भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವರ್ಣಗ್ರಾಹಿ

(ರ) ಸುಲಭವಾಗಿ ಬಣ್ಣ ಹತ್ತುವ ಅಥವಾ ರಂಗು ಅಂಟುವ. ವರ್ಣಾನುರಾಗಿ. ಉದಾ: ಬೇಗ ಬಣ್ಣ ಹತ್ತುವ ಕೋಶ

ವರ್ಣಜನಕ

(ರ) ಕ್ರೋಮೊಫೋರನ್ನು ಒಳಗೊಂಡಿರುವ ವರ್ಣ ಸಂಯುಕ್ತ. ವರ್ಣೋತ್ಪಾದಕ. ರಂಗು ಅಲ್ಲದಿದ್ದರೂ ಬಣ್ಣವಿರುವ ಅಣ್ವಂಗವಿದೆ. ಆಮ್ಲೀಯ ಅಥವಾ ಪ್ರತ್ಯಾಮ್ಲೀಯ ಅಣ್ವಂಗ ಸೇರಿಸುವ ಮೂಲಕ ರಂಗಾಗಿ ಮಾರ್ಪಡಿಸಬಹುದಾದ ಸಂಯುಕ್ತವಿದು. (ಜೀ) ಗಾಳಿಗೆ ಒಡ್ಡಿದಾಗ ಬಣ್ಣ ಹೊಂದಬಲ್ಲ, ಸಸ್ಯ ಅಥವಾ ಪ್ರಾಣಿ ದೇಹದಲ್ಲಿಯ ಸಾವಯವ ಸಂಯುಕ್ತ

ವರ್ಣತ್ವ

(ಸ) ಸಾಧಾರಣವಾಗಿ ಹಸಿರು ಬಣ್ಣದವಾಗಿ ಇರಬೇಕಾದ ಸಸ್ಯಭಾಗಗಳು ಅಪಸಾಮಾನ್ಯ ಬಣ್ಣ ತಳೆಯುವುದು. ವರ್ಣದೋಷ

ವರ್ಣದೀಪ್ತಿ

(ಭೌ) ಸಾಬೂನು ಗುಳ್ಳೆ ಅಥವಾ ಕಪ್ಪೆ ಚಿಪ್ಪುಗಳಂಥ ತುಂಬ ತೆಳುವಾದ ಪಟಲದ ಮುಂಭಾಗದಿಂದಲೂ ಹಿಂಭಾಗದಿಂದಲೂ ಪ್ರತಿಫಲಿತವಾದ ಬೆಳಕಿನ ವ್ಯತಿಕರಣದಿಂದಾಗಿ ಪಟಲದ ಮೇಲ್ಮೈ ಮೇಲೆ ಮೂಡುವ ವಿವಿಧ ವರ್ಣಸ್ಫುರಣ

ವರ್ಣದ್ರವ್ಯ

(ರ) ಅದ್ರಾವ್ಯ, ನೈಸರ್ಗಿಕ ಅಥವಾ ಕೃತಕ ಕಪ್ಪು, ಬಿಳಿ ಮುಂತಾದ ಬಣ್ಣದ ಪದಾರ್ಥಗಳ ಪುಡಿ. ಯುಕ್ತ ಮಾಧ್ಯಮದಲ್ಲಿ ವಿಕ್ಷೇಪಿಸಿದಾಗ ಇವು ಬಣ್ಣವನ್ನೂ ಅಪಾರಕತೆಯನ್ನೂ ನೀಡುತ್ತವೆ. ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಇವು ತಮ್ಮ ಬಣ್ಣವನ್ನು ಉಳಿಸಿಕೊಳ್ಳಬೇಕು. ಆದರೆ ಆಮ್ಲ, ಕ್ಷಾರ, ಇತರ ರಾಸಾಯನಿಕಗಳು, ಸೂರ್ಯ ರಶ್ಮಿ, ಶಾಖ ಹಾಗೂ ಇತರ ಪರಿಸ್ಥಿತಿಗಳ ಪ್ರಭಾವದಲ್ಲಿ ಬಣ್ಣ ಕಳೆದುಕೊಳ್ಳುತ್ತವೆ ಇಲ್ಲವೇ ಮಾಸಿ ಹೋಗುತ್ತವೆ. (ಜೀ) ಪ್ರಾಣಿಗಳ ಅಥವಾ ಸಸ್ಯಗಳ ಊತಕಗಳಿಗೆ ಅಥವಾ ಕೋಶಗಳಿಗೆ ಬಣ್ಣ ಕೊಡುವ ಪದಾರ್ಥಗಳು. ವರ್ಣಕ

ವರ್ಣದ್ವೇಷಿ

(ರ) ಬಣ್ಣ ಸ್ವೀಕರಿಸದ, ಸುಲಭವಾಗಿ ರಂಗು ಹಿಡಿಯದ, ಬಣ್ಣವನ್ನು ವಿರೋಧಿಸುವ

ವರ್ಣಧಾರಿ

(ರ) ಒಂದು ಆರ್ಗ್ಯಾನಿಕ್ ಸಂಯುಕ್ತಕ್ಕೆ ಬಣ್ಣ ಉಂಟಾಗಲು ಕಾರಣವಾದ ಪರಮಾಣು ಗುಂಪು ಉದಾ : ಅಜೊ ಗುಂಪು, ನೈಟ್ರೊ ಗುಂಪು

ವರ್ಣಬಂಧಕಗಳು

(ರ) ಬಣ್ಣದೊಂದಿಗೆ ಜೊತೆಗೂಡಿ ಆವಿಲೇಯ ವಸ್ತು ರೂಪಿಸಿ ನೂಲಿಗೆ (ಆದ್ದರಿಂದ ಮುಂದೆ ಬಟ್ಟೆಗೆ) ಶಾಶ್ವತ ಬಣ್ಣ ಕೊಡಬಲ್ಲ ಸಂಕೀರ್ಣ ರಾಸಾಯನಿಕಗಳು. ಲೋಹೀಯ ಲವಣ ಅಥವಾ ಆಕ್ಸೈಡ್‌ಗಳು. ಉದಾ : ಪಟಿಕ

ವರ್ಣಮಾಪಕ

(ತಂ) ಬಣ್ಣದ ಗಾಢತೆ ಅಥವಾ ಕಡುಪನ್ನು ನಿಖರವಾಗಿ ಅಳೆಯುವ ಸಾಧನ. ದ್ರಾವಣದ ಬಣ್ಣವನ್ನು ಅಳೆದು ರಾಸಾಯನಿಕ ವಿಶ್ಲೇಷಣೆ ಮಾಡಲು ಬಳಕೆ

ವರ್ಣರೇಖನ

(ರ) ರಾಸಾಯನಿಕಗಳ ಮಿಶ್ರಣವನ್ನು ಅಧಿಶೋಷಕ (ಚೋಷಕ)ಪುಡಿ, ಜೆಲ್ ಇಲ್ಲವೇ ಸೋಸು ಕಾಗದದ ಪಟ್ಟಿ ಮೂಲಕ ಹಾಯಿಸಿ ಆ ಮಿಶ್ರಣದ ಘಟಕಗಳು ಬೇರೆ ಪ್ರದೇಶ ಅಥವಾ ಸ್ತರಗಳಲ್ಲಿ ಹೀರಿಕೊಳ್ಳುವಂತೆ ಮಾಡಿ ಅವನ್ನು ಬೇರ್ಪಡಿಸುವ, ಪರಿಶೀಲಿಸಿ ಅವುಗಳ ಗುಣ ನಿರ್ಧರಿಸುವ ವಿಧಾನ. ವರ್ಣ ವಿವರಣೆ

ವರ್ಣಲೇಖ

(ರ) ವರ್ಣರೇಖನ ವಿಧಾನದ ಮೂಲಕ ಪದಾರ್ಥಗಳನ್ನು ಮಿಶ್ರಣದಿಂದ ಬೇರ್ಪಡಿಸುವಾಗ ಬೇರೆ ಬೇರೆ ಪದಾರ್ಥಗಳು ಒಂದು ಚೂಷಕದಲ್ಲಿ ಅಥವಾಸೋಸು ಕಾಗದದ ಮೇಲೆ ಬೇರೆ ಬೇರೆ ಬಣ್ಣದ ವಲಯಗಳಾಗಿ ಹಂಚಿಕೊಂಡಿರುವುದು

ವರ್ಣವಲಯ

(ಪ್ರಾ) ಕಶೇರುಕದ ಕಣ್ಣಿನಲ್ಲಿ ಕನೀನಿಕೆಯ ಅಂಚಿನಲ್ಲಿ ಅಥವಾ ಮೊಲೆತೊಟ್ಟಿನ ಸುತ್ತ ಇರುವ ಬಣ್ಣದ ಭಾಗ

ವರ್ಣವಿಜ್ಞಾನ

(ಭೌ) ಬಣ್ಣಗಳು ಮತ್ತು ಅವುಗಳ ಅಲೆಯುದ್ದಗಳನ್ನು ಕುರಿತ ಅಧ್ಯಯನ

ವರ್ಣವಿನ್ಯಾಸ

(ಸಾ) ಬಣ್ಣಗಳ ಅಳವಡಿಕೆ. ಕೋಣೆಯ ಅಲಂಕಾರದಲ್ಲಿ ಅಥವಾ ಉದ್ಯಾನದ ಗಿಡಗಳನ್ನು ನೆಡುವಲ್ಲಿ ಬಣ್ಣಗಳ ಹಂಚಿಕೆಯ ರೀತಿ

ವರ್ಣವಿಪಥನ

(ಭೌ) ಮಸೂರದ ಮೂಲಕ ಬಿಳಿ ಬೆಳಕು ಹಾಯುವಾಗ ಅದರ ಘಟಕ ವರ್ಣಗಳು ವಿವಿಧ ಮೊತ್ತಗಳಲ್ಲಿ ಬಾಗಿ ಪ್ರತಿಬಿಂಬದ ಅಂಚಿನಲ್ಲಿ ಬಣ್ಣದ ಪಟ್ಟೆಗಳು ಮೂಡುವುದು. ವರ್ಣಾಪಸರಣ. ವರ್ಣಭ್ರಂಶ

ವರ್ಣಾಂಧತೆ

(ಮ) ನೋಡಿ: ಬಣ್ಣಗುರುಡು

ವರ್ಣಾಪಕರ್ಷಕ

(ರ) ಒಂದು ರ‍್ಯಾಡಿಕಲ್. ಇದನ್ನೊಂದು ಪದಾರ್ಥಕ್ಕೆ ಬೆರೆಸಿದಾಗ ದೊರೆಯುವ ಸಂಯುಕ್ತದ ಶೋಷಣ ರೋಹಿತವು ಅದೇ ಪದಾರ್ಥದ ಶೋಷಣ ರೋಹಿತದ ಕೆಂಪು ಕೊನೆಯತ್ತ ಪಲ್ಲಟಗೊಂಡಿರುತ್ತದೆ

ವರ್ತನ ಸಿದ್ಧಾಂತ

(ಮವಿ) ವೀಕ್ಷಣೆಗೆ ಲಭಿಸುವ ವರ್ತನೆ ಮಾತ್ರ ಅಧ್ಯಯನಯೋಗ್ಯ ವಸ್ತು, ಲಭಿಸದ ಮಾನಸ ಕ್ರಿಯೆಗಳು (ಉದಾ: ಪ್ರಜ್ಞಾ, ಪ್ರತಿಮಾವಳಿ) ಅಲ್ಲ ಎಂದು ವಾದಿಸುವ ಮನೋವೈಜ್ಞಾನಿಕ ದೃಷ್ಟಿ

ವರ್ತನೆ

(ಮವಿ) ಜೀವಿಯ ಯಾವುದೇ ಬಹಿರಂಗ ಚಟುವಟಿಕೆ. ನಡತೆ, ಚರ್ಯೆ, ವ್ಯವಹಾರ. ನಡವಳಿಕೆ. ಆಚರಣೆ

ವರ್ತುಲ ಡೈಕ್‌ಗಳು

(ಭೂವಿ) ಉರುಳೆಯಾಕಾರಾದ ಸ್ತರಭಂಗದಿಂದ ಹೊರಹೊಮ್ಮಿದ ಅಗ್ನಿಶಿಲಾ ಅಂತಸ್ಸರಣ ಗಳಿಂದಾದ ಡೈಕ್‌ಗಳು. ಇವುಗಳಿಗೆ ಸರಿಸುಮಾರು ಒಂದೇ ಮಧ್ಯಬಿಂದು ಇರುವುದು. ನಾಡಶಿಲೆಯಿಂದ ಪ್ರತ್ಯೇಕಗೊಂಡು ಇರುತ್ತವೆ. ವಿಶೇಷವಾಗಿ ಟರ್ಷಿಯರಿ ಯುಗದ ಶಿಲೆಗಳಲ್ಲಿ ಇಂಥ ರಚನೆಗಳು ಕಂಡುಬಂದಿವೆ. ಎರಡು ಅಥವಾ ಹೆಚ್ಚು ಡೈಕ್‌ಗಳು ಸೇರಿ ಸಂಕೀರ್ಣ ಏರ್ಪಡುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App