भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರಾಸಾಯನಿಕ ಸಂಶ್ಲೇಷಣೆ

(ರ) ರಾಸಾಯನಿಕ ಕ್ರಿಯೆಯಿಂದ (ಉದಾ: ಗಂಧಕದ ಅಥವಾ ಅಮೋನಿಯದ ಆಕ್ಸಿಡೀಕರಣ) ಉತ್ಪಾದಿತವಾದ ಶಕ್ತಿಯನ್ನು ಬಳಸಿಕೊಂಡು ಕೆಲವು ಬ್ಯಾಕ್ಟೀರಿಯಗಳು ಆರ್ಗ್ಯಾನಿಕ್ (ಕಾರ್ಬನಿಕ್) ಪದಾರ್ಥಗಳನ್ನು ರೂಪಿಸುವ ಕ್ರಿಯೆ. ರಸ ಸಂಶ್ಲೇಷಣೆ

ರಾಸಾಯನಿಕ ಸೂತ್ರ

(ರ) ಸಂಕೀರ್ಣ ಪದಾರ್ಥವೊಂದರ ಅಣುವಿನಲ್ಲಿರುವ ಪರಮಾಣುಗಳನ್ನೂ ಹಾಗೂ ಅವುಗಳ ಸಂಖ್ಯೆಗಳನ್ನೂ ಪ್ರತಿನಿಧಿಸುವ ಪ್ರತೀಕಗಳ ಹಾಗೂ ಸಂಖ್ಯೆಗಳ ಗುಂಪು. ಉದಾ : H2SO4 ಸಲ್ಫ್ಯೂರಿಕ್ ಆಮ್ಲ. ಇದರಲ್ಲಿ ಹೈಡ್ರೊಜನ್ ೨, ಗಂಧಕ ೧ ಮತ್ತು ಆಕ್ಸಿಜನ್‌ನ ೪ ಪರಮಾಣುಗಳು ಸಂಯೋಜಿತವಾಗಿವೆ

ರಾಸ್ಟ್ರೇಟ್

(ಪ್ರಾ) ಕೊಕ್ಕಿನಂತೆ ಮುಂದೆ ಚಾಚಿದ ಗಡಸಾದ ಮತ್ತು ಚೂಪಾದ ಭಾಗ. ಉದಾ: ಮೃದ್ವಂಗಿಗಳ ಚಿಪ್ಪು. ಕೀಟಗಳ ತಲೆ ಮತ್ತು ಹಕ್ಕಿಗಳ ಕೊಕ್ಕು

ರಾಸ್‌ಬೆರಿ

(ಸ) ರೂಬಸ್ ಜಾತಿಗೆ ಸೇರಿದ ಒಂದು ಬಗೆಯ ಪೊದೆ ಸಸ್ಯ. ಇದರ ಶಂಕುವಿನ ಆಕಾರದ ಹಣ್ಣುಗಳು ಹಳದಿ ಅಥವಾ ಕೆಂಪು ಬಣ್ಣವಿದ್ದು ರುಚಿಕರ

ರಾಹು

(ಖ) ಭೂಮಿಯ ಸುತ್ತ ಪಶ್ಚಿಮ-ಪೂರ್ವ ದಿಶೆಯಲ್ಲಿ ಪರಿಭ್ರಮಿಸುತ್ತಿರುವ ಚಂದ್ರನು ಕ್ರಾಂತಿವೃತ್ತವನ್ನು ಧ್ರುವನಕ್ಷತ್ರ ಇರುವ ಗೋಳಾರ್ಧದ ಕಡೆಗೆ ದಾಟುವ ಬಿಂದು. ಆರೋಹಣ ಸಂಪಾತ. ಪರ್ವ ಬಿಂದು. ನೋಡಿ : ಕೇತು

ರಾಳ

(ರ) ಮೆರುಗೆಣ್ಣೆ ಅಥವಾ ಬಣ್ಣಗಳ ಒಂದು ಘಟಕ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ಬೃಹದಣುಗಳ ದ್ರವ/ಘನ ಕಾರ್ಬನಿಕ ಸಂಯುಕ್ತ. ಸಹಜ ರಾಳ ಮತ್ತು ಕೃತಕ ರಾಳ ಎಂದು ಎರಡು ವಿಧ. ಕೊಪಾಲ್, ರೊಸಿನ್, ಆಂಬರ್ (ಶಿಲಾರಾಳ) ಇವು ಸಹಜ ರಾಳ. ಗಿಡಮರಗಳಿಂದ ಲಭ್ಯ. ನೀರಿನಲ್ಲಿ ಅದ್ರಾವ್ಯ ಹಾಗೂ ಕಾರ್ಬನಿಕ್ ದ್ರಾವಣಗಳಲ್ಲಿ ದ್ರಾವ್ಯ. ದಹ್ಯ ಪದಾರ್ಥಗಳಾದ ಆಲ್ಕೈಡ್, ಫಿನೊಲಿಕ್, ಪಾಲಿ ಯೂರಿತೇನ್‌ಗಳು ಕೃತಕ ರಾಳಗಳು. ಸಹಜ ರಾಳಗಳನ್ನು ವಸ್ತುಗಳ ಮೇಲ್ಮೈಗೆ ಹೊಳಪು ನೀಡಲೂ, ಕೃತಕ ರಾಳಗಳನ್ನು ಹೊರ ಲೇಪನಗಳಿಗೆ ಕಾಠಿಣ್ಯ, ಸುನಮ್ಯತೆ ಹಾಗೂ ರಾಸಾಯನಿಕ ಪ್ರತಿರೋಧ ಇತ್ಯಾದಿಗಳನ್ನು ನೀಡಲೂ ಬಳಸಲಾಗುತ್ತದೆ

ರಾಳ ವಿದ್ಯುತ್

(ಭೌ) ಋಣ ವಿದ್ಯುತ್ತಿಗೆ ಮೊದಲು ಇದ್ದ ಹೆಸರು. ಶೀಲಾರಾಳವನ್ನು ಉಜ್ಜಿದಾಗ ಋಣ ವಿದ್ಯುತ್ ಬರುತ್ತಿದ್ದುದರಿಂದ ಈ ಹೆಸರು ನೀಡಲಾಗಿತ್ತು

ರಿಕೆಟ್ಸ್

(ವೈ) ಇದು ಮೂಳೆಗಳಿಗೆ ಸಂಬಂಧಿಸಿದ ರೋಗ. ಶಿಶುಗಳಲ್ಲಿ ಹಾಗೂ ಮಕ್ಕಳಲ್ಲಿ ವೈಟಮಿನ್ ಡಿ ಕೊರತೆಯಿಂದ ಉಂಟಾಗುತ್ತದೆ. ಬೆಳೆಯುತ್ತಿರುವ ಮೃದ್ವಸ್ಥಿ ಹಾಗೂ ಮೂಳೆಗಳಲ್ಲಿ ಸುಣ್ಣಾಂಶ ಸಾಕಷ್ಟು ಕೂಡಿಕೊಳ್ಳದೆ ಮೂಳೆಗಳು ಸರಿಯಾಗಿ ಬೆಳೆಯುವುದಿಲ್ಲ. ಮೂಳೆಗಳ ರಚನೆ, ಆಕಾರ ಹಾಗೂ ದೃಢತೆ ಗಳಲ್ಲಿ ಏರುಪೇರಾಗುತ್ತದೆ. ಶಿಶುವಿಗೆ ವೈಟಮಿನ್ ಡಿ ನೀಡಿ (ಪ್ರತಿದಿನ ೪೦೦ ಐ.ಯು) ಹಾಗೂ ಸೂರ್ಯನ ಎಳೇ ಬಿಸಿಲಿಗೆ ಮಗುವನ್ನು ಒಡ್ಡುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಮೀನಿನ ಈಲಿ ಎಣ್ಣೆ, ಸುಣ್ಣದ ಫಾಸ್ಫೇಟ್‌ಗಳಿಂದ ಚಿಕಿತ್ಸೆ ಮಾಡ ಬಹುದಾದರೂ ಪ್ರಬಲ ಅಚ್ಚ ಡಿ ವೈಟಮಿನ್‌ನ ಕ್ಯಾಲ್ಸಿಫೆರಾಲ್‌ನಿಂದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ. ಎಲುಮುರುಟು, ಕುಟಿಲವಾತ, ಮುಡುದೋಷ. ಇದೇ ಸ್ಥಿತಿ ವಯಸ್ಕರಲ್ಲಿಯೂ ತಲೆದೋರ ಬಹುದು. ನೋಡಿ : ಮೆತು ಮೂಳೆರೋಗ

ರಿಂಕೊಸೆಫೆಲಿಯ

(ಪ್ರಾ) ರೆಪ್ಟೀಲಿಯ ಗಣಕ್ಕೆ ಸೇರಿದ ಬಲುಮಟ್ಟಿಗೆ ಲ್ಯಾಸರ್ಟೀಲಿಯವನ್ನು ಹೋಲುವ ನಷ್ಟವಂಶಿ ಸರೀಸೃಪಗಳು

ರಿಕ್ಯಾಲಿಸೆನ್ಸ್

(ರ) ಉನ್ನತ ಉಷ್ಣತೆಗೆ ಕಾಸಲ್ಪಟ್ಟ ಲೋಹ ತಣಿಯುತ್ತಿರುವಾಗ, ಯಾವುದೋ ನಿರ್ದಿಷ್ಟ ಉಷ್ಣತೆ ಯಲ್ಲಿ, ಹಠಾತ್ತನೆ ಪ್ರಕಟವಾಗುವ ಕಾವೇರಿಕೆ. ಈ ನಿರ್ದಿಷ್ಟ ಉಷ್ಣತೆ ಒಂದೊಂದು ಲೋಹಕ್ಕೂ ಬೇರೆ ಬೇರೆ. ನೋಡಿ : ಡಿಕ್ಯಾಲಿಸೆನ್ಸ್

ರಿಗರ್ಜಿಟೇಷನ್

(ಜೀ) ಕವಾಟದ ದೋಷ ದಿಂದಾಗಿ ಹೃದಯದಲ್ಲಿಯ ರಕ್ತವು ಸಹಜ ಪರಿಚಲನೆಯ ದಿಕ್ಕಿಗೆ ವಿರುದ್ಧವಾಗಿ ಹರಿಯುವುದು. (ಪ್ರಾ) ಜೀರ್ಣವಾಗದ ಆಹಾರ ಪದಾರ್ಥ ಬಾಯಿಗೆ ಬರುವುದು. ಕಕ್ಕುವಿಕೆ

ರಿಗ್

(ತಂ) ಮೂರು ಕಾಲುಗಳು, ಕೊರೆಯುವ ಸಾಧನ ಮತ್ತು ಅಟ್ಟಣಿಗೆ – ಇವುಗಳೊಂದಿಗೆ ಸಜ್ಜಿತವಾದ ನೆಲ ಕೊರೆಯುವ ಯಂತ್ರ. ಉದಾ : ತೈಲಬಾವಿ ಕೊರೆಯಲು ಬಳಸುವ ಯಂತ್ರ

ರಿಜನರೇಟರ್

(ತಂ) ಕುಲುಮೆಗಳಲ್ಲಿ ಇಂಧನವನ್ನು ಮಿಗಿಸುವ ಕಾವಿಟ್ಟಿಗೆಯ ಸಾಧನ. ವ್ಯರ್ಥ ಪದಾರ್ಥವಾಗಿ ಹೊರ ಹೋಗುವ ಬಿಸಿ ಅನಿಲ ಮೊದಲಾದವುಗಳಿಂದ ತಾನು ಕಾದು ಒಳಹೊಗಿಸುವ ಗಾಳಿ ಮೊದಲಾದವನ್ನು ಬಿಸಿಗೊಳಿಸುವಂಥದು. ಪುನರುದ್ಭವಕ

ರಿಜೆಕ್ಟರ್

(ತಂ) ಒಂದನ್ನು ಹೊರತುಪಡಿಸಿ ಉಳಿದೆಲ್ಲ ಸಂಜ್ಞಾ ಗಳನ್ನೂ ಹಾಯಲು ಬಿಡುವಂತೆ ವಿನ್ಯಾಸಗೊಳಿಸಿದ ವಿದ್ಯುನ್ಮಂಡಲ

ರಿಂಜೆಂಟ್

(ಸ) ಹೂವಿನ ತುಟಿಯಾಕಾರದ ದಳವಲಯವು ಬಾಯಿ ಬಿಟ್ಟುಕೊಂಡಿರುವುದು, ತೆರೆದುಕೊಂಡಿರುವುದು

ರಿಟ್ರೊಗ್ರೇಡ್ ಆಮ್ನೀಸಿಯ

(ವೈ) ತಲೆಗೆ ಪೆಟ್ಟು ಬಿದ್ದು ಅಥವಾ ವಿದ್ಯುತ್ ಆಘಾತದಿಂದಾಗಿ ಸಂಭವಿಸುವ ಒಂದು ಬಗೆಯ ಸ್ಮೃತಿಲೋಪ. ಅಪಘಾತ ಹೇಗೆ ಸಂಭವಿಸಿತು ಎಂಬ ನೆನಪಿರುವುದಿಲ್ಲ. ಈ ಬಗೆಯ ಸ್ಥಿತಿ ಮುಂದುವರಿಯುವ ಅವಧಿಯು ಆಗಿರುವ ಗಾಯದ ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ

ರಿಟ್ರೊಪಲ್ಷನ್

(ವೈ) ಪಾರ್ಶ್ವವಾಯು ಕ್ಷೋಭೆ ಅಥವಾ ಪಾರ್ಕಿನ್‌ಸನ್ ರೋಗದಿಂದ ನರಳುತ್ತಿರುವ ರೋಗಿ ಹಿಂದಕ್ಕೆ ಬಾಗಿ ತತ್ತರಿಸುವುದು. ಗುರುತ್ವಕೇಂದ್ರ ಹಿಂದಕ್ಕೆ ಇರುವುದರಿಂದ, ರೋಗಿಯ ನಿಲ್ಲುವ ಭಂಗಿ ಸೆಡೆತಿರುವುದರಿಂದ, ವ್ಯಕ್ತಿ ತೂಕ ತಪ್ಪುತ್ತಾನೆ

ರಿಟ್ರೊರಾಕೆಟ್

(ಅಂವಿ) ಧರೆಗಿಳಿಯುತ್ತಿರುವ ಅಂತರಿಕ್ಷ ನೌಕೆಯ ವೇಗ ಕಡಿಮೆ ಮಾಡಲು ಪ್ರಯೋಗಿಸುವ ಸಣ್ಣ ರಾಕೆಟ್ ಮೋಟರ್. ಚಲನೆಯ ವಿರುದ್ಧ ದಿಕ್ಕಿನಲ್ಲಿ ನೂಕು ಉಂಟುಮಾಡ ಬೇಕಾದಾಗ ಬಳಸುವ ಸಣ್ಣ ರಾಕೆಟ್ ಮೋಟರ್. ಪ್ರತಿರಾಕೆಟ್

ರಿಟ್ರೊವರ್ಶನ್

(ವೈ) ಗರ್ಭಕೋಶ ಅಪಸಾಮಾನ್ಯ ವಾಗಿ ಹಿಂದಕ್ಕೆ ತಿರುಗಿರುವುದು

ರಿಟ್ರೊವೈರಸ್

(ಜೀ) ರಿಟ್ರೊವಿರಿಡೀ ಕುಟುಂಬಕ್ಕೆ ಸೇರಿದ ಯಾವುದೇ ವೈರಸ್. ಇದರಲ್ಲಿ ಸಾಮಾನ್ಯ ಡಿಎನ್‌ಎಗಿಂತ ಹೆಚ್ಚಾಗಿ ಆರ್‌ಎನ್‌ಎ ಆನುವಂಶಿಕ ವಸ್ತು ಇರುತ್ತದೆ ಮತ್ತು ಅದು ಆರ್‌ಎನ್‌ಎಯನ್ನು ಡಿಎನ್‌ಎಯಾಗಿ ಪರಿವರ್ತಿಸುತ್ತದೆ. ಇದು ಪ್ರಾಣಿಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲದು

Search Dictionaries

Loading Results

Follow Us :   
  Download Bharatavani App
  Bharatavani Windows App