भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶ್ರವಣಾತೀತವಿಜ್ಞಾನ

(ಭಾ) ಶಬ್ದ ತರಂಗಗಳ ಸ್ವರೂಪ ಇರುವ, ಆದರೆ ಶ್ರವಣ ಪರಿಮಿತಿಯನ್ನು ಮೀರಿರುವ, (೨೦ ಕಿಲೋ ಹರ್ಟ್ಸ್‌ಗೂ ಮೀರಿದ ಆವೃತ್ತಿಯ) ಪೀಡನ ತರಂಗಗಳ ಅಧ್ಯಯನ

ಶ್ರವ್ಯತೆ

(ಭೌ) ವ್ಯಕ್ತಿಗೆ ಧ್ವನಿ ಕೇಳಿಸಬೇಕಾದರೆ ಅದರಲ್ಲಿ ನಿಹಿತವಾಗಿರಬೇಕಾದ ಕನಿಷ್ಠ ಸಾಮರ್ಥ್ಯ. ಇದು ೨೦ಹರ್ಟ್ಸ್ ನಿಂದ ೨೦ ಕಿಲೋಹರ್ಟ್ಸ್ ಆವೃತ್ತಿ ಮಿತಿಗಳೊಳಗಿರಬೇಕು

ಶ್ರವ್ಯಾವೃತ್ತಿ

(ಭೌ) ವ್ಯಕ್ತಿಗೆ ಧ್ವನಿಯ ಕೇಳುವಿಕೆಯ ಮಿತಿ ನಿರ್ಧರಿಸುವ ಆವೃತ್ತಿ. ಇದು ಸುಮಾರು ೨೦ ಹರ್ಟ್ಸ್‌ನಿಂದ ೨೦ ಕಿಲೋ ಹರ್ಟ್ಸ್ ನಡುವೆ ಇರಬೇಕು

ಶ್ರಾಂತ ಶಕ್ತಿ

(ಭೌ) Eo= moc2 ಎಂಬ ಸಂಬಂಧಕ್ಕನು ಗುಣವಾಗಿ (ಇಲ್ಲಿ mo ವಸ್ತುವಿನ ಶ್ರಾಂತರಾಶಿ, c ಬೆಳಕಿನ ವೇಗ) ಶಕ್ತಿ ಪ್ರಮಾಣಗಳಲ್ಲಿ ವ್ಯಕ್ತಗೊಳಿಸಲಾದ ಕಾಯವೊಂದರ ಶ್ರಾಂತರಾಶಿ

ಶ್ರಾಂತತೆ

(ವೈ) ರೋಗ ಅಥವಾ ನೋವಿನ ಸ್ಥಿತಿಯಲ್ಲಿ ಒಂದು ರೀತಿಯ ಅಲ್ಪಾವಧಿ ಶ್ರಾಂತಸ್ಥಿತಿ. ಆಗ ರೋಗ ಅಥವಾ ನೋವಿನ ತೀಕ್ಷ್ಣತೆ ಕಡಿಮೆಯಾಗಿರುತ್ತದೆ. ತಗ್ಗಿಕೆ

ಶ್ರಾಂತರಾಶಿ

(ಭೌ) ಕಾಯಕ್ಕೆ ಸಾಪೇಕ್ಷವಾಗಿ ನಿಶ್ಚಲವಾಗಿ ಇರುವ ವೀಕ್ಷಕ ಅಳೆದ ಆ ಕಾಯದ ರಾಶಿ. ನಿಶ್ಚಲರಾಶಿ

ಶ್ರಾಂತಿ

(ಭೌ) ಶಕ್ತಿ ಅಥವಾ ಚಲನೆಗೆ ಸಂಬಂಧಿಸಿದಂತೆ, ಚಾಲಕ ಶಕ್ತಿಯನ್ನು ಕ್ರಮೇಣ ಕಳೆದುಕೊಂಡು ನಿಲ್ಲುವ ಸ್ಥಿತಿ ತಲಪುವುದು. ಬಿಡುವು, ವಿಶ್ರಮ

ಶ್ರುತಿ

(ಭೌ) ಸ್ವರದ ಆವೃತ್ತಿ ಮಟ್ಟ

ಶ್ರುತಿಕವೆ

(ತಂ) ಬಡಿದರೆ ನಿರ್ದಿಷ್ಟ ಆವೃತ್ತಿಯ ನಾದ ಕೊಡುವ ಗಡಸು ಉಕ್ಕಿನ U ಆಕಾರದ ದ್ವಿಕಾಂಡ. ಉಷ್ಣತೆ, ವಾತಾವರಣ ಒತ್ತಡ ಹಾಗೂ ಆರ್ದ್ರತೆಗಳಲ್ಲಿಯ ಬದಲಾವಣೆಗಳಿಗೆ ಇದರ ಆವೃತ್ತಿ ಅಷ್ಟಾಗಿ ಬದಲದಿರುವುದರಿಂದ ಇದನ್ನು ಸಂಗೀತ ವಾದ್ಯಗಳನ್ನು ಶ್ರುತಿಗೊಳಿಸಲು ಬಳಸಲಾಗುತ್ತದೆ. ಅನುನಾದಕ

ಶ್ರುತಿಗೊಳಿಸು

(ಸಾ) ಸ್ವರಮೇಳನ ಮಾಡು. ಅನುಗೊಳಿಸು

ಶ್ರೇಢಿ

(ಗ) ಯಾವುದೋ ವಿಧಿ ಅಥವಾ ನಿಯಮಾನುಸಾರ ರೂಪಿತವಾಗುವ ಪದಗಳ ಸರಣಿ: a1, a2, a3….ಉದಾ: ೨, ೩, ೫, ೭, ೧೧, ೧೭, ೧೯… ಅವಿಭಾಜ್ಯಗಳ ಶ್ರೇಢಿ. ೨, ೬, ೧೮, ೫೪…. ಜ್ಯಾಮಿತೀಯ ಅಥವಾ ಗುಣೋತ್ತರ ಶ್ರೇಢಿ. < page 615.tif> ಹರಾತ್ಮಕ ಶ್ರೇಢಿ. ಪದಗಳ ಸಂಖ್ಯೆ ಮಿತವಾಗಿದ್ದರೆ ಅದು ಸಾಂತ ಶ್ರೇಢಿ, ಅಮಿತವಾಗಿದ್ದರೆ ಅನಂತ ಶ್ರೇಢಿ. ಅನುಕ್ರಮ

ಶ್ರೇಢಿ ವಿಶ್ಲೇಷಣೆ

(ಗ) ಶ್ರೇಢಿ ರೂಪದಲ್ಲಿ ಪಡೆದ ವೀಕ್ಷಣೆಗಳ ವಿಶ್ಲೇಷಣೆ. ಮುಖ್ಯವಾಗಿ ವಾದಗಳ ಪರೀಕ್ಷಣೆಯಲ್ಲಿ ಉಪಯೋಗ

ಶ್ರೇಣಿ

(ಗ) ೧. ಯಾವುದೇ ಶ್ರೇಢಿಯ ಪದಗಳ ಮೊತ್ತ. a1, a2…, an ಈ ಶ್ರೇಢಿಯಿಂದ ದೊರೆಯುವ ಶ್ರೇಣಿ a1+a2+a3+…….+an ಇದನ್ನು ಎಂದು ಸಂಕ್ಷೇಪಿಸುವುದುಂಟು. ಪದಗಳ ಸಂಖ್ಯೆ ಮಿತವಾಗಿದ್ದರೆ ಅದು ಸಾಂತ ಶ್ರೇಣಿ. ಅಮಿತವಾಗಿದ್ದರೆ ಅನಂತಶ್ರೇಣಿ. (ಭೌ) ವಿದ್ಯುನ್ಮಂಡಲದಲ್ಲಿ ವಿವಿಧ ಭಾಗಗಳನ್ನು ಒಂದರ ಅನಂತರ ಒಂದರಂತೆ ಜೋಡಿಸಿ ಪ್ರವಾಹ ನಿರಂತರವಾಗಿ ಹರಿಯುವಂತೆ ಮಾಡುವ ವ್ಯವಸ್ಥೆ. (ಭೂವಿ) ಶಿಲಾಸ್ತರಗಳ ವರ್ಗೀಕರಣ ಕುರಿತಂತೆ “ಸ್ತೋಮ”ದ ಕೆಳಗಿನ (ಮೊದಲು) ಹಾಗೂ “ಹಂತ”ದ ಮೇಲಿನ (ತರುವಾಯ) ಕಾಲಸ್ಥರೀಕರಣ ಏಕಮಾನ. ಭೂಗರ್ಭಕಾಲಮಾನದ ಒಂದು ಪರ್ವದ ಕಾಲಾವಧಿಯಲ್ಲಿ ರೂಪಿತವಾದ ಶಿಲೆಗಳು

ಶ್ರೇಣಿ ವ್ಯವಸ್ಥೆ

(ಸಾ) ಅನುಕ್ರಮವಾಗಿ ಸಂಘಟಿಸಿದ ದರ್ಜೆ, ವರ್ಗ ಅಥವಾ ಪದಗಳಿರುವ ಯಾವುದೇ ವ್ಯವಸ್ಥೆ, ವರ್ಗ, ಶ್ರೇಣಿ

ಶ್ರೇಷ್ಠ ಅನಿಲಗಳು

(ರ) ಆವರ್ತಕೋಷ್ಟಕದ ೦ ಗುಂಪಿನಲ್ಲಿ ಬರುವ ಹೀಲಿಯಮ್, ನಿಯಾನ್, ಆರ್ಗಾನ್, ಕ್ರಿಪ್ಟಾನ್, ಕ್ಸೆನಾನ್ ಹಾಗೂ ರೇಡಾನ್-೨೨೨ ಏಕ ಪರಮಾಣವಿಕ ಅನಿಲ ಧಾತುಗಳು. ಕೊನೆಯದನ್ನು ಬಿಟ್ಟು ಉಳಿದವು ಹೆಚ್ಚಾಗಿ ಅನಿಲ-ವಿಸರ್ಜನ ನಳಿಗೆಗಳಲ್ಲಿ ಬಳಕೆ. ರೇಡಾನ್-೨೨೨ರ ವಿಕಿರಣಪಟುತ್ವ ಅಲ್ಪಾವಧಿಯದು. ಇದರ ಅರ್ಧಾಯು ೪ ದಿವಸ ಗಳಿಗೂ ಕಡಿಮೆ. ಈ ಧಾತುಗಳ ಹೊರ (ವೇಲೆನ್ಸ್) ಎಲೆಕ್ಟ್ರಾನ್ ಚಿಪ್ಪುಗಳು ಪೂರ್ಣವಾದ್ದರಿಂದ ಅವು ಎಲ್ಲ ಮಾಮೂಲೀ ರಾಸಾಯನಿಕ ಕ್ರಿಯೆಗಳಿಗೂ ಜಡ. ಆದ್ದರಿಂದಲೇ ಅವನ್ನು, ಅದರಲ್ಲೂ ಸಮೃದ್ಧವಾಗಿ ದೊರೆಯುವ ಆರ್ಗಾನ್‌ಅನ್ನು, ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಹೆಚ್ಚು ಭಾರವಾದ RN, Xe ಹಾಗೂ Krಗಳು ಕೆಲವು ಅಸ್ಥಿರ ಸಂಯುಕ್ತಗಳನ್ನು, ಉದಾ: XeF4, ರೂಪಿಸುತ್ತವೆ. ಜಡಾನಿಲಗಳು, ವಿರಳಾನಿಲಗಳು

ಶ್ರೇಷ್ಠ ಲೋಹಗಳು

(ರ) ಸಾಪೇಕ್ಷವಾಗಿ ಧನಾತ್ಮಕ ಎಲೆಕ್ಟ್ರೋಡ್ ವಿಭವವುಳ್ಳ ಚಿನ್ನ, ಬೆಳ್ಳಿ, ಪ್ಲಾಟಿನಮ್ ಮುಂತಾದ ಲೋಹಗಳು. ಅಲೋಹಗಳೊಂದಿಗೆ ಸುಲಭವಾಗಿ ರಾಸಾಯನಿಕ ಸಂಯೋಜನೆಗೊಳ್ಳುವುದಿಲ್ಲ. ಸಂಕ್ಷಾರಣ (ತುಕ್ಕು ಹಿಡಿಯುವಿಕೆ) ಹಾಗೂ ಆಕ್ಸಿಡೀಕರಣಗಳನ್ನು ಬಲುವಾಗಿ ನಿರೋಧಿಸುತ್ತವೆ. ತೆಳು ಫಿಲ್ಮ್ ಮಂಡಲಗಳ, ಲೋಹ-ಫಿಲ್ಮ್ ರೋಧಕಗಳ ಮತ್ತಿತರ ಲೋಹ-ಫಿಲ್ಮ್ ಸಾಧನಗಳ ತಯಾರಿಕೆಯಲ್ಲಿ ಬಳಕೆ

ಶ್ರೋಣಿರಂಧ್ರ

(ವೈ) ಪೃಷ್ಠಾಸ್ಥಿ (ಇಸ್ಕಿಯಮ್- ಕುಂಡೆ ಎಲುಬು) ಮತ್ತು ಜಘನಾಸ್ಥಿಗಳ (ಪ್ಯುಬಿಸ್-ನಿತಂಬಾಸ್ಥಿ) ನಡುವೆ ಅವನ್ನು ಪ್ರತ್ಯೇಕಿಸುವ, ಸೊಂಟದ ಮೂಳೆಯಲ್ಲಿರುವ, ದೊಡ್ಡ ರಂಧ್ರ

ಶ್ರೋಣಿರಂಧ್ರೀಯ ಧಮನಿ

(ಪ್ರಾ) ಸೊಂಟದ ಮೂಳೆಯಲ್ಲಿರುವ ರಂಧ್ರ ಬಂಧಿಸುವ (ಮುಚ್ಚುವ) ಧಮನಿ

ಶ್ಲೀರನ್

(ಭೂವಿ) ಅಂತಸ್ಥ ಅಗ್ನಿಶಿಲೆಗಳಲ್ಲಿ ಉದ್ದುದ್ದವಾಗಿ ಕಾಣುವ ವಿಭಿನ್ನ ಖನಿಜ ಸಂಯೋಜನೆಯ ಕಾಯಗಳು. ಸಾಮಾನ್ಯವಾಗಿ ಇವುಗಳಲ್ಲಿ ಮಾತೃಶಿಲೆಗಿಂತ ಅಧಿಕ ಪ್ರಮಾಣದಲ್ಲಿ ಕಪ್ಪು ಖನಿಜಗಳಿರುತ್ತವೆ. ಎರಡೂ ಒಂದೇ ಮೂಲದಿಂದ ಬಂದಿರಬಹುದು

ಶ್ಲೇಷ್ಮ

(ವೈ) ಲೋಳೆ ಗ್ರಂಥಿಗಳು ಸ್ರವಿಸುವ ಜಿಗುಟು ಮತ್ತು ಅಂಟು ತರಲ

Search Dictionaries

Loading Results

Follow Us :   
  Download Bharatavani App
  Bharatavani Windows App