भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರಕ್ತದಾನಿಗಳು

(ವೈ) ಇತರರಿಗೆ ಪೂರಣ ಮಾಡುವ ಸಲುವಾಗಿ ಸ್ವಂತ ರಕ್ತ ದಾನ ಮಾಡುವವರು

ರಕ್ತನಂಜು

(ವೈ) ಸೋಂಕಿನ ನೆಲೆಯಲ್ಲಿ ಸೂಕ್ಷ್ಮ ಜೀವಿಗಳು ಉತ್ಪಾದಿಸುವ ನಂಜು ಪದಾರ್ಥಗಳು ರಕ್ತಗತವಾಗಿ ಊತಕಗಳಿಗೆ ಸೇರಿದಾಗ ವ್ಯಕ್ತಿಯಲ್ಲಿ ಪ್ರಕಟವಾಗುವ ರೋಗ ಲಕ್ಷಣ. ಪ್ರೋಟೀನ್‌ನ ಅಪಸಾಮಾನ್ಯ ಉಪಾಪಚಯದಿಂದಲೂ ಉತ್ಪಾದಿತವಾಗಬಹುದು. ಟಾಕ್ಸೀಮಿಯ, ಜೀವಿವಿಷಬಾಧೆ

ರಕ್ತನಾಳ

(ಪ್ರಾ) ರಕ್ತ ಹರಿಯಲೆಂದು ರೂಪುಗೊಂಡಿದ್ದು ಖಚಿತ ಭಿತ್ತಿಗಳಿರುವ ಕೊಳವೆ. ಸಿರೆ, ಧಮನಿ, ಲೋಮನಾಳ ಇತ್ಯಾದಿ

ರಕ್ತನಾಳ ಸಂಕೋಚನ

(ವೈ) ರಾಸಾಯನಿಕಗಳ ಕಾರಣವಾಗಿ ಅಥವಾ ಸ್ವಾಯತ್ತ ನರಮಂಡಲದ ಕ್ರಿಯೆಯಿಂದಾಗಿ ರಕ್ತನಾಳಗಳು, ವಿಶೇಷವಾಗಿ ಸಿರೆಗಳು, ಸಂಕೋಚಿಸುವುದು

ರಕ್ತಭಕ್ಷಿ

(ಪ್ರಾ) ನೋಡಿ: ಹೀಮಟೊಫಾಗಸ್

ರಕ್ತಹೀನತೆ

(ವೈ) ರಕ್ತ ಪರಿಚಲನ ಮಂಡಲದಲ್ಲಿ ಪ್ರಕಟವಾಗುವ ಹೀಮೊಗ್ಲಾಬಿನ್ ಕೊರತೆ. (ಪವೈ) ಪ್ರಾಥಮಿಕ ರಕ್ತಹೀನತೆ: ಕೆಂಪು ಕೋಶಗಳು (ಹೀಮೊಗ್ಲಾಬಿನ್) ಉತ್ಪಾದನೆ ಆಗದಿರುವುದು. ದ್ವಿತೀಯಕ ರಕ್ತಹೀನತೆ: ರಕ್ತನಷ್ಟವಾಗುವುದು

ರಕ್ತಾಧಿಕ್ಯ

(ವೈ) ರಕ್ತಸಂಚಾರ ನಿಧಾನವಾದುದರಿಂದಾಗಿ ಅವಯವಗಳ ಕೆಳಭಾಗಗಳಲ್ಲಿ ರಕ್ತ ಸಾಮಾನ್ಯವಾಗಿ ಇರಬೇಕಾದುದಕ್ಕಿಂತ ಹೆಚ್ಚಿನ ಪ್ರಮಾಣಗಳಲ್ಲಿ ಕೂಡಿಕೊಳ್ಳುವುದು. ನೆತ್ತರುಗೂಡಿಕೆ

ರಕ್ತಾಮ್ಲತೆ

(ವೈ) ರಕ್ತ ಹಾಗೂ ಶರೀರ ಊತಕಗಳಲ್ಲಿ ಹೈಡ್ರೊಜನ್ ಅಯಾನ್‌ಗಳ ಸಾಂದ್ರೀಕರಣ ಹೆಚ್ಚಿರುವ ರೋಗ ಸ್ಥಿತಿ. ಆಮ್ಲೀಯತೆ. ಶ್ವಾಸಕೋಶಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಉಳಿದು ಕೊಳ್ಳುವುದು ಶ್ವಾಸೋಚ್ಛ್ವಾಸ ಆಮ್ಲೀಯತೆ. ಬಾಷ್ಪಶೀಲವಲ್ಲದ ಆಮ್ಲಗಳು ಉಳಿದುಕೊಳ್ಳುವುದು ಉಪಾಪಚಯಕ ಆಮ್ಲೀಯತೆ

ರಂಗು

(ರ) ರೇಷ್ಮೆ, ಉಣ್ಣೆ, ಹತ್ತಿ ವಸ್ತ್ರಗಳಿಗೆ ಬಣ್ಣ ಕೊಡಲು ಬಳಸುವ ರಾಸಾಯನಿಕ ಪದಾರ್ಥ. ಇತರ ವಸ್ತುಗಳಿಗೆ ಹೆಚ್ಚು ಕಡಿಮೆ ಶಾಶ್ವತ ಬಣ್ಣ ಕೊಡಲು ಬಳಸುವ ರಾಸಾಯನಿಕ. ವರ್ಣದ್ರವ್ಯ

ರಚನೆ

(ಗ) ರೇಖಾಗಣಿತದಲ್ಲಿ ಪ್ರಮೇಯಕ್ಕೆ ಸಾಧನೆ ಪಡೆಯುವ ದಿಶೆಯಲ್ಲಿ ಅನುಸರಿಸುವ ಒಂದು ಮಾರ್ಗ

ರಚಿಸು

(ಗ) ರೇಖೆಯ ಮೇಲಿನ ಎರಡು ಬಿಂದುಗಳು ಹೊರಗಿನ ಮೂರನೆಯ ಒಂದು ಬಿಂದುವಿನಲ್ಲಿ ಕೋನ ರಚಿಸುವುದು

ರಂಜಕ

(ರ) ನೋಡಿ: ಫಾಸ್ಫರಸ್

ರಂಜಕ ನಿವಾರಣೆ

(ತಂ) ಉಕ್ಕಿನ ತಯಾರಿಕೆ ಪ್ರಕ್ರಿಯೆಯಲ್ಲಿ ರಂಜಕವನ್ನು ಭಾಗಶಃ ಅಥವಾ ಪೂರ್ಣವಾಗಿ ತೊಡೆದುಹಾಕುವುದು. ಕ್ಯಾಲ್ಸಿಯಮ್ ಆಕ್ಸೈಡ್ ತುಂಬ ಇರುವಂಥ ಗಸಿ ಅಥವಾ ಕಿಟ್ಟ ರೂಪಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ

ರಜತಪರ್ಣಿ

(ಸ) ಬೆಳ್ಳಿಯ ಬಣ್ಣದ ಎಲೆಗಳಿರುವ

ರಜಸ್ವಲೆ

(ವೈ) ರಜಸ್ರಾವವು ಸಾಮಾನ್ಯವಾಗಿ ಮಹಿಳೆಯರಲ್ಲಿ ೧೩-೪೭ನೆಯ ವರ್ಷದ ನಡುವೆ ತಿಂಗಳಿಗೊಮ್ಮೆ ಘಟಿಸುವ ವಿದ್ಯಮಾನ. ಪ್ರತಿ ತಿಂಗಳು ಗರ್ಭಕಟ್ಟುವುದೆಂಬ ನಿರೀಕ್ಷೆಯಲ್ಲಿ ಗರ್ಭಾಶಯವು ಗರ್ಭ ಬೇರುಬಿಡಲು ಅಗತ್ಯವಾದ ಪರಿಸರವನ್ನು (ಊತಕ ಮೆತ್ತೆ) ರೂಪಿಸುತ್ತದೆ. ಗರ್ಭ ಕಟ್ಟದಿದ್ದಾಗ ಈ ಊತಕ ಮೆತ್ತೆ ಹಾಗೂ ಅಂಡಾಣು ನಶಿಸಿ ಯೋನಿ ಮಾರ್ಗವಾಗಿ ಹೊರ ಹರಿಯುತ್ತದೆ. ಈ ರಕ್ತಸ್ರಾವವೇ ರಜಸ್ಸು ಅಥವಾ ರಜಸ್ರಾವ. ಇದು ೪-೫ ದಿನಗಳವರೆಗೆ ನಡೆಯಬಹುದು. ಇಂತಹ ರಜಸ್ರಾವಕ್ಕೊಳಗಾದ ಮಹಿಳೆಯೇ ರಜಸ್ವಲೆ. ಋತುಮತಿ

ರಜೋಲೋಪ

(ವೈ) ಋತುಸ್ರಾವವಾಗದೆ ಇರುವುದು ಅಥವಾ ಅದು ಆಗದಂತೆ ತಡೆಯುವುದು

ರತಿ ರೋಗ

(ವೈ) ಸಾಮಾನ್ಯವಾಗಿ ಶುಕ್ಲ ದೋಷದಿಂದ ನರಳುತ್ತಿರುವವರೊಂದಿಗೆ ಲೈಂಗಿಕ ಸಂಭೋಗ ನಡೆಸಿದಾಗ ಹರಡುವ ಯಾವುದೇ ಅಂಟುರೋಗ. ಉದಾ : ಗಾನೊರೀಯ, ಸಿಫಿಲಿಸ್ ಇತ್ಯಾದಿ. ಗುಹ್ಯರೋಗ

ರತ್ನ

(ಭೂವಿ) ಗಡಸಾದ, ಸಾಣೆ ಹಿಡಿದು ಮೆರಗು ಕೊಟ್ಟ, ಪಾರಕ ಅಥವಾ ಅರೆ-ಪಾರಕ, ಮಾಲಿನ್ಯರಹಿತ ಪ್ರಶಸ್ತ ಖನಿಜ. ಉದಾ : ವಜ್ರ, ಪಚ್ಚೆ, ನೀಲ, ಪದ್ಮರಾಗ, ಪುಷ್ಯರಾಗ

ರತ್ನ

(ಸಾ) ಪಿವಟ್ ಬ್ಯಾರಿಂಗ್‌ಗಳಲ್ಲಿ ಪ್ಯಾಲೆಟ್‌ಗಳಲ್ಲಿ ಹಾಗೂ ಇಂಪಲ್ಸ್ ಪಿನ್‌ಗಳಲ್ಲಿ ಉಪಯೋಗಿಸುವ ಕೆಂಪು ಅಥವಾ ನೀಲಿ ನೈಸರ್ಗಿಕ ಶಿಲೆ ಅಥವಾ ಸಂಶ್ಲೇಷಿತ ಶಿಲೆ. ಅತ್ಯುತ್ತಮ ಮೆರಗು ಪಡೆಯಬಲ್ಲದು. ಅತ್ಯಂತ ಗಡಸು ಮೇಲ್ಮೆ ಇರುವುದರಿಂದ ತುಂಬ ಬಾಳಿಕೆ ಬರುವಂಥದು ಮತ್ತು ಬಲು ಕಡಿಮೆ ಘರ್ಷಣೆ ಒಡ್ಡುವಂಥದು. ಗಡಿಯಾರಗಳಲ್ಲಿ ಬೇರಿಂಗ್‌ಗಳಿಗೆ ಬಳಕೆ

ರತ್ನ ಶಿಲೆ

(ಭೂವಿ) ಅಲಂಕರಣಕ್ಕೆ, ಒಡವೆಗಳ ತಯಾರಿಕೆಗೆ, ತಕ್ಕುದಾದ ಖನಿಜೀಯ/ಶಿಲೀಕೃತ ಜೈವಿಕ ಪದಾರ್ಥ

Search Dictionaries

Loading Results

Follow Us :   
  Download Bharatavani App
  Bharatavani Windows App