भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶ್ವೇತ ವಿವರ

(ಖ) ಒಳಬಿದ್ದರೂ ವಸ್ತುಗಳು ಹೊರಹೋಗಲಾಗದ ಕೃಷ್ಣವಿವರಗಳು (ಬ್ಲಾಕ್ ಹೋಲ್) ಎಂಬ ಕಾಯಗಳಿರುವುದಾದರೆ, ಕಾಲ ಸಮಮಿತಿಗೆ ಭೌತ ನಿಯಮಗಳು ಒಳಪಡುವುದರಿಂದ, ಹೊರಬರುತ್ತಲಿದ್ದರೂ ವಸ್ತುಗಳು ಒಳ ಹೋಗಲಾಗದ ಶ್ವೇತವಿವರ (ವೈಟ್ ಹೋಲ್)ಗಳೆಂಬ ಕಾಯಗಳೂ ಇರಬಹುದು ಎಂದು ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ (೧೯೪೨-) ಊಹಿಸಿದರು

ಶ್ವೇತಕುಬ್ಜ

(ಖ) ನಕ್ಷತ್ರ ವಿಕಾಸದ ನಾಲ್ಕನೆಯ ಹಂತದಲ್ಲಿ (ಆದಿಮ ನಕ್ಷತ್ರ, ಹೈಡ್ರೊಜನ್ ನಕ್ಷತ್ರ, ಹೀಲಿಯಮ್ ನಕ್ಷತ್ರ ಅಥವಾ ರಕ್ತದೈತ್ಯ, ಕಾರ್ಬನ್ ನಕ್ಷತ್ರ) ಅದರ ರಾಶಿ ಚಂದ್ರಶೇಖರ್ ಪರಿಮಿತಿಗಿಂತ (=೧.೪´ ಸೌರ ರಾಶಿ) ಕಡಿಮೆ ಇದ್ದರೆ ಅದು ಶ್ವೇತಕುಬ್ಜವಾಗಿ ಕಾಲಾಂತರದಲ್ಲಿ ನಂದುತ್ತದೆ, ಅಧಿಕವಾಗಿದ್ದರೆ ಕಾರ್ಬನ್ ನಕ್ಷತ್ರ ಹಂತದಿಂದ ಅದರ ಮುಂದಿನ ಹಂತಗಳಿಗೆ ಅಭಿ ವರ್ಧಿಸುತ್ತದೆ. ಶ್ವೇತಕುಬ್ಜದಲ್ಲಿ ದ್ರವ್ಯ ಅತ್ಯಂತ ನಿಕಟವಾಗಿ ಗಿಡಿದುಕೊಂಡಿರುತ್ತದೆ. ಸಾಧಾರಣ ಶ್ವೇತಕುಬ್ಜವೊಂದರ ಸಾಂದ್ರತೆ ಘನಮೀಟರಿಗೆ ೧೦೯ ಕಿಗ್ರಾಮ್. ತ್ರಿಜ್ಯ ೧೦೩ ಕಿಮೀ ಮತ್ತು ರಾಶಿ ಸೌರರಾಶಿಯ ೦.೭ ಅಂಶ. ಶ್ವೇತಕುಬ್ಜವನ್ನು ೧೯೧೫ರಲ್ಲಿ ಪರೋಕ್ಷ ವಿಧಾನಗಳಿಂದ ಮೊತ್ತಮೊದಲಿಗೆ ಆವಿಷ್ಕರಿಸಲಾಯಿತು

ಶ್ವೇತತೆ

(ಖ) ಅದೀಪ್ತ ತಲದ ಮೇಲೆ ಆಪಾತವಾದ ಬೆಳಕಿನ (ಸಾರ್ವತ್ರಿಕವಾಗಿ ವಿಕಿರಣದ) ಎಷ್ಟು ಅಂಶ ಅದರಿಂದ ಪ್ರತಿಫಲಿತ ವಾಗುವುದೆಂಬುದರ ಅಳತೆ. ಉದಾ : ಭೂಮಿಯ ಶ್ವೇತತೆ ೦.೨೯, ಚಂದ್ರನದು ೦.೦೭, ಬುಧನದು ೦.೦೭, ಶುಕ್ರನದು ೦.೫೯, ಕುಜನದು ೦.೧೫, ಗುರುವಿನದು ೦.೪೪ ಶನಿಯದು ೦.೪೨. (ಭೌ) ಪ್ರತಿಫಲನಾಂಕ. ಒಂದು ತಲದಿಂದ ಪ್ರತಿಫಲಿತವಾದ ಕಾಂತಿ, ನ್ಯೂಟ್ರಾನುಗಳು ಮುಂತಾದವುಗಳ ಮೊತ್ತಕ್ಕೂ ಆ ತಲದ ಮೇಲೆ ಬಿದ್ದ ಅವುಗಳ ಮೊತ್ತಕ್ಕೂ ನಡುವಿನ ನಿಷ್ಪತ್ತಿ

ಶ್ವೇತದ್ರವ್ಯ

(ಪ್ರಾ) ಕಶೇರುಕಗಳ ಕೇಂದ್ರ ನರಮಂಡಲವನ್ನು ರೂಪಿಸುವ ಊತಕದ ಭಾಗ. ಇದರಲ್ಲಿ ಮುಖ್ಯವಾಗಿ ನರತಂತುಗಳು ಬಿಳಿ ಮೈಲಿನ್ ಹೊದಿಕೆಗಳಿಂದ ಆವೃತವಾಗಿರುತ್ತವೆ. ಹೋಲಿಸಿ : ಬೂದು ದ್ರವ್ಯ

ಶ್ವೇತಲೋಹ

(ರ) ತವರ-ಆಧಾರಿತ (ಶೇ. ೫೦ ಕ್ಕಿಂತ ಹೆಚ್ಚು) ಮಿಶ್ರಲೋಹ. ಇದರಲ್ಲಿ ವಿಭಿನ್ನ ಪ್ರಮಾಣಗಳಲ್ಲಿ ಸೀಸ, ತಾಮ್ರ ಮತ್ತು ಆಂಟಿಮೊನಿ ಇರುತ್ತವೆ. ಬಿಳಿಲೋಹ

ಶ್ವೇತವರ್ಣಿ

(ಸ) ಪತ್ರಹರಿತ್ತು ಅಥವಾ ನೈಸರ್ಗಿಕ ಸಸ್ಯ ವರ್ಣಕಗಳು ಸಾಕಷ್ಟು ಪ್ರಮಾಣಗಳಲ್ಲಿ ಇಲ್ಲದ ಅಪಸಾಮಾನ್ಯ ಸಸ್ಯ. (ಪ್ರಾ) ವರ್ಣದ್ರವ್ಯವಿಲ್ಲದೆ ಹುಟ್ಟಿದ್ದರಿಂದಾಗಿ ಬಿಳಿಚಿದ ಚರ್ಮ ಮತ್ತು ಕೂದಲುಗಳನ್ನೂ, ಬೆಳಕು ಸಹಿಸದ ಕೆಂಪು ಪಾಪೆಗಳನ್ನೂ ಉಳ್ಳ ಮನುಷ್ಯ ಅಥವಾ ಪ್ರಾಣಿ. ನೈಸರ್ಗಿಕ ವರ್ಣಲುಪ್ತತೆ. ಬಿಳಿಚ

Search Dictionaries

Loading Results

Follow Us :   
  Download Bharatavani App
  Bharatavani Windows App