भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶಂಟ್

(ತಂ) ರೈಲುಗಾಡಿಯನ್ನು ಒಂದು ಮಾರ್ಗದಿಂದ ಇನ್ನೊಂದಕ್ಕೆ ತಿರುಗಿಸುವುದು. ಮುಖ್ಯವಾಗಿ ಪ್ರಧಾನ ಮಾರ್ಗದಲ್ಲಿ ಮತ್ತೊಂದು ರೈಲು ಹೋಗುವುದಕ್ಕೆ ಎಡೆ ಮಾಡಿಕೊಡುವುದು

ಶತಪದಿ

(ಪ್ರಾ) ಆರ್ತ್ರಾಪೊಡ ವರ್ಗಕ್ಕೆ ಸೇರಿದ ಅನೇಕ ಜೊತೆ ಕಾಲುಗಳುಳ್ಳ ಹುಳು. ವಿಷಕಾರಿ. ಪ್ರತಿ ಖಂಡದಲ್ಲೂ ಜೋಡಿಕಾಲುಗಳು ಇರುತ್ತವೆ. ಲಕ್ಷ್ಮೀಚೇಳು, ಜರಿ, ಸಾವಿರಕಾಲು

ಶತಮಾನ

(ಖ) ೧೦೦ ವರ್ಷಗಳ ಅವಧಿ. ನೋಡಿ: ಸಹಸ್ರಮಾನ

ಶತಾವರಿ

(ಸ) ಲಿಲಿಯೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯಜಾತಿ. ಔಷಧೀಯ ಮಹತ್ತ್ವವುಳ್ಳದ್ದು. ಇದರಲ್ಲಿ ಕೆಲವು ಬಗೆಗಳನ್ನು ಅಲಂಕಾರಕ್ಕಾಗಿಯೂ ಮತ್ತೆ ಕೆಲವನ್ನು ತರಕಾರಿಯಾಗಿ ಬಳಸುವುದಕ್ಕೂ ಕೃಷಿ ಮಾಡಲಾಗುತ್ತದೆ

ಶತಾಂಶ ಪದ್ಧತಿ

(ಗ) ಈ ಪದ್ಧತಿಯಲ್ಲಿ ಒಂದು ಮಾನವನ್ನು ೧೦೦ ಸಮಭಾಗಗಳನ್ನಾಗಿ ವಿಭಜಿಸಿ ಅಂತಹ ಒಂದು ಭಾಗ (ಅಂದರೆ ಮಾನದ ೧/೧೦೦ನೇ ಭಾಗ)ವನ್ನು ಉಪ-ಮಾನ ಎಂದು ಪರಿಗಣಿಸಲಾಗುತ್ತದೆ. ಪುನಃ ಈ ಉಪಭಾಗವನ್ನು ೧೦೦ ಸಮಭಾಗಗಳಾಗಿ ವಿಭಜಿಸಬಹುದು. ಉದಾ: ಒಂದು ಲಂಬಕೋನವನ್ನು ೧೦೦ ಸಮಭಾಗಗಳಾಗಿ ವಿಭಜಿಸಿ ಲಭಿಸಿದ ಒಂದು ಉಪಭಾಗವನ್ನು ‘ಗ್ರೇಡ್’ ಎನ್ನುತ್ತೇವೆ. ಅಂತೆಯೇ ೧ ಗ್ರೇಡ್ = ೧೦೦ ಮಿನಿಟುಗಳು, ೧ ಮಿನಿಟು = ೧೦೦ ಸೆಕೆಂಡುಗಳು. (ಇಲ್ಲಿ ‘ಮಿನಿಟು’ ಮತ್ತು ‘ಸೆಕೆಂಡು’ಗಳು ಬೇರೆ ಸಂದರ್ಭದಲ್ಲಿ ಬಳಸುವ ಅವೇ ಪದಗಳ ಬೆಲೆಗಳಿಂದ ಬೇರೆಯಾಗಿವೆ)

ಶಬಲತೆ

(ಸ) ವೈರಸ್ ಸೋಂಕು, ಖನಿಜ ನ್ಯೂನತೆ ಮುಂತಾದ ಕಾರಣಗಳಿಂದಾಗಿ ಎಲೆ ಅಥವಾ ದಳಗಳಲ್ಲಿ ಬೇರೆ ಬೇರೆ ಬಣ್ಣದ ಮಚ್ಚೆಗಳು ಕಂಡುಬರುವುದು. ಇದು ಕೋಶ ದ್ರವ್ಯದಿಂದ ಆನುವಂಶಿಕವಾಗಿಯೂ ವರ್ಗಾವಣೆಗೊಳ್ಳಬಹುದು

ಶಬ್ದ

(ಭೌ) ನೋಡಿ : ಧ್ವನಿ

ಶಬ್ದಬಧಿರ

(ಮ) ಕಿವುಡ. ನೋಡಿ : ಗಾನಬಧಿರ

ಶಮನ

(ವೈ) ಉರಿಯೂತ ಇಳಿಯುವ ಪ್ರವೃತ್ತಿ

ಶಮನಕಾರಿ

(ವೈ) ಉದ್ವಿಗ್ನತೆಯನ್ನು ನಿವಾರಿಸಿ ಮನಶ್ಶಾಂತಿಯನ್ನು ಕೊಡುವ ಯಾವುದೇ ಕಾರಕ. ಜಾಗರೂಕ ಪಟುತ್ವವನ್ನು ಮಂದಗೊಳಿಸದೆ ಮಂಪರು ಬರಿಸದೆ ಉದ್ವೇಗ ಆತಂಕಗಳನ್ನು ಕಡಿಮೆ ಮಾಡುವ ಔಷಧ. ಶಾಮಕ

ಶರತ್ ಚಂದ್ರ

(ಖ) ಶರದ್ವಿಷುವಕ್ಕೆ

ಶರತ್ಕಾಲ

(ಖ) ಪಾಶ್ಚಾತ್ಯ ದೇಶಗಳಲ್ಲಿ, ಬೇಸಗೆ ಹಾಗೂ ಚಳಿಗಾಲಗಳ ನಡುವಿನ ಕಾಲ (ಸಾಮಾನ್ಯವಾಗಿ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್)

ಶರದ್ವಿಷುವ

(ಖ) ನೋಡಿ: ವಿಷುವದ್ಬಿಂದುಗಳು

ಶರೀರ ರಸಧಾತು

(ಪ್ರಾ) ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಗುಣಲಕ್ಷಣಗಳನ್ನು ನಿರ್ಧರಿಸುವುದೆಂದು ಭಾವಿಸಲಾದ, ದೇಹ ದಲ್ಲಿರುವ ನಾಲ್ಕು ಪ್ರಧಾನ ದ್ರವಗಳಲ್ಲಿ ಅಥವಾ ರಸಧಾತುಗಳಲ್ಲಿ (ರಕ್ತ, ಶ್ಲೇಷ್ಮ, ಹಳದಿ ಪಿತ್ತ ಮತ್ತು ಕರಿಪಿತ್ತ) ಒಂದು

ಶರೀರ ವೈದ್ಯ

(ವೈ) ಜೀವಿಗಳ ಶರೀರದ ಲಕ್ಷಣ, ವ್ಯಾಪಾರಗಳನ್ನು ವಿವರಿಸುವ ಶಾಸ್ತ್ರ ಅಧ್ಯಯನ ಮಾಡಿರುವವ

ಶರೀರವಿಜ್ಞಾನ

(ವೈ) ಭೌತ, ರಾಸಾಯನಿಕ ವಿಧಾನ ಗಳಿಂದ ಜೀವಿಯ ವಿವಿಧ ಅಂಗಗಳ, ಕೋಶ ಮತ್ತು ಊತಕಗಳ ಕಾರ್ಯಚಟುವಟಿಕೆ ಅಧ್ಯಯನ. ಅಂಗರಚನಾಶಾಸ್ತ್ರ, ದೇಹವಿಜ್ಞಾನ

ಶರೀರವಿಜ್ಞಾನದ ಲವಣ ದ್ರಾವಣ

(ವೈ) ವಾಂತಿ, ಭೇದಿ, ಕಾಲರಾ ರೋಗ ತಗಲಿದಾಗ ದೇಹದ ಅಂತರ್ಗತ ಜಲ ಬರಿದಾಗಿ ಗಂಭೀರ ಸ್ಥಿತಿ ಉಂಟಾಗಿ ಸಾವೂ ಸಂಭವಿಸ ಬಹುದು. ಆಗ ಈ ಲವಣಮಿಶ್ರಿತ ದ್ರಾವಣದ ಡ್ರಿಪ್ ಹಾಕುತ್ತಾರೆ. ಇದು ರೋಶಗತ ದ್ರಾವಣದಷ್ಟೆ ಸಾರತೆಯುಳ್ಳ ಸಮಕರ್ಷಕ (ಐಸೊಟಾನಿಕ್). ಎಳನೀರು ರಕ್ತದಷ್ಟೆ ಸಮಕರ್ಷಕವೆಂಬುದು ಗಮನಾರ್ಹ. ಓರಲ್ ರೀ ಹೈಡ್ರೇಷನ್ ಥೆರಪಿ ಎನ್ನುವ ಚಿಕಿತ್ಸಾ ವಿಧಾನದಲ್ಲಿ ಬಳಸುವ ದ್ರಾವಣದ ಸಂಯೋಜನೆ ಸರಿಸುಮಾರಾಗಿ ಇಂತಿದೆ: ಒಂದು ಘನ ಡೆಸಿಮೀಟರ್ ನೀರಿನಲ್ಲಿ ಸೋಡಿಯಮ್ ಕ್ಲೋರೈಡ್ ೩.೫ ಗ್ರಾಂ. ಪೊಟ್ಯಾಸಿಯಮ್ ಕ್ಲೋರೈಡ್ ೧.೫ ಗ್ರಾಂ. ಟ್ರೈ ಸೋಡಿಯಮ್ ಸಿಟ್ರೇಟ್ ಅಥವಾ ಸೋಡಿಯಮ್ ಬೈ ಕಾರ್ಬೊನೇಟ್ ೨.೯ ಗ್ರಾಂ. ಗ್ಲೂಕೋಸ್ ೨೦.೦ ಗ್ರಾಂ.

ಶರ್ಕರ ಮಾಪಕ

(ತಂ) ಸಕ್ಕರೆ ದ್ರಾವಣದ ಸಾರತೆಯನ್ನು ನಿರ್ಧರಿಸಲು ಬಳಸುವ ಉಪಕರಣ. ದ್ರಾವಣ ತುಂಬಿದ ನಳಿಕೆಯ ಮೂಲಕ ಧ್ರುವೀಕೃತ ಬೆಳಕನ್ನು ಹರಿಯ ಗೊಟ್ಟು ಅದರ ಕಂಪನತಲದ ಭ್ರಮಣ ಕೋನವನ್ನು ಅಳೆಯುವ ಮೂಲಕ ದ್ರಾವಣದ ಸಾರತೆಯನ್ನು ನಿರ್ಧರಿಸಲಾಗುತ್ತದೆ

ಶಲಾಕ

(ಸ) ಅಂಡಾಶಯ, ಶಲಾಕದಂಡ, ಶಲಾಕಾಗ್ರ ಇವನ್ನೊಳಗೊಂಡಿರುವ ಹೂವಿನ ಹೆಣ್ಣು ಅಂಗ. ಜಾಯಾಂಗ

ಶಲಾಕ ನಳಿಕೆ

(stile) (ಸ) ಅಂಡಾಶಯ ಮತ್ತು ಶಲಾಕಾಗ್ರದ ನಡುವಿರುವ ಕಾರ್ಪೆಲ್‌ನ ಭಾಗ. ಸಾಮಾನ್ಯವಾಗಿ ನೀಳವಾಗಿರುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App