भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶ್ವಸನ ಗುಣಾಂಕ

(ವೈ) ಉಸಿರಾಟ ಕ್ರಿಯೆಯಲ್ಲಿ ಜೀವಿ ಉತ್ಪಾದಿಸುವ ಕಾರ್ಬನ್ ಡೈಆಕ್ಸೈಡ್ ಮತ್ತು ಬಳಸುವ ಆಕ್ಸಿಜನ್ ಇವುಗಳ ಪ್ರಮಾಣಗಳ ನಿಷ್ಪತ್ತಿ. ಇದು ಸುಮಾರು ೦.೮ಕ್ಕೆ ಸಮ

ಶ್ವಸನ ಮಂಡಲ

(ವೈ) ದೇಹದಲ್ಲಿರುವ ತರಲ ಗಳಿಗೆ ಆಕ್ಸಿಜನ್‌ಅನ್ನು ಸರಬರಾಜು ಮಾಡಲು ಹಾಗೂ ಕಾರ್ಬನ್ ಡೈಆಕ್ಸೈಡ್‌ನ್ನು ಹೊರಹಾಕಲು ಅನುಕೂಲ ಮಾಡಿಕೊಡುವ ಶ್ವಾಸ ಕೋಶಗಳು ಮತ್ತು ಕಿವಿರುಗಳಂಥ ವಿಶೇಷ ರಚನೆಗಳಿರುವ ವ್ಯವಸ್ಥೆ

ಶ್ವಸನಿ

(ಪ್ರಾ) ಉನ್ನತ ಕಶೇರುಕ ಗಳಲ್ಲಿ ಶ್ವಾಸನಾಳ ವಿಭಜನೆಗೊಳ್ಳುವ ಎರಡು ಕವಲುಗಳ ಪೈಕಿ ಒಂದು. ಇವು ಶ್ವಾಸಕೋಶಗಳ ಒಳ ಸೇರುತ್ತವೆ

ಶ್ವಸನಿ ವ್ಯಾಕೋಚನ

(ವೈ) ಶ್ವಸನಿಗಳು ಹಿಗ್ಗುವು ದರಿಂದ ತಲೆದೋರುವ ಬೇನೆ. ಫುಪ್ಪುಸನಾಳ ಡೊಗರು

ಶ್ವಸನಿಕ

(ಪ್ರಾ) ಫುಪ್ಪುಸ ಅಂತರ್ನಾಳ. ಶ್ವಾಸನಳಿಕೆ

ಶ್ವಾನಭೀತಿ

(ಮ) ನಾಯಿ ಕಂಡರೆ ಭಯ

ಶ್ವಾಸಕ ಧಮನಿ

(ವೈ) ಆಕ್ಸಿಜನ್ ಪೂರ್ಣ ಪೂರೈಕೆ ಆಗದಿರುವ ರಕ್ತವನ್ನು ಹೃದಯದ ಬಲಹೃತ್ಕುಕ್ಷಿಯಿಂದ ಶ್ವಾಸಕೋಶಗಳಿಗೆ (ಇಲ್ಲಿ ರಕ್ತಕ್ಕೆ ಆಕ್ಸಿಜನ್ ಪೂರ್ಣಪೂರೈಕೆ ಯಾಗುತ್ತದೆ) ಒಯ್ಯುವ ಧಮನಿ. ಶ್ವಾಸಧಮನಿ

ಶ್ವಾಸಕ ಪರಿಚಲನೆ

(ವೈ) ದೇಹದ ಎಲ್ಲಾ ಜೀವಕೋಶಗಳಿಂದ ಕಾರ್ಬನ್ ಡೈಆಕ್ಸೈಡ್‌ಅನ್ನು ಸಂಗ್ರಹಿಸಿಕೊಂಡು ಬಲ ಹೃತ್ಕುಕ್ಷಿಯೊಳಗೆ ಬಂದ ರಕ್ತವು ಶ್ವಾಸಕಧಮನಿಯ ಮೂಲಕ ಶ್ವಾಸಕೋಶಗಳನ್ನು ತಲಪುತ್ತದೆ. ಅಲ್ಲಿಯ ಗಾಳಿಗೂಡುಗಳಲ್ಲಿ ಕಾರ್ಬನ್ ಡೈಆಕ್ಸೈಡನ್ನು ಹೊರದೂಡಿ ಅಲ್ಲಿರುವ ಆಕ್ಸಿಜನ್ನನ್ನು ಸ್ವೀಕರಿಸಿ ಹೃತ್ಕರ್ಣದೊಳಗೆ ಬರುವುದು. ಈ ಚಕ್ರ ನಿರಂತರವಾಗಿ ನಡೆಯುತ್ತಿರುತ್ತದೆ

ಶ್ವಾಸಕೋಶ

(ವೈ) ಮಾನವರಲ್ಲಿ ಶಂಕಾಕೃತಿಯ, ಸ್ಪಂಜಿನಂತಹ, ಫುಪ್ಪುಸ ಪೊರೆಯಿಂದ ಆವೃತವಾಗಿ, ಎದೆಗೂಡಿನಲ್ಲಿರುವ ಉಸಿರಾಟಕ್ಕೆ ಸಂಬಂಧಿಸಿದ ಜೋಡಿ ಅಂಗ. ಶ್ವಾಸಕೋಶಗಳು ವಾಯುನಾಳ, ಧ್ವನಿಪೆಟ್ಟಿಗೆಯ ಮೂಲಕ ಬಾಯಿಯೊಡನೆ ಸಂಪರ್ಕ ಹೊಂದಿವೆ. ಎರಡೂ ಶ್ವಾಸಕೋಶಗಳು ವಪೆಯ ಮೇಲೆ ಇರುತ್ತವೆ. ವಾಯು ಉಪನಾಳಗಳು ಶ್ವಾಸಕೋಶದ ಬುಡದ ಮೂಲಕ ಒಳಸಾಗುತ್ತವೆ. ಇವು ಸತತವಾಗಿ ಮರದ ರೆಂಬೆ ಕೊಂಬೆಗಳಂತೆ ಕವಲೊಡೆಯುತ್ತಾ ಸಾಗುತ್ತವೆ. ಬುಡದ ಮೂಲಕವೇ ರಕ್ತನಾಳಗಳೂ ಸಹ ಒಳಹೊರ ಸಾಗುತ್ತವೆ. ಬಲ ಶ್ವಾಸಕೋಶದಲ್ಲಿ ಮೂರು ಹಾಲೆಗಳು ಇವೆ. ಎಡ ಶ್ವಾಸಕೋಶದಲ್ಲಿ ಎರಡು ಹಾಲೆಗಳು ಇವೆ. ಇವುಗಳಲ್ಲಿ ಗಾಳಿಗೂಡುಗಳಿರುತ್ತವೆ. ಮನುಷ್ಯರ ಶ್ವಾಸಕೋಶ ಗಳಲ್ಲಿ ಸುಮಾರು ೩೦೦,೦೦೦,೦೦೦ ಗಾಳಿಗೂಡುಗಳು ಇರುತ್ತವೆ. ಇವನ್ನೆಲ್ಲ ಪ್ರತ್ಯೇಕಿಸಿ ನೆಲದ ಮೇಲೆ ಹರಡಲು ಸಾಧ್ಯವಾಗುವು ದಾದರೆ ಅದು ೭೦ ಚ.ಮೀಟರಿನಷ್ಟು ಸ್ಥಳವನ್ನು ಆಕ್ರಮಿಸುತ್ತದೆ. ಗಾಳಿಯು ಮೂಗು ಅಥವಾ ಬಾಯಿಯ ಮೂಲಕ ಗಂಟಲಕುಳಿ, ಶ್ವಾಸನಾಳ, ಶ್ವಾಸ ಉಪನಾಳಗಳ ಮೂಲಕ ಗಾಳಿ ಗೂಡುಗಳನ್ನು ಪ್ರವೇಶಿಸುತ್ತದೆ. ಗಾಳಿಗೂಡಿನಲ್ಲಿರುವ ರಕ್ತನಾಳಗಳು ಶ್ವಾಸಕೋಶದ ಗಾಳಿಯಲ್ಲಿರುವ ಆಕ್ಸಿಜನ್‌ಭರಿತ ಗಾಳಿಯನ್ನು ಹೀರಿಕೊಂಡು ತಮ್ಮಲ್ಲಿರುವ ಕಾರ್ಬನ್ ಡೈಆಕ್ಸೈಡನ್ನು ಶ್ವಾಸಕೋಶದ ಒಳಗೆ ವಿಸರ್ಜಿಸುತ್ತವೆ. ಈ ಕಾರ್ಬನ್ ಡೈಆಕ್ಸೈಡ್ ಭರಿತ ಗಾಳಿಯು ನಿಶ್ವಾಸದ ಮೂಲಕ ವಾಯುಮಂಡಲವನ್ನು ಸೇರುತ್ತದೆ. ಒಬ್ಬ ಮನುಷ್ಯ ಒಂದು ನಿಮಿಷಕ್ಕೆ ಸುಮಾರು ೧೨-೨೦ ಸಲ ಉಸಿರಾಡಬಲ್ಲ. ಪುರುಷರ ಶ್ವಾಸಕೋಶಗಳು ೩.೬-೯.೪ ಲೀಟರ್ ಗಾಳಿಯನ್ನು ಹಿಡಿದಿಡಬಲ್ಲವಾದರೆ, ಸ್ತ್ರೀಯರಲ್ಲಿ ಇದು ೨.೫-೬.೯ ಲೀಟರಿನಷ್ಟು

ಶ್ವಾಸಕೋಶಾವರಣ

(ಪ್ರಾ) ಸ್ತನಿಗಳಲ್ಲಿ, ಹಕ್ಕಿಗಳಲ್ಲಿ ಶ್ವಾಸ ಕೋಶಗಳ ಒಳಭಿತ್ತಿಯ ಮೇಲೆ ಆವರಿಸಿರುವ ದ್ರವಸಿಕ್ತ ಪೊರೆ. ಪ್ಲೂರ

ಶ್ವಾಸಧಮನಿ ತಂತುಗಟ್ಟಿಕೆ

(ವೈ) ಶ್ವಾಸಧಮನಿಯಲ್ಲಿ ಗಾಯವಾದಾಗ ಅಥವಾ ರಕ್ತ ಸಂಚಾರಕ್ಕೆ ಅಡಚಣೆ ಉಂಟಾದಾಗ ಸಹಜವಾಗಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತಂತುಬಂಧಕ ಊತಕಗಳು ಬೆಳೆಯುವುದು

ಶ್ವಾಸನ ಸಿರೆ

(ವೈ) ಶುದ್ಧೀಕರಿಸಿದ (ಆಕ್ಸಿಜನ್ ಯುಕ್ತ) ರಕ್ತವನ್ನು ಶ್ವಾಸಕೋಶಗಳಿಂದ ಹೃದಯದ ಎಡ-ಹೃತ್ಕರ್ಣಕ್ಕೆ ಒಯ್ಯುವ ಸಿರೆ

ಶ್ವಾಸನಾಳ ದರ್ಶಕ

(ವೈ) ಶ್ವಾಸನಾಳ ಹಾಗೂ ಅದರ ವ್ಯವಸ್ಥೆಯನ್ನು ನೇರವಾಗಿ ನೋಡಲು ನೆರವಾಗುವ ಸಾಧನ. ಶ್ವಾಸನಾಳ ದರ್ಶಕದಲ್ಲಿ ಒಂದು ಕ್ಯಾಮರ, ಬೆಳಕಿನ ಮೂಲಗಳು ಇರುತ್ತವೆ. ಹಾಗೆಯೇ ಇಕ್ಕಳ, ಚಾಕು, ಕತ್ತರಿ ಮುಂತಾದ ಸಲಕರಣೆ ಗಳನ್ನು ಅಳವಡಿಸಲು ಅವಕಾಶವಿರುತ್ತದೆ. ಯಾವುದಾದರೂ ಭಾಗ ರೋಗಗ್ರಸ್ತವಾಗಿರಬಹುದು ಎಂಬ ಅನುಮಾನ ಬಂದರೆ, ಆ ಭಾಗದಿಂದ ಚೂರು ಭಾಗವನ್ನು ಕತ್ತರಿಸಿ, ಹೊರತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲು ಸಾಧ್ಯವಿರುತ್ತದೆ. ಇದರ ಮೂಲಕ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳನ್ನೂ ಮಾಡಬಹುದು.

ಶ್ವಾಸನಾಳ ದ್ವಾರ

(ವೈ) ಉನ್ನತ ಕಶೇರುಕಗಳಲ್ಲಿ ಶ್ವಾಸನಾಳದ ಮೇಲ್ಗಡೆ ಮತ್ತು ಧ್ವನಿತಂತುಗಳ ಮಧ್ಯೆ ಇರುವ, ಸಂಕೋಚನ ಮತ್ತು ವ್ಯಾಕೋಚನಗಳಿಂದ ಧ್ವನಿಯ ಏರಿಳಿತಗಳನ್ನು ನಿಯಂತ್ರಿಸಬಲ್ಲ ತೆರಪು

ಶ್ವಾಸಬಂಧನ

(ವೈ) ಉಚ್ಛ್ವಸಿತ ವಾಯುವಿನಲ್ಲಿ ಹಾಗೂ ರಕ್ತದಲ್ಲಿ ಆಕ್ಸಿಜನ್ ಕೊರತೆಯಾದಾಗ ಉಸಿರಾಡಲು ಆಗದೆ ಇರುವುದು. ಉಸಿರು ಹಿಡಿತ

ಶ್ವಾಸಮಾಪಕ

(ವೈ) ಉಸಿರಾಟದಲ್ಲಿ ಉಚ್ಛ್ವಾಸ ನಿಃಶ್ವಾಸದ ಗಾಳಿಯ ಪ್ರಮಾಣವನ್ನು ಅಳೆಯುವ ಸಲಕರಣೆ. ಸ್ಪೈರೊಮೀಟರ್

ಶ್ವಾಸವಿಶ್ಲೇಷಕ

(ತಂ) ನೋಡಿ : ಬ್ರೆತಲೈಸರ್

ಶ್ವಾಸಸಿರೆ

(ವೈ) ಶ್ವಾಸಕೋಶದಿಂದ ಆಕ್ಸಿಜನ್ ಪೂರಿತ ರಕ್ತವನ್ನು ಹೃದಯದ ಎಡಹೃತ್ಕರ್ಣಕ್ಕೆ ಸಾಗಿಸುವ ನಾಳ

ಶ್ವಾಸಸ್ತಂಭ

(ವೈ) ಸ್ಥೂಲಕಾಯರಲ್ಲಿ ನಿದ್ರೆಯಲ್ಲಿ ಉಸಿರುಕಟ್ಟುವಿಕೆ

ಶ್ವಾಸೋಚ್ಛ್ವಾಸ ಮಂಡಲ

(ವೈ) ದೇಹದಲ್ಲಿ ಇರುವ ತರಲಗಳಿಗೆ ಆಕ್ಸಿಜನ್ನನ್ನು ಸರಬರಾಜು ಮಾಡಲು ಹಾಗೂ ಕಾರ್ಬನ್ ಡೈಆಕ್ಸೈಡನ್ನು ಹೊರಹಾಕಲು ಅನುಕೂಲ ಮಾಡಿಕೊಡುವ ಶ್ವಾಸಕೋಶಗಳು ಮತ್ತು ಕಿವಿರುಗಳಂಥ ವಿಶೇಷ ರಚನೆಗಳಿರುವ ವ್ಯವಸ್ಥೆ

Search Dictionaries

Loading Results

Follow Us :   
  Download Bharatavani App
  Bharatavani Windows App