भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರ‍್ಯಾಡಿಕಲ್

(ರ) ಯಾವುದೇ ಸಂಯುಕ್ತದ ಮೂಲವಾಗಿದ್ದು ಆ ಸಂಯುಕ್ತದ ಸಾಮಾನ್ಯ ರಾಸಾಯನಿಕ ಕ್ರಿಯೆಗಳಲ್ಲಿ ಬದಲಾವಣೆ ಹೊಂದದೆ ಅಣುವಿನಿಂದ ಅಣುವಿಗೆ ವರ್ಗಾವಣೆಯಾಗುವ, ಆದರೆ ಸ್ವತಃ ಸ್ವತಂತ್ರವಾಗಿ ಅಸ್ತಿತ್ವದಲ್ಲಿ ಇರಲಾರದ ಅಯಾನು. ಉದಾ: ಅಮೋನಿಯಮ್ ರ‍್ಯಾಡಿಕಲ್ NH4. (i) ಲವಣದಲ್ಲಿರುವ ಘಟಕ ಅಯಾನುಗಳು. ಆಮ್ಲದಿಂದ ಬಂದ ಅಯಾನನ್ನು ಆಮ್ಲ ರ‍್ಯಾಡಿಕಲ್ ಎಂದೂ ಪ್ರತ್ಯಾಮ್ಲದಿಂದ ಬಂದ ಅಯಾನನ್ನು ಪ್ರತ್ಯಾಮ್ಲ ರ‍್ಯಾಡಿಕಲ್ ಎಂದೂ ಹೇಳುವರು. (ii) ಸಹವೇಲೆನ್ಸೀಯ ಬಂಧ ಮುರಿದ ಫಲವಾಗಿ ಉಂಟಾಗುವ ಗುಂಪುಗಳು. ಇವನ್ನು ಮುಕ್ತ ರ‍್ಯಾಡಿಕಲ್‌ಗಳೆಂದೂ ಹೇಳುವುದುಂಟು. (ಗ) ಒಂದು ಸಂಖ್ಯೆಯ ಅಥವಾ ಪ್ರಮಾಣದ ಮೂಲ. ವರ್ಗಮೂಲ, ಘನಮೂಲ ಇತ್ಯಾದಿಗಳಿಗೆ ಸಂಬಂಧಿಸಿದ. ಪ್ರತೀಕ √. ಕರಣಿ

ರ‍್ಯಾಡಿಕಲ್ ಅಕ್ಷ

(ಗ) ಎರಡು ವೃತ್ತಗಳನ್ನು ಕುರಿತು ಸಮಘಾತವಿರುವಂತೆ (ನೋಡಿ: ಘಾತ) ಚಲಿಸುವ ಬಿಂದುವಿನ ಪಥ. ಇದೊಂದು ಸರಳರೇಖೆ. ಇದಕ್ಕೆ ಈ ವೃತ್ತಗಳ ರ‍್ಯಾಡಿಕಲ್ ಅಕ್ಷವೆಂದು ಹೆಸರು. ಇದು ವೃತ್ತ ಕೇಂದ್ರಗಳ ಜೋಡಣೆಗೆ ಲಂಬವಾಗಿದೆ. ಇದರ ಮೇಲಿನ ಯಾವುದೇ ಬಿಂದುವಿನಿಂದ ವೃತ್ತಗಳಿಗೆ ಎಳೆದ ಸ್ಪರ್ಶಕಗಳು ಸಮದೀರ್ಘತೆಯವು. ಪರಸ್ಪರ ಛೇದಿಸುವ ವೃತ್ತಗಳ ರ‍್ಯಾಡಿಕಲ್ ಅಕ್ಷವು ಆ ವೃತ್ತಗಳ ಸಾಮಾನ್ಯ ಜ್ಯಾ. ಪರಸ್ಪರ ಸ್ಪರ್ಶಿಸುವ ಎರಡು ವೃತ್ತಗಳ ರ‍್ಯಾಡಿಕಲ್ ಅಕ್ಷವು ಸ್ಪರ್ಶ ಬಿಂದುವಿನಲ್ಲಿ ಎಳೆದ ಸಾಮಾನ್ಯ ಸ್ಪರ್ಶಕ. ಮೂಲಾಕ್ಷ

ರ‍್ಯಾಡಿಕ್ಯಾಂಡ್

(ಗ) ರ‍್ಯಾಡಿಕಲ್ ಚಿಹ್ನೆಯ ಒಳಗಿರುವ ಪರಿಮಾಣ. ಉದಾ: √2 ಅನ್ನುವುದರಲ್ಲಿ ೨, ಅನ್ನುವುದರಲ್ಲಿ √a+b

ರ‍್ಯಾಡಿಕ್ಸ್

(ಜೀ) ಯಾವುದೇ ರಚನೆಯ, ವಿಶೇಷವಾಗಿ ನರದ, ಮೂಲ ಅಥವಾ ಆರಂಭ ಬಿಂದು. ಬೇರು

ರ‍್ಯಾಡ್ಯುಲ

(ಪ್ರಾ) ಇಕ್ಕವಾಟ ಜೀವಿಗಳ ಹೊರತಾಗಿ ಉಳಿದೆಲ್ಲ ಮೃದ್ವಂಗಿ ವರ್ಗಗಳ ಬಾಯಿಯಲ್ಲಿ ಕಂಡುಬರುವ ನಾಲಗೆಯಂಥ ಅಂಗ. ಇದರಲ್ಲಿ ಕೊಂಬಿನಿಂದಾದ ಪಟ್ಟಿ ಇರುತ್ತದೆ. ಪಟ್ಟಿಯ ಮೇಲ್ಮೈಯಲ್ಲಿ ಮುಳ್ಳು ದಂತಪಂಕ್ತಿಗಳು ಇರುತ್ತವೆ. ಆಹಾರ ಅರೆಯಲು ಈ ಪಟ್ಟಿ ನೆರವಾಗುತ್ತದೆ. ಕೆಲವು ಪ್ರಭೇದಗಳಲ್ಲಿ ಇದು ಹೆರೆಯಲು / ಕೊರೆಯಲು ನೆರವಾಗುವಂತೆ ಮಾರ್ಪಟ್ಟಿರುತ್ತದೆ

ರ‍್ಯಾಂಬ್ಲರ್

(ಸ) ೧. ಬೆಂಬಲವಿಲ್ಲದೆ ನೆಟ್ಟಗೆ ನಿಲ್ಲಲಾರದ ಕಾಂಡವಿರುವ ಗಿಡ. ಆಸರೆಗಾಗಿ ಉದ್ದ ಉದ್ದ ಹಬ್ಬಿಕೊಂಡು ಹೋಗುತ್ತದೆ. ೨. ಗುಲಾಬಿ ಬಳ್ಳಿ

ರ‍್ಯಾಮ್‌ಜೆಟ್

(ತಂ) ಜೆಟ್ ಎಂಜಿನ್‌ನ ಅತ್ಯಂತ ಸರಳರೂಪ. ಇದರಲ್ಲಿ ಪ್ರತ್ಯೇಕ ಸಂಪೀಡಕ ಇರುವುದಿಲ್ಲ. ವಿಮಾನ ಚಲನೆಯ ಅತಿವೇಗದ ಪರಿಣಾಮವಾಗಿ ಮುಂಭಾಗದಿಂದ ಪ್ರೇಷಿತವಾದ ವಾಯುಸಂಪೀಡನೆಗೊಳಗಾಗುತ್ತದೆ. ಈ ಸಂಪೀಡಿತ ವಾಯು ಇಂಧನದೊಂದಿಗೆ ಮಿಶ್ರವಾಗಿ, ಜ್ವಲಿಸಿ, ಜೆಟ್ (ಪ್ರವಾಹ) ರೂಪದಲ್ಲಿ ಎಂಜಿನ್ ನಳಿಕೆಯ ಹಿಮ್ಮುಖದಿಂದ ಹೊರಹೊಮ್ಮುತ್ತದೆ

ರ‍್ಹಿಜೊಟೋಮಿ

(ವೈ) ಕಶೇರು ನರಮೂಲಗಳ ಹಿಂಭಾಗದ ಅಥವಾ ಮುಂಭಾಗದ ಶಸ್ತ್ರಕ್ರಿಯೆ

ರ‍್ಹೀನಿಯಮ್

(ರ) ಬೆಳ್ಳಿ ಬಿಳುಪಿನ ಭಾರ ಲೋಹ ಧಾತು. ಪ್ರತೀಕ Re. ಪಸಂ ೭೫, ಸಾಪರಾ ೧೮೬.೨, ಸಾಸಾಂ ೨೧. ದ್ರಬಿಂ ೩೧೬೭0 ಸೆ ವೇಲೆನ್ಸಿ ೨, ೩, ೪, ೬, ೭, ಮಾಲಿಬ್ಡಿನಮ್ ಅದಿರುಗಳಲ್ಲಿ ಸಿಗುವ ಬಹಳ ಅಪರೂಪದ ಧಾತು. ಉನ್ನತ ಉಷ್ಣತೆಯ ಉಷ್ಣಯುಗ್ಮಗಳಲ್ಲಿ, ಕ್ರಿಯಾವರ್ಧಕಗಳಲ್ಲಿ ಬಳಕೆ

ರ‍್ಹೀಯೊಫೋರ್

(ತಂ) ವಿದ್ಯುತ್ ಸಾಗಣೆ ತಂತಿ

ರ‍್ಹೀಯೊಬೇಸ್

(ಪ್ರಾ) ಶಾರೀರಿಕ ಪ್ರತಿಕ್ರಿಯೆ ಉಂಟು ಮಾಡಲು ಅಗತ್ಯವಿರುವ ಕನಿಷ್ಠ ವಿದ್ಯುತ್ ಚೋದನೆ (ವೋಲ್ಟ್‌ಗಳು). ಅದಕ್ಕಿಂತ ಕಡಿಮೆ ಇದ್ದಲ್ಲಿ ಎಷ್ಟೇ ಹೊತ್ತು ಚೋದನೆ ನೀಡಿದರೂ ಪ್ರತಿಕ್ರಿಯೆ ಇರುವುದಿಲ್ಲ

ರ‍್ಹೀಯೊಸ್ಟಾಟ್

(ತಂ) ಅಪೇಕ್ಷಿತ ಪ್ರಮಾಣಕ್ಕೆ ರೋಧವನ್ನು ಬದಲಾಯಿಸುವ ಮೂಲಕ ವಿದ್ಯುತ್ ಪ್ರವಾಹ ನಿಯಂತ್ರಕ ಸಾಧನ

ರ‍್ಹೋಂಕಸ್

(ವೈ) ಆಸ್ತಮ ಹಾಗೂ ಬ್ರಾಂಕೈಟಿಸ್‌ನಿಂದ ನರಳುತ್ತಿರುವವರ ಎದೆಯ ಮೇಲೆ ಕಿವಿ ಅಥವಾ ಉಪಕರಣ ಇಟ್ಟಾಗ ಕೇಳಿ ಬರುವ ದೀರ್ಘವಾದ ಸಿಳ್ಳಿನಂಥ ಸದ್ದು

ರ‍್ಹೋಡಿಯಮ್

(ರ) ಪ್ಲಾಟಿನಮ್ ಗುಂಪಿಗೆ ಸೇರಿದ ಒಂದು ಲೋಹಧಾತು. ಪ್ರತೀಕ Rh. ಪಸಂ ೪೫, ಸಾಪರಾ ೧೦೨.೯೦೫೫ ಸಾ.ಸಾಂ ೧೨.೧ (೨೦0 ಸೆನಲ್ಲಿ) ದ್ರಬಿಂ ೧೯೯೬0ಸೆ ವಿದ್ಯುತ್ ನಿರೋಧಕತೆ ಸುಮಾರು ೫.೧x ೧೦-೮ ಓಮ್ ಮೀ. ಪ್ಲಾಟಿನಮ್ ಹೋಲುವ ಬೆಳ್ಳಿ ಬಿಳುಪಿನ ಶ್ರೇಷ್ಠ ಲೋಹ. ಬೆಳ್ಳಿಗೆ ಲೇಪಿತವಾಗಿ, ಉನ್ನತತಾಪದ ಉಷ್ಣಯುಗ್ಮಗಳಿಗೆ ಪ್ರೇರಕವಾಗಿ, ಮಿಶ್ರಲೋಹವಾಗಿ ಬಳಕೆ. ನೈಟ್ರಿಕ್ ಆಮ್ಲ ತಯಾರಿಸುವ ಓಸ್ವಾಲ್ಡ್ ವಿಧಾನದಲ್ಲಿ ಕ್ರಿಯಾವರ್ಧಕವಾಗಿಯೂ ಬಳಕೆ

ರ‍್ಹೋಂಬಸ್

(ಗ) ನೋಡಿ: ವಜ್ರಾಕೃತಿ

ರ‍್ಹೋಂಬೋಹಿಡ್ರಲ್ ವ್ಯವಸ್ಥೆ

(ಭೂವಿ) ಸ್ಫಟಿಕಗಳ ಈ ಗುಂಪನ್ನು ಕೆಲವರು ಪ್ರತ್ಯೇಕ ಸ್ಫಟಿಕ ವ್ಯವಸ್ಥೆ ಎಂದು ಪರಿಗಣಿಸುತ್ತಾರೆ; ಇತರರು ಟ್ರೈಗೊನಲ್ (ತ್ರಿನತ) ವ್ಯವಸ್ಥೆಯ ಒಂದು ವಿಭಾಗ (ವರ್ಗ) ಎಂದು ಪರಿಭಾವಿಸುತ್ತಾರೆ. ಈ ಎರಡನೆಯದರಲ್ಲಿ ರ‍್ಹೋಂಬಸ್ (ವಜ್ರಾಕೃತಿ) ಅಥವಾ ಇದನ್ನು ಆಧರಿಸಿದ ಯಾವುದೇ ರೂಪರಾಚನಿಕ ಏಕಮಾನವಾಗಿರುವುದು

Search Dictionaries

Loading Results

Follow Us :   
  Download Bharatavani App
  Bharatavani Windows App