भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವಸ್ತು

(ಭೌ) ೧. ಕಣ್ಣಿಗೆ ಕಾಣಿಸುವ ಅಥವಾ ಇಂದ್ರಿಯಗೋಚರ ಭೌತಿಕ ಪದಾರ್ಥ. ೨. ದ್ಯುತಿ ವ್ಯವಸ್ಥೆಯಲ್ಲಿ ಬೆಳಕಿನ ಕಿರಣಗಳ ಆಕರವೆಂದು ಭಾವಿಸಬಹುದಾದ ಬಿಂದುಗಳ ಸಮೂಹ. ಇದು ವಾಸ್ತವವಾಗಿ ಬೆಳಕಿನ ಆಕರದ ಕ್ರಿಯೆಯನ್ನು ಜರಗಿಸಬಹುದು (ನೈಜ ವಸ್ತುವಿನ ಪ್ರಸಂಗದಲ್ಲಿ) ಅಥವಾ ಜರಗಿಸದಿರಬಹುದು (ಮಿಥ್ಯಾ ವಸ್ತುವಿನ ಪ್ರಸಂಗದಲ್ಲಿ)

ವಸ್ತು ಸ್ಥಾನಾಂತರಣ

(ಜೀ) ೧. ಕ್ರೋಮೊಸೋಮ್‌ನ ಒಂದು ಭಾಗವು ಅದೇ ಕ್ರೋಮೊಸೋಮ್‌ನ ಇನ್ನೊಂದು ನೆಲೆಗೆ ಅಥವಾ ಬೇರೆಯೇ ಒಂದು ಕ್ರೋಮೊಸೋಮ್‌ಗೆ ಸರಿಯುವುದು. ೨. ಸಸ್ಯದ ಒಂದು ಭಾಗದಿಂದ ಇನ್ನೊಂದಕ್ಕೆ ಆಹಾರ, ನೀರು, ಖನಿಜ, ಲವಣ ಮುಂತಾದವುಗಳ ವಹನ

ವಸ್ತುಕ

(ಭೌ) ಯಾವುದೇ ದೃಕ್ ವ್ಯವಸ್ಥೆಯಲ್ಲಿ ವಸ್ತುವಿಗೆ ಸಮೀಪವಿರುವ ಅಥವಾ ವಸ್ತುವಿನ ಕಡೆಗೆ ಇರುವ ಯವ. ವಸ್ತು ಮಸೂರ. ಉದಾ: ಸೂಕ್ಷ್ಮದರ್ಶಕದಲ್ಲಿಯ ವಸ್ತು ಯವ. ಕಣ್ಣಿನ ಬಳಿ ಇರುವುದು ನೇತ್ರ ಯವ, ನೇತ್ರಕ

ವಸ್ತುಘಟಕ

(ಸಾ) ಮಿಶ್ರಣದ/ಸಂಯುಕ್ತದ ಬಿಡಿಭಾಗ

ವಸ್ತುನಿಷ್ಠ

(ಸಾ) ವೀಕ್ಷಣೆ ಮಾಡುವ ವ್ಯಕ್ತಿಯ ಭಾವನೆ/ಅಭಿಪ್ರಾಯಗಳಿಂದ ಪ್ರೇರಿತವಾಗದೆ ಅವುಗಳಿಂದ ಸ್ವತಂತ್ರವಾದ ವೀಕ್ಷಣೆಗಳು ಇತ್ಯಾದಿ. ಜ್ಞಾಯನಿಷ್ಠ. ನೋಡಿ : ವ್ಯಕ್ತಿನಿಷ್ಠ

ವಸ್ತ್ರ

(ತಂ) ನೈಸರ್ಗಿಕ ಅಥವಾ ಕೃತಕ ಎಳೆಗಳಿಂದ ನೇಯ್ದ ಅರಿವೆ. ಜವುಳಿ

ವಹನ

(ಭೌ) ೧. ಉಷ್ಣವಹನ. ಉಷ್ಣಶಕ್ತಿಯು ಮಾಧ್ಯಮದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ, ಮಾಧ್ಯಮದ ಗೋಚರ ಚಲನೆ ಇಲ್ಲದೆಯೇ ತಲಪುವ ವಿದ್ಯಮಾನ. ಉಷ್ಣಶಕ್ತಿಯು ಇಲ್ಲಿ ಅಣುವಿನಿಂದ ಅಣುವಿಗೆ ಹರಿಯುತ್ತದೆ. ಉದಾ: ಲೋಹ ತುಂಡಿನ ಒಂದು ತುದಿಯನ್ನು ಕಾಸಿದಾಗ ಇನ್ನೊಂದು ತುದಿಯೂ ಬಿಸಿಯಾಗುವುದು. ಅನಿಲಗಳಲ್ಲೂ ಹೆಚ್ಚಿನ ದ್ರವಗಳಲ್ಲೂ ಶಾಖ ಶಕ್ತಿ ವಹನವು ಪ್ರಧಾನವಾಗಿ ಅಣುಗಳೂ ಪರಮಾಣುಗಳೂ ಕಡಿಮೆ ಚಲನಶಕ್ತಿಯ ಅಣು ಪರಮಾಣು ಗಳೊಂದಿಗೆ ಸಂಘಟ್ಟಿಸುವ ಮೂಲಕ ಜರಗುತ್ತದೆ. ಘನ ಹಾಗೂ ದ್ರವ ಲೋಹಗಳಲ್ಲಿ ಶಾಖ ಸಂವಹನೆಯು ಶೀಘ್ರ ಚಲನೆಯ ಎಲೆಕ್ಟ್ರಾನ್‌ಗಳ ವಲಸೆಯಿಂದ ಮತ್ತು ತದನಂತರ ಈ ಎಲೆಕ್ಟ್ರಾನ್‌ಗಳ ಹಾಗೂ ಅಯಾನ್‌ಗಳ ನಡುವಿನ ಸಂಘಟ್ಟನೆಯಿಂದ ನಡೆಯುತ್ತದೆ. ಘನ ಶಾಖ ನಿರೋಧಕಗಳಲ್ಲಿ ಮುಕ್ತ ಎಲೆಕ್ಟ್ರಾನ್‌ಗಳು ಇಲ್ಲದಿರು ವುದರಿಂದ ಶಾಖ ವರ್ಗಾವಣೆಯು ಸ್ಫಟಿಕೀಯ ಜಾಲಕಗಳೊಳಗೆ ಪರಮಾಣು ಹಾಗೂ ಅಣುಗಳ ಕಂಪನಗಳಿಗೆ ಸೀಮಿತವಾಗಿರುತ್ತದೆ. ೨. ವಿದ್ಯುತ್ ವಹನ. ವಿದ್ಯುತ್ ಕ್ಷೇತ್ರದ ಪ್ರಭಾವದಲ್ಲಿರುವ ವಸ್ತುವೊಂದರ ಮೂಲಕ ವಿದ್ಯುದಾವೇಶ ಸಾಗುವುದು. ನೋಡಿ: ವಿಕಿರಣ, ಸಂವಹನ

ವಹನ ಆವೇಶನ

(ಭೌ) ವಿದ್ಯುದಾವಿಷ್ಟ ವಸ್ತುವನ್ನು ತಟಸ್ಥ ವಸ್ತುವಿಗೆ ಸ್ಪರ್ಶಿಸಿ ಅದನ್ನೂ ವಿದ್ಯುದಾವಿಷ್ಟಗೊಳಿಸುವುದು

ವಹನ ಪಟ್ಟೆ

(ಭೌ) ವಹನ ಎಲೆಕ್ಟ್ರಾನ್‌ಗಳು ಇರುವ ಪಟ್ಟೆ. ವಹನ ಎಲೆಕ್ಟ್ರಾನ್‌ಗಳು, ಸ್ವತಂತ್ರವಾಗಿದ್ದು, ಯಾವುದೇ ನಿರ್ದಿಷ್ಟ ಪರಮಾಣುವಿಗೆ ಸೇರಿರುವುದಿಲ್ಲ. ಇಂತಹ ವಹನ ಎಲೆಕ್ಟ್ರಾನುಗಳೇ ವಾಹಕಗಳಲ್ಲಿ ವಿದ್ಯುತ್ ಪ್ರವಾಹಕ್ಕೆ ಕಾರಣ. ಈ ವಹನ ಪಟ್ಟೆಯು ಆಂಶಿಕವಾಗಿ ಭರ್ತಿಯಾಗಿರಬಹುದು ಇಲ್ಲವೇ ಸಂಪೂರ್ಣವಾಗಿ ಖಾಲಿ ಇರಬಹುದು

ವಹನರೋಧ

(ವೈ) ರಕ್ತದ ಗೆಡ್ಡೆ, ನೀರ್ಗುಳ್ಳೆ ಮೊದಲಾದವುಗಳಿಂದ ರಕ್ತನಾಳದಲ್ಲಿ ರಕ್ತ ಪರಿಚಲನೆಗೆ ಆಗುವ ಅಡಚಣೆ. ಇದು ಪಾರ್ಶ್ವವಾಯುವಿಗೆ ಎಡೆಮಾಡಿಕೊಡಬಹುದು

ವಹನರೋಧಕ

(ವೈ) ರಕ್ತನಾಳದಲ್ಲಿ ರಕ್ತಚಲನೆಗೆ ಅಡ್ಡಿ ಬರುವ ಗರಣೆ ಅಥವಾ ಯಾವುದೇ ಧಮನಿರೋಧಕ ವಸ್ತು

ವಹನಶೀಲ

(ಭೌ) ಶಾಖ, ವಿದ್ಯುತ್ತು ಮೊದಲಾದವನ್ನು ಸಾಗಿಸಬಲ್ಲ. ವಹನೀಯ

ವಾಕ್‌ಸಾಮರ್ಥ್ಯ ನಷ್ಟ

(ವೈ) ಮಾತನಾಡಲು ಅವಶ್ಯವಿರುವ ಸ್ನಾಯುಗಳ ಮೇಲೆ ನಿಯಂತ್ರಣ ನಷ್ಟವಾದುದರ ಪರಿಣಾಮವಾಗಿ ಮಾತನಾಡಲು ಆಗದಿರುವುದು

ವಾಟ

(ಗ) ನೋಡಿ : ಪ್ರವಣತೆ

ವಾಟಮಾಪಿ

(ಭೌ) ಕಾಂತಸೂಜಿಯ ವಾಟವನ್ನು ಅಳೆದು ಆ ಮೂಲಕ ಭೂಕಾಂತ ಕ್ಷೇತ್ರದ ಊರ್ಧ್ವ ಘಟಕವನ್ನು, ಯಾವುದೇ ವಾಟವನ್ನು ಅಥವಾ ಹಡಗು ಅಥವಾ ವಿಮಾನ ಕ್ಷಿತಿಜೀಯ ಸಮತಲದಿಂದ ಎಷ್ಟು ಓರೆಯಾಗಿದೆ ಎಂಬುದನ್ನು ಸೂಚಿಸುವ ಉಪಕರಣ. ನಮನಮಾಪಕ. ನತಿಮಾಪಕ

ವಾಣಿಜ್ಯ ಮಾರುತ

(ಭೂ) ಸಮಭಾಜಕದ ೩೦0 ಉ ಅಥವಾ ೩೦0 ದ ಭಾಗಗಳಿಂದ ಸಮಭಾಜಕಾಭಿಮುಖವಾಗಿ ಉತ್ತರ ಗೋಳಾರ್ಧದಲ್ಲಿ ಈಶಾನ್ಯದಿಂದಲೂ ದಕ್ಷಿಣ ಗೋಳಾರ್ಧದಲ್ಲಿ ಆಗ್ನೇಯದಿಂದಲೂ ನಿಯತವಾಗಿ ಬೀಸುವ ಶುಷ್ಕ ಮಾರುತಗಳ ಪೈಕಿ ಯಾವುದೇ ಒಂದು. ಉತ್ತರದ ಹಾಗೂ ದಕ್ಷಿಣದ ಶೀತಲ ಪ್ರದೇಶಗಳಿಂದ ಸಮಭಾಜಕದೆಡೆಗೆ ಸದಾ ಪ್ರವಹಿಸುತ್ತಿರುವ ಗಾಳಿಯಲ್ಲಿ ಭೂಮಿಯ ಆವರ್ತನೆಯ ಪರಿಣಾಮವಾಗಿ ಈ ಮಾರುತ ಉದ್ಭವಿಸುತ್ತದೆ. ಪ್ರಾಚೀನ ದಿನಗಳಲ್ಲಿ ವಣಿಕ ನಾವಿಕರು ನೌಕಾ ಚಾಲನೆಗೆ ಈ ಮಾರುತಶಕ್ತಿಯನ್ನು ಬಳಸುತ್ತಿದ್ದುದರಿಂದ ಈ ಹೆಸರು. ಹೋಲಿಸಿ: ಪ್ರತಿವಾಣಿಜ್ಯ ಮಾರುತ

ವಾತಪುಟೀ

(ಪ್ರಾ) ಪ್ಲಾವಕವಾಗಿ ಬಳಸಬಹುದಾದ ಯಾವುದೇ ವಾಯುಕುಹರ. ಮೀನಿನಲ್ಲಿ ವಾಯುಕೋಶ. ವಾತಪುಟೀಧರದ ಕುಹರ

ವಾತಪುಟೀಧರ

(ಸ) ಜೌಗು ಸಸ್ಯಗಳಲ್ಲಿ ವಾಯುಕುಹರ. ಕೆಲವು ಜೌಗು ಸಸ್ಯಗಳ ಉಸಿರಾಟದಲ್ಲಿ ಭಾಗವಹಿಸುವ, ನೀರಿನಲ್ಲಿ ಮುಳುಗಿರುವ ಇಲ್ಲವೇ ಗಾಳಿಯಲ್ಲಿ ಎದ್ದು ನಿಂತ, ನೇರ ಬೇರು

ವಾತಹರ

(ವೈ) ಜಠರದ ಉಬ್ಬರವನ್ನು ನಿವಾರಿಸಲು ಬಳಸುವ ಔಷಧ. ಜಠರ ಮತ್ತು ಕರುಳುಗಳಿಂದ ವಾಯುವನ್ನು ಹೊರಹಾಕುವ ಮದ್ದು

ವಾಂತಿ

(ವೈ) ಜಠರದಿಂದ ಆಹಾರ ಪದಾರ್ಥವನ್ನು ಬಲವಂತವಾಗಿ ಹೊರಹಾಕುವುದು. ವಮನ

Search Dictionaries

Loading Results

Follow Us :   
  Download Bharatavani App
  Bharatavani Windows App