Navakarnataka Vijnana Tantrajnana Padasampada (2011)
Navakarnataka Publications Private Limited
ಲುಂಬೇಗೋ
(ವೈ) ಸೊಂಟದ ಭಾಗದಲ್ಲಿ ಅಥವಾ ಬೆನ್ನಿನ ಕೆಳಭಾಗದಲ್ಲಿ ಬರುವ ಸ್ನಾಯುಗಳ ಅಥವಾ ತಂತು ಕಟ್ಟುಗಳ ನೋವು. ಕಟಿವಾಯು. ಸೊಂಟಶೂಲೆ
ಲೂಟೆಯಿನ್
(ರ) ಸಸ್ಯಗಳ ಎಲೆಗಳು, ಹೂಗಳು ಮತ್ತಿತರ ಭಾಗಗಳಲ್ಲೂ ಮೊಟ್ಟೆಯ ಹಳದಿ ಲೋಳೆಯಲ್ಲೂ ದೊರಕುವ, ಕಡು ಹಳದಿ ಬಣ್ಣದ ವರ್ಣದ್ರವ್ಯ. ಕ್ಸ್ಯಾಂಥೊಫಿಲ್ (ಪತ್ರಪೀತ) ಅನ್ನು ರೂಪಿಸುವ ಎರಡು ಸಮಾಂಗಿಗಳಲ್ಲೊಂದು
ಲೂಯಿಸೈಟ್
(ರ) ClCH : CHAsCl2. ಅಸೆಟಲೀನ್ ಮತ್ತು ಆರ್ಸೆನಿಕ್ ಟ್ರೈಕ್ಲೋರೈಡ್ಗಳ ಕ್ರಿಯೆಯಿಂದ ತಯಾರಿಸಿದ ಬೂದು ಬಣ್ಣದ ತೈಲದಂಥ ದಟ್ಟ ದ್ರವ, ಅನಿಲ. b-ಕ್ಲೋರೋವಿನೈಲ್ ಡೈಕ್ಲೋರೋಆರ್ಸೀನ್. ಮೈಗೆ ಸೋಂಕಿದಾಗ ಬೊಬ್ಬೆ ಬರಿಸುತ್ತದೆ. ಪ್ರಥಮ ಜಾಗತಿಕ ಯುದ್ಧದಲ್ಲಿ ವಿಷಾನಿಲವಾಗಿ ಬಳಸಲಾಯಿತು. (ಭೂವಿ) ಟೈಟಾನಿಯಮ್ನ ಒಂದು ಖನಿಜ. ಕುಬಿಂ ೧೯೦0ಸೆ. 5CaO. 2 TiO2. 3Sb2O5
ಲೂಸಿಫರಿನ್
(ಜೀರ) ಮಿಂಚುಹುಳುವಿನಂಥ ಕೆಲವು ದೀಪ್ತಿಜೀವಿಗಳಲ್ಲಿರುವ ವರ್ಣದ್ರವ್ಯ. ಆಕ್ಸಿಜನ್ನೊಂದಿಗೆ ಕೂಡಿದಾಗ ಶಾಖರಹಿತ ಬೆಳಕು ಸೂಸುತ್ತದೆ. ದೀಪ್ತಿದಾಯಕ
ಲೆಗೀನ
(ಪ್ರಾ) ಕಶೇರುಕಗಳಲ್ಲಿ ಒಳಗಿವಿಯ ಸಂಚಿ. ಉನ್ನತ ಕಶೇರುಕಗಳಲ್ಲಿ ಕರ್ಣಶಂಖದ ಕೊನೆಯ ಭಾಗವಾಗಿ ರೂಪುಗೊಂಡಿರುತ್ತದೆ
ಲೆಗ್
(ಕಂ) ಕಂಪ್ಯೂಟರ್ ಗಣನ ಕ್ರಮದಲ್ಲಿ ಒಂದು ಕವಲು ಬಿಂದುವಿನಿಂದ ಮತ್ತೊಂದಕ್ಕೆ ಹೋಗುವಾಗ ಅನುಸರಿಸುವ ಆದೇಶ ಶ್ರೇಣಿ. (ಭೂವಿ) ಭೂಕಂಪನಲೇಖದ ತರಂಗಾವಳಿಯಲ್ಲಿ ಹೆಚ್ಚು ಕಡಿಮೆ ಆವರ್ತನೀಯ ಚಲನೆಯ ಏಕೈಕ ಆವರ್ತ
ಲೆಟ್ಯೂಸ್
(ಸ) ಆಸ್ಟರೇಸೀ ಕುಟುಂಬಕ್ಕೆ ಸೇರಿದ ಒಂದು ವಾರ್ಷಿಕ ಬೆಳೆ. ಲಾಕ್ಟೂಕ ಸೇಟಿವ ವೈಜ್ಞಾನಿಕ ನಾಮ. ಗರಿಮುರಿ ಯಾಗಿರುವ ಒಂದು ಬಗೆಯ ತೊಗಟೆ ಸೊಪ್ಪು. ರುಚಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ
ಲೆಪ್ಟಾನ್
(ಭೌ) ಎಲೆಕ್ಟ್ರಾನ್, ಮiಆನ್, ಟೌ-ಕಣ ಮತ್ತು ನ್ಯೂಟ್ರಿನೋದ ಮೂರು ಬಗೆಗಳನ್ನೊಳಗೊಂಡ ಪ್ರಾಥಮಿಕ ಕಣಗಳ ಯಾವುದೇ ವರ್ಗ. ಪ್ರತಿಯೊಂದು ಲೆಪ್ಟಾನ್ಗೂ ಸಮವಾದ ಒಂದು ಪ್ರತಿಕಣ ಉಂಟು. ಲೆಪ್ಟಾನ್ ಯಾವುದೇ ಇತರ ಕಣಗಳೊಂದಿಗೆ ಪ್ರಬಲ ಅಂತರಕ್ರಿಯೆ ಜರುಗಿಸದು. ಅದಕ್ಕೆ ೧/೨ ಭ್ರಮಣ (ಸ್ಪಿನ್) ಕ್ವಾಂಟಮ್ ಸಂಖ್ಯೆ ಇದೆ. ವಿದ್ಯುತ್ ಕಾಂತೀಯ ಅಂತರಕ್ರಿಯೆಗಳ ಮತ್ತು ದುರ್ಬಲ ಅಂತರಕ್ರಿಯೆಗಳ ಮೂಲಕ ಅಷ್ಟೆ ಕಾರ್ಯ ಜರುಗಿಸುತ್ತದೆ. ನೋಡಿ : ಆಂಟಿಲೆಪ್ಟಾನ್. ಟೌ ಕಣ
ಲೆಪ್ಟೊಡಾಕ್ಟಿಲಸ್
(ಪ್ರಾ) ಉದ್ದವೂ ತೆಳುವೂ ಆದ ಕಾಲ್ಬೆರಳುಗಳುಳ್ಳ (ಪಕ್ಷಿ)
ಲೆಪ್ಟೊಮೀಟರ್
(ತಂ) ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಗಾತ್ರದ ರಂಧ್ರದ ಮೂಲಕ ಬೀಳುವ ಹನಿಗಳ ಸಂಖ್ಯೆಯಿಂದ ತೈಲದ ಸ್ನಿಗ್ಧತೆಯನ್ನು ಅಳೆಯುವ ಉಪಕರಣ
ಲೆಪ್ಟೊಸೆಫಲಸ್
(ಪ್ರಾ) ಕಿರಿದಾದ ತಲೆಬುರುಡೆ ಉಳ್ಳ. ಚಪ್ಪಟೆಯಾದ, ತೆಳುವಾದ, ಪಾರಕವಾದ ಆಂಗ್ವಿಲಿಡೀ ಮೀನಿನ ಮರಿಹುಳು
ಲೆಪ್ಪ
(ತಂ) ತೂತು ಮುಚ್ಚಲು, ಏಣುಗಳಲ್ಲಿ ಗಾಳಿ ಹೋಗದಂತೆ ಭದ್ರಪಡಿಸಲು,ಮೂಸೆಯ ಮೇಲೆ ಬಳಿಯಲು ಉಪಯೋಗಿಸುವ ಒಂದು ಬಗೆಯ ಜೇಡಿಮಣ್ಣು ಅಥವಾ ಸಿಮೆಂಟ್. ಜೇಡಿ
ಲೆಮ್ಮ
(ಸ) ಹುಲ್ಲು ಹೂವಿನ ಹೊದಿಕೆಯ ತಳದಲ್ಲಿರುವ ಪುಷ್ಪಪಾತ್ರದ ಎರಡು ಎಲೆಗಳಲ್ಲೊಂದು. ಪುಷ್ಪಪಾತ್ರಪುಚ್ಛ. ಉಪಪತ್ರ. (ಗ) ಬೇರೆ ಒಂದು ಪ್ರಮೇಯವನ್ನು ಸಾಧಿಸುವಾಗ ಬಳಸುವ ಪೂರ್ವಸಾಧಿತ ಪ್ರಮೇಯ
ಲೆವೆಲ್
(ತಂ) ಒಂದು ದೂರದರ್ಶಕ ಹಾಗೂ (ನಡುವಿನಲ್ಲಿ ಗಾಳಿಗುಳ್ಳೆ ಇರುವ) ನಳಿಕೆ ಇರುವ ಸಾಮಾನ್ಯ ಮೋಜಣಿ ಉಪಕರಣ. ನೆಲದ, ಭೂಮಿಯ ಎತ್ತರದ ವ್ಯತ್ಯಾಸಗಳನ್ನು, ಏರುಪೇರುಗಳನ್ನು (ಸುಮಾರು ೩೦ ಮೀಟರ್ಗಳವರೆಗೆ) ಕಂಡು ಹಿಡಿಯಲು ಬಳಕೆ. (ವೈ) ಯಾವುದೇ ನಿರ್ದಿಷ್ಟ ಕಾಲದಲ್ಲಿ ಶರೀರದ ರಕ್ತದಲ್ಲಿ ಅಥವಾ ಮತ್ತಾವುದೇ ದ್ರವದಲ್ಲಿ ದತ್ತ ವಸ್ತುವಿನ (ಸಕ್ಕರೆ, ಇತ್ಯಾದಿ) ಪ್ರಮಾಣ. (ಭೌ) ಎಲೆಕ್ಟ್ರಾನ್ ಅಥವಾ ನ್ಯೂಕ್ಲಿಯರ್ ಕಣದ ಸಂಭವನೀಯ ಶಕ್ತಿಮಟ್ಟ
ಲೆಸಿತಿನ್
(ರ) ಪ್ರಾಣಿಗಳಲ್ಲಿ ಮೊಟ್ಟೆ ಲೋಳೆಗಳಲ್ಲಿ ಮತ್ತು ಕೆಲವು ಗಿಡಗಳಲ್ಲಿ ಸಹಜವಾಗಿ ಕಾಣಬರುವ ಮತ್ತು ರಾಸಾಯನಿಕವಾಗಿ ಮೇದಸ್ಸಿಗೆ ಸದೃಶವಾಗಿರುವ ಫಾಸ್ಫೊಲಿಪಿಡ್ ಗುಂಪಿನ ಯಾವುದೇ ಫಾಸ್ಫಾರಿಕ್ ಆಮ್ಲ ಸಂಯುಕ್ತ. CH2OR1.CHOR2.CH2OPO2OHR3 – ಇದರಲ್ಲಿ R1 ಹಾಗೂ R2 ಮೇದಾಮ್ಲಗಳು, R3 ಕೊಲೀನ್. ಇದು ಎಮಲ್ಸೀಕಾರಕ, ತೇವಕಾರಕ ಉತ್ಕರ್ಷಣವಿರೋಧಿ ಗುಣವುಳ್ಳದ್ದು
ಲೆಸಿತೊಬ್ಲಾಸ್ಟ್
(ಪ್ರಾ) ಭಾಗಶಃ ವಿಘಟನೆಗೊಳ್ಳು ತ್ತಿರುವ ಅಂಡಗಳಲ್ಲಿ ಒಳಗೆ ಹಳದಿ ಲೋಳೆಯುಳ್ಳ ಬ್ಲಾಸ್ಟೊಮೆರ್ (ತತ್ತಿಯ ಅಭಿವರ್ಧನೆಯ ಮೊದಲ ಘಟ್ಟಗಳಲ್ಲಿ ರೂಪುಗೊಂಡ ಮಹಾಕೋಶಗಳಲ್ಲೊಂದು) ಭ್ರೂಣಪೊರೆಗೆ ವಿರುದ್ಧವಾದುದು
ಲೆಸೀನಿಯ
(ಸ) ಸಸ್ಯದ ಎಲೆ ಅಥವಾ ಹೂವಿನ ಅಂಚಿನಲ್ಲಿರುವ ಅನೇಕ ಕಿರಿದಾದ ನಾಲಗೆಯಂಥ ಭಾಗಗಳ ಪೈಕಿ ಯಾವುದೇ ಒಂದು. (ಪ್ರಾ) ಕೀಟದ ಬಾಯಿಯ ಒಳಗಡೆ ಕಿರಿದಾದ ಹೊರ ಬೆಳೆತ. ಅಥವಾ ಕೆಲವು ಮೀನುಗಳ ತಲೆಯ ಮೇಲಿನ ಹೊರ ಬೆಳೆತ
ಲೇಕ್
(ತಂ) ವರ್ಣೋದ್ಯಮದಲ್ಲಿ ಬಳಕೆಯಲ್ಲಿರುವ ಪದ. ಆಗ್ರ್ಯಾನಿಕ್ ವರ್ಣ ಪದಾರ್ಥವನ್ನು ಇನಾರ್ಗ್ಯಾನಿಕ್ ಸಂಯುಕ್ತ (ಆಕ್ಸೈಡ್, ಹೈಡ್ರಾಕ್ಸೈಡ್ ಅಥವಾ ಲವಣ)ದೊಂದಿಗೆ ಮಿಳನ ಗೊಳಿಸಿದಾಗ ಉಂಟಾಗುವ ವರ್ಣಕ. ೧. ಮೊದಲು ಅರಗಿನಿಂದ ಮಾಡುತ್ತಿದ್ದ, ಈಗ ಹಲವು ಬೆರಕೆ ವಸ್ತುಗಳಿಂದ ಮಾಡುವ, ಕಡುಗೆಂಪಿನ ರಂಗು. ೨. ವಿಲೇಯ ರಂಗು ಮತ್ತು ವರ್ಣಬಂಧಕಗಳ ಸಂಯೋಗದಿಂದ ಮೈದಳೆಯುವ ಅವಿಲೇಯ ವರ್ಣದ್ರವ್ಯ. ಪೈಂಟ್ ಮತ್ತು ಪ್ರಿಂಟಿಂಗ್ ಇಂಕ್ಗಳಲ್ಲಿ ಬಳಕೆ
ಲೇಬಿಯಮ್
(ಜೀ) ೧. ಕ್ರಿಮಿಗಳು, ವಲ್ಕವಂತ ಪ್ರಾಣಿಗಳು ಮೊದಲಾದವುಗಳ ಬಾಯಿಯ ತಳ; ಏಕಕವಾಟದ ಚಿಪ್ಪಿನ ಒಳತುಟಿ; ಉದರಪಾದಿಗಳ ಚಿಪ್ಪಿನ ಬಾಯಿಯಲ್ಲಿ ಕಾಣುವ ಒಳತುಟಿಯಂಥ ಭಾಗ. ೨. ಭಗೋಷ್ಠ. ಯೋನಿ ತುಟಿ
ಲೇಬೆಲ್ಲಮ್