Navakarnataka Vijnana Tantrajnana Padasampada (2011)
Navakarnataka Publications Private Limited
ರಿಟ್ರೊವ್ಯಾಕ್ಸೀನ್
(ವೈ) ಸಿಡುಬು ರೋಗದ ವ್ಯಕ್ತಿ ಯಿಂದ ದನಕ್ಕೆ ರೋಗ ಸೋಂಕಿಸಿ ಅದರಿಂದ ಪಡೆದ ಲಸಿಕೆ
ರಿಡಾಕ್ಸ್
(ರ) ರಿಡಕ್ಷನ್-ಆಕ್ಸಿಡೇಷನ್ ಪದಗಳ ಹ್ರಸ್ವರೂಪ. ಆಕ್ಸಿಜನ್ ಜೊತೆಗಿನ ರಾಸಾಯನಿಕ ಕ್ರಿಯೆಯನ್ನು ಉತ್ಕರ್ಷಣೆ ಎಂದು ಮೊದಲು ಭಾವಿಸಲಾಗಿತ್ತು. ಇದರ ವಿಪರ್ಯಯ ಪ್ರಕ್ರಿಯೆ ಯನ್ನು -ಆಕ್ಸಿಜನ್ ನಷ್ಟ- ಅಪಕರ್ಷಣೆ ಎಂದು ಕರೆಯ ಲಾಯಿತು. ಹೈಡ್ರೊಜನ್ ಜೊತೆಗಿನ ಕ್ರಿಯೆಯನ್ನೂ ಕ್ರಮೇಣ ಅಪಕರ್ಷಣೆ ಎಂದು ಭಾವಿಸಲಾಯಿತು. ಅನಂತರ ಉತ್ಕರ್ಷಣೆ ಮತ್ತು ಅಪಕರ್ಷಣೆ ಕುರಿತ ವ್ಯಾಪಕ ಪರಿಕಲ್ಪನೆಯೊಂದನ್ನು ರೂಢಿಗೆ ತರಲಾಯಿತು. ಇದರ ಪ್ರಕಾರ ಉತ್ಕರ್ಷಣೆ ಎಂದರೆ ಎಲೆಕ್ಟ್ರಾನ್ ನಷ್ಟ ಮತ್ತು ಅಪಕರ್ಷಣೆ ಎಂದರೆ ಎಲೆಕ್ಟ್ರಾನ್ ಲಾಭ. ಎಂದೇ ಉಭಯ ಕ್ರಿಯೆಗಳನ್ನೂ ಸೂಚಿಸಬೇಕೆಂದಾಗ ರಿಡಾಕ್ಸ್ (ಅಪೋತ್ಕರ್ಷಣೆ) ಪದದ ಪ್ರಯೋಗ
ರಿಯಾ
(ಭೂವಿ) ನೆಲಕ್ಕೆ ಸಂಬಂಧಿಸಿದಂತೆ ಸಾಗರಮಟ್ಟದಲ್ಲಿ ಏರಿಕೆ ಉಂಟಾಗಿ ಮುಳುಗಡೆಯಾಗಿರುವ ಸಾಧಾರಣ ಕಣಿವೆ
ರಿಯಾಕ್ಟರ್
(ತಂ) ರಾಸಾಯನಿಕ ಕ್ರಿಯೆ ನಡೆಸಲು ಬಳಸುವ ಉಪಕರಣ. ನೋಡಿ: ಬೈಜಿಕ ಕ್ರಿಯಾಕಾರಿ
ರಿಯಾಕ್ಟೆನ್ಸ್
(ಭೌ) ವಿದ್ಯುನ್ಮಂಡಲದಲ್ಲಿ ಪ್ರೇರಕತೆ (ಇಂಪಿಡೆನ್ಸ್) ಉಂಟುಮಾಡುವ ಪ್ರತಿಬಾಧೆ (ಇಂಡಕ್ಟೆನ್ಸ್)ಯ ಒಂದು ಭಾಗ. ಓಮ್ಸ್ನಲ್ಲಿ ಮಾಪನ. ಪ್ರತೀಕ X = 2PPPn L. ಇಲ್ಲಿ n ಆವೃತ್ತಿ, L ಪ್ರೇರಕತೆ
ರಿಯಾಲ್ಗರ್
(ಭೂವಿ) ಏಕನತ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುವ ಆರ್ಸೆನಿಕ್ನ ಮೆತು ಖನಿಜ. ಸಂಯೋಜನೆ ಆರ್ಸೆನಿಕ್ ಮಾನೋಸಲ್ಫೈಟ್. AsS. ಕಾಠಿಣ್ಯಾಂಕ ೧.೫-೨. ಸಾಸಾಂ ೩.೫೬. ಅರುಣಗೆಂಪು ಅಥವಾ ಕಿತ್ತಳೆ ಬಣ್ಣ. ಆರ್ಪಿಮೆಂಟ್ ನೊಂದಿಗೆ ದೊರೆಯುತ್ತದೆ. ವರ್ಣದ್ರವ್ಯವಾಗಿ ಉಪಯೋಗ
ರಿಯೊಲೈಟ್
(ಭೂವಿ) ಜ್ವಾಲಾಮುಖಿಜ ಆಮ್ಲೀಯ ಶಿಲೆ. ಸಂಯೋಜನೆಯಲ್ಲಿ ಗ್ರಾನೈಟನ್ನು ಹೋಲುತ್ತದೆ. ಇದರಲ್ಲಿ ಪ್ರಧಾನವಾಗಿ ಕ್ವಾರ್ಟ್ಸ್ ಮತ್ತು ಫೆಲ್ಡ್ಸ್ಪಾರ್ ಖನಿಜಗಳಿರುವುವು
ರಿಲಕ್ಟೆನ್ಸ್
(ಭೌ) ಕಾಂತಮಂಡಲದಲ್ಲಿ, ಕಾರ್ಯಾಚರಣೆ ಯಲ್ಲಿರುವ ಕಾಂತೀಯ ಚಾಲಕ ಬಲಕ್ಕೂ ಅದು ಉತ್ಪಾದಿಸುವ ಕಾಂತ ಅಭಿವಾಹಕ್ಕೂ ನಡುವಿನ ನಿಷ್ಪತ್ತಿ. ಪ್ರತೀಕ R. ಪ್ರತಿಷ್ಟಂಭ
ರಿಲೇ
(ತಂ) ಒಂದು ಮಂಡಲದ ವಿದ್ಯುತ್ ಪ್ರವಾಹ ದಲ್ಲಿಯ ವ್ಯತ್ಯಯ ಇನ್ನೊಂದು ಮಂಡಲದ ಪ್ರವಾಹವನ್ನು ನಿಯಂತ್ರಿಸುವಂತೆ ವ್ಯವಸ್ಥೆಗೊಳಿಸಿದ ವಿದ್ಯುತ್ ಅಥವಾ ಎಲೆಕ್ಟ್ರಾನಿಕ್ ಸಾಧನ. ಟಪ್ಪೆ, ಮರುಪ್ರಸಾರ
ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್
(ಜೀ) ರೆಟ್ರೊವೈರಸ್ನಿಂದ ಬೇರ್ಪಡಿಸಿದ ಕಿಣ್ವ. ಇದು ಆರ್ಎನ್ಎಯನ್ನು ಜನಕತಂತುವಾಗಿ ಬಳಸಿಕೊಂಡು ಡಿಎನ್ಎಯನ್ನು ಸಂಶ್ಲೇಷಿ ಸುತ್ತದೆ. ಈ ಕಿಣ್ವವನ್ನು ಎಂ(ಮೆಸೆಂಜರ್)ಆರ್ಎನ್ಎಯಿಂದ ಸಿ(ಕಾಂಪ್ಲಿಮೆಂಟರಿ) ಡಿಎನ್ಎ ತಯಾರಿಸಲು ಬಳಸಲಾಗುತ್ತದೆ
ರಿವಿಟ್
(ತಂ) ಲೋಹಫಲಕ ಮೊದಲಾದವನ್ನು ಬಂಧಿಸು ವುದಕ್ಕಾಗಿ ಉಪಯೋಗಿಸುವ ಒಂದು ಮೊಳೆ
ರಿಸಿನ್ಒಲಿಯಿಕ್ ಆಮ್ಲ
(ರ) C7H32(OH)COOH. ಹಳದಿ ತೈಲೀಯ ದ್ರವ. ಕುಬಿಂ ೨೨೭0 ಸೆ. ಹರಳೆಣ್ಣೆಯಲ್ಲಿ ಲಭ್ಯ. ಸಾಬೂನು ತಯಾರಿಕೆಯಲ್ಲಿ ಬಳಕೆ
ರೀಫ್
(ಭೂವಿ) ನೀರಿನ ಮಟ್ಟಕ್ಕೆ ಸರಿಯಾಗಿ ಅಥವಾ ಸ್ವಲ್ಪ ಮೇಲೆ ಅಥವಾ ಸ್ವಲ್ಪ ಕೆಳಗೆ ಇರುವ ಬಂಡೆಸಾಲು; ಸಣ್ಣ ಸಣ್ಣ ಉರುಟುಕಲ್ಲುಗಳ ದಿಬ್ಬ ಅಥವಾ ಮರಳುದಿಬ್ಬ. ಶೈಲಭಿತ್ತಿ. ಅದಿರಿನ ಅಂಶವುಳ್ಳ ಶಿಲೆ. ಉದಾ: ಚಿನ್ನವಿರುವ ಬೆಣಚುಕಲ್ಲು
ರೀಮ್
(ತಂ) ಕಾಗದದ ೫೦೦ ಹಾಳೆಗಳ ಒಂದು ಕಟ್ಟು
ರುಚಿ
(ಪ್ರಾ) ರಾಸಾಯನಿಕ ಸಂವೇದನೆ. ಬಾಯಿಯಲ್ಲಿರುವ ಸ್ಪರ್ಶ ಹಾಗೂ ಮೂಗಿನಲ್ಲಿರುವ ಘ್ರಾಣ ಗ್ರಾಹಕಗಳು ವ್ಯಕ್ತಿಯಲ್ಲಿ ಆಹಾರದ ಬಗ್ಗೆ ಉಂಟುಮಾಡುವ ಮನೋದೈಹಿಕ ಪ್ರತಿಕ್ರಿಯೆ
ರುಚಿಮೊಗ್ಗು
(ಪ್ರಾ) ಹೆಚ್ಚಿನ ಕಶೇರುಕಗಳ ನಾಲಗೆಗಳಲ್ಲಿ ರುಚಿಯ ಪತ್ತೆಗೆಂದೇ ಮೀಸಲಾಗಿರುವ ಚಷಕಾಕಾರದ ಪುಟ್ಟ ಮತ್ತು ಉದ್ದ ಕೋಶಗಳ ಗುಚ್ಛ. ನೆಲಜಂತುಗಳಲ್ಲಿ ರುಚಿ ಮೊಗ್ಗುಗಳು ನಾಲಗೆಯ ಮೇಲುತಲದಲ್ಲಿ ಕೇಂದ್ರೀಕೃತವಾಗಿರುತ್ತವೆ. ಇವು ರುಚಿಯ ನಿರ್ದಿಷ್ಟ ಮಾದರಿಯ ಬಗೆಗೆ ಮಾಹಿತಿಯನ್ನು ನರತಂತುಗಳ ಮೂಲಕ ಮಿದುಳಿಗೆ ರವಾನಿಸುತ್ತವೆ. ರುಚಿಯ ನಾಲ್ಕು ಬಗೆಗಳಿಗೆ ಇವು ಸಂವೇದನಾಶೀಲ: ಸಿಹಿ, ಉಪ್ಪು, ಕಹಿ ಹಾಗೂ ಹುಳಿ. ಮೀನುಗಳಲ್ಲಿ ರುಚಿ ಮೊಗ್ಗುಗಳು ಒಡಲ ಇಡೀ ಮೇಲ್ಮೈ ಮೇಲೆ ಹರಡಿದ್ದು ಸುತ್ತಮುತ್ತಲ ನೀರಿನ ಬಗೆಗೆ ಅವಕ್ಕೆ ಮಾಹಿತಿ ತಿಳಿಸುತ್ತವೆ
ರುಜುವೃದ್ಧಿ
(ವೈ) ಜೀವಕೋಶಗಳ ಗಾತ್ರ ಸಣ್ಣದಾಗಿ ಇರುವುದರಿಂದಾಗಿ ಅಥವಾ ಸಂಖ್ಯೆ ಕಡಿಮೆಯಾದುದರಿಂದಾಗಿ ಊತಕದ ಅಥವಾ ಜೀವಾಂಗದ ಅಪಸಾಮಾನ್ಯ ಅಲ್ಪವಿಕಸನ. ಅಪೂರ್ಣ ಅಭಿವರ್ಧನೆ
ರುಟೈಲ್
(ಭೂವಿ) ಸಹಜ ಟೈಟಾನಿಯಮ್ ಡೈಆಕ್ಸೈಡ್ನ (TiO2) ಸ್ಫಟಿಕೀಯ ರೂಪ. ಚತುರ್ಮುಖೀಯ ವ್ಯವಸ್ಥೆಯಲ್ಲಿ ಸ್ಫಟಿಕೀಕರಣ. ಬಣ್ಣ ಕೆಂಪು-ಕಂದು. ಅಗ್ನಿಶಿಲೆಗಳಲ್ಲೂ ರೂಪಾಂತರಿತ ಶಿಲೆಗಳಲ್ಲೂ ಈ ಶಿಲೆಗಳಿಂದಾದ ಮಡ್ಡಿಯಲ್ಲೂ ಮರಳಿನಲ್ಲೂ ಲಭ್ಯ. ಟೈಟಾನಿಯಮ್ನ ಆಕರ. ಇದೊಂದು ಆನುಷಂಗಿಕ ಖನಿಜ. ಬ್ರೂಕೈಟ್ ಮತ್ತು ಅನಾಟೇಸ್ ಇದರ ಇತರ ರೂಪಗಳು. ಭಾರತದಲ್ಲಿ ಹೇರಳವಾಗಿ ದೊರೆಯುತ್ತದೆ
ರುಡೇಷಸ್
(ಭೂವಿ) ಮರಳ ಕಣಗಳಿಗಿಂತ ಹೆಚ್ಚು ದೊಡ್ಡ ಗಾತ್ರದ (೨ ಮಿಮೀಗೂ ಹೆಚ್ಚಿನ ವ್ಯಾಸದ) ಕಣಗಳುಳ್ಳ ಜಲಜಶಿಲೆ ನಿಕ್ಷೇಪದ ಅಥವಾ ಅಂಥ ನಿಕ್ಷೇಪಕ್ಕೆ ಸಂಬಂಧಿಸಿದ ಜಲಜಶಿಲೆಯ ವರ್ಗೀಕರಣದ ಒಂದು ವಿಧಾನ
ರುತೀನಿಯಮ್