಲಕ ದೇಹದ ಅನಾರೋಗ್ಯ ಪರಿಸ್ಥಿತಿಗಳನ್ನು ಅಥವಾ ಅಪಸಾಮಾನ್ಯ ರಚನೆಗಳನ್ನು ಸರಿಪಡಿಸುವ ವೈದ್ಯವಿಜ್ಞಾನ ವಿಭಾಗ

ಶಸ್ತ್ರಚಿಕಿತ್ಸೆ

(ವೈ) ಶಸ್ತ್ರ ಪ್ರಯೋಗದಿಂದ ಕೆಲವು ರೀತಿಯ ರೋಗಗಳನ್ನು, ಜನ್ಮದತ್ತ ವೈಕಲ್ಯಗಳನ್ನು, ಗಾಯ ಮುಂತಾದವು ಗಳನ್ನು ಗುಣಪಡಿಸುವ ವೈದ್ಯವಿಜ್ಞಾನ

ಶಸ್ತ್ರವೈದ್ಯ

(ವೈ) ಶಸ್ತ್ರಕ್ರಿಯೆಯ ಮೂಲಕ ರೋಗದ ಅಥವಾ ಅಂಗನ್ಯೂನತೆಯ ಸ್ಥಿತಿಯನ್ನು ಸರಿಪಡಿಸುವ ವೈದ್ಯ ವಿಜ್ಞಾನವಿಭಾಗದ ತಜ್ಞ

ಶಾಂಕವೇಯ

(ಗ) ದೀರ್ಘವೃತ್ತಜ, ಪರವಲಯಜ ಮತ್ತು ಅತಿಪರವಲಯಜ ಇವುಗಳ ಒಟ್ಟು ಹೆಸರು. ಮೂರು ಆಯಾಮಗಳ ಘನಾಕೃತಿ

ಶಾಕಾಗಾರ

(ಭೌ) ನೋಡಿ : ಹರ್ಬೇರಿಯಮ್

ಶಾಖ

(ಭೌ) ನೋಡಿ : ಉಷ್ಣ

ಶಾಖ ಕವಚ

(ಅಂವಿ) ಅಧಿಕ ಉಷ್ಣದಿಂದ ನಾಶಗೊಳ್ಳದಂತೆ ರಕ್ಷಣೆ ಒದಗಿಸುವ ಸಂರಕ್ಷಕ ಸ್ತರ. ಅಂತರಿಕ್ಷ ಯಾನದ ಬಳಿಕ ವಾತಾವರಣದೊಳಕ್ಕೆ ಪುನರ್‌ಪ್ರವೇಶ ಮಾಡುವ ಅಂತರಿಕ್ಷ ವಾಹನ ಅಥವಾ ಕೋಶಗಳ ಮುಂತುದಿಯಲ್ಲಿ ಹಾಗೂ ಹೊರಮೈ ಮೇಲೆ ಇಂಥ ಸ್ತರ ಒದಗಿಸಿರಲಾಗುತ್ತದೆ. ತಂತು, ಗಾಜು, ಸಿಲಿಕ ಇಲ್ಲವೇ ವಿಶೇಷ ಪ್ಲಾಸ್ಟಿಕ್ ವಸ್ತುಗಳಿಂದ ನಿರ್ಮಿತ. ಉಷ್ಣ ಕವಚ

Search Dictionaries

Loading Results

Follow Us :   
  Download Bharatavani App
  Bharatavani Windows App