Navakarnataka Vijnana Tantrajnana Padasampada (2011)
Navakarnataka Publications Private Limited
ಲಕ್ಷಣ
(ಜೀ) ಪೀಳಿಗೆಯಿಂದ ಪೀಳಿಗೆಗೆ ಆನುವಂಶಿಕವಾಗಿ ಹರಿಯುವ ಮತ್ತು ಸ್ಪಷ್ಟವಾಗಿ ಗುರುತಿಸಲಾಗುವ ಗುಣ ವಿಶೇಷ
ಲಕ್ಷಣ
(ವೈ) ವ್ಯಾಧಿಯ/ಅನಾರೋಗ್ಯದ ಕಾರಣವಾಗಿ ರೋಗಿಯ ಅನುಭವಕ್ಕೆ ಬರುವ ವೇದನೆ, ದೌರ್ಬಲ್ಯ, ತಲೆಸುತ್ತುವಿಕೆ ಇತ್ಯಾದಿ. ರೋಗಲಕ್ಷಣ
ಲಕ್ಷಣಾಧಾರಿತ ಚಿಕಿತ್ಸೆ
(ವೈ) ರೋಗ ಚಿಹ್ನೆಗಳ ವಿಶ್ಲೇಷಣೆಯಿಂದ ರೋಗವನ್ನು ಪತ್ತೆ ಹಚ್ಚಿ ಅದಕ್ಕೆ ಯುಕ್ತ ಚಿಕಿತ್ಸೆ ನೀಡುವ ಕ್ರಮ
ಲಕ್ಷಣಾವಳಿ
(ವೈ) ರೋಗ ವೈಶಿಷ್ಟ್ಯವನ್ನು ಪ್ರಕಟಿಸುವ ಆದರೆ ಸ್ವತಃ ರೋಗವಲ್ಲದ ಹಲವಾರು ಚಿಹ್ನೆಗಳ ಅಥವಾ ಸೂಚನೆಗಳ ಸಮಷ್ಟಿ
ಲಕ್ಷ್ಯ
(ತಂ) ಪರಮಾಣವಿಕ ಕಿರಣಗಳು ಅಥವಾ ಕಣಗಳು (ಆಲ್ಫ ಕಣಗಳು, ಪ್ರೋಟಾನ್ಗಳು, ಎಲೆಕ್ಟ್ರಾನ್ಗಳು ಇತ್ಯಾದಿ) ಸಂತತವಾಗಿ ಬಂದು ಬಡಿಯುವ ಯಾವುದೇ ಎಲೆಕ್ಟ್ರೋಡ್ ಅಥವಾ ತಲ. ಉದಾ : ಕ್ಯಾಥೋಡ್ ಕಿರಣ ನಾಳದಲ್ಲಿ ಅಥವಾ ಎಕ್ಸ್- ಕಿರಣನಾಳದಲ್ಲಿ ಈ ಲಕ್ಷ್ಯ (ಟಾರ್ಗೆಟ್)ಲೋಹದ ಒಂದು ಫಲಕ
ಲಕ್ಸ್
(ಭೌ) ಎಸ್ಐ (ಸಿಸ್ಟಮ್ ಇಂಟರ್ನ್ಯಾಷನಲ್) ಪದ್ಧತಿಯಲ್ಲಿ ದೀಪನ/ಪ್ರದೀಪ್ತಿಯ ಏಕಮಾನ. ಚದರ ಮೀಟರಿಗೆ ೧ ಲೂಮೆನ್. ಸಂಕ್ಷಿಪ್ತ lx
ಲಂಗರು
(ತಂ) ಹಡಗು ಅಥವಾ ದೋಣಿ ನೀರಿನಲ್ಲಿ ತೇಲುತ್ತಿರುವಾಗಲೇ ಒಂದೆಡೆ ನಿಂತಿರುವಂತೆ ಮಾಡಲು ಅದರಿಂದ ನೆಲ ಕಚ್ಚುವವರೆಗೂ ಇಳಿಬಿಟ್ಟ ಭಾರದ ಸಲಕರಣೆ. ಬೀಳ್ಗುಂಡು
ಲಗೂನ್
(ಭೂವಿ) ತಗ್ಗಾದ ಮರಳುದಂಡೆ, ಹವಳದ ದಿಬ್ಬ ಮೊದಲಾದವುಗಳ ಮೂಲಕ ಸಮುದ್ರದಿಂದ ಬೇರ್ಪಡಿಸಿದ ಉಪ್ಪು ನೀರಿನ ಹರವು; ಸಮದ್ರದಲ್ಲಿ ಹವಳದ ದಿಬ್ಬ ಸುತ್ತುವರಿದಿರುವ ಜಲಭಾಗ. ಆವೃತ ಜಲಭಾಗ
ಲಘು ಗಣಕ
(ಗ) ನೋಡಿ: ಲಾಗರಿತಮ್
ಲಘುಕೋನ
(ಗ) ೯೦0ಗಿಂತ ಕಡಿಮೆ ಇರುವ ಕೋನ
ಲಘುಕೋನ ತ್ರಿಭುಜ
(ಗ) ಇದರ ಪ್ರತಿಯೊಂದು ಆಂತರಿಕ ಕೋನವೂ ೯೦ ಡಿಗ್ರಿಗಿಂತ ಕಡಿಮೆ
ಲಘುತಮ ಸಾಮಾನ್ಯ ಅಪವರ್ತ್ಯ
(ಗ) ದತ್ತ ಸಂಖ್ಯೆಗಳೆಲ್ಲವುಗಳಿಂದಲೂ ಭಾಗಿಸಲ್ಪಡುವ ಕನಿಷ್ಠ ಸಂಖ್ಯೆ. ಉದಾ: ೩,೪,೫ರ ಲ.ಸಾ.ಅ. ೬೦
ಲಂಟಾನ
(ಸ) ವರ್ಬಿನೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹಸುರಿನ ಪೊದೆ ಸಸ್ಯ. ಮಧ್ಯ ಅಮೆರಿಕದ ಮೂಲವಾಸಿ. ಭಾರತದಲ್ಲಿ ಕಾಡು ಗಿಡವಾಗಿ ವ್ಯಾಪಕವಾಗಿ ಬೆಳೆಯುತ್ತದೆ. ಹಳದಿ ಅಥವಾ ಕಿತ್ತಳೆ ಬಣ್ಣದ ಹೂ ಬಿಡುತ್ತದೆ
ಲತಾತಂತು
(ಸ) ಬಳ್ಳಿಯಿಂದ ಚಾಚುವ ಕುಡಿ/ಎಳೆ. ಆಶ್ರಯಕ್ಕೆ ಹತ್ತಿ ಸುತ್ತಿಕೊಳ್ಳುವ, ಎಲೆರಹಿತ, ಬಳ್ಳಿಯ ದಾರ-ಅಂಗ
ಲನ್ಯೂಗೋ
(ಪ್ರಾ) ಸ್ತನಿಗಳ ಭ್ರೂಣದಲ್ಲಿ ಇರುವ ಸೂಕ್ಷ್ಮವೂ ತೆಳುವೂ ಆದ ಕೂದಲು. ಗರ್ಭಾವಸ್ಥೆಯಲ್ಲಿ ಮೂರನೆಯ ತಿಂಗಳ ಕೊನೆಯಲ್ಲಿ ಹುಟ್ಟಿದ್ದು ಜನನಾನಂತರವೂ ಇರುತ್ತದೆ. ಭ್ರೂಣಕೇಶ
ಲಂಬ
(ಗ) ಯಾವುದೇ ರೇಖೆಯೊಂದಿಗೆ ಅಥವಾ ಸಮತಲದೊಂದಿಗೆ ೯೦0 ಕೋನ ಉಂಟುಮಾಡುವ ಸರಳರೇಖೆ
ಲಂಬ ರೇಖಾಕೃತಿ
(ಸಂ) ದತ್ತಾಂಶವನ್ನು ಮೌಲ್ಯ ಗಳಿಗೆ ಅನುಪಾತೀಯ ಎತ್ತರ (ಉದ್ದ)ವುಳ್ಳ ರೇಖಾಕೃತಿಗಳನ್ನು ಬಳಸಿ ಚಿತ್ರೀಯವಾಗಿ ನಿರೂಪಿಸುವ ನಕ್ಷೆ. ಸಂದರ್ಭಕ್ಕನುಗುಣವಾಗಿ ವಿಭಜಿತ ರೇಖಾಕೃತಿ ನಕ್ಷೆ, ಶೇಕಡಾವಾರು ರೇಖಾಕೃತಿ ನಕ್ಷೆ, ಸಂಯುಕ್ತ ರೇಖಾಕೃತಿ ನಕ್ಷೆ ಇತ್ಯಾದಿ ವೈವಿಧ್ಯಗಳಿವೆ
ಲಂಬ, ಅಭಿಲಂಬ
(ಗ) ಯಾವುದೇ ರೇಖೆ ಅಥವಾ ತಲದೊಂದಿಗೆ ಇದು ೯೦0 ಕೋನ ರಚಿಸುತ್ತದೆ. ಅಭಿಲಂಬ: ವಕ್ರರೇಖೆಯ ಮೇಲಿನ pಬಿಂದುವಿನಲ್ಲಿ ಸ್ಪರ್ಶಕಕ್ಕೆ ಎಳೆದ ಲಂಬವನ್ನು ಆ ಬಿಂದುವಿನಲ್ಲಿಯ ಅಭಿಲಂಬವೆಂದು ಹೇಳುತ್ತೇವೆ
ಲಂಬಕೇಂದ್ರ
(ಗ) ತ್ರಿಭುಜದ ಮೂರು ಶೃಂಗಗಳಿಂದ ಅವುಗಳ ಎದುರು ಭುಜಗಳಿಗೆ ಎಳೆದ ಲಂಬಗಳು ಸಂಧಿಸುವ ಬಿಂದು
ಲಂಬಕೋನ