भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವಾನರ

(ಪ್ರಾ) ಬಾಲರಹಿತ ಕೋತಿ, ಪ್ರೈಮೇಟ್ ಗಣದ ಪಾಂಗಿಡೀ ಕುಟುಂಬಕ್ಕೆ ಸೇರಿದ ಒರಾಂಗುಟಾನ್, ಗಿಬನ್, ಗೊರಿಲ್ಲ , ಚಿಂಪಾಂಜೀ ಇತ್ಯಾದಿ.

ವಾಮದೃಷ್ಟಿ

(ವೈ) ಬಲಗಣ್ಣಿಗಿಂತ ಎಡಗಣ್ಣನ್ನೇ ಹೆಚ್ಚಾಗಿ ಬಳಸುವ ಹವ್ಯಾಸ

ವಾಮನ

(ಪ್ರಾ) ನೋಡಿ : ಪಿಗ್ಮಿ

ವಾಮಾವರ್ತಕ

(ಭೌ) ಸಮತಲ ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು (ಎದುರಿನಿಂದ ಬರುತ್ತಿರುವ ಬೆಳಕನ್ನು ಕಂಡಂತೆ) ಎಡಕ್ಕೆ ತಿರುಗಿಸುವ ದ್ಯುತಿಪಟುತ್ವ ವಸ್ತು ಅಥವಾ ರಾಸಾಯನಿಕ ಸಂಯುಕ್ತ. ಎಡಮುರಿ. ವಾಮಭ್ರಾಮಕ. ನೋಡಿ: ದಕ್ಷಿಣಾವರ್ತಕ

ವಾಯವಿಕ ಉಸಿರಾಟ

(ಜೀ) ಕೋಶ ಮಟ್ಟದಲ್ಲಿ ಜರಗುವ ಎರಡು ಪ್ರಧಾನ ಉಸಿರಾಟಗಳ ಪೈಕಿ ಒಂದು: ಈ ಉಸಿರಾಟದಲ್ಲಿ ಆಹಾರ ಪದಾರ್ಥಗಳು (ಸಾಮಾನ್ಯ ವಾಗಿ ಕಾರ್ಬೊಹೈಡ್ರೇಟ್‌ಗಳು) ಕಾರ್ಬನ್ ಡೈಆಕ್ಸೈಡ್ ಹಾಗೂ ನೀರಾಗಿ ಸಂಪೂರ್ಣವಾಗಿ ಆಕ್ಸಿಡೀಕರಣಗೊಂಡು ರಾಸಾಯನಿಕ ಶಕ್ತಿ ಬಿಡುಗಡೆಯಾಗುತ್ತದೆ. ಈ ಉಸಿರಾಟಕ್ಕೆ ವಾತಾವರಣ ಆಕ್ಸಿಜನ್ ಅಗತ್ಯ. ಬಹುಮಟ್ಟಿಗಿನ ಜೀವಿಗಳು ಇಂತಹ ವಾಯವಿಕ ಉಸಿರಾಟ ಮಾಡುತ್ತವೆ (ಏರೊಬ್‌ಗಳು). ಕೆಲವು ಬ್ಯಾಕ್ಟೀರಿಯಗಳು ಹಾಗೂ ಕಿಣ್ವಗಳು ಇದಕ್ಕೆ ಅಪವಾದ. ಇನ್ನೊಂದು ಉಸಿರಾಟ ಆಕ್ಸಿಜನ್ ಇಲ್ಲದಾಗ ಸ್ನಾಯು ಊತಕಗಳಲ್ಲಿನ ಅವಾಯವಿಕ ಉಸಿರಾಟ (ನೋಡಿ)

ವಾಯವಿಕ ಬೇರುಗಳು

(ಸ) ಉಷ್ಣವಲಯದ ಕೆಲವು ಅಪ್ಪು ಸಸ್ಯಗಳಿಂದ ಗಾಳಿಯಲ್ಲಿ ಕೆಳಕ್ಕೆ ಜೋಲುವ ಕಂಕುಳ ಬೇರುಗಳು; ಹಲವಾರು ಬಳ್ಳಿಗಳಲ್ಲಿ ಕಂಡು ಬರುವ ಗಿಡ್ಡ ಕುಡಿಬೇರುಗಳು

ವಾಯವಿಕ ಭೌತವಿಜ್ಞಾನ

(ತಂ) ಸಂವೃತ ವ್ಯವಸ್ಥೆಗಳಲ್ಲಿ ವಾಯುವಿನ, ಇತರ ತರಲಗಳ ಅಥವಾ ಅನಿಲಗಳ ಭೌತಗುಣ ಗಳನ್ನು ಅಭ್ಯಸಿಸುವ ವಿಜ್ಞಾನಶಾಖೆ. ಅನಿಲ ಭೌತಶಾಸ್ತ್ರ

ವಾಯವಿಕ ಮೋಜಣಿ

(ತಂ) ವಿಮಾನ ಇಲ್ಲವೇ ಉಪಗ್ರಹಗಳಿಂದ ಭೂಮಿಯ ಛಾಯಾಚಿತ್ರಗಳನ್ನು ಪಡೆದು ಅವುಗಳ ಅಧ್ಯಯನದಿಂದ ಮಾಡುವ ಸರ್ವೇಕ್ಷಣೆ

ವಾಯವಿಕ ಹೊರಜುದಾರಿ

(ಎಂ) ಗೋಪುರಾಗ್ರ ಗಳನ್ನು ಬಂಧಿಸುವ ಹೊರಜಿ ಅಥವಾ ಹೊರಜಿಗಳು ನಿರ್ಮಿಸುವ ಎತ್ತರದ ಹಾದಿ; ಅದಿರು ಮುಂತಾದ ಸಾಮಗ್ರಿ ಗಳನ್ನು ಸಾಗಣೆ ಬಂಡಿಗಳಲ್ಲಿ ತುಂಬಿಸಿ ಅವನ್ನು ಈ ಸಾಗು ದಾರಿಯಲ್ಲಿ ಸರಿಸಿ ಒಂದೆಡೆ ಯಿಂದ ಇನ್ನೊಂದೆಡೆಗೆ ಒಯ್ಯಲಾಗುವುದು. ತೂಗುಹಾದಿ

ವಾಯು

(ರ) ವಾಯುಮಂಡಲವನ್ನು ರೂಪಿಸಿರುವ ಅನಿಲ ಮಿಶ್ರಣ. ನೈಟ್ರೊಜನ್ ಮತ್ತು ಆಕ್ಸಿಜನ್ ಪ್ರಧಾನ ಘಟಕಗಳು; ಆರ್ಗಾನ್, ಕಾರ್ಬನ್ ಡೈಆಕ್ಸೈಡ್, ಕ್ರಿಪ್ಟಾನ್, ಕ್ಸೀನಾನ್, ನಿಯಾನ್ ಮತ್ತು ಹೀಲಿಯಮ್ ಅಲ್ಪ ಪ್ರಮಾಣಗಳಲ್ಲಿ ಬೆರೆತಿರುತ್ತವೆ. ನೀರಿನ ಆವಿಯ ಜೊತೆಗೆ ವಾಯುವು ಕೆಲವು ಸ್ಥಳಗಳಲ್ಲಿ ಗಂಧಕ ಸಂಯುಕ್ತಗಳು, ಹೈಡ್ರೊಜನ್ ಪೆರಾಕ್ಸೈಡ್, ಹೈಡ್ರೊಕಾರ್ಬನ್ ಮತ್ತು ದೂಳುಕಣಗಳಿಂದ ಕೂಡಿರುತ್ತದೆ

ವಾಯು ದಿಕ್ಸೂಚಿ

(ತಂ) ಗಾಳಿ ಬೀಸುವ ದಿಕ್ಕನ್ನು ತೋರಿಸಲು ಎತ್ತರವಾದ ಕಟ್ಟಡಗಳ ಮೇಲೆ ಹಾಕುವ, ಸಾಮಾನ್ಯವಾಗಿ ಹುಂಜದ ಆಕಾರದ, ಸೂಚಿ. ಗಾಳಿಕೋಳಿ

ವಾಯು ಬೈರಿಗೆ

(ತಂ) ಒತ್ತಡದ ವಾಯುವನ್ನು ಬಳಸಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಅಳವಡಿಸಿದ ಕೊಂತವುಳ್ಳ ಸಾಧನ. ಕಲ್ಲು ಬಂಡೆಗಳಲ್ಲಿ ತೂತು ಕೊರೆಯಲು ಇಲ್ಲವೇ ಕುಟ್ಟಿ ಪುಡಿ ಮಾಡಲು ಈ ಸಾಧನವನ್ನು ಬಳಸಲಾಗುತ್ತದೆ

ವಾಯು-ಅನುವರ್ತನೆ

(ಜೀ) ಬೇರು ಮುಂತಾದ ಸಸ್ಯಭಾಗಗಳು ತಮ್ಮ ಬೆಳವಣಿಗೆಯಲ್ಲಿ ಅನಿಲಗಳ, ಮುಖ್ಯವಾಗಿ ಆಕ್ಸಿಜನ್‌ನ, ಕಡೆಗೆ ಒಲವು ತೋರುವುದು

ವಾಯುಒತ್ತಡ ಮಾಪಕ

(ಭೌ) ವಾಯುಒತ್ತಡದಲ್ಲಿಯ ಅಲ್ಪ ವ್ಯತ್ಯಾಸಗಳನ್ನು ಅಳೆಯುವ ಉಪಕರಣ. ವಿಮಾನದ ಆರೋಹಣ ದರ ಅಳೆಯಲು ವಿಮಾನಗಳಲ್ಲಿ ಬಳಕೆ

ವಾಯುಕುಹರ

(ಪ) ಸ್ಥಳೀಯವಾಗಿ ಏರುತ್ತಿರುವ ಅಥವಾ ಇಳಿಯುತ್ತಿರುವ ವಾಯುಪ್ರವಾಹ ವಲಯ; ಕಡಿಮೆ ಗಾಳಿ ಒತ್ತಡದ ಈ ಪ್ರದೇಶವನ್ನು ಹೊಕ್ಕ ವಿಮಾನ ತೀವ್ರ ಜಂಜಾಟಕ್ಕೆ ಒಳಗಾಗುತ್ತದೆ

ವಾಯುಗುಣ

(ಪವಿ) ನಿರ್ದಿಷ್ಟ ಪ್ರದೇಶ ಕುರಿತಂತೆ, ಅಲ್ಲಿಗೆ ವಿಶಿಷ್ಟವಾದ ಹವಾಮಾನ ಪರಿಸ್ಥಿತಿಗಳನ್ನು, ಸಾಕಷ್ಟು ದೀರ್ಘಕಾಲ (೩೦ ವರ್ಷ ಅಥವಾ ಅಧಿಕ) ಅಳೆದು ಸಂಗ್ರಹಿಸಿದ ಅಂಕಿ-ಅಂಶಗಳ ಸಮುಚ್ಚಯ. ಇದರಲ್ಲಿ ಉಷ್ಣತೆ, ಆರ್ದ್ರತೆ, ಮಳೆ ಮೊತ್ತ, ಸೌರವಿಕಿರಣ, ಮೋಡ, ಗಾಳಿ ಮತ್ತು ವಾಯುಮಂಡಲ ಒತ್ತಡ – ಇವುಗಳ ಸರಾಸರಿ ಹಾಗೂ ಪರಮಾಂತಿಮ ಮೌಲ್ಯಗಳು, ಏರಿಳಿತಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಸೇರಿರುತ್ತವೆ. ಹವಾಗುಣ. ನೋಡಿ: ಹವೆ

ವಾಯುಗುಣ ವಲಯಗಳು

(ಪವಿ) ನಿರ್ದಿಷ್ಟ ವಾಯುಗುಣ ಆಧರಿಸಿ ಅಕ್ಷಾಂಶಾನುಸಾರ ಗುರುತಿಸಿರುವ ೮ ಭೂಪ್ರದೇಶಗಳು: ಸಮಭಾಜಕದ ಬಳಿ ಇರುವ ಉಷ್ಣಾರ್ದ್ರ ವಾಯುಗುಣದ ವಲಯ; ಸ್ಟೆಪ್ಪೀ (ಮರಗಳಿಲ್ಲದ ಹುಲ್ಲುಗಾವಲು) ಮತ್ತು ಮರುಭೂಮಿ ವಾಯುಗುಣ ಇರುವ ಎರಡು ಉಪೋಷ್ಣ ವಲಯಗಳು; ಸಮಶೀತೋಷ್ಣ ಮಳೆ ವಾಯುಗುಣವಿರುವ ಎರಡು ವಲಯಗಳು; ಅತಿ ವಿಶಾಲ ಉಷ್ಣತಾ ವ್ಯಾಪ್ತಿಯ ಉತ್ತರ ಗೋಳಾರ್ಧ ದಲ್ಲಿರುವ ಉತ್ತರ ಮಾರುತದ ವಾಯುಗುಣ ವಲಯ; ಹಿಮ ವಾಯುಗುಣ ತೋರುವ ಎರಡು ಧ್ರುವವಲಯಗಳು

ವಾಯುಗುಣ ವಿಜ್ಞಾನ

(ಪವಿ) ವಾಯುಗುಣ ಕುರಿತಂತೆ ಕಾರಣ, ಪರಿಣಾಮ, ಬದಲಾವಣೆ ಇತ್ಯಾದಿಗಳ ಸಮಗ್ರ ಅಧ್ಯಯನ

ವಾಯುಚೀಲ

(ಪ್ರಾ) ಕೆಲವು ಮೀನುಗಳಲ್ಲಿ ಆಹಾರ ನಾಳದ ಹೊರ ಬೆಳೆತ; ಇದರಲ್ಲಿ ಗಾಳಿ ತುಂಬಿರುವುದು. ಉಸಿರಾಡಲು, ತೇಲಾಡಲು ಸಹಕಾರಿ. ಗಾಳಿಚೀಲ. ಈಜುಬುರುಡೆ

ವಾಯುಜನ್ಯ ನಾದ

(ಭೌ) ಬಿಗಿಯಾಗಿ ಎಳೆದಿಟ್ಟ ತಂತಿಯ ಮೇಲೆ ವಾಯುಧಾರೆ ಹರಿದಾಗ ಉಂಟಾಗುವ ಸುಳಿಯ ಪರಿಣಾಮವಾಗಿ ಹೊಮ್ಮುವ ನಾದ

Search Dictionaries

Loading Results

Follow Us :   
  Download Bharatavani App
  Bharatavani Windows App