भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರಾಟೆ

(ತಂ) ದಾರ, ರೇಷ್ಮೆ, ನೂಲು, ಕಾಗದ, ತಂತಿ ಮೊದಲಾದವನ್ನು ಸುತ್ತುವುದಕ್ಕೆ ಉಪಯೋಗಿಸುವ ಸುತ್ತು ಸಲಕರಣೆ. ಕಂಡಿಕೆ

ರಾಟೆ

(ತಂ) ಬೆಲ್ಟ್ ಇತ್ಯಾದಿಗಳ ಮೇಲೆ ಹಾಯುವುದಕ್ಕೆ ಗಾಡಿ (ತೋಡು ಹಳ್ಳ) ಮಾಡಿರುವ ದಂಡದ ಮೇಲೆ ಅಳವಡಿಸಿರುವ, ಚಲನೆಯನ್ನು ಮತ್ತು ಶಕ್ತಿಯನ್ನು ವರ್ಗಾಯಿಸುವ, ಒಂದು ದಿಕ್ಕಿನಲ್ಲಿ ಹಾಕಿದ ಬಲದ ಪರಿಣಾಮ ವನ್ನು ಬೇರೊಂದು ದಿಕ್ಕಿನಲ್ಲಿ ಪಡೆಯಲು ಬಳಸುವ ಸಾಧನ

ರಾಟೆ ಮತ್ತು ಎತ್ತುಗ

(ತಂ) ಸರಣಿಯಲ್ಲಿ ಅಳವಡಿಸಿದ ರಾಟೆಗಳನ್ನು ಹಗ್ಗ ಇಲ್ಲವೇ ಸರಪಳಿಯಿಂದ ಜೋಡಿಸಿ ಇದರ ಸ್ಥಿರಕೊನೆಯನ್ನು ಕೆಳ ಜಗ್ಗಿದಾಗ ಖಾಲಿ ಕೊನೆಗೆ ಲಗತ್ತಿಸಿರುವ ಭಾರದ ವಸ್ತು ತೀರ ಸುಲಭವಾಗಿ ಮೇಲೇರುವ ವ್ಯವಸ್ಥೆ. ಕಪ್ಪಿ ಮತ್ತು ಎತ್ತುಗ

ರಾಂಟ್ಜನ್

(ಭೌ) ೧ ಘಸೆಂಮೀ ಶುಷ್ಕ ವಾಯುವಿನಲ್ಲಿ ಏಕಮಾನ ವಿದ್ಯುತ್‌ಉಳ್ಳ ಅಯಾನ್‌ಗಳನ್ನು ಉತ್ಪಾದಿಸಬಲ್ಲ ಎಕ್ಸ್-ಕಿರಣ ಅಥವಾ ಗ್ಯಾಮವಿಕಿರಣದ ಪ್ರಮಾಣ. ಪ್ರತೀಕ R. ಎಕ್ಸ್-ಕಿರಣಗಳನ್ನು ಆವಿಷ್ಕರಿಸಿದ ವಿಲ್ಹೆಮ್ ಕೊನ್ರಾಡ್ ರಾಂಟ್ಜನ್ (೧೮೪೫-೧೯೨೩) ಗೌರವಾರ್ಥ ಈ ಹೆಸರು

ರಾಂಟ್ಜನ್ ಕಿರಣಗಳು

(ಭೌ) ನೋಡಿ: ಎಕ್ಸ್-ಕಿರಣಗಳು

ರಾಯಲ್ ಜೆಲ್ಲಿ

(ರ) ರಾಣಿ ಜೇನಿನ ಮೊಟ್ಟೆಗಳಿಗೆ ಪುಷ್ಟಿ ನೀಡಲು ಶ್ರಮಿಕ ಜೇನುನೊಣಗಳು ಸ್ರವಿಸುವ, ಬಿ-ವೈಟಮಿನ್ ಯುಕ್ತ ಪ್ರೋಟೀನ್ ಸಂಯುಕ್ತ

ರಾಶಿ

(ಭೌ) ಯಾವುದೇ ಕಾಯದಲ್ಲಿರುವ ಪದಾರ್ಥದ ಒಟ್ಟು ಪ್ರಮಾಣ. ಇದಕ್ಕೆ ಎರಡು ಪ್ರಧಾನ ವ್ಯಾಖ್ಯೆಗಳಿವೆ: ೧. ಜಡತ್ವದ ರಾಶಿ. ಅಂದರೆ, ಚಲನೆಯಲ್ಲಾಗುವ ಬದಲಾವಣೆಗಳಿಗೆ ಕಾಯ ತೋರುವ ರೋಧದ ಅಳತೆಯಾಗಿ ರಾಶಿ. ೨. ಗುರುತ್ವಾತ್ಮಕ ರಾಶಿ. ಅಂದರೆ, ಒಂದು ಕಾಯ ಮತ್ತೊಂದರ ಮೇಲೆ ಬೀರುವ ಆಕರ್ಷಣೆಯ ಅಳತೆಯಾಗಿ ರಾಶಿ. ಈ ಎರಡು ರಾಶಿಗಳೂ ಸಮವೆಂದೇ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ ತಿಳಿಸುತ್ತದೆ. ಯುಕ್ತ ಏಕಮಾನಗಳ ಆಯ್ಕೆಯಿಂದ ಯಾವುದೇ ದತ್ತ ಕಾಯಕ್ಕೆ ಇವೆರಡೂ ಸಾಂಖ್ಯಕವಾಗಿ ಸಮವೆಂದು ತೋರಿಸಬಹುದು. ಪ್ರಯೋಗಗಳು ಇದನ್ನು ಅತ್ಯಂತ ನಿಷ್ಕೃಷ್ಟವಾಗಿ ಸಮರ್ಥಿಸಿವೆ. ರಾಶಿ ಯಾವತ್ತೂ ಸಂರಕ್ಷಿತ (ಅವಿನಾಶಿ, ಅವ್ಯಯಿ). ರಾಶಿ ಎಲ್ಲೆಡೆಗಳಲ್ಲೂ ಒಂದೇ. ಆದರೆ ತೂಕ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ. ಏಕೆಂದರೆ ಗುರುತ್ವ ವೇಗೋತ್ಕರ್ಷ (g) ಮೌಲ್ಯ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಆಗಿರುತ್ತದೆ. ಜಡತ್ವ ರಾಶಿಯನ್ನು ಕಿಲೋಗ್ರಾಮ್ ಗಳಲ್ಲೂ ತೂಕವನ್ನು, ಅದೊಂದು ಬಲವಾದುದರಿಂದ, ನ್ಯೂಟನ್ ಗಳಲ್ಲೂ ಅಳೆಯಲಾಗುತ್ತದೆ. ವಾಸ್ತವದಲ್ಲಿ ಶಕ್ತಿ ಮತ್ತು ರಾಶಿಗಳು ಸಮಾನ. ಶಕ್ತಿಯ ಅತ್ಯಂತ ಅಡಕ ಸ್ಥಿತಿಯೇ ರಾಶಿ ಎಂಬುದನ್ನು ಐನ್‌ಸ್ಟೈನ್ ಸಿದ್ಧಾಂತ ಪ್ರತಿಪಾದಿಸಿದೆ. ದ್ರವ್ಯರಾಶಿ

ರಾಶಿ ಕೇಂದ್ರ

(ಭೌ) ವಸ್ತುಗಳ ಒಂದು ವ್ಯವಸ್ಥೆ ಯಲ್ಲಿ, ಗಣನ ಸೌಕರ್ಯಾರ್ಥ, ಅದರ ಸಮಗ್ರರಾಶಿಯೂ ವರ್ತಿಸುತ್ತಿದೆ ಎಂದು ಆಯಬಹುದಾದ ಬಿಂದು. ಈ ಬಿಂದುವಿನ ಮೂಲಕ ಯಾವುದೇ ಸಮತಲವನ್ನು ಹಾಯಿಸಿದರೂ ರಾಶಿ ಸಮ ವಾಗಿರುವಂತೆ ಕಾಯ ಇಬ್ಭಾಗವಾಗುವುದು. ಭೂಮ್ಯಾಕರ್ಷಣ ಕ್ಷೇತ್ರದಲ್ಲಿರುವ ವಸ್ತುಗಳನ್ನು ಕುರಿತಂತೆ ಇದು ಗುರುತ್ವ ಕೇಂದ್ರ

ರಾಶಿಕ್ರಿಯಾ ನಿಯಮ

(ರ) ನಿರ್ದಿಷ್ಟ ಉಷ್ಣತೆಯಲ್ಲಿ ರಾಸಾಯನಿಕ ಕ್ರಿಯೆಯ ವೇಗ ಅದರಲ್ಲಿ ಪಾಲ್ಗೊಳ್ಳುವ ಪದಾರ್ಥಗಳ ಕ್ರಿಯಾತ್ಮಕ ರಾಶಿಗಳ ಗುಣಲಬ್ಧಕ್ಕೆ ಅನುಪಾತೀಯವಾಗಿರುವುದು ಎಂಬ ನಿಯಮ. ಈ ನಿಯಮವನ್ನು ಸಿ. ಎಂ. ಗುಲ್ಡ್‌ಬರ್ಗ್ ಹಾಗೂ ಪಿ. ವಾಗ್‌ರವರು ೧೮೬೩ರಲ್ಲಿ ಪ್ರತಿಪಾದಿಸಿದರು. ಆದರ್ಶ ಅನಿಲಯಗಳ ವಿಷಯದಲ್ಲಷ್ಟೇ ಇದು ತುಂಬ ನಿಖರವಾಗಿರುತ್ತದೆ

ರಾಶಿಕ್ಷತಿ

(ಭೌ) ನೋಡಿ: ರಾಶಿನಷ್ಟ

ರಾಶಿಗಳು

(ಖ) ಕ್ರಾಂತಿವೃತ್ತವನ್ನು ವ್ಯಾಖ್ಯಿಸುವ ಹನ್ನೆರಡು ನಕ್ಷತ್ರ ಪುಂಜಗಳು, ಸೂರ್ಯನ ಮಾಸಿಕ ಗೃಹಗಳು – ಮೇಷ, ವೃಷಭ, ಮಿಥುನ, ಕರ್ಕಟ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ. ರಾಶಿಚಕ್ರವನ್ನು ೧೨ ಸಮಖಂಡಗಳಾಗಿ ವಿಭಾಗಿಸುವ ಕಾಲ್ಪನಿಕ ಪುಂಜಗಳು. ಒಂದೊಂದು ರಾಶಿಯ ವಿಸ್ತಾರ ರಾಶಿಚಕ್ರದ ನೇರ ೩೦0

ರಾಶಿಚಕ್ರ

(ಖ) ಮೇಷದಿಂದ ಮೀನದವರೆಗಿನ ಹನ್ನೆರಡು ನಕ್ಷತ್ರ ಪುಂಜಗಳು ರೂಪಿಸುವ ನಾಕ್ಷತ್ರಿಕ ಪಟ್ಟಿ. ಅಗಲ ೧೮0. ಇದನ್ನು ಸಮದ್ವಿಭಾಗಿಸುವ ವೃತ್ತವೇ ಸೂರ್ಯನ ವಾರ್ಷಿಕ ಕಕ್ಷೆ. ಕ್ರಾಂತಿವೃತ್ತ. ಚಂದ್ರ ಮತ್ತು ಗ್ರಹಕಕ್ಷೆಗಳು ರಾಶಿಚಕ್ರಕ್ಕೆ ಸೀಮಿತವಾಗಿವೆ

ರಾಶಿಚಕ್ರ ದೀಪ್ತಿ

(ಖ) ಸೂರ್ಯನಿಂದ ಕ್ರಾಂತಿ ವೃತ್ತದ ನೇರ ೯೦0ವರೆಗೆ ಉಭಯ ಪಾರ್ಶ್ವಗಳಲ್ಲಿಯೂ ಹಬ್ಬಿರುವ ಮಸುಕು ಕಾಂತಿ. ಪೀನಮಸೂರದ ಆಕಾರ. ಸೂರ್ಯೋದಯಕ್ಕೆ ಮುನ್ನ ಪೂರ್ವಾಕಾಶದಲ್ಲಿಯೂ ಸೂರ್ಯಾಸ್ತಮಾನದ ಬಳಿಕ ಪಶ್ಚಿಮಾಕಾಶದಲ್ಲಿಯೂ ಸ್ಪಷ್ಟವಾಗಿ ಪ್ರಕಟ. ಭೂಮಿಯನ್ನು ಆವರಿಸಿರುವ ವಾಯುಮಂಡಲದ ಅಣುಗಳೊಂದಿಗೂ ದೂಳುಕಣ ಗಳೊಂದಿಗೂ ಸೂರ್ಯರಶ್ಮಿ ವರ್ತಿಸಿದಾಗ ಈ ದೀಪ್ತಿ ಹೊಮ್ಮುತ್ತದೆ

ರಾಶಿನಷ್ಟ

(ಭೌ) ೧. ಮುಕ್ತ ಸ್ಥಿತಿಯಲ್ಲಿ ಪರಮಾಣು ವೊಂದರ ನ್ಯೂಕ್ಲಿಯಸ್‌ನ ಶ್ರಾಂತ ರಾಶಿಗೂ ಅದರ ಬಿಡಿ ನ್ಯೂಕ್ಲಿಯಾನ್‌ಗಳ ಶ್ರಾಂತ ರಾಶಿಗಳ ಮೊತ್ತಕ್ಕೂ ನಡುವಿನ ವ್ಯತ್ಯಾಸ. ೨. ಕ್ಷಯಿಸುವ ಮುನ್ನ ವಿಕಿರಣ ಶೀಲ ನ್ಯೂಕ್ಲಿಯಸ್ ಶ್ರಾಂತರಾಶಿಗೂ ಕ್ಷಯಿಸಿದ ಉತ್ಪನ್ನಗಳ ಒಟ್ಟು ಶ್ರಾಂತರಾಶಿಗೂ ನಡುವಿನ ವ್ಯತ್ಯಾಸ

ರಾಶಿಮೇಘ

(ಪವಿ) ಮೇಲುಭಾಗ ಘನವಾಗಿರುವಂತೆ ತೋರುವ ಹೂಕೋಸು ಆಕಾರದ ದಪ್ಪ ಬಿಳಿಯ ಮೋಡ. ರಾಶಿವರ್ಷವು ಮೇಘವಾಗಿ ಬದಲಿದಾಗ ಮಳೆ ಸುರಿಸುತ್ತದೆ

ರಾಶಿವರ್ಷ ಮೇಘ

(ಪವಿ) ಮೇಲ್ತುದಿಯಲ್ಲಿ ನಾರುನಾರಾಗಿ ಕಾಣುವ, ಮಂಜು ಹರಳುಗಳ ಹೊದಿಕೆಯುಳ್ಳ ಮಳೆ ತರಬಲ್ಲ ಪರ್ವತಾಕಾರದ ಮೇಘರಾಶಿ

ರಾಶಿಸಂಖ್ಯೆ

(ಭೌ) ಪರಮಾಣುವಿನ ಅಥವಾ ನ್ಯೂಕ್ಲೈಡ್‌ನ ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನ್‌ಗಳ ಹಾಗೂ ನ್ಯೂಟ್ರಾನ್‌ಗಳ ಒಟ್ಟು ಸಂಖ್ಯೆ. ಇವುಗಳಲ್ಲಿ ಒಂದೊಂದನ್ನೂ ರಾಶಿಯ ಏಕಮಾನವಾಗಿ ತೆಗೆದುಕೊಳ್ಳಲಾಗುತ್ತದೆ. ನ್ಯೂಕ್ಲಿಯರ್ ಸಂಖ್ಯೆ, ನ್ಯೂಕ್ಲಿಯಾನ್ ಸಂಖ್ಯೆ. ಪ್ರತೀಕ A

ರಾಷ್ಟ್ರೀಯ ಉದ್ಯಾನ

(ಪವಿ) ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲೇ ಸಂರಕ್ಷಣೆ ಮಾಡಲು ಮೀಸಲಾಗಿ ಇಟ್ಟಿರುವ ವಿಶಾಲ ಅರಣ್ಯ ಪ್ರದೇಶ. ಉದಾ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಿಂಹಗಳಿಗೂ, ಅಸ್ಸಾಂನ ಕಾಜಿರಂಗವು ಘೇಂಡಾಮೃಗಗಳಿಗೂ ಮೀಸಲು. ವಿನಾಶದಂಚಿನಲ್ಲಿರುವ ಪ್ರಾಣಿಗಳಿಗೆ ವಿಶೇಷತಃ ಈ ಸೌಲಭ್ಯ ಅವುಗಳ ವಂಶಾಭಿವೃದ್ಧಿಗೆ ಸಹಕಾರಿ

ರಾಷ್ಟ್ರೀಯ ವರಮಾನ

(ಸಂ) ಒಂದು ದೇಶದಲ್ಲಿ ವಾರ್ಷಿಕವಾಗಿ ಉತ್ಪಾದಿತವಾದ ಎಲ್ಲ ವಸ್ತು ಮತ್ತು ಸೇವೆಗಳ ಒಟ್ಟು ಮೌಲ್ಯ. ಇದು ದೇಶದ ಅಭಿವೃದ್ಧಿ ಸೂಚಕ

ರಾಸಾಯನಿಕ

(ನಾ) ಸಂಯುಕ್ತ ಇಲ್ಲವೆ ನಿರ್ದಿಷ್ಟ ಸಂಯುಕ್ತಗಳು ಒಂದು ಗೊತ್ತಾದ ಅನುಪಾತದಲ್ಲಿ ಇರುವ ಮಿಶ್ರಣ. ರಾಸಾಯನಿಕ ಸಂಯೋಜನೆ ಖಚಿತವಿರುವ ದ್ರವ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App