भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವಾಯುಜನ್ಯ ನಿಕ್ಷೇಪಗಳು

(ಭೂವಿ) ಬೀಸುಗಾಳಿಯ ದೆಸೆಯಿಂದ ಪೇರಿಕೆಗೊಂಡ ಮರಳು ಮತ್ತು ದೂಳುಮಿಶ್ರಿತ ಪದರಗಳು

ವಾಯುಜೀವಿ

(ಜೀ) ಮುಕ್ತ ಆಕ್ಸಿಜನ್ ಪರಿಸರದಲ್ಲಿ ಮಾತ್ರ ಬದುಕಿ ಉಳಿಯಬಲ್ಲ ಜೀವಿ; ವಾಯವಿಕ ಉಸಿರಾಟದಿಂದ ಬದುಕುತ್ತದೆ

ವಾಯುದೀಪ್ತಿ

(ಖ) ವಾಯುಮಂಡಲದಲ್ಲಿರುವ ಸೋಡಿಯಮ್, ಆಕ್ಸಿಜನ್ ಮತ್ತು ನೈಟ್ರೊಜನ್ ಅಣು, ಪರಮಾಣುಗಳು ಹಗಲಿನಲ್ಲಿ ಸೂರ್ಯರಶ್ಮಿಗಳಿಂದ ಉದ್ರಿಕ್ತವಾಗಿ ಇರುಳಿನಲ್ಲಿ ಹೊಮ್ಮಿಸುವ ಮಿನುಗಿನ ಪರಿಣಾಮವಾಗಿ ರಾತ್ರಿ ಆಕಾಶಕ್ಕೆ ಒದಗುವ ಶಾಶ್ವತ ಪ್ರಭೆ. ಬೆಳಕಿನ ಲೇಪ/ಬಳಿತ

ವಾಯುನೌಕೆ

(ತಂ) ಗಾಳಿಗಿಂತ ಹಗುರವಾದ, ಬೇಕಾದ ದಿಕ್ಕಿಗೆ ತಿರುಗಿ ಹಾರಬಲ್ಲ ಬಲೂನ್; ನೋದಕ-ಚುಕ್ಕಾಣಿ ಕ್ರಿಯೆ ಗಳಿಂದ ಚಲನೆ ಹಾಗೂ ತಿರುಗುವಿಕೆ ಪಡೆಯುತ್ತದೆ; ವಾಯುವಿನ ಸ್ಥಳದಲ್ಲಿ ಹಗುರವಾದ ಅನಿಲ ತುಂಬಿ ನೆಗೆತ ಸಾಧಿಸಲಾಗುತ್ತದೆ

ವಾಯುಪರಾಗಣ

(ಸ) ಬೀಸುಗಾಳಿ ಪರಾಗ ಬೀಜಕಗಳನ್ನು ಹೂವಿನಿಂದ ಹೂವಿಗೆ ಒಯ್ಯುವುದರ ಮೂಲಕ ನಡೆಯುವ ಪರಾಗ ಸ್ಪರ್ಶನ. ಹುಲ್ಲುಗಳು, ಶಂಕುಧಾರಿ ಮರಗಳು ಹೀಗೆ ಹರಡುತ್ತವೆ

ವಾಯುಪೂರಿತ ಕಾಂಕ್ರಿಟ್

(ತಂ) ಕಾಂಕ್ರಿಟ್ ಮಿಶ್ರಣಕ್ಕೆ ಬೆರೆಸಿದ ಕೆಲವು ಘಟಕಗಳು, ಮಿಶ್ರಣ ಗಟ್ಟಿಕಟ್ಟುವ ವೇಳೆಗೆ ರಾಸಾಯನಿಕವಾಗಿ ವರ್ತಿಸಿ ಬಿಡುಗಡೆ ಮಾಡುವ ಅನಿಲಗಳು ಅಲ್ಲಿಯೇ ಸೆರೆ ಸಿಕ್ಕಿಕೊಳ್ಳುತ್ತವೆ; ಇಂಥ ಚಪ್ಪಡಿಯ ಸರಾಸರಿ ಸಾಂದ್ರತೆ ಕಡಿಮೆ, ಉಷ್ಣನಿರೋಧ ಹೆಚ್ಚು

ವಾಯುಪ್ರಮಾಣ ಮಾಪನೆ

(ವೈ) ಶ್ವಾಸಕೋಶ ಪಡೆದುಕೊಳ್ಳಬಹುದಾದ ವಾಯುವಿನ ಪ್ರಮಾಣವನ್ನೂ ವಾಯುಧಾರಕತೆಯನ್ನೂ ಅಳೆಯುವ ಪ್ರಕ್ರಿಯೆ.

ವಾಯುಫಲಕ

(ತಂ) ವಿಮಾನದ ಚಲನೆಯ ದಿಕ್ಕಿಗೆ ಲಂಬ ವಾಗಿರುವಂತೆ ವಾಯುಬಲ ವೈಜ್ಞಾನಿಕ ಪ್ರತಿಕ್ರಿಯೆ (ಎತ್ತುಬಲ)ಯನ್ನು ವಿಮಾನದಲ್ಲಿನ ಒಂದು ಪುಟ್ಟ ಕರ್ಷಣದಿಂದ ಉಂಟುಮಾಡುವಂತೆ ರೂಪಿಸಿದ ರೆಕ್ಕೆ, ಚಾಲಕ ಫಲಕ, ಬಾಲದ ಫಲಕ ಮುಂತಾದವು

ವಾಯುಬಂಧ

(ಸಾ) ವಾಯುವಿನ ಪ್ರವೇಶ ಅಥವಾ ನಿರ್ಗಮನ ಅಸಾಧ್ಯವಾದ

ವಾಯುಬಲವಿಜ್ಞಾನ

(ಭೌ) ತರಲಬಲವಿಜ್ಞಾನದ ಒಂದು ಶಾಖೆ. ಅನಿಲಗಳ ಬಲವನ್ನು ಕುರಿತ, ಮುಖ್ಯವಾಗಿ ವಾಯುವಿನಲ್ಲಿ ಚಲಿಸುತ್ತಿರುವ ವಸ್ತುಗಳ ಮೇಲೆ ವರ್ತಿಸುವ ಬಲಗಳನ್ನು ಕುರಿತ, ಶಾಸ್ತ್ರೀಯ ಅಧ್ಯಯನ. ವಾಯುಗತಿ

ವಾಯುಬಿರಿ

(ತಂ) ಕೊಂತದ ಮೇಲೆ ವಾಯುಒತ್ತಡ ವರ್ತಿಸುವುದರ ಮೂಲಕ ಚಾಲೂ ಆಗುವ ಯಾಂತ್ರಿಕ ತಡೆ. ಯಂತ್ರ ಚಲನೆಯನ್ನು ತಡೆಯುವುದು ಇದರ ಗುರಿ

ವಾಯುಬುಟ್ಟಿ

(ತಂ) ೧. ಮುಖ್ಯವಾಗಿ ತನ್ನ ಪ್ಲವನತೆಯ ನೆರವಿನಿಂದ ಗಾಳಿಯಲ್ಲಿ ತೇಲುವ ಸಾಧನ. ಆಕಾಶಬುಟ್ಟಿ. ೨. ಹಗುರ ವಿಮಾನ. ಗಾಳಿಗಿಂತ ಹಗುರವಾದ ಅನಿಲ ತುಂಬಿದ ಕೋಶಗಳನ್ನು ಹೊಂದಿದ್ದು, ಸುತ್ತ ಇರುವ ವಾಯುವಿನ ತೇಲಿಸುವ ಶಕ್ತಿ (ಪ್ಲವನತೆ)ಯನ್ನು ಆಧರಿಸಿದ ವಾಯು ನಾವೆ

ವಾಯುಭಾರ ದರ್ಶಕ

(ಭೌ) ವಾಯುಮಂಡಲದ ಒತ್ತಡದಲ್ಲಿ ನಿರ್ದಿಷ್ಟ ಕಾಲದಲ್ಲಿ ಉಂಟಾಗುವ ವ್ಯತ್ಯಯಗಳನ್ನು ಚಿಹ್ನೆಗಳ ಮೂಲಕ ಸೂಚಿಸುವ ಸರಳ ಉಪಕರಣ

ವಾಯುಭಾರಮಾಪಕ

(ಭೌ) ವಾಯು ಮಂಡಲದ ಒತ್ತಡ ಅಳೆಯಲು ಮತ್ತು ತನ್ಮೂಲಕ ಒಂದು ಸ್ಥಳವು ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ ಎಂದು ಕಂಡುಹಿಡಿಯಲು ಬಳಸುವ ಉಪಕರಣ. ಶಿಷ್ಟ ವಾತಾವರಣ ಒತ್ತಡದಲ್ಲಿ ನಳಿಕೆಯಲ್ಲಿ ಪಾದರಸದ ಮಟ್ಟ ೭೬೦ ಮಿಮೀ ಎತ್ತರ ಇರುತ್ತದೆ. ಉತ್ಕೃಷ್ಟ ನಿಖರತೆ ಪಡೆಯಲು ಇಂತಹ ಪಾದರಸ ವಾಯುಭಾರಮಾಪಕ ಹೆಚ್ಚು ಉಪಯುಕ್ತ. ಇಂತಹ ಮೊದಲ ಬಾರೋಮೀಟರನ್ನು ಇಟಲಿಯ ವಿಜ್ಞಾನಿ ಟೋರಿಚೆಲ್ಲಿ (೧೬೦೮-೪೭) ೧೬೪೪ರಲ್ಲಿ ನಿರ್ಮಿಸಿದ. ಆದರೆ ಅಡಕತನಕ್ಕೆ ಆದ್ಯತೆ ಕೊಡುವುದಾದಲ್ಲಿ ನಿರ್ದ್ರವ್ಯ ವಾಯುಭಾರ ಮಾಪಕ ಉತ್ತಮ. ಆದರೆ ಇದು ಪಾದರಸ ವಾಯುಭಾರ ಮಾಪಕದಷ್ಟು ನಿಖರವಲ್ಲ. ಬಾರೊಮೀಟರ್

ವಾಯುಭಾರಲೇಖಿ

(ಪವಿ) ವಾಯುಭಾರದಲ್ಲಿನ ವ್ಯತ್ಯಾಸ ಗಳನ್ನು ದಾಖಲಿಸುವ ಸಲಕರಣೆ. ಸಾಮಾನ್ಯವಾಗಿ ನಿರ್ದ್ರವ್ಯ ಮಾದರಿಯದು. ವಾಯುಮಂಡಲ ಒತ್ತಡದಲ್ಲಿ ಉಂಟಾಗುವ ವ್ಯತ್ಯಾಸಗಳು ಇದರ ಲೇಖನಿಯನ್ನು ಚಾಲೂ ಮಾಡುತ್ತವೆ. ಪ್ರದಕ್ಷಿಣ ದಿಶೆಯಲ್ಲಿ ಆವರ್ತಿಸುವ ಗುಂಡು-ದಿಮ್ಮಿಯ (ವರ್ತುಲ ನಾಳಿಯ) ಮೇಲೆ ಈ ಲೇಖನಿ ವಕ್ರರೇಖೆಯನ್ನು ಗುರುತಿಸುತ್ತದೆ

ವಾಯುಮಂಡಲ

(ಖ) ಆಕಾಶಕಾಯದ ಸುತ್ತ ವ್ಯಾಪಿಸಿರುವ ಅನಿಲಾವರಣ. ಅನಿಲಗೋಳ. (ಭೂ) ಭೂಮಿ ಯನ್ನು ಸುತ್ತುವರಿದಿರುವ ವಿವಿಧ ಅನಿಲಗಳು, ದೂಳು, ನೀರಾವಿ ಮುಂತಾದವುಗಳ ಅಸಮ ಮಿಶ್ರಣ; ಭೂತಲದಲ್ಲಿ ನಾವು ಉಸಿರಾಡುವ ವಾಯುವಿನಲ್ಲಿ ಘನಗಾತ್ರರೀತ್ಯ ಇರುವ ಘಟಕ ಪ್ರಮಾಣಗಳಿವು: ನೈಟ್ರೊಜನ್ ೦.೭೮೦೩, ಆಕ್ಸಿಜನ್ ೦.೨೦೯೯, ಆರ್ಗಾನ್ ೦.೦೦೯೪, ಕಾರ್ಬನ್‌ಡೈಆಕ್ಸೈಡ್ ೦.೦೦೦೩, ಹೈಡ್ರೊಜನ್ ೦.೦೦೦೧, ನಿಯಾನ್ ೦.೦೦೦೦೧೫, ಹೀಲಿಯಮ್ ೦.೦೦೦೦೦೧೫, ಕ್ರಿಪ್ಟಾನ್ ಮತ್ತು ಕ್ಸೀನಾನ್ ಛಾಯೆ ಮಾತ್ರ; ಇವಲ್ಲದೆ ನೀರಾವಿ, ದೂಳು, ಹೊಗೆ, ನಿಲಂಬಿತ ಕಣಗಳು ಮುಂತಾದವು ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುವು. ವಾಯು ಮಂಡಲದಲ್ಲಿ ಗುಣಧರ್ಮಾನುಸಾರ ನಾಲ್ಕು ಪದರಗಳನ್ನು ಗುರುತಿಸಲಾಗಿದೆ: ಹವಾಗೋಳ, ಸ್ತರಗೋಳ ಅಯಾನ್‌ಗೋಳ ಹಾಗೂ ಬಾಹ್ಯಗೋಳ. ಹವಾಗೋಳ : ವಾಯುಮಂಡಲದ ತೀರ ಕೆಳಗಿನ ಮಟ್ಟ. ನೆಲಮಟ್ಟದಿಂದ ಧ್ರುವವಲಯಗಳಲ್ಲಿ ೮ ಕಿಮೀ ವರೆಗೂ, ಸಮಭಾಜಕೀಯ ವಲಯದಲ್ಲಿ ೧೮ ಕಿಮೀವರೆಗೂ ವ್ಯಾಪಿಸಿದೆ. ಹೆಚ್ಚಿನ ಹವಾ ಏರಿಳಿತಗಳು ಈ ವಲಯದಲ್ಲಿ ಸಂಭವಿಸುತ್ತವೆ. ಎತ್ತರದೊಡನೆ ಉಷ್ಣತೆ ತಗ್ಗುತ್ತದೆ. ಸ್ತರಗೋಳ: ಕ್ಷೋಭಗೋಳವನ್ನು ಆವರಿಸಿದೆ. ಧ್ರುವವಲಯಗಳಲ್ಲಿ ೮-೮೦ ಕಿಮೀ ವರೆಗೂ ಸಮಭಾಜಕೀಯ ವಲಯದಲ್ಲಿ ೧೮-೮೦ ಕಿಮೀವರೆಗೂ ವ್ಯಾಪಿಸಿದೆ. ಇದರಲ್ಲಿ ಉಷ್ಣತೆ ಹೆಚ್ಚು ಕಡಿಮೆ ಸ್ಥಿರವಾಗಿರುತ್ತದೆ. ಓಜೋನ್ ಪದರ ಈ ಗೋಳದಲ್ಲಿದೆ. ಅಯಾನ್‌ಗೋಳ: ಸ್ತರಗೋಳವನ್ನು ಆವರಿಸಿ ಮುಂದಕ್ಕೆ ೫೦೦ ಕಿಮೀವರೆಗೂ ಇದರ ವ್ಯಾಪ್ತಿ. ಬಾಹ್ಯಗೋಳ: ಅಯಾನ್‌ಗೋಳವನ್ನು ಆವರಿಸಿರುವ ವಾಯುಮಂಡಲಭಾಗ. (ಭೌ) ೧ ವಾಯುಮಂಡಲ ಒತ್ತಡ = ಸಮುದ್ರಮಟ್ಟದಲ್ಲಿ ವಾಯುಮಂಡಲದ ಸಾಧಾರಣ ಒತ್ತಡ ಇದು ಸು. ೭೬೦ ಮಿಮೀ ಪಾದರಸ (=ಚಸೆಂಮೀಗೆ ೧,೦೧೩,೨೪೯ ಡೈನ್)

ವಾಯುಮಂಡಲ ಅಪಶೋಷಣೆ

(ಖ) ನಕ್ಷತ್ರಗಳಿಂದ ಬರುವ ಬೆಳಕನ್ನು ಭೂಮಿಯ ವಾಯುಮಂಡಲ ಹೀರಿಕೊಳ್ಳುವುದು. ಇದರಿಂದಾಗಿ ನಮಗೆ ಲಭಿಸುವ ಮಾಹಿತಿ ವಿಕೃತಗೊಂಡಿರುತ್ತದೆ

ವಾಯುಮಂಡಲ ಕ್ಷೋಭೆ

(ತಂ) ಮಳೆ ಮೋಡ ಗಳಿಂದ ಉದ್ಭವಿಸುವ ವಿದ್ಯುತ್ತರಂಗಗಳ ಕಾರಣವಾಗಿ ವಿದ್ಯುತ್ ಉಪಕರಣಗಳಲ್ಲಿ ಪ್ರಕಟವಾಗುವ ಗಲಭೆ ಅಥವಾ ಗಲಿಬಿಲಿ

ವಾಯುಮಂಡಲದ ಸಂಯೋಜನೆ

(ಪವಿ) ಶುಷ್ಕ ವಾಯುವಿನಲ್ಲಿರುವ ಅನಿಲಗಳ ತೂಕವಾರು ಶೇಕಡ ಪ್ರಮಾಣಗಳು: ನೈಟ್ರೊಜನ್ ೭೫.೧೫, ಆಕ್ಸಿಜನ್ ೨೩.೧೪, ಆರ್ಗಾನ್ ೧.೩, ಕಾರ್ಬನ್ ಡೈಆಕ್ಸೈಡ್ ೦.೦೫, ಕ್ರಿಪ್ಟಾನ್ ೦.೨೮, ಕ್ಸೀನಾನ್ ೦.೦೦೫, ನೀಯಾನ್ ೦.೦೦೦೮೬, ಹೀಲಿಯಮ್ ೦.೦೦೦೦೫೬. ಹೈಡ್ರೊಜನ್ ಮತ್ತು ಓಝೋನ್ ಒಳಗೊಂಡಂತೆ ಇತರ ಅನಿಲಗಳು ಅಲ್ಪ ಪ್ರಮಾಣಗಳಲ್ಲಿವೆ. ಜಲಾಂಶ ಈ ಪಟ್ಟಿಯಲ್ಲಿ ಸೇರಿಲ್ಲ

ವಾಯುಯಾನ

(ತಂ) ವಾಯುಯಾನ ಕುರಿತ ವಿಜ್ಞಾನ ಹಾಗೂ ಯಂತ್ರಕಲೆ

Search Dictionaries

Loading Results

Follow Us :   
  Download Bharatavani App
  Bharatavani Windows App