भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವರಣಕ್ಷಮತೆ

(ತಂ) ನಿಸ್ತಂತು ಗ್ರಾಹಕ ಸಲಕರಣೆಗಳಲ್ಲಿ ನಿರ್ದಿಷ್ಟವಾಗಿ ಬೇಕಿರುವ ಸಂಕೇತಗಳನ್ನು ಬೇಡದಿರುವವುಗಳಿಂದ ಬೇರ್ಪಡಿಸಿ ಪಡೆದುಕೊಳ್ಳಲು ಇರುವ ಸಾಮರ್ಥ್ಯ

ವರ್ಗ

(ಗ) ಒಂದು ಸಂಖ್ಯೆಯನ್ನು ಅದರಿಂದಲೇ ಗುಣಿಸಿ ಬಂದ ಲಬ್ಧ. ಉದಾ : ೩ರ ವರ್ಗ ೯

ವರ್ಗ

(ಜೀ) ಜೀವಿಗಳನ್ನು ದ್ವಿನಾಮ ಪದ್ಧತಿಯಲ್ಲಿ ವರ್ಗೀಕರಿಸುವಾಗ ಬಳಸುವ ಪದ. ಉದಾ: ಮಾನವನದು ಸ್ತನಿವರ್ಗ, ಜರಾಯುಯುತ ಉಪವರ್ಗ, ಪ್ರೈಮೇಟ್ ಗಣ, ಆಂತ್ರಪಾಯ್ಡಿಯ ಉಪಗಣ, ಹೋಮಿನಿಡೀ ಕುಟುಂಬ, ಹೋಮೊಜಾತಿ, ಹೊಮೊಸೇಪಿಯನ್ಸ್ ಪ್ರಭೇದ

ವರ್ಗಪೂರ್ಣನ

(ಗ) ದ್ವಿಘಾತೀಯದಲ್ಲಿ ಚರಗಳು ವರ್ಗವೊಂದರ ಪದಗಳಾಗಿ ಮಾತ್ರ ಬರುವಂತೆ ಅದನ್ನು ಅಳವಡಿಸುವುದು. ಉದಾ: ax2+bx+c =  1/4a (4a2x2+4abx + 4ac) = [(2ax + b)2 – b2+4ac]

ವರ್ಗಮೂಲ

(ಗ) ಯಾವುದೇ ಸಂಖ್ಯೆಯ ವರ್ಗಮೂಲವನ್ನು ಅದರಿಂದಲೇ ಗುಣಿಸಿದಾಗ ಆ ಸಂಖ್ಯೆ ದೊರೆಯುತ್ತದೆ. xನ ವರ್ಗಮೂಲ y ಆಗಿದ್ದರೆ ಆಗ y2 = x. ಇದನ್ನೇ ಎಂದು ಬರೆಯುವುದು ವಾಡಿಕೆ

ವರ್ಗಶ್ರೇಣಿ

(ಸಾ) ನೋಡಿ : ಶ್ರೇಣಿ ವ್ಯವಸ್ಥೆ

ವರ್ಗಸಮೀಕರಣ

(ಗ) ಎರಡನೆಯ ಡಿಗ್ರಿಯ ಬೈಜಿಕ ಸಮೀಕರಣ ax2+bx+c = 0. ಇದರ ಪರಿಹಾರಗಳು . ದ್ವಿಘಾತ ಸಮೀಕರಣ

ವರ್ಗೀಕರಣ

(ಜೀ) ರಚನೆ, ಮೂಲ ಇತ್ಯಾದಿ ಗುಣಧರ್ಮಾನುಸಾರ ಜೀವಿಗಳನ್ನು ವಿಂಗಡಿಸುವುದು

ವರ್ಗೀಕರಣ ವಿಜ್ಞಾನ

(ಜೀ) ಜೀವಿ ಸಮುದಾಯದಲ್ಲಿಯ ಸಾದೃಶ್ಯ ವೈದೃಶ್ಯ ಸಮಗ್ರತೆಯನ್ನು ಪ್ರತಿಬಿಂಬಿಸುವಂತೆ ಜೀವಿಗಳನ್ನು ಶ್ರೇಣೀಕೃತ ವ್ಯವಸ್ಥೆಯಾಗಿ ವರ್ಗೀಕರಿಸುವುದು

ವರ್ಟಿಸಿಲ್

(ಸ) ಎಲೆ, ಎಸಳು ಮೊದಲಾದವುಗಳ ಸುತ್ತು. ಆವರ್ತ. (ತಂ) ಕದಿರಿನ ಚಲನೆಯನ್ನು ಸಮತೂಕದಲ್ಲಿ ಇಡಲು ಅದಕ್ಕೆ ಹಾಕಿರುವ ಬಿಲ್ಲೆ. ಕದಿರು ಬಿಲ್ಲೆ

ವರ್ಡಿಗ್ರಿಸ್

(ರ) ತಾಮ್ರವನ್ನು ತೇವಕ್ಕೆ ಒಡ್ಡಿದಾಗ ಅದರ ಮೇಲೆ ಕಟ್ಟುವ ತಾಮ್ರ ಲವಣದ ಹಸುರು ಪದರ. CuCO3.Cu(OH)2. ತಾಮ್ರ ಕಿಲುಬು. ವಿಷಪದಾರ್ಥ

ವರ್ಣ

(ತಂ) ವರ್ಣಕಗಳು ನಿಲಂಬನ ಸ್ಥಿತಿಯಲ್ಲಿರುವ ದ್ರವ. ಇದನ್ನು ವಸ್ತುವಿನ ಮೇಲ್ಮೈಗೆ ಹಚ್ಚಿದಾಗ ದ್ರವ ಆರಿ ಇಲ್ಲವೇ ಗಡಸಾಗಿ ವರ್ಣಕಗಳು ಗಟ್ಟಿ ಪದರವಾಗಿ ರೂಪುಗೊಳ್ಳುತ್ತವೆ. (ಭೌ) ಪ್ರೊಟಾನ್ ಅಥವಾ ನ್ಯೂಟ್ರಾನ್‌ಗಳಲ್ಲಿ ಇರುವಂತೆ ಮೂರು ಕ್ವಾರ್ಕ್‌ಗಳು ಒಟ್ಟಾಗಿರುವ ಅಥವಾ ಪೈಮೆಸಾನ್‌ನಲ್ಲಿರುವಂತೆ ಕ್ವಾರ್ಕ್ ಮತ್ತು ಆಂಟಿಕ್ವಾರ್ಕ್‌ಗಳು ಜೊತೆಯಾಗಿರುವ ವರ್ತನೆಯನ್ನು ವಿವರಿಸಲು ಕ್ವಾರ್ಕ್‌ಗಳಿಗೆ ಆರೋಪಿಸಲಾದ ಒಂದು ಗುಣ. ನಮ್ಮ ಸಾಮಾನ್ಯ ಗ್ರಹಿಕೆಯ ವಸ್ತುಗಳ ವರ್ಣಕ್ಕೂ ಈ ‘ವರ್ಣ’ಕ್ಕೂ ಯಾವುದೇ ಸಂಬಂಧವಿಲ್ಲ. ಕ್ವಾರ್ಕ್‌ಗಳಿಗೆ ಕೆಂಪು, ಹಸಿರು, ನೀಲಿ ವರ್ಣಗಳಿವೆ ಹಾಗೂ ಅವು ಒಟ್ಟಾಗಿರುವ ನ್ಯೂಟ್ರಾನ್ ಅಥವಾ ಪ್ರೋಟಾನ್‌ನಂಥ ಹೇಡ್ರಾನ್‌ಗಳು ವರ್ಣರಹಿತವಾಗಿವೆ ಎಂಬುದು ಪರಿಕಲ್ಪನೆ

ವರ್ಣ ದೃಷ್ಟಿದೋಷ

(ವೈ) ಬಣ್ಣಗಳನ್ನು ಸರಿಯಾಗಿ ಗುರುತಿಸಲಾಗದ ಸ್ಥಿತಿ

ವರ್ಣ ವ್ಯತ್ಯಾಸ

(ತಂ) ದೂರದರ್ಶನದಲ್ಲಿ ಯಾವುದೇ ಬಣ್ಣಕ್ಕೂ ಸಮೋಜ್ಜ್ವಲತೆಯ ಒಂದು ಶಿಷ್ಟ ಬಣ್ಣಕ್ಕೂ ಇರುವ ಗುಣಾತ್ಮಕ ವ್ಯತ್ಯಾಸ

ವರ್ಣಕ

(ಸಾ) ವರ್ಣ ಸಂಬಂಧವಾದ. ಉಜ್ಜ್ವಲ ವರ್ಣದ

ವರ್ಣಕತಾ ನಕ್ಷೆ

(ಭೌ) ವರ್ಣಕತೆಯ ಮೂರು ನಿರ್ದೇಶಕಗಳ ಪೈಕಿ ಒಂದರ ಎದುರು ಇನ್ನೊಂದನ್ನು (xನ ಎದುರು y ಅಥವಾ yಯ ಎದುರು z ಇತ್ಯಾದಿ) ಲಖಿಸಿದಾಗ ದೊರೆಯುವ ಸಮತಲ ಚಿತ್ರ. ಜಂತ್ರಿ

ವರ್ಣಕತಾ ವೃತ್ತ

(ಭೌ) ಗೋಚರ ರೋಹಿತ ದಲ್ಲಿಯ ಬಣ್ಣಗಳ ವ್ಯಾಪ್ತಿಯನ್ನು ವೃತ್ತದೊಳಗೆ ನಿರ್ದಿಷ್ಟ ಖಂಡಗಳಾಗಿ ಕಾಣಿಸುವ ಚಿತ್ರ. ಒತ್ತೊತ್ತಿನ ಖಂಡಗಳಿವು: ಹಳದಿ, ಹಳದಿ- ಹಸಿರು, ಹಸಿರು, ನೀಲಿ-ಹಸಿರು, ನೀಲಿ, ನೀಲಿ-ಊದಾ, ಊದಾ, ಕೆಂಪು-ಊದಾ, ಕೆಂಪು, ಕೆಂಪು-ಕಿತ್ತಳೆ, ಕಿತ್ತಳೆ, ಹಳದಿ-ಕಿತ್ತಳೆ

ವರ್ಣಕತೆ

(ಭೌ) ವರ್ಣಗುಣ. ಯಾವುದೇ ಬಣ್ಣದ ಅಲೆಯುದ್ದ ಮತ್ತು ಪರಿಶುದ್ಧತೆ. ವರ್ಣಶುದ್ಧಿ

ವರ್ಣಗುಣ

(ಭೌ) ಬಣ್ಣ ಯಾವುದೇ ಕೆಂಪು, ಹಸಿರು ಇತ್ಯಾದಿ ಗಳಾಗಿರುವುದಕ್ಕೆ ಕಾರಣವಾದ ಅಲೆಯುದ್ದಗಳಿಂದ ನಿರ್ಧರಿತವಾದ, ಬೆಳಕಿನ ಗುಣ, ಅಂಶ. ವರ್ಣಾಂಶ. ಛಾಯೆ. ರಂಗು

ವರ್ಣಗೋಳ

(ಖ) ಸೂರ್ಯನನ್ನು ಆವರಿಸಿರುವ ಕೆಂಬಣ್ಣದ ಅನಿಲಸ್ತರಗಳ ಸಮೂಹ. ದ್ಯುತಿ ಗೋಳದಲ್ಲಿ ಉತ್ಪಾದನೆಯಾದ ಬೆಳಕು ಈ ಗೋಳವನ್ನು ಹಾದು ಹೊರ ಧಾವಿಸುತ್ತದೆ. ಪೂರ್ಣ ಸೂರ್ಯಗ್ರಹಣದ ವೇಳೆ ವರ್ಣ ಗೋಳ ಕೆಂಗುಲಾಬಿಯ ಉಂಗುರ ಇಲ್ಲವೇ ಕಮಾನಾಗಿ ಥಳಥಳಿಸುತ್ತದೆ. ಇದರ ನೆಲೆ ದ್ಯುತಿಗೋಳ ಮತ್ತು ಮಕುಟದ (ಕರೋನ) ನಡುವೆ. ಉಷ್ಣತೆ ೪,೫೦೦ K

Search Dictionaries

Loading Results

Follow Us :   
  Download Bharatavani App
  Bharatavani Windows App