भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವ್ಯಾಸ

(ಗ) ವೃತ್ತಕೇಂದ್ರದ ಮೂಲಕ ಹಾಯುವ ಮತ್ತು ಪರಿಧಿಯಿಂದ ಸೀಮಿತವಾಗುವ ಯಾವುದೇ ರೇಖೆ. ಗೋಳವ್ಯಾಸ ಕುರಿತಂತೆ ಕೂಡ ಇದು ನಿಜ. ವ್ಯಾಸಾರ್ಧಕ್ಕೆ ತ್ರಿಜ್ಯವೆಂದು ಹೆಸರು

ವ್ಯಾಸಲೀನ್

(ರ) ಪೆಟ್ರೋಲಿಯಮ್‌ನ ಆಸವನದಿಂದ ಪಡೆದ ಉತ್ಪನ್ನಗಳ ಪೈಕಿ ಒಂದಾದ ಪೆಟ್ರೊಲ್ಯಾಟಮ್ ಎಂಬುದರ ವ್ಯಾಪಾರನಾಮ

ವ್ಯಾಸೀಯ ಅಭಿಮುಖಿಗಳು

(ಗ) ಗೋಲ ಇಲ್ಲವೇ ಗೋಳ ಸದೃಶ ಕಾಯದಲ್ಲಿ ಯಾವುದೇ ವ್ಯಾಸದ ಕೊನೆ ಬಿಂದುಗಳು. ವ್ಯಾಸೀಯ ವಿರುದ್ಧ ಬಿಂದುಗಳು. ಪ್ರತಿವಿನ್ಯಾಸಿಗಳು. ಅಭಿಪಾದಿಗಳು

ವ್ಯಾಸೆಕ್ಟಮಿ

(ವೈ) “ವೀರ್ಯನಾಳ ಛೇದನ”, ದೂರಸ್ಥ ವೀರ್ಯನಾಳವನ್ನು ಛೇದಿಸುವಿಕೆ. ಸಂತಾನಹರಣಕ್ಕಾಗಿ ರೇತ್ರನಾಳದ ಭಾಗವನ್ನು ಶಸ್ತ್ರಕ್ರಿಯೆಯಿಂದ ಕತ್ತರಿಸಿ ತೆಗೆದುಹಾಕುವುದು. ರೇತ್ರನಾಳ ಛೇದನ

ವ್ಯಾಸೊಟೋನಿಕ್

(ವೈ) ರಕ್ತನಾಳಗಳ ಧಾರಣ ಸಾಮರ್ಥ್ಯವನ್ನು ವರ್ಧಿಸುವ ಕಾರಕ

ವ್ಯಾಸೊಟ್ರೋಪಿಕ್

(ವೈ) ರಕ್ತನಾಳಗಳ ಮೇಲೆ ವರ್ತಿಸುವ ಗುಣವುಳ್ಳ

ವ್ಯಾಸೊಪ್ರೆಷನ್

(ವೈ) ಮೂತ್ರ ಸ್ರಾವ ನಿರುತ್ತೇಜಕ ಹಾರ್ಮೋನ್‌ನ ವ್ಯಾಪಾರ ನಾಮ. ನೋಡಿ: ಮೂತ್ರಸ್ರಾವ ನಿರುತ್ತೇಜಕ ಹಾರ್ಮೋನ್. (ಎಡಿಎಚ್)

ವ್ಯುತ್ಕ್ರಮ

(ಗ) ಸಂಖ್ಯೆಯ aಯ ವ್ಯುತ್ಕ್ರಮ 1/a. ಸಂಖ್ಯೆ ಮತ್ತು ಅದರ ವ್ಯುತ್ಕ್ರಮದ ಗುಣಲಬ್ಧ ೧. ಭಿನ್ನರಾಶಿಯ ವ್ಯುತ್ಕ್ರಮ ಛೇದ ಮತ್ತು ಅಂಶಗಳನ್ನು ಅದಲು ಬದಲು ಮಾಡಿದಾಗ ದೊರೆಯುವ ಭಿನ್ನರಾಶಿ

ವ್ಯೂಹ

(ಸಂಕ) ನಿರ್ದಿಷ್ಟ ವಿಚರ ಕುರಿತಂತೆ ಮೌಲ್ಯಗಳ ಗಣ

ವ್ರಣ

(ವೈ) ಎಪಿಥೀಲಿಯಮ್‌ನ ನಿರಂತರತೆಯಲ್ಲಿ ಸ್ಥಳೀಯ ವಾಗಿ ಭಂಗ ಏರ್ಪಟ್ಟಾಗ ಪ್ರಕಟವಾಗುವ ಊತ. ಹುಣ್ಣು

ವ್ಹೈಟ್ ಲೆಡ್

(ರ) ಬಣ್ಣಗಳ ತಯಾರಿಕೆಯಲ್ಲಿ ಆಧಾರಭೂತವಾದ ಮತ್ತು ವಿವಿಧ ಸಂಯೋಜನೆಗಳಿರುವ ಲೆಡ್ ಕಾರ್ಬೊನೇಟ್. ಸಫೇದು. ಬಿಳಿ ಸೀಸ

Search Dictionaries

Loading Results

Follow Us :   
  Download Bharatavani App
  Bharatavani Windows App