भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ವಕ್ರೀಭವನಾಂಕ

(ಭೌ) ಯಾವುದೇ ಮಾಧ್ಯಮದ ‘ನಿರಪೇಕ್ಷ ವಕ್ರೀಭವನಾಂಕ’ವು ನಿರ್ದ್ರವ್ಯತೆಯಲ್ಲಿ ವಿದ್ಯುತ್ಕಾಂತ ವಿಕಿರಣದ ವೇಗಕ್ಕೂ ಆ ಮಾಧ್ಯಮದಲ್ಲಿ ವಿಕಿರಣದ ವೇಗಕ್ಕೂ ನಡುವಿನ ನಿಷ್ಪತ್ತಿ. ಅಲೆಯುದ್ದಕ್ಕೆ ಅನುಗುಣವಾಗಿ ವಕ್ರೀಭವನಾಂಕ ಬದಲುತ್ತ ಹೋಗುವುದರಿಂದ ಅಲೆಯುದ್ದವನ್ನು ನಿರ್ದಿಷ್ಟವಾಗಿ ಸೂಚಿಸುವುದು ಅವಶ್ಯ. ಇದನ್ನು ಸಾಮಾನ್ಯವಾಗಿ ಹಳದಿ ಬೆಳಕಿನದಾಗಿ ನೀಡಲಾಗುತ್ತದೆ. (ಸೋಡಿಯಮ್ D-ಸಾಲುಗಳು ; ಅಲೆಯುದ್ದ ೫೮೯.೩ ನಾಮೀ). ಯಾವುದೇ ಮಾಧ್ಯಮದ ‘ಸಾಪೇಕ್ಷ ವಕ್ರೀಭವನಾಂಕ’ವು ಒಂದು ಮಾಧ್ಯಮದಲ್ಲಿ ಬೆಳಕಿನ ವೇಗಕ್ಕೂ ಅದರ ಬದಿಯ ಮಾಧ್ಯಮದಲ್ಲಿ ಬೆಳಕಿನ ವೇಗಕ್ಕೂ ನಡುವಿನ ನಿಷ್ಪತ್ತಿ. ಪ್ರತೀಕ n ನೋಡಿ : ವಕ್ರೀಭವನ, ಸ್ನೆಲ್ ನಿಯಮ

ವಕ್ಷ ಆಂತರಿಕ ಧಮನಿ

(ವೈ) ಎದೆಗೂಡಿನ ಭಿತ್ತಿಯಲ್ಲಿರುವ ಧಮನಿ. ಇದನ್ನು ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ.

ವಕ್ಷನಾಳ

(ವೈ) ದುಗ್ಧರಸ ವ್ಯವಸ್ಥೆಯ ಪ್ರಧಾನ ಸಂಗ್ರಾಹಕ ನಾಳ. ಬೆನ್ನುಮೂಳೆಯ ಮುಂದುಗಡೆ ಸಮಾಂತರ ವಾಗಿ ಚಾಚಿಕೊಂಡಿದ್ದು ದುಗ್ಧರಸವನ್ನು ಮಹಾಸಿರೆಗೆ ಬಸಿಯುತ್ತದೆ

ವಜ್ರ

(ಭೂವಿ) ಕಾರ್ಬನ್‌ನ ಬಹುರೂಪಗಳಲ್ಲೊಂದು. ಅಷ್ಟಫಲಕ ಅಥವಾ ಸದೃಶ ಆಕೃತಿಗಳಲ್ಲಿ ಸ್ಫಟಿಕೀಕರಿಸುತ್ತದೆ. ವರ್ಣರಹಿತ ಇಲ್ಲವೇ ವರ್ಣಛಾಯೆ ಇರುವ ಪ್ರಶಸ್ತ ಖನಿಜ. ಅತ್ಯಂತ ಪೆಡಸು. ಮೋಹ್ ಕಾಠಿಣ್ಯಾಂಕದಲ್ಲಿ ಇದರ ಸೂಚಿ ೧೦. ಬೈರಿಗೆ ಸಾಣೆ ಸಾಧನಗಳಲ್ಲಿ ಘರ್ಷಕವಾಗಿ ಬಳಕೆ. ಇದರ ಮೂಲ ಕಿಂಬರ್‌ಲೈಟ್ ಶಿಲೆ. ಎಕ್ಸ್-ಕಿರಣಗಳಿಗೆ ಪಾರಕ (ಕೃತಕ ವಜ್ರ ಅಪಾರಕ). ಆಭರಣಗಳಲ್ಲಿ ಬಳಕೆ. ನೋಡಿ : ಗ್ರ್ಯಾಫೈಟ್

ವಜ್ರಫಲಕ

(ಗ) ತ್ರಿಕೋನೀಯ ವ್ಯವಸ್ಥೆಗೆ ಸೇರಿದ ಸ್ಫಟಿಕ ರೂಪ; ಒಂದೊಂದೂ ವಜ್ರಾಕೃತಿ ಅಥವಾ ಸಮಾಂತರ ಚತುರ್ಭುಜದ ೬ ಸದೃಶ ಮುಖಗಳಿಂದ ಆವೃತವಾಗಿರುತ್ತದೆ. ರೋಂಬೊಹೆಡ್ರಾನ್. ಉದಾ : ಕ್ಯಾಲ್ಸೈಟ್

ವಜ್ರಾಕೃತಿ

(ಗ) ಹೆಚ್ಚು ಕಡಿಮೆ ವಜ್ರದ ರೂಪದಲ್ಲಿರುವ ಈ ಸಮಾಂತರ ಚತುರ್ಭುಜದಲ್ಲಿ ಎಲ್ಲ ಭುಜಗಳೂ ಸಮ. ಕೋನಗಳು ಲಂಬಕೋನಗಳಲ್ಲ. ಕರ್ಣಗಳು ಪರಸ್ಪರ ಲಂಬವಾಗಿವೆ. ನೋಡಿ : ಚತುರ್ಭುಜ

ವನಸ್ಪತಿ ಸಂಗ್ರಹಾಲಯ

(ಸ) ನೋಡಿ : ಹರ್ಬೇರಿಯಮ್

ವನಿಲ ಕಜ್ಜಿ

(ವೈ) ವನಿಲ ಸಸ್ಯದೊಂದಿಗೆ ಕೆಲಸ ಮಾಡುವ ವರಲ್ಲಿ ಸಾಮಾನ್ಯವಾಗಿ ಕಂಡುಬರುವ, ಗುಳ್ಳೆಗಳೆದ್ದು ಕಡಿಯುವ ಒಂದು ಬಗೆಯ ಚರ್ಮ ವ್ಯಾಧಿ

ವನ್ಯ ಮೃಗಗಳು

(ಪ್ರಾ) ಅರಣ್ಯವಾಸಿ ಪ್ರಾಣಿಗಳ ಸಮುಚ್ಚಯ. ಹುಲಿ, ಸಿಂಹ, ಕಾಡೆಮ್ಮೆ, ಹೆಬ್ಬಾವು, ಗಿಡುಗ ಮೊದಲಾದ ಕಾಡು ಪ್ರಾಣಿಗಳು. ನೋಡಿ: ಪಳಗಿಸಿದ ಪ್ರಾಣಿಗಳು, ಸಾಕು ಪ್ರಾಣಿಗಳು

ವನ್ಯ ಸಸ್ಯಗಳು

(ಸ) ಕೃಷಿ ಮಾಡದ ಸಸ್ಯಸಮೂಹ. ಮಾನವನ ಸಹಾಯ ಅಥವಾ ಪೋಷಣೆ ಇಲ್ಲದೆ ಬೆಳೆದ, ನೈಸರ್ಗಿಕ ಪರಿಸ್ಥಿತಿಗಳಲ್ಲಿ ಬಾಳಿ ಬೆಳೆಯುತ್ತಿರುವ ಸಸ್ಯಗಳು

ವಪನ

(ಭೌ) ನೋಡಿ : ಅಪರೂಪಣ

ವಪೆ

(ವೈ) ಸ್ತನಿಗಳಲ್ಲಿ ಎದೆಭಾಗಕ್ಕೂ ಹೊಟ್ಟೆಭಾಗಕ್ಕೂ ಮಧ್ಯೆ ಇರುವ ವಿಭಾಜಕಾಂಗ. ಇದು ಮೆದು ಮೂಳೆ ಹಾಗೂ ಸ್ನಾಯುಗಳಿಂದ ಕೂಡಿರುತ್ತದೆ

ವಮನ

(ವೈ) ವಾಂತಿಯಾಗುವುದು. ತಿಂದ ಆಹಾರ ಹೊಟ್ಟೆಯಿಂದ ಬಾಯಿಯ ಮೂಲಕ ಹೊರಕ್ಕೆ ಬರುವುದು

ವಯಸ್ಕ

(ಪ್ರಾ) ಪೂರ್ತಿ ಅಭಿವರ್ಧನೆಯಾದ ಪ್ರಾಣಿ. ಪ್ರೌಢ. ಪ್ರಬುದ್ಧ

ವಯಸ್ಸು

(ಸಾ) ಜೀವಿ, ಕಟ್ಟಡ, ಸಾಹಿತ್ಯಕೃತಿ ಇತ್ಯಾದಿ ಕುರಿತಂತೆ ಸಂದ ಕಾಲದ ಅಳತೆ. ಪ್ರಾಯ

ವಯೋಗತಿ

(ಭೌ) ವಸ್ತುವಿನ ಗುಣಗಳು ಕಾಲದೊಂದಿಗೆ ಕ್ಷೀಣಿಸುವುದು. ಕಬ್ಬಿಣದ ಕಾಂತಗುಣಗಳು ಕ್ಷೀಣಿಸುವುದು. (ವೈ) ವೃದ್ಧಾಪ್ಯ ಮತ್ತು ಮುಪ್ಪು ಅಡರುವುದು

ವಯೋವಿತರಣೆ

(ಸಂ) ಮನುಷ್ಯ ಅಥವಾ ಪ್ರಾಣಿ ಅಥವಾ ಸಸ್ಯ ಸಮಷ್ಟಿಯಲ್ಲಿ ವಿಭಿನ್ನ ವಯಸ್ಸುಗಳಲ್ಲಿರುವ ಬಿಡಿ ವ್ಯಕ್ತಿ ಅಥವಾ ಪ್ರಾಣಿ ಅಥವಾ ಸಸ್ಯಗಳ ಸಾಪೇಕ್ಷಾವೃತ್ತಿ

ವಯೋಸಿದ್ಧಾಂತ

(ಭೌ) ಬೈಜಿಕ ಕ್ರಿಯಾಕಾರಿಯಲ್ಲಿ ಪುಟಿತ ಡಿಕ್ಕಿಗಳ ಕಾರಣವಾಗಿ ನ್ಯೂಟ್ರಾನ್‌ಗಳ ಗತಿ ನಿಧಾನ ವಾಗುತ್ತದೆಂದು ವಯೋಸಿದ್ಧಾಂತ ತಿಳಿಸಿದಲ್ಲಿ ನ್ಯೂಟ್ರಾನ್‌ಗಳ ದೈಶಿಕ ಅಥವಾ ದೇಶೀಯ ವಿತರಣೆಯು ಅವುಗಳ ಶಕ್ತಿಯೊಂದಿಗೆ ಸಂಬಂಧಿತವಾಗಿರುತ್ತದೆಂದು ‘ವಯೋ ಸಮೀಕರಣ’ ತಿಳಿಸುತ್ತದೆ

ವರಣ

(ಪ್ರಾ) ಪ್ರಾಣಿ ಅಥವಾ ಸಸ್ಯವರ್ಗಗಳಲ್ಲಿ ಆನುವಂಶೀಯ ಮತ್ತು ಪರಿಸರದ ಪ್ರಭಾವಗಳ ಪರಿಣಾಮವಾಗಿ ಅಳಿದುಹೋಗದೆ ಉಳಿದುಕೊಳ್ಳಲು ಅಥವಾ ಸಂತಾನ ಬೆಳೆಸಲು ಹೆಚ್ಚು ಯೋಗ್ಯವಾದಂಥ ಮಾದರಿಗಳು ನಾನಾ ವಿಧಗಳಲ್ಲಿ ವಿಂಗಡಣೆಗೊಳ್ಳುವುದು. ಆಯ್ಕೆ

ವರಣ ಪ್ರಜನನ

(ಪ್ರಾ) ಅಪೇಕ್ಷಿತ ಗುಣಗಳಿರುವ ತಳಿಗಳನ್ನು ಬೆಳೆಸಿ ಅಭಿವರ್ಧಿಸುವುದು

Search Dictionaries

Loading Results

Follow Us :   
  Download Bharatavani App
  Bharatavani Windows App