भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರುಬಿಡಿಯಮ್

(ರ) ವಿಕಿರಣಪಟು ರಾಸಾಯನಿಕ ಧಾತು. ಪ್ರತೀಕ Rb. ಪಸಂ ೩೭; ಪತೂ ೮೫.೪೭; ದ್ರಬಿಂ ೩೮.೫೭0 ಸೆ. ಕುಬಿಂ ೬೯೦0ಸೆ. ಸಾಸಾಂ ೧.೫೩೨. ಪ್ರತಿಕ್ರಿಯಾಕಾರಿ ಕ್ಷಾರೀಯ ಲೋಹ; ಸೀಸಿಯಮ್, ಲೀಥಿಯಮ್, ಸೋಡಿಯಮ್ ಮತ್ತು ಪೊಟ್ಯಾಸಿಯಮ್ ಲೋಹವರ್ಗಕ್ಕೆ ಸೇರಿದ ಬೆಳ್ಳಿ ಬಣ್ಣದ ಮೃದುಲೋಹ; ಲವಣಗಳು ಗಾಜು ಹಾಗೂ ಪಿಂಗಾಣಿ ತಯಾರಿಕೆಯಲ್ಲೂ, ಭೂ ಕಾಲನಿರ್ಣಯ ಮಾಡಲೂ ಬಳಕೆ

ರುಬಿಡಿಯಮ್ ಸ್ಟಾನ್ಷಿಯಮ್ ಕಾಲ ನಿರ್ಣಯ

(ಭೂವಿ) ರೇಡಿಯೋ ಸಮಸ್ಥಾನಿ Rb-೮೭ ವಿಕಿರಣ ಕ್ಷಯದಿಂದ (ಅರ್ಧಾಯು ೫ x ೧೦೧೧ ವರ್ಷಗಳು) ಸ್ಥಿರ ಸಮಸ್ಥಾನಿ Sr-೮೭ ಉಂಟಾಗುವುದನ್ನು ಬಳಸಿಕೊಂಡು ೧೦೯ ವರ್ಷ ಗಳಿಗೂ ಹಿಂದಿನ ಪುರಾತನ ಶಿಲೆಗಳ ಕಾಲಗಣನೆ

ರೂಗೊಸ್

(ಜೀ) ಸುಕ್ಕು ಸುಕ್ಕಾದ ಮೇಲ್ಮೈ ಇರುವ. ಮಡಿಕೆ ಬಿದ್ದ. (ಚರ್ಮದ ವಿಷಯದಲ್ಲಿ) ನಿರಿಗಟ್ಟಿದ

ರೂಢಿಸು

(ಸಾ) ನಿರ್ದಿಷ್ಟ ಪರಿಸ್ಥಿತಿಗೆ ಅಥವಾ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ನಿರ್ಬಂಧಿಸು / ಮಾಡು

ರೂಪಘಟಕ

(ಭೌ) ಪರ್ಯಾಯಕ ಪ್ರಮಾಣ ವೊಂದರ (alternating quantity) ಪರಿಣಾಮಕಾರೀ ಮೌಲ್ಯಕ್ಕೂ ಅದರ ಅರ್ಧಾವಧಿಯಲ್ಲಿಯ ಸರಾಸರಿ ಮೌಲ್ಯಕ್ಕೂ ನಡುವಿನ ನಿಷ್ಪತ್ತಿ

ರೂಪಣೆಯ ಉಷ್ಣ

(ರ) ಮಾಮೂಲು ಸ್ಥಿತಿ (ಪ್ರಮಾಣಕ ಸ್ಥಿತಿ)ಗಳಲ್ಲಿರುವ ಘಟಕ ಧಾತುಗಳಿಂದ ಒಂದು ಮೋಲ್ ಸಂಯುಕ್ತ ರೂಪುಗೊಂಡಾಗ ಬಿಡುಗಡೆಯಾಗುವ ಅಥವಾ ಹೀರಿಕೆಯಾಗುವ ಉಷ್ಣದ ಪ್ರಮಾಣ. ಉದಾ: ನೈಟ್ರಿಕ್ ಆಕ್ಸೈಡ್‌ನ ರೂಪಣೆಯ ಉಷ್ಣ = ೨೧.೬ ಕಿ.ಕ್ಯಾ.

ರೂಪರಚನಾ ವಿಜ್ಞಾನ

(ಪ್ರಾ) ಅಂಗರಚನಾ ವೈಶಿಷ್ಟ್ಯಗಳ ಅಭಿವರ್ಧನೆ. ಊತಕಗಳು ರೂಪುಗೊಳ್ಳುವುದು

ರೂಪರಾಚನಿಕವಾಗಿ

(ಪ್ರಾ) ಜೀವಿಯ ಯಾವುದೇ ಅಂಗದ ಬಾಹ್ಯರೂಪ ರಚನೆಗೆ ಸಂಬಂಧಿಸಿದಂತೆ

ರೂಪವಿಜ್ಞಾನ

(ಜೀ) ಜೀವಿಗಳ ಶರೀರದ ಅಂಗಗಳ ಕಾರ್ಯಗಳ ಅಧ್ಯಯನಕ್ಕೆ ಪ್ರತಿಯಾಗಿ ಅವುಗಳ ರಚನೆ ರೂಪಗಳನ್ನು ಅಭ್ಯಸಿಸುವ ಜೀವವಿಜ್ಞಾನ ಶಾಖೆ

ರೂಪವೈವಿಧ್ಯ

(ಜೀ) ನಷ್ಟವಾದ ಒಂದು ಭಾಗದ ಸ್ಥಳದಲ್ಲಿ ಭಿನ್ನರೂಪದ ಹೊಸ ಭಾಗ ಬೆಳೆಯುವುದು. ಅಸಹಜ ರಚನೆಯನ್ನು ಉಂಟುಮಾಡುವುದು

ರೂಪಾಂತರಣ

(ಪ್ರಾ) ಭ್ರೂಣೋತ್ತರ ಹಂತದಲ್ಲಿ ಜೀವಿಯ ದೇಹದ ರಚನೆ, ರೂಪ ಹಾಗೂ ಅಸ್ತಿತ್ವಗಳಲ್ಲಾಗುವ ತೀವ್ರತರವಾದ ಹಾಗೂ ಹೆಚ್ಚು ಕಡಿಮೆ ಹಠಾತ್ತಾದ ಬದಲಾವಣೆ. ಅನೇಕ ಅಕಶೇರುಕಗಳಲ್ಲೂ ಉಭಯಜೀವಿಗಳಲ್ಲೂ ಲಾರ್ವಾ ಹಂತದಿಂದ ಪ್ರೌಢಾವಸ್ಥೆಗೆ ತಲಪುವಾಗ ಆಗುವ ರಾಚನಿಕ ಬದಲಾವಣೆಗಳು (ಉದಾ: ಪೊರೆ ಹುಳುವಿನಿಂದ ಕೀಟ, ಗೊದಮೊಟ್ಟೆ ಮರಿಯಿಂದ ಕಪ್ಪೆ). ಇಂಥ ಬದಲಾವಣೆಗಳಲ್ಲಿ ಲಾರ್ವಾ ಊತಕಗಳು ಗಣನೀಯವಾಗಿ ನಾಶಗೊಳ್ಳುತ್ತವೆ, ಆದರೆ ಹಾರ್ಮೋನ್‌ಗಳು ಇವನ್ನು ನಿಯಂತ್ರಿಸುತ್ತವೆ. (ಸ) ಗಿಡ ಅಥವಾ ಹೂವಿನ ಸಹಜ ರಚನೆಯಲ್ಲಾಗುವ ಬದಲಾವಣೆ. (ವೈ) ರೋಗದ ಪರಿಣಾಮವಾಗಿ ಅಂಗದ ಉನ್ನತ ಹಾಗೂ ಹೆಚ್ಚು ಸಂಕೀರ್ಣ ರೂಪ ಕೆಳರೂಪಕ್ಕೆ ಪರಿವರ್ತನೆಯಾಗುವುದು. (ರ) ಒಂದು ವಸ್ತುವಿನಿಂದ ಅಥವಾ ಇತರ ಹಲವು ವಸ್ತುಗಳಿಂದ ಮತ್ತೊಂದು ವಸ್ತುವನ್ನು ಉಂಟುಮಾಡುವ ರಾಸಾಯನಿಕ ಬದಲಾವಣೆ

ರೂಪಾಂತರಣೆ

(ಭೂವಿ) ಉಷ್ಣ ಹಾಗೂ ಒತ್ತಡಗಳಂಥ ನೈಸರ್ಗಿಕ ಅಂಶಗಳ ಪ್ರಭಾವದಿಂದಾಗಿ ಶಿಲೆಗಳ ಖನಿಜೀಯ ರಚನೆ ಅಥವಾ ಬಂಧದಲ್ಲಾಗುವ ಪರಿವರ್ತನೆ. ಇವುಗಳ ಹಾಗೂ ನೀರಿನ ಸಹಾಯದಿಂದ ಶಿಲೆಗಳು ಅಧಿಕ ದೃಢ, ಸ್ಫಟಿಕೀಯ ರೂಪ ತಳೆಯುತ್ತವೆ

ರೂಪಾಂತರಿತ ಶಿಲೆ

(ಭೂವಿ) ಮೂರು ಪ್ರಧಾನ ಶಿಲಾವರ್ಗಗಳಲ್ಲೊಂದು. ಉಳಿದೆರಡು ಅಗ್ನಿಶಿಲೆ ಹಾಗೂ ಜಲಜಶಿಲೆ. ಉಷ್ಣ, ಒತ್ತಡ ಅಥವಾ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳಿಗೆ ಒಳಗಾಗಿ ಅಗ್ನಿಶಿಲೆ ಮತ್ತು ಜಲಜ ಶಿಲೆಗಳು ರೂಪಾಂತರಿತ ಶಿಲೆಗಳಾಗಿ ಪರಿವರ್ತನೆಯಾಗುತ್ತವೆ. ಉದಾ : ಸುಣ್ಣಶಿಲೆ ರೂಪಾಂತರಗೊಂಡು ಅಮೃತಶಿಲೆ ಉಂಟಾಗುತ್ತದೆ

ರೂಮೆನ್

(ಪ್ರಾ) ಮೆಲುಕು ಹಾಕುವ ಪ್ರಾಣಿಯ ಮೊದಲ ಹೊಟ್ಟೆ ಭಾಗ. ಆಹಾರವನ್ನು ಕೂಡಿಟ್ಟುಕೊಳ್ಳಲು ಸಹಕಾರಿ. ಇದರಲ್ಲಿ ಆಹಾರವು, ಮುಖ್ಯವಾಗಿ ಸೆಲ್ಯುಲೋಸು, ಆಂಶಿಕವಾಗಿ ಬ್ಯಾಕ್ಟೀರಿಯಾಗಳಿಂದ ಜೀರ್ಣವಾಗುತ್ತದೆ. ಕೊರಳಿನ ಮೂಲಕ ಇತರ ಹೊಟ್ಟೆ ಭಾಗಗಳೊಂದಿಗೆ ಸಂಬಂಧ

ರೂಮ್

(ವೈ) ಲೋಳೆಗೂಡಿದ ನಯಚರ್ಮದಿಂದ ಸ್ರವಿಸುವ ದ್ರವರೂಪದ ಸ್ರಾವ. ಕಣ್ಣಿನ ಪಿಸರು, ಸಿಂಬಳ ಇತ್ಯಾದಿ

ರೂಲೆಟ್

(ಗ) ಸ್ಥಾಯೀ ವಕ್ರರೇಖೆಯ ಮೇಲೆ ಚರ ವಕ್ರರೇಖೆ ಯೊಂದು ಜಾರುವ ಚಲನೆ ಇಲ್ಲದೆ ಕೇವಲ ಉರುಳುತ್ತ ಹೋದರೆ, ಈ ಚರ ವಕ್ರರೇಖೆಯ ಮೇಲಿನ ಯಾವುದೇ ಬಿಂದು ರೇಖಿಸುವ ಪಥ

ರೆಕಾರ್ಡ್ ಪ್ಲೇಯರ್

(ತಂ) ಮುದ್ರಿತ ಧ್ವನಿ ಸಂಜ್ಞಾಗಳನ್ನು ಧ್ವನಿಯಾಗಿ (ಶ್ರವಣ ಆವೃತ್ತಿ ಸಂಜ್ಞಾಗಳಾಗಿ) ಪುನಾರೂಪಿಸಿ ಅವನ್ನು ಪ್ರವರ್ಧಕದ (ಆಂಪ್ಲಿಫೈಯರ್) ಮೂಲಕ ಧ್ವನಿವರ್ಧಕಕ್ಕೆ ಸಾಗಿಸುವ ವಿದ್ಯುತ್ ಮೋಟರ್ ಚಾಲಿತ ಸಲಕರಣೆ. ಧ್ವನಿ ಪುನರುತ್ಪಾದಕ ಯಂತ್ರ. ಗ್ರಾಮಫೋನ್

ರೆಕ್ಕೆ

(ಪ್ರಾ) ಹಕ್ಕಿಗಳಲ್ಲಿ ಕೈಗಳು ರೆಕ್ಕೆಗಳಾಗಿ ಮಾರ್ಪಟ್ಟು ಹಾರಾಟಕ್ಕೆ ನೆರವಾಗುತ್ತವೆ. ಈ ರೆಕ್ಕೆಗಳಿಗೆ ಅಸ್ಥಿಪಂಜರದ ರಚನೆ ಇದ್ದು ಮೇಲುಗಡೆ ತುಪ್ಪುಳ, ಗರಿ ಮುಂತಾದವು ಆವರಿಸಿರುವುವು. ಕೀಟ ಮುಂತಾದ ಅಕಶೇರುಕಗಳಲ್ಲಿ ಪೊರೆ ಮಾದರಿ ರೆಕ್ಕೆಗಳು ಇರುತ್ತವೆ. (ಸ) ಸಸ್ಯಗಳಲ್ಲಿ ಬೀಜಪ್ರಸಾರಕ್ಕೆ ನೆರವಾಗುವಂತೆ ಹಣ್ಣು ಅಥವಾ ಬೀಜಗಳಿಗೆ ರೆಕ್ಕೆಗಳಿರುವುದುಂಟು. ಪಕ್ಷ, ಸ್ಕಂಧ

ರೆಕ್ಟಸ್

(ಪ್ರಾ) ಉದ್ದಕ್ಕೂ ಒಂದೇ ಅಗಲ ಅಥವಾ ಗಾಢತೆ ಇರುವ ನಾನಾ ಸ್ನಾಯುಗಳಿಗೆ ಬಳಸುವ ಹೆಸರು

ರೆಕ್ಟ್ರಿಕ್ಸ್

(ಪ್ರಾ) ಹಕ್ಕಿಗಳ ರೆಕ್ಕೆಯಲ್ಲಿರುವ ಗಟ್ಟಿಯಾದ ಪುಕ್ಕಗಳು. ಹಕ್ಕಿಗಳು ಹಾರುತ್ತಿರುವಾಗ ಇವು ಹಕ್ಕಿಗಳಿಗೆ ತಿರುಗಲು ಸಹಾಯವಾಗುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App