भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರಾಸಾಯನಿಕ ಎಂಜಿನಿಯರಿಂಗ್

(ತಂ) ಮೂಲ ಕಚ್ಚಾ ಪದಾರ್ಥಗಳ ದ್ರವ್ಯದ ಸ್ಥಿತಿಯಲ್ಲಿಯೂ ಸಂಯೋಜನೆ ಯಲ್ಲಿಯೂ ಪರಿವರ್ತನೆಗಳನ್ನು ಉಂಟುಮಾಡುವಂಥ ಸ್ಥಾವರಗಳ ಹಾಗೂ ಕಾರ್ಮಾಗಾರಗಳ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಗಳ ಅಧ್ಯಯನ

ರಾಸಾಯನಿಕ ಕಾಲನಿರ್ಣಯ

(ರ) ನೋಡಿ : ಕಾರ್ಬನ್ ಕಾಲಗಣನೆ

ರಾಸಾಯನಿಕ ಕ್ರಿಯೆ

(ರ) ಅನೇಕ ಪದಾರ್ಥಗಳು ಪರಸ್ಪರ ವರ್ತಿಸುವಾಗ ಅವುಗಳಲ್ಲಿ ಕನಿಷ್ಠ ಒಂದಾದರೂ ಇನ್ನೊಂದು ಹೊಸ ಪದಾರ್ಥವಾಗಿ ಪರಿವರ್ತಿತವಾಗುವ ಪ್ರಕ್ರಿಯೆ. ಉದಾ: ಹೈಡ್ರೊಜನ್‌ನ ೨ ಪರಮಾಣುಗಳೂ ಆಕ್ಸಿಜನ್‌ನ ೧ ಪರಮಾಣುವೂ ಸಂಯೋಗಿಸಿ ಹೊಸತಾದ ಒಂದು ಪದಾರ್ಥ, ನೀರಿನ ಅಣು (H2O), ಮೈದಳೆಯುತ್ತದೆ

ರಾಸಾಯನಿಕ ಗೋಳ

(ರ) ಭೂ ಮೇಲ್ಮೈಯಿಂದ ೨೦-೨೦೦ ಕಿಮೀ ಎತ್ತರಗಳ ನಡುವಿನ ವಾಯುಮಂಡಲ. ಇಲ್ಲಿ ಅತ್ಯಧಿಕ ದ್ಯುತಿ ರಾಸಾಯನಿಕ ಕ್ರಿಯೆ ಜರಗುತ್ತದೆ.

ರಾಸಾಯನಿಕ ಚಿಕಿತ್ಸೆ

(ವೈ) ದೇಹವನ್ನು ಆಕ್ರಮಿಸುವ ಜೀವಿಗಳನ್ನು ಅಥವಾ ದೇಹದಲ್ಲಿ ಅಸಹಜವಾಗಿ ಬೆಳೆಯುವ ಕೋಶ ಗಳನ್ನು ಆಯ್ದು ಅವುಗಳ ವಿರುದ್ಧ ಮಾತ್ರ ಯುಕ್ತ ರಾಸಾಯನಿಕ ಗಳನ್ನು ಬಳಸಿ ರೋಗಚಿಕಿತ್ಸೆ ಮಾಡುವುದು. ಕೆಮೋಥೆರಪಿ

ರಾಸಾಯನಿಕ ಚಿತ್ರಣ

(ತಂ) ರಾಸಾಯನಿಕಗಳನ್ನು ಬಳಸಿಕೊಂಡು ಲೋಹಗಳ ಹೊರಮೈ ಮೇಲೆ ವಿವಿಧ ಆಲೇಖ್ಯ ಗಳನ್ನು ರೂಪಿಸುವುದು / ಕೆತ್ತುವುದು. ರಸ ಚಿತ್ರಣ

ರಾಸಾಯನಿಕ ತಕ್ಕಡಿ

(ತಂ) ರಾಸಾಯನಿಕ ಕ್ರಿಯೆಗಳಲ್ಲಿ ಬಳಸುವ ಪದಾರ್ಥಗಳ ಅಲ್ಪ ಮೊತ್ತಗಳನ್ನು ಅತಿ ನಿಖರವಾಗಿ ತೂಗಲು ಬಳಸುವ ಸೂಕ್ಷ್ಮ ತ್ರಾಸು

ರಾಸಾಯನಿಕ ಧಾತುಗಳು

(ರ) ಇವು ವಿಶ್ವದ ಗೋಚರ ವೈವಿಧ್ಯತೆಯ ತಳದಲ್ಲಿರುವ ಘಟಕರೂಪಿ ಮೂಲ ವಸ್ತುಗಳು. ಉದಾ: ಹೈಡ್ರೊಜನ್‌ನಿಂದ ಯುರೇನಿಯಮ್‌ವರೆಗಿನ ೯೨ ನೈಸರ್ಗಿಕ ಧಾತುಗಳು. ಅನಂತರ ೯೩ನೆಯ ಧಾತು ನೆಪ್ಚೂನಿಯಮ್‌ನಿಂದ ಅಧಿಕ ಪರಮಾಣು ಸಂಖ್ಯೆಯ ಧಾತುಗಳು ಕೃತಕ (ಮಾನವಕೃತ) ಧಾತುಗಳು. ನೋಡಿ : ಆವರ್ತ ಕೋಷ್ಟಕ

ರಾಸಾಯನಿಕ ಪ್ರತೀಕ

(ರ) ಧಾತುವಿನ ಪರಮಾಣು ಸೂಚಕ ಅಕ್ಷರ/ಅಕ್ಷರಗಳು. ಉದಾ: ಕಾರ್ಬನ್ C, ಕಬ್ಬಿಣ Fe, ಪಾದರಸ Hg

ರಾಸಾಯನಿಕ ಬದಲಾವಣೆ

(ರ) ಬೇರೊಂದು (ಹೊಸ) ರಾಸಾಯನಿಕ ರೂಪುಗೊಳ್ಳುವುದಕ್ಕೆ ಕಾರಣವಾಗುವ ಪರಿವರ್ತನೆ

ರಾಸಾಯನಿಕ ಬಂಧ

(ರ) ಅಣುಗಳಲ್ಲಿ ಅಥವಾ ಅನಾಣವಿಕ ಘನ ಪ್ರಾವಸ್ಥೆಗಳಲ್ಲಿ ಪರಮಾಣುಗಳನ್ನು ಸಂಬಂಧಿಸಿರುವ ವಿದ್ಯುದ್ಬಲಗಳು. ಇವುಗಳಲ್ಲಿ ಸಾಧಾರಣವಾಗಿ ಮೂರು ಬಗೆಗಳನ್ನು ಗುರುತಿಸಿದೆ: (i) ಅಯಾನಿಕ್ ಅಥವಾ ವಿದ್ಯುತ್‌ಸ್ಥಾಯೀ ಬಂಧ. ಇದರಲ್ಲಿ ವೇಲೆನ್ಸ್ ಎಲೆಕ್ಟ್ರಾನ್‌ಗಳು ವರ್ಗಾವಣೆಯಾಗುತ್ತವೆ. ಅವು ನಷ್ಟವಾಗಿರಬಹುದು ಅಥವಾ ಲಾಭವಾಗಿರಬಹುದು; ಅಲ್ಲದೆ ವಿರುದ್ಧಾವೇಶಗಳಿರುವ ಪರಮಾಣುಗಳನ್ನು ಕೂಲಂಬ್ ಬಲಗಳು ಒಟ್ಟಿಗೆ ಹಿಡಿದಿಟ್ಟಿರುತ್ತವೆ. (ii) ಕೋವೇಲೆಂಟ್ ಬಂಧ. ಇದರಲ್ಲಿ ವೇಲೆನ್ಸ್ ಎಲೆಕ್ಟ್ರಾನ್‌ಗಳು ವರ್ಗಾವಣೆಯಾಗುವ ಬದಲು ಹಂಚಿಕೆ ಯಾಗುತ್ತವೆ. ಎರಡು ಬೀಜಗಳ ಜೊತೆ ಸಂಬಂಧಿತವಾಗುತ್ತವೆ. ಇದರಿಂದ ಫಲಿಸುವ ಬಂಧವನ್ನು, ಪರಮಾಣುಗಳು ವಿಭಿನ್ನ ವಿದ್ಯುತ್ ಋಣಾತ್ಮಕತೆಯವಾಗಿದ್ದರೆ, ಧ್ರುವೀಯ ಎನ್ನುತ್ತೇವೆ.

ರಾಸಾಯನಿಕ ಬಾಂಧವ್ಯ

(ರ) ಅಣುಗಳ ಪರಮಾಣುಗಳ ನಡುವಿನ ಆಕರ್ಷಣೆ. ನೋಡಿ: ಬಾಂಧವ್ಯ

ರಾಸಾಯನಿಕ ಬಾಷ್ಪ ಸಂಚಯನ

(ತಂ) ಹಲವಾರು ಬಗೆಯ ಪದಾರ್ಥಗಳ ಫಿಲ್ಮುಗಳನ್ನು ಹಾಗೂ ವಿವಿಧ ನ್ಯಾನೊ ಸಂರಚನೆಗಳನ್ನು ಸಂಚಯಿಸುವ ಒಂದು ತಂತ್ರ. ಇದರಲ್ಲಿ ಅಣು ಅಥವಾ ಪರಮಾಣುವಿನ ಉಷ್ಣಚೋದಿತ ರಾಸಾಯನಿಕ ಕ್ರಿಯೆಯು, ಸೂಕ್ತ ಅನಿಲದ ಸಮ್ಮುಖದಲ್ಲಿ ಘಟಿಸಿ, ಉತ್ಪನ್ನವಾಗುವ ಬಾಷ್ಪವನ್ನು ತಲಾಧಾರದ ಮೇಲೆ ಸಾಂದ್ರೀಕರಣ ಗೊಳಿಸಿ ಸಂಚಯವಾಗುವಂತೆ ಮಾಡಲಾಗುತ್ತದೆ

ರಾಸಾಯನಿಕ ಲೇಪನ

(ರ) ನೋಡಿ: ರಸಶೋಷಣೆ

ರಾಸಾಯನಿಕ ಶಕ್ತಿ

(ರ) ರಾಸಾಯನಿಕ ಬಂಧದಲ್ಲಿನ ‘ಅಂತರ್ಗತ ಶಕ್ತಿ’

ರಾಸಾಯನಿಕ ಸಂಘಟನೆ

(ರ) ರಾಸಾಯನಿಕ ಸಂಯುಕ್ತದಲ್ಲಿ ಪರಮಾಣುಗಳ ಸಂಖ್ಯೆ, ಅವುಗಳ ಅಳವಡಿಕೆ

ರಾಸಾಯನಿಕ ಸಮರ

(ಭೌ) ಯುದ್ಧಾಸ್ತ್ರಗಳಾಗಿ ರಾಸಾಯನಿಕ ವಸ್ತುಗಳ ಬಳಕೆ. ನೋಡಿ: ಜೈವಿಕ ಸಮರ

ರಾಸಾಯನಿಕ ಸಮಸ್ಥಿತಿ

(ರ) ರಾಸಾಯನಿಕ ಕ್ರಿಯೆಯೊಂದರ ಎರಡು ವಿರುದ್ಧ ಪ್ರಕ್ರಿಯೆಗಳು (ಮುಮ್ಮುಖ ಹಾಗೂ ಹಿಮ್ಮುಖ ಪ್ರಕ್ರಿಯೆಗಳು) ಒಂದೇ ದರದಲ್ಲಿ ಜರಗುತ್ತಿರುವ ಸನ್ನಿವೇಶ. ಇವುಗಳಲ್ಲಿ ಭಾಗಿಗಳಾಗುವ ಘಟಕಗಳ ಸಾರತೆಯಲ್ಲಿ ಕಾಲದೊಂದಿಗೆ ಯಾವ ಬದಲಾವಣೆಯೂ ಆಗದು. ಏಕೆಂದರೆ ವ್ಯವಸ್ಥೆಯು ಉಷ್ಣ ಬಲವಿಜ್ಞಾನ ಸಮತೋಲದಲ್ಲಿರುತ್ತದೆ. ಉದಾ: ಮುಮ್ಮುಖ ಪ್ರಕ್ರಿಯೆ 3H2+N2 2NH3ಯ ದರವು ಹಿಮ್ಮುಖ ಪ್ರಕ್ರಿಯೆ 2NH333H2+N2ಯ ದರಕ್ಕೆ ಸಮವಾಗಿದ್ದಾಗ, ವಿಪರ್ಯಯಶೀಲ ಕ್ರಿಯೆ 3H2+N2 2NH3 ರಾಸಾಯನಿಕ ಸಮಸ್ಥಿತಿಯಲ್ಲಿರುತ್ತದೆ

ರಾಸಾಯನಿಕ ಸಮೀಕರಣ

(ರ) ರಾಸಾಯನಿಕ ಕ್ರಿಯೆಗಳಲ್ಲಿ ಜರಗುವ ಪರಿವರ್ತನೆಗಳನ್ನು ಪರಿಮಾಣಾತ್ಮಕವಾಗಿ ಹಾಗೂ ಪ್ರತೀಕಾತ್ಮಕವಾಗಿ ನಿರೂಪಿಸುವುದು. ಕ್ರಿಯೆ ಸಂಭವಿಸುತ್ತ ಇರುವಾಗ ದ್ರವ್ಯವನ್ನು ಸೇರಿಸ/ತೆಗೆಯಕೂಡದು. ಕ್ರಿಯೆಯಲ್ಲಿ ತೊಡಗಿರುವ ರಾಸಾಯನಿಕಗಳನ್ನು “ ” ಬಾಣಚಿಹ್ನೆಯ ಎಡಬದಿಯಲ್ಲೂ ಉತ್ಪಾದಿತವಾದ ರಾಸಾಯನಿಕಗಳನ್ನು ಆ ಚಿಹ್ನೆಯ ಬಲಬದಿಯಲ್ಲೂ ನಮೂದಿಸಲಾಗುತ್ತದೆ. ಕ್ರಿಯೆ ಅವಿಪರ್ಯಯಶೀಲವಾಗಿದ್ದಾಗ ಒಂದೇ ಬಾಣದ ಗುರುತನ್ನೂ ( ), ವಿಪರ್ಯಯ ಶೀಲವಾಗಿದ್ದಾಗ ಎರಡು ಬಾಣದ ಗುರುತುಗಳನ್ನೂ () ಬಳಸಲಾಗುತ್ತದೆ

ರಾಸಾಯನಿಕ ಸಂಯುಕ್ತ

(ರ) ತೂಕ ರೀತ್ಯ ನಿರ್ದಿಷ್ಟ ಪ್ರಮಾಣಗಳಲ್ಲಿ ಎರಡು ಅಥವಾ ಹೆಚ್ಚು ಧಾತುಗಳು ಸಂಯೋಗಿಸಿ ಮೈದಳೆದ ಪದಾರ್ಥ. ಸಂಯೋಗ ವಿಧಾನ ಇಲ್ಲಿ ಗೌಣ. ಇದರ ಅಣುಗಳು ಅಸದೃಶ ಪರಮಾಣುಗಳಿಂದ ಕೂಡಿರುತ್ತವೆ ಮತ್ತು ಇದರ ಘಟಕಗಳನ್ನು ಭೌತರೀತ್ಯ ಪ್ರತ್ಯೇಕಿಸ ಲಾಗದು. ನೋಡಿ : ಸಂಯುಕ್ತ

Search Dictionaries

Loading Results

Follow Us :   
  Download Bharatavani App
  Bharatavani Windows App