भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶೈವಲ

(ಸ) ಥ್ಯಾಲೊಫೈಟ ಗುಂಪಿನ ಆತಿಮುಖ್ಯ ವಿಭಾಗಗಳ ಪೈಕಿ ಒಂದು. ತೀರ ಸರಳ ಸಸ್ಯಗಳ ಗುಂಪು; ನಿಜ ಕಾಂಡಗಳಾಗಲೀ ಎಲೆಗಳಾಗಲೀ ಇರುವುದಿಲ್ಲ; ಸಾಮಾನ್ಯವಾಗಿ ಜಲವಾಸಿ; ಆಕ್ಸಿಜನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ. ಪಾಚಿ

ಶೈವಲವಿಜ್ಞಾನ

(ಸ) ಅತ್ಯಂತ ಸರಳ ಸಸ್ಯಗಳಾದ ಶೈವಲಗಳ (ಪಾಚಿ ಮುಂತಾದವುಗಳ) ಅಧ್ಯಯನ. ಹಾವಸೆಗಳ ಬಗೆಗಿನ ವೈಜ್ಞಾನಿಕ ಅಧ್ಯಯನ. ಮಸ್ಕಾಲಜಿ

ಶೈಶವ

(ಮ) ವ್ಯಕ್ತಿಯ ಅಭಿವರ್ಧನೆಯಲ್ಲಿ ಮೊದಲನೆಯ ಹಂತ. ವಯೋಮಿತಿ ಸುಮಾರು ೦-೧ ವರ್ಷ. ನೋಡಿ : ಮಗುತನ

ಶೈಶವ ಪಾರ್ಶ್ವವಾಯು

(ವೈ) ಬೆನ್ನುಹುರಿಯ ಬೂದು ದ್ರವ್ಯದಲ್ಲಿಯ ನರಕೋಶಗಳು ವೈರಸ್ ದಾಳಿಗೀಡಾಗು ವುದರಿಂದ ಉಂಟಾಗುವ, ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುವ, ಬೇನೆ. ಪಾರ್ಶ್ವವಾಯು ಹಾಗೂ ಸ್ನಾಯು ನಶಿಸುವಿಕೆ ಈ ರೋಗದ ಮುಖ್ಯ ಪರಿಣಾಮ. ನೋಡಿ: ಪೋಲಿಯೊಮೈಲೈಟಿಸ್

ಶೋಧ

(ಕಂ) ಹುಡುಕಾಟ. ಅಂತರ್ಜಾಲ ವ್ಯವಸ್ಥೆಯ ಮೂಲಕ ಮಾಹಿತಿ ಪಡೆಯಲು ವಿವಿಧ ಮಾಹಿತಿ ತಾಣಗಳನ್ನು ಅರಸುವುದು. ಅಂದರೆ ಒಂದು ಸಂಪರ್ಕಕೊಂಡಿಯಿಂದ (ಹೈಪರ್ ಲಿಂಕ್) ಮತ್ತೊಂದಕ್ಕೆ ಜಿಗಿಯುವುದು. ಇದಕ್ಕೆ ವಿಶೇಷ ತಂತ್ರಾಂಶ (ಬ್ರೌಸರ್) ಅವಶ್ಯ, ಇದನ್ನು ಸರ್ಫಿಂಗ್ ಎಂದೂ ಕರೆಯುತ್ತಾರೆ

ಶೋಧಕ

(ತಂ) ಸಮೀಪ ಆಕಾಶ ಹಾಗೂ ಬಾಹ್ಯಾಕಾಶ ಪರಿ ಶೋಧಿಸಿ ಮಾಹಿತಿ ಸಂಗ್ರಹಿಸಿ ಭೂಮಿಗೆ ರವಾನಿಸಲು ಕಳುಹಿಸುವ ವಿಶೇಷವಾಗಿ ಮಾನವರಹಿತ ಅಂತರಿಕ್ಷ ವಾಹನ. (ಭೌ) ಸುಲಭ ವಾಗಿ ಒಯ್ಯಬಹುದಾದ ವಿಕಿರಣ ಪತ್ತೆಹಚ್ಚುವ ಉಪಕರಣ

ಶೋಧಕ

(ಗ) ax2+bx+c=0 ಎಂಬ ಸಾಮಾನ್ಯ ವರ್ಗಸಮೀಕರಣದ ಮೂಲಗಳು < page 613.tif>. ಇಲ್ಲಿ ಮೂಲಗಳ ಮತ್ತು ಆ ಕಾರಣದಿಂದಾಗಿ ಸಮೀಕರಣದ ಗುಣಧರ್ಮಗಳನ್ನು ವಿವರಿಸುವಲ್ಲಿ b2- 4ac ಶೋಧಕ ಪಾತ್ರ ವಹಿಸುವುದರಿಂದ ಈ ಹೆಸರು. ನಿರ್ಣಾಯಕ

ಶೋಧನ ಕಾಲ

(ಕಂ) ಕಂಪ್ಯೂಟರ್‌ನಲ್ಲಿ ಸಂಚಯದಿಂದ ಮಾಹಿತಿ ಪಡೆಯಲು ಆದೇಶವಿತ್ತ ಕ್ಷಣಕ್ಕೂ ಆ ಮಾಹಿತಿ ಉಪಯೋಗಕ್ಕೆ ಲಭಿಸಿದ ಕ್ಷಣಕ್ಕೂ ನಡುವಿನ ಅವಧಿ

ಶೋಧಿತ

(ರ) ಸೋಸಿದ ನಂತರ ಬಂದ ವಸ್ತು

ಶೋಲ್

(ಭೂವಿ) ನದಿಯಲ್ಲಿ ಅಥವಾ ಸಮುದ್ರದಲ್ಲಿ ತೆಟ್ಟೆ ಸ್ಥಳದಲ್ಲಿ ಕಾಣಿಸುವ ಮರಳುದಿಬ್ಬ

ಶೋಷಣ

(ರ) ಅಪಶೋಷಣ (ಮೇಲ್ಮೈ ಪ್ರಕ್ರಿಯೆ),

ಶೋಷಣ ಪಟ್ಟೆ

(ಭೌ) ವರಣಶೀಲ ಅಪಶೋಷಕ ವಸ್ತುವೊಂದು ಪ್ರಸರಿಸುವ ಬಿಳಿ ಬೆಳಕಿನ ಅವಿಚ್ಛಿನ್ನ ರೋಹಿತದಲ್ಲಿ ಕಂಡುಬರುವ ಕಪ್ಪು ತೆರಪು

ಶೋಷಣ ರೇಖೆಗಳು

(ಭೌ) ಅನಿಲ ಸ್ಥಿತಿಯಲ್ಲಿ ಇರುವ ಧಾತುವಿನ ಮೂಲಕ ಸಾಗುವ ಬೆಳಕಿನ ಕಿರಣಗಳು ಹೀರಲ್ಪಟ್ಟಾಗ ಅವಿಚ್ಛಿನ್ನ ರೋಹಿತದಲ್ಲಿ ಕಾಣುವ ಕಪ್ಪು ಗೆರೆಗಳು

ಶೋಷಣ ರೋಹಿತ

(ಭೌ) ವರಣಶೀಲ ಅಪಶೋಷಕ ವಸ್ತುವೊಂದನ್ನು ಬಿಳಿ ಬೆಳಕಿನ ಆಕರಕ್ಕೂ ರೋಹಿತ ದರ್ಶಕಕ್ಕೂ ನಡುವೆ ಇಟ್ಟಾಗ ಅವಿಚ್ಛಿನ್ನ ರೋಹಿತದಲ್ಲಿ ಪ್ರಕಟ ವಾಗುವ ಶೋಷಣ ಪಟ್ಟೆಗಳ ಅಥವಾ ರೇಖೆಗಳ ಸಮೂಹ

ಶೋಷಣಾಂಕ

(ರ) ಸಾಮಾನ್ಯ ಒತ್ತಡ ದಲ್ಲಿರುವ (=೧ ವಾಯುಭಾರ) ದ್ರವದ ಏಕಮಾನ ಗಾತ್ರದಲ್ಲಿ ವಿಲೀನವಾಗುವ ಅನಿಲದ ಗಾತ್ರ; ಅನಿಲ ಗಾತ್ರವನ್ನು ಶಿಷ್ಟ ಉಷ್ಣತೆ, ಒತ್ತಡಗಳಲ್ಲಿ ಅಳೆಯಬೇಕು

ಶ್ರವಣ ನಾಲೆ

(ವೈ) ಹೊರಗಿವಿಯನ್ನು ಕರ್ಣಪಟಲಕ್ಕೆ ಸೇರಿಸುವ ನಾಳ; ಧ್ವನಿ ತರಂಗಗಳು ಹೊರಗಿವಿಯಿಂದ ಇದರ ಮೂಲಕ ಕರ್ಣಪಟಲ (ಒಳಗಿವಿ) ತಲಪುತ್ತವೆ

ಶ್ರವಣ ಸಂಬಂಧಿ

(ವೈ) ಕೇಳುವಿಕೆಗೆ ಸಂಬಂಧಿಸಿದ

ಶ್ರವಣಸಾಮರ್ಥ್ಯಮಾಪಕ

(ಭೌ) ವ್ಯಕ್ತಿಯ ಶ್ರವಣ ಶಕ್ತಿಯನ್ನು ಅಳೆಯಲೋಸುಗ ನಿರ್ದಿಷ್ಟ ಆವೃತ್ತಿ ಹಾಗೂ ತೀವ್ರತೆಯ ಶಬ್ದವನ್ನು ಉತ್ಪಾದಿಸುವ ಸಾಧನ. ಆಡಿಯೊಮೀಟರ್

ಶ್ರವಣಾತೀತ ಧ್ವನಿ

(ಭೌ) ಧ್ವನಿ ತರಂಗಗಳ ಸ್ವರೂಪ ಇರುವ, ಆದರೆ ಶ್ರವಣ ಪರಿಮಿತಿಯನ್ನು ಮೀರಿರುವ, (ಅಂದರೆ ೨೦ ಕಿಲೋಹರ್ಟ್ಸ್‌ಗೂ ಮೀರಿದ ಆವೃತ್ತಿಯ) ಪೀಡನ ತರಂಗಗಳು. ಕೆಲವು ಪ್ರಾಣಿಗಳು (ಉದಾ: ಬಾವುಲಿ, ಡಾಲ್ಫಿನ್) ಸಂಪರ್ಕಕ್ಕಾಗಿ ಈ ಮಾದರಿಯ ಶಬ್ದ ಉಂಟುಮಾಡುತ್ತವೆ. ಶ್ರವಣಾತೀತ ಶಬ್ದ

ಶ್ರವಣಾತೀತ ಸ್ವನೋತ್ಪಾದಕ

(ಭೌ) ಶ್ರವಣಾತೀತ ಆವೃತ್ತಿಯ (೨೦ ಕಿಲೋಹರ್ಟ್ಸ್‌ಗಳಿಗೂ ಮೇಲಿನ) ಒತ್ತಡ ತರಂಗಗಳನ್ನು ಪ್ರೇರಿಸಲು ಬಳಸುವ ಸಾಧನ

Search Dictionaries

Loading Results

Follow Us :   
  Download Bharatavani App
  Bharatavani Windows App