भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವಲಯ ಪರಿಚಲನೆ

(ಭೂ) ಅಕ್ಷಾಂಶವೃತ್ತದುದ್ದಕ್ಕೂ (ಪೂರ್ವ ಅಥವಾ ಪಶ್ಚಿಮ) ವಾಯುಪ್ರವಾಹ. ನಿರ್ದಿಷ್ಟವಾಗಿ, ವಾಯುವಿನ ಸಹಜ ಪ್ರವಾಹದ ಅಕ್ಷಾಂಶೀಯ ಘಟಕ

ವಲಯ ಸಂಸ್ಕರಣ

(ರ) ಕೆಲವು ಲೋಹ, ಮಿಶ್ರಲೋಹ, ಅರೆವಾಹಕ ಮತ್ತಿತರ ಪದಾರ್ಥಗಳಲ್ಲಿರುವ ಅಶುದ್ಧತೆಯ ಮಟ್ಟವನ್ನು ಕಡಿಮೆ ಮಾಡಲು ಬಳಸುವ ತಂತ್ರ. ಅಶುದ್ಧತೆಯ ಕರಗುವಿಕೆಯು ಪದಾರ್ಥದ ಘನ ಹಾಗೂ ದ್ರವಸ್ಥಿತಿ ಗಳಲ್ಲಿ ಭಿನ್ನ ಭಿನ್ನ ಎಂಬ ತಿಳಿವಳಿಕೆಯ ಮೇಲೆ ಈ ತಂತ್ರ ಆಧರಿಸಿದೆ. ಅಶುದ್ಧ ಲೋಹದ ಸರಳಿನ ಸುತ್ತ ವೃತ್ತಾಕಾರದ ಒಂದು ತಾಪಕ ಇರುತ್ತದೆ. ಅದನ್ನು ನಿಧಾನವಾಗಿ ಸರಿಸುತ್ತ ಹೋದರೆ ಹಿಂದಿರುವ ದ್ರವಭಾಗದಲ್ಲಿ ಪರಿಶುದ್ಧ ಲೋಹ ಸ್ಫಟಕೀಕರಿಸುತ್ತದೆ. ಕಲ್ಮಷಗಳು (ಅಶುದ್ಧತೆಗಳು) ಪಕ್ಕದ ದ್ರವ ವಲಯಕ್ಕೆ ಹರಿಯುತ್ತವೆ. ಕ್ರಮೇಣ ಅವು ಸರಳಿನ ತುದಿಯಲ್ಲಿ ಸಂಗ್ರಹವಾಗುತ್ತವೆ. ಆ ಭಾಗವನ್ನು ಕತ್ತರಿಸಿ ತೆಗೆದುಹಾಕಲಾಗುವುದು. ಅರೆವಾಹಕಗಳಾಗಿ ಬಳಸುವ ಸಿಲಿಕಾನ್, ಜರ್ಮೆನಿಯಮ್, ಗ್ಯಾಲಿಯಮ್‌ಗಳ ಸಂಸ್ಕರಣ ಹೀಗಾಗುತ್ತದೆ

ವಲಯ ಸೂಚ್ಯಂಕ

(ಭೂವಿ) ಮಧ್ಯ ಅಕ್ಷಾಂಶಗಳಲ್ಲಿ (೩೫0-೫೫0 ನಡುವೆ) ಪಶ್ಚಿಮದಿಂದ ಬೀಸುವ ಗಾಳಿಗಳ ಶಕ್ತಿಯನ್ನು ನಿರೂಪಿಸುವ ಸಂಖ್ಯೆ

ವಲಯಕಾಲ

(ಖ) ಅಂತರರಾಷ್ಟ್ರೀಯ ನಾಗರಿಕ ಜೀವನದ ಸೌಲಭ್ಯಕ್ಕಾಗಿ, ಗ್ರೆನಿಚ್ ಕಾಲವನ್ನು ಆಧರಿಸಿ, ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರಚಲಿತವಾಗಿರುವ ಕಾಲವನ್ನು ನಿರ್ಧರಿಸಬಹುದು. ಪ್ರತಿ ೧೫ ಡಿಗ್ರಿಗೆ ೧ ಗಂಟೆಯಂತೆ ಪಶ್ಚಿಮಕ್ಕೆ ಹೋಗುವಾಗ ಕಳೆಯಬೇಕು, ಪೂರ್ವಕ್ಕೆ ಹೋಗುವಾಗ ಕೂಡಿಸಬೇಕು. ಅಂದರೆ ಆಯಾ ವಲಯದ ಕಾಲ ಗ್ರೆನಿಚ್ ಕಾಲದಿಂದ ಅಷ್ಟು ಮುಂದೆ (+) ಅಥವಾ ಅಷ್ಟು ಹಿಂದೆ (-) ಇರುತ್ತದೆ. ಭಾರತೀಯ ಶಿಷ್ಟಕಾಲ = ಗ್ರಿನಿಚ್ ಕಾಲ +೫ಗಂ ೩೦ಮಿ. ನೋಡಿ: ಅಂತರರಾಷ್ಟ್ರೀಯ ದಿನಾಂಕ ರೇಖೆ

ವಲಯವಂತ

(ಪ್ರಾ) ಬಹುಖಂಡ ರೂಪಿತ (ಅಂದರೆ ಉಂಗುರಗಳಿಂದ ಕೂಡಿದ) ದೇಹವಿರುವ ಹುಳುಗಳ ವಿಭಾಗ; ಅಕಶೇರುಕಗಳು. ಉದಾ: ಎರೆಹುಳು, ಜಿಗಣೆ

ವಲಯೀಕರಣ

(ಭೂವಿ) ಸ್ಫಟಿಕದ ರಚನೆಯಲ್ಲಿ ಗರ್ಭದಿಂದ (ತಿರುಳು) ಅಂಚಿನವರೆಗೆ ಕಂಡುಬರುವ ವ್ಯತ್ಯಯ. ಬೆಳವಣಿಗೆಯ ಕಾಲದ ನಿರಂತರ ಕ್ರಿಯಾಸರಣಿಯಲ್ಲಿ ಸಮತೋಲ ತಪ್ಪಿದ ಕಾರಣ ಸ್ಫಟಿಕ ಮಜಲುಗಳಲ್ಲಿ ಇಂಥ ಪ್ರತ್ಯೇಕೀಕರಣವಾಗುತ್ತದೆ

ವಲಸೆ

(ಜೀ) ವರ್ಷದ ಒಂದು ನಿರ್ದಿಷ್ಟ ಕಾಲದಲ್ಲಿ (ಋತುಮಾನಾನುಸಾರ) ಹಕ್ಕಿಗಳೂ ಇತರ ಪ್ರಾಣಿಗಳೂ ಆಹಾರ ಅನ್ವೇಷಣೆ ಮಾಡುತ್ತ ಗುಂಪುಗುಂಪಾಗಿ ಕ್ರಮಬದ್ಧವಾಗಿ ತಮ್ಮ ವಾಸಸ್ಥಳ ಬದಲಿಸುವ ಕ್ರಿಯೆ. (ಭೌ) ಚಾಲಕ ಬಲದ ಪರಿಣಾಮವಾಗಿ (ವಿದ್ಯುತ್ ಕ್ಷೇತ್ರದ ಪ್ರಭಾವದಡಿ) ಅನಿಲ ಅಥವಾ ದ್ರವದ ಮೂಲಕ ಅಯಾನ್‌ಗಳು ಸ್ನಿಗ್ಧತೆಯನ್ನೂ ವಿರೋಧಿಸಿಕೊಂಡು ದತ್ತ ದಿಶೆಯಲ್ಲಿ ಚಲಿಸುವುದು; ವಿದ್ಯುತ್ ಕ್ಷೇತ್ರದ ಪ್ರಭಾವದಡಿ, ದ್ರಾವಕದ ಸ್ನಿಗ್ಧತಾ ಪ್ರತಿರೋಧಕ್ಕೆ ವಿರೋಧವಾಗಿ, ಅಯಾನುಗಳ ಚಲನೆ

ವಲ್ಕನೀಕರಣ

(ರ) ರಬ್ಬರ್ ಅಥವಾ ಪ್ಲಾಸ್ಟಿಕ್ ನೊಂದಿಗೆ ಗಂಧಕದ ರಾಸಾಯನಿಕ ಕ್ರಿಯೆ. ಪರಿಣಾಮವಾಗಿ ಪಾಲಿಮರ್ ಸರಪಣಿಗಳ ಅಡ್ಡಬಂಧ ಏರ್ಪಟ್ಟು, ಪಾಲಿಮರ್‌ನ ಶಕ್ತಿ ಹಾಗೂ ಸ್ಥಿತಿಸ್ಥಾಪಕತ್ವ ಹೆಚ್ಚುತ್ತವೆ

ವಲ್ಕನೈಟ್

(ರ) ಗಡಸು ವಲ್ಕನೀಕೃತ ರಬ್ಬರ್. ಇದನ್ನು ತಯಾರಿಸುವುದರಲ್ಲಿ ಉನ್ನತ ಪ್ರಮಾಣಗಳಲ್ಲಿ ಗಂಧಕವನ್ನು ಬಳಸ ಲಾಗುತ್ತದೆ. ಎಬೊನೈಟ್ ಅಂತಹ ಒಂದು ರೂಪ. ಆಂಟಿಮೊನಿ ಹಾಗೂ ಪಾದರಸಗಳ ಸಲ್ಫೈಡ್‌ಗಳನ್ನು ಬಳಸಿ ನಾನಾ ವರ್ಣಗಳ ವಲ್ಕನೈಟ್‌ಗಳನ್ನು ಪಡೆಯಲಾಗುತ್ತದೆ

ವಂಶಜ

(ವೈ) ನಿರ್ದಿಷ್ಟ ವಂಶಕ್ಕೆ ಸೇರಿದ ಸಂತತಿ.

ವಂಶಪಾರಂಪರ‍್ಯ ವ್ಯಾಧಿ

(ವೈ) ತಂದೆ ಅಥವಾ ತಾಯಿಯಿಂದ ಮಕ್ಕಳಿಗೆ ಸಾಗಿ ಹೋಗಬಲ್ಲ ವ್ಯಾಧಿ

ವಂಶವಾಹಿ ಅಭಿವ್ಯಕ್ತಿ

(ವೈ) ವಂಶವಾಹಿಗೆ ಅನುಗುಣವಾಗಿ ಆರ್.ಎನ್.ಎ.ಗಳಿಂದ ಪ್ರೋಟೀನು ಉತ್ಪಾದನೆ. ಇದರಲ್ಲಿ ಏರುಪೇರಾದಾಗ ಜೀವಕೋಶದ ಅಥವಾ ಊತಕದ ಅಥವಾ ಅಂಗದ ಜೀವಿಯ ರಚನೆ ಕಾರ್ಯಗಳಲ್ಲಿ ಗಣನೀಯ ವ್ಯತ್ಯಾಸಗಳಾಗಬಹುದು. ಜೀನ್ ಅಭಿವ್ಯಕ್ತಿ

ವಂಶವೃಕ್ಷ

(ಪ್ರಾ) ವ್ಯಕ್ತಿ ಅಥವಾ ಪ್ರಾಣಿಯ ಪೂರ್ವಿಕರ ಬಗೆಗಿನ ಚಿತ್ರಣ. ವಿಶೇಷವಾಗಿ ಆ ವ್ಯಕ್ತಿ ಅಥವಾ ಪ್ರಾಣಿಯ ಆನುವಂಶಿಕತೆ ಬಗ್ಗೆ ಬೆಳಕು ಬೀರುವಂಥದು

ವಂಶಾವಳಿ

(ಜೀ) ಸಸ್ಯ ಅಥವಾ ಪ್ರಾಣಿ ಆದಿಮ ರೂಪದಿಂದ ಮಾರ್ಪಟ್ಟು ವಿವಿಧ ರೂಪಗಳನ್ನು ತಳೆದ ವಿಕಸನ ಸರಣಿಯ ನಿರೂಪಣ. (ಸಾ) ಮೂಲಪುರುಷನಿಂದ ತೊಡಗಿ ಪಿತೃವರ್ಗವನ್ನೆಲ್ಲ ಹೆಸರಿಸಿ ನಡುವೆ ಬರುವವರ ಸ್ಥಾನ ಸೂಚಿಸುವುದು. ವಂಶವೃಕ್ಷ

ವಸಡು

(ವೈ) ಹಲ್ಲುಗಳಿಗೆ ಆಧಾರವಾದ ಗಟ್ಟಿಮಾಂಸ. ಒಸಡು

ವಸಂತ ಋತು

(ಖ) ವಸಂತು ವಿಷುವದಿಂದ ಕರ್ಕಾಯನ ದವರೆಗೆ ವ್ಯಾಪಿಸಿರುವ ಕಾಲ. ಚಳಿಗಾಲದಿಂದ ಬೇಸಗೆಗೆ ಪರಿವರ್ತನೆಯಾಗುವ ಕಾಲವನ್ನು ಒಳಗೊಂಡಿರುತ್ತದೆ

ವಸಂತವಿಷುವ

(ಖ) ನೋಡಿ : ವಿಷುವದ್ಬಿಂದುಗಳು

ವಸಾಹತು

(ಜೀ) ಒಂದು ಸಂತಾನದಿಂದ ಹುಟ್ಟಿದ ಜೀವಿಗಳ ನಿರ್ದಿಷ್ಟ ನೆಲೆ. ವಸಾಹತು. ಗುಂಪು

ವಸೆ

(ವೈ) ೧. ರಕ್ತ ಅಥವಾ ದುಗ್ಧರಸ ಗರಣೆ ಕಟ್ಟಿದಾಗ ಪ್ರತ್ಯೇಕವಾಗುವ ಜಲೀಯ ತರಲ. ೨. ಬ್ಯಾಕ್ಟೀರಿಯ ಅಥವಾ ಅವುಗಳ ನಂಜುಗಳನ್ನು ಚುಚ್ಚಿದ ಪ್ರಾಣಿಯಿಂದ ಪಡೆದ ಪ್ರತಿಕಾಯ ಗಳಿರುವ ರಕ್ತಸಾರ. ಇದನ್ನು ಮನುಷ್ಯ ಅಥವಾ ಪ್ರಾಣಿಗಳಿಗೆ ರೋಗ ನಿರೋಧಕವಾಗಿ ನೀಡಲಾಗುತ್ತದೆ. ರಕ್ತಸಾರ

ವಸ್ತಿಕುಹರ

(ವೈ) ಕಶೇರುಕಗಳ ಕಿಬ್ಬೊಟ್ಟೆಯಲ್ಲಿ ಸೊಂಟದ ಮೂಳೆಗಳೂ ಬೆನ್ನುಹುರಿಯ ಕೆಲವು ಎಲುಬುಗಳೂ ಸುತ್ತುವರಿದು ಆದ ಬೋಗುಣಿಯಾಕಾರದ ಕುಳಿ

Search Dictionaries

Loading Results

Follow Us :   
  Download Bharatavani App
  Bharatavani Windows App