भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವರ್ತುಲ ರಂಗ

(ಸಾ) ತೆರೆದಿರುವ ರಂಗಸ್ಥಳದ ಸುತ್ತಲೂ ಪ್ರೇಕ್ಷಕರ ಆಸನಗಳನ್ನು ಮೆಟ್ಟಲು ಮೆಟ್ಟಲಾಗಿ ರಚಿಸಿರುವ ವರ್ತುಲಾಕಾರದ ಅಥವಾ ಅಂಡಾಕಾರಾದ ರಂಗಮಂದಿರ

ವರ್ತುಲ ಸಂಯುಕ್ತ

(ರ) ಅಣುವಿನ ಕೆಲವು ಅಥವಾ ಎಲ್ಲ ಪರಮಾಣುಗಳೂ ಸಂವೃತ ಉಂಗುರದಂತೆ ಬಂಧಿತ ವಾಗಿರುವ ರಾಸಾಯನಿಕ ಸಂಯುಕ್ತ. ಉದಾ: ಬೆನ್ಝೀನ್, ಟಾಲೀನ್, ನ್ಯಾಫ್ತಲೀನ್ ಇತ್ಯಾದಿ

ವರ್ತುಳೀಯ

(ಸಾ) ವೃತ್ತಾಕಾರದ, ವೃತ್ತೀಯ

ವರ್ತುಳೀಯ ಕ್ರಮಯೋಜನೆ

(ಗ) ವೃತ್ತಪರಿಧಿಯ ಸುತ್ತ ವಸ್ತುಗಳ ಅಳವಡಿಕೆ. n ವಸ್ತುಗಳನ್ನು (n-1)! ಬಗೆಗಳಲ್ಲಿ ಅಳವಡಿಸಬಹುದು

ವರ್ಧನ ಸಾಮರ್ಥ್ಯ

(ಭೌ) ದೃಕ್ ಉಪಕರಣ ಗಳಲ್ಲಿ ವೀಕ್ಷಿಸಿದಾಗ ಒಂದು ಕಾಯದ ತೋರಿಕೆಯ ಗಾತ್ರಕ್ಕೂ, ಬರಿಗಣ್ಣಿನಲ್ಲಿ ಅನುಕೂಲ ದೂರದಿಂದ (೨೫ ಸೆಂಮೀ) ವೀಕ್ಷಿಸಿದಾಗ ಕಂಡುಬರುವ ಆ ಕಾಯದ ಗಾತ್ರಕ್ಕೂ ನಡುವಿನ ನಿಷ್ಪತ್ತಿ. ಈ ನಿಷ್ಪತ್ತಿ ೧ಕ್ಕಿಂತ ಅಧಿಕವಾಗಿದ್ದಲ್ಲಿ ಅದು ವರ್ಧನೆ, ೧ಕ್ಕಿಂತ ಕಡಿಮೆಯಾಗಿದ್ದಲ್ಲಿ ಅದು ಹ್ರಾಸ ಅಥವಾ ಇಳಿಕೆ. ಇಲ್ಲಿಯ ವರ್ಧನೆ ಸಾಮಾನ್ಯವಾಗಿ ರೇಖೀಯವೆಂದು ಭಾವಿಸಲಾಗುತ್ತದೆ

ವರ್ಧನ ಸ್ತರ

(ಸ) ಕಾಂಡಪೋಷಕ. ಸಸ್ಯಕಾಂಡದ ಒಳತೊಗಟೆಗೂ ದಾರುಕಾಂಡಕ್ಕೂ ನಡುವೆ ಇದ್ದು ಹೊರಗೆ ಹೊಸ ಹೊರತೊಗಟೆಯನ್ನೂ ಒಳಗೆ ಹೊಸ ತೊಗಟೆಯನ್ನೂ ಬೆಳೆಸುವ ತೆಳು ಊತಕ, ಪದರು

ವರ್ನಿಯರ್

(ತಂ) ಮಾನಕದಲ್ಲಿ ಅತ್ಯಂತ ಕಿರಿಯ ವಿಭಾಗದ ಭಿನ್ನಾಂಕವನ್ನು ಅಳೆಯಲು ಸಾಧ್ಯವಾಗುವಂತೆ ಪ್ರಧಾನ ಅಳತೆ ಪಟ್ಟಿಗೆ ಹೊಂದಿಕೊಂಡು ಅದರ ಮೇಲೆ ಸರಿದಾಡುವಂತೆ ಬಂಧಿಸಲಾಗಿರುವ ಇನ್ನೊಂದು ಅಳತೆಪಟ್ಟಿ. ವರ್ನಿಯರ್ ಅಳತೆ ಪಟ್ಟಿಯ ಒಂದೊಂದು ಕ್ರಮಾಂಕನವೂ ಪ್ರಧಾನ ಅಳತೆಪಟ್ಟಿಯ ಕ್ರಮಾಂಕನದ ೦.೯ರಷ್ಟು ಇದ್ದು ೧/೧೦ ಪಾಲಿನಷ್ಟು ಭಿನ್ನಾಂಕವನ್ನು ನಿಖರವಾಗಿ ಅಳೆಯಬಹುದು. ಇದನ್ನು ಉಪಜ್ಞಿಸಿದ ಪಿಯರೆ ವರ್ನಿಯರ್ (೧೫೮೦-೧೬೩೭) ಗೌರವಾರ್ಥ ಈ ಹೆಸರು

ವರ್ಬಿಗರೇಷನ್

(ವೈ) ಅರ್ಥರಹಿತ ಮಾತಿನ ಸುರಿಮಳೆ

ವರ್ಮಿಕ್ಯುಲೈಟ್

(ಭೂವಿ) ಕ್ಲೋರೈಟ್ ಮತ್ತು ಮಾಂಟ್ ಮಾರಿಲೊನೈಟ್‌ಗಳಿಗೆ ಸಂಬಂಧಿಸಿದ ಜೇಡಿ ಖನಿಜಗಳ ಗುಂಪು. ಬಯೊಟೈಟ್ ಮತ್ತು ಫ್ಲಾಗೊಫೈಟ್‌ಗಳ ರಾಸಾಯನಿಕ ಬದಲಿಕೆಯಿಂದ ಉಂಟಾಗುತ್ತದೆ. ಕಾಸಿದಾಗ ಅರಳುತ್ತದೆ. ಶಬ್ದ ನಿರೋಧಕ ಏರ್ಪಾಡಿನಲ್ಲಿಯೂ ಬಣ್ಣ ತಯಾರಿಕೆಯಲ್ಲಿಯೂ ಬಳಕೆ

ವರ್ಮಿಸ್

(ಪ್ರಾ) ಅನುಮಸ್ತಿಷ್ಕದ ಎರಡು ಗೋಳಾರ್ಧಗಳ ನಡುವಿನ ಇಕ್ಕಟ್ಟು ಮಧ್ಯವಲಯ

ವರ್ಮ್ ಗಾಲಿ

(ತಂ) ತಿರುಪುಮೊಳೆಯ ಮರುಸುತ್ತಿ ನೊಂದಿಗೆ ಹಲ್ಲುಗೂಡಿಕೊಂಡಿರುವ ವಕ್ರವಾದ ಹಲ್ಲುಗಳುಳ್ಳ ಗಿಯರ್ ಚಕ್ರ. ಮರಸುತ್ತು. ಚಾಲಕದ ಚಕ್ರ

ವರ್ಮ್ ಗಿಯರ್

(ತಂ) ತಿರುಪುಮೊಳೆಯ ಮರ ಸುತ್ತಿನಿಂದ (ವರ್ಮ್) ಚಾಲನೆಗೊಳ್ಳಲು ಅನುವಾಗುವಂತೆ ಯುಕ್ತ ಕೋನದಲ್ಲಿ ಕತ್ತರಿಸಿದ ಹಲ್ಲುಗಳುಳ್ಳ ಗಿಯರ್ ಚಕ್ರ. ಸಮಾಂತರ ವಲ್ಲದ, ಪರಸ್ಪರ ಛೇದಿಸದ ಚಾಲಕದಂಡಗಳನ್ನು ಸಂಬಂಧಿಸಿ ಚಾಲನೆಯನ್ನು ವರ್ಗಾಯಿಸಲು ಬಳಕೆ

ವರ್ಮ್ ರಂಧ್ರ

(ತಂ) ವಿಶ್ವದಲ್ಲಿ ಅಗಾಧ ಅಂತರದಲ್ಲಿ ಇರುವ ಸ್ಥಳಗಳನ್ನು ಜೋಡಿಸುವಂತಹ, ದೇಶದ ಟಾಪಾಲಜಿ ಯಲ್ಲಿನ ಒಂದು ವಿಶಿಷ್ಟ ವ್ಯವಸ್ಥೆ ಎಂಬ ಊಹೆ. ಐನ್‌ಸ್ಟೈನ್ ಪ್ರತಿಪಾದಿಸಿದ ಕ್ಷೇತ್ರ ಸಮೀಕರಣಗಳ ಪರಿಹಾರ ಕಂಡುಹಿಡಿಯು ವಾಗ ಲಡ್‌ವಿಗ್ ಫ್ಲಾಮ್ ೧೯೬೬ರಲ್ಲಿ ಇದನ್ನು ಪ್ರತಿಪಾದಿಸಿದರು

ವರ್ಷ

(ಖ) ೧. ಭೂಮಿಯು ಸೂರ್ಯನ ಸುತ್ತ ಒಂದು ಪರಿಭ್ರಮಣೆ ಮುಗಿಸಲು ತೆಗೆದುಕೊಳ್ಳುವ ಅವಧಿ, ಅಂದರೆ, ೩೬೫.೨೪೨೨ ಮಾಧ್ಯ ಸೌರ ದಿವಸಗಳು. ೨. ವ್ಯಾವಹಾರಿಕ ವರ್ಷ : ಜನವರಿ ೧ರಿಂದ ಡಿಸೆಂಬರ್ ೩೧ರವರೆಗಿನ ೩೬೫ ದಿವಸಗಳ ಅಥವಾ ೩೬೬ ದಿವಸಗಳ ಅವಧಿ

ವಲನ

(ಜೀ) ಜೀವಿಗಳಲ್ಲಿ ಉರುಳುವ, ಸುತ್ತುವ ಅಥವಾ ತಿರುಚಿಕೊಳ್ಳುವ ಚಲನೆ

ವಲನಸಂಧಿ

(ಗ) ಯಾವುದೇ ವಕ್ರರೇಖೆಯ ಹೊರ ಬಾಗು ಒಳಬಾಗಾಗಿ ಬದಲುವುದು/ಹಾಗಾಗುವ ಬಿಂದು. ಪರ್ವಬಿಂದು

ವಲಯ

(ಪ್ರಾ) ಎರೆಹುಳುವಿನಂಥ ಜೀವಿಗಳಲ್ಲಿ ತಲೆಭಾಗವನ್ನು ಬಿಟ್ಟು ಉಳಿದ ಒಡಲಿನ ವಿಭಜಿತ ಭಾಗಗಳಲ್ಲಿ ಒಂದು. ಈ ಒಂದೊಂದು ಖಂಡದಲ್ಲೂ ಅವೇ ಅಂಗಗಳು ಪುನರಾವೃತ್ತಿಯಾಗಿರುತ್ತವೆ

ವಲಯ

(ಭೂ) ವಿಶಿಷ್ಟ ಲಕ್ಷಣಗಳು ಸೀಮಿತವಾಗಿರುವ, ಅಗಲ ಕಡಿಮೆ-ಉದ್ದ ಇರುವ ಭೂಪ್ರದೇಶ

ವಲಯ

(ರ) ಪರಮಾಣುಗಳ ಒಂದು ವಲಯರಚನೆ. ಇದರಲ್ಲಿ ಪ್ರತಿಯೊಂದು ಪರಮಾಣುವೂ ಇನ್ನೆರಡರೊಂದಿಗೆ ಬಂಧಿತವಾಗಿ ಕೊನೆಯಿಲ್ಲದ ಸರಪಣಿ ರೂಪಿತವಾಗಿರುತ್ತದೆ. ಉಂಗುರ

ವಲಯ ಕೋಶ

(ಸ) ಫಿಲಿಕೇಲ್ ಸಸ್ಯಗಳಲ್ಲಿ ವಲಯ ಗಳನ್ನು ರೂಪಿಸುವ ಒಂದು ರೀತಿಯ ಮಂದ ಭಿತ್ತಿಯ ಕೋಶ

Search Dictionaries

Loading Results

Follow Us :   
  Download Bharatavani App
  Bharatavani Windows App