भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರೈಡರ್

(ತಂ) ಯಂತ್ರಗಳಲ್ಲಿ, ಒಂದರ ಮೇಲೊಂದಿರುವ ಭಾಗ. ರೋಹಕ, ಸವಾರ

ರೈಬೊಫ್ಲೆವಿನ್

(ರ) ಬೆಳವಣಿಗೆಗೆ ಉತ್ತೇಜಕವಾದ ಜೀವಸತ್ತ್ವ (ವೈಟಮಿನ್)ಬಿ೨. ಹಸಿರು ತರಕಾರಿ ಯೀಸ್ಟ್, ಯಕೃತ್ತು ಮತ್ತು ಹಾಲಿನಲ್ಲಿ ಲಭ್ಯ. ಇದರ ಕೊರತೆ ನಾಲಿಗೆ ತುಟಿಗಳ ಊತಕ್ಕೆ, ಬಾಯಿಹುಣ್ಣಿಗೆ ಎಡೆಮಾಡಿಕೊಡುತ್ತದೆ. ಸೂತ್ರ : C17H20N4O6

ರೈಬೊಸೋಮ್

(ಪ್ರಾ) ಆರ್‌ಎನ್‌ಎ ಮತ್ತು ಪ್ರೋಟೀನ್‌ನ ಮೂರು ಉಪಘಟಕಗಳಿರುವ ಮಣಿ ಆಕಾರದ ರಚನೆಯುಳ್ಳ ಈ ಸಂಕೀರ್ಣ mRNAಯೊಂದಿಗೆ ಸೇರಿಕೊಳ್ಳಬಲ್ಲದು ಮತ್ತು mRNA ಸಂಕೇತೀಕರಿಸಿದ ಪಾಲಿಪೆಪ್ಟೈಡ್‌ಗಳ ಸೈಟೊಪ್ಲಾಸಮ್‌ನ ಸಂಶ್ಲೇಷಣೆಗೆ ಕ್ಷೇತ್ರವಾಗಿರಬಲ್ಲದು

ರೈಬೋಸ್

(ರ) C5H10O5. ಒಂದು ಏಕಶರ್ಕರ.

ರೈಲು ಮಾರ್ಗ

(ತಂ) ಪ್ರಯಾಣಿಕರನ್ನೂ ಸಾಮಾನು ಗಳನ್ನೂ ಹೊತ್ತು ಸ್ವಯಂಚಲಿ ಎಂಜಿನ್‌ನಿಂದ ಎಳೆಯಲ್ಪಟ್ಟ ಬಂಡಿ ಸಾಲುಗಳ ಓಡಾಟಕ್ಕಾಗಿ ಕಬ್ಬಿಣದ ಅಥವಾ ಉಕ್ಕಿನ ಕಂಬಿಗಳನ್ನು ಹಾಸಿ ಮಾಡಿರುವ ಜೋಡು ಕಂಬಿಗಳ ರಸ್ತೆ. ರೇಲ್ವೆ

ರೈಸಿನ್

(ರ) ಹರಳು ಬೀಜದ ಹೊಟ್ಟಿನ ವಿಷಕಾರಿ ಬಿಳಿಪುಡಿ. ಕಾಮಾಲೆ ಮತ್ತು ಹೃದಯ ಸ್ತಂಭನಗಳನ್ನು ಉಂಟುಮಾಡುತ್ತದೆ

ರೊಟೇಟರ್

(ತಂ) ಯಂತ್ರದ ಒಂದು ಭಾಗವನ್ನು ಅದರ ಅಕ್ಷದ ಸುತ್ತ ಸುತ್ತುವಂತೆ ಮಾಡುವ ಮತ್ತೊಂದು ವಿಭಾಗ. ಆವರ್ತಕ ಸಲಕರಣೆ

ರೊಟೇಟ್

(ಸ) ಹೂವಿನ ಅಕ್ಷಕ್ಕೆ ಲಂಬವಾಗಿರುವಂತೆ ಹರಡಿಕೊಂಡ ದಳಗಳುಳ್ಳ ಚಕ್ರಾಕಾರದ ದಳಸಂಪುಟ

ರೊಪ್ಪ

(ಸಾ) ದನ, ಹಂದಿ, ಕುರಿ ಮೊದಲಾದವನ್ನು ಕೂಡುವುದಕ್ಕಾಗಿ ಅಥವಾ ಅಂಥವೇ ಇತರ ಕೆಲಸಗಳಿಗಾಗಿ ಮಾಡಿರುವ ಸಣ್ಣ ಆವರಣ. ದೊಡ್ಡಿ. ಕೊಟ್ಟಿಗೆ (ಪ್ರಾ) ಶೀರ್ಷ ಪಾದಿಗಳ ಚಿಪ್ಪು ಅಥವಾ ಕಟಲ್ ಮೀನಿನ ಒಳಸಿಂಪಿ

ರೊಸೆಟ್

(ಜೀ) ಗುಲಾಬಿ ಹೂ ಹೋಲುವ ಯಾವುದೇ ಅಂಗರಚನೆ. (ಭೂವಿ) ಜಲಜಶಿಲೆಯಲ್ಲಿ ರೂಪುಗೊಂಡ ಬೆರೈಟ್, ಮಾರ್ಕಸೈಟ್ ಅಥವಾ ಪೈರೈಟ್‌ನ ಗುಲಾಬಿ ಆಕಾರದ ಸ್ಫಟಿಕೀಯ ರಾಶಿ. (ಸ) ಹೂ ಕಾಂಡದ ಬುಡದಲ್ಲಿ ಒಂದರೊಳಗೊಂದು ಇರುವಂಥ ಅನೇಕ ವೃತ್ತಗಳ ಆಕಾರದಲ್ಲಿ ಒಂದು ಮಧ್ಯಬಿಂದುವಿನ ಸುತ್ತ ಎಲೆಗಳು ಬೆಳೆದಿರುವುದು

ರೋಗಕಾಟ

(ವೈ) ಬ್ಯಾಕ್ಟೀರಿಯಗಳನ್ನುಳಿದು ಇತರ ಪರೋಪಜೀವಿಗಳ ದಾಳಿಗೊಳಗಾದಂಥ ಅಥವಾ ಅವುಗಳಿಂದ ಆಕ್ರಮಿಸಲ್ಪಟ್ಟಂಥ ಸ್ಥಿತಿ

ರೋಗಕಾರಕ ತ್ಯಾಜ್ಯ

(ಪವಿ) ಬ್ಯಾಕ್ಟೀರಿಯ, ವೈರಸ್ ಸೋಂಕು ಇರುವ, ಆಸ್ಪತ್ರೆ ಮತ್ತು ಪ್ರಯೋಗಾಲಯ ಗಳಿಂದ ವಿಸರ್ಜಿತವಾದ, ರೋಗ ಉಂಟುಮಾಡುವಂಥ ತ್ಯಾಜ್ಯ ವಸ್ತುಗಳು. ಇವುಗಳ ನಿರ್ವಹಣೆಗೆ ವಿಶೇಷ ವ್ಯವಸ್ಥೆ ಅವಶ್ಯ

ರೋಗಜನಕ

(ವೈ) ರೋಗಕಾರಕ ಜೀವಿ. ಉದಾ: ಪರತಂತ್ರಜೀವಿ, ಬ್ಯಾಕ್ಟೀರಿಯಮ್, ವೈರಸ್

ರೋಗದ ಮುನ್ನರಿವು

(ವೈ) ರೋಗ ಬರುವ ಮುನ್ನವೇ ರೋಗಿಗೆ ಅದು ಬರುತ್ತಿದೆ ಎಂಬುದರ ಸೂಚನೆ, ಸೆಳವರಿವು. ಅಪಸ್ಮಾರ ಅಥವಾ ಸೆಳವು ಬರುವ ಮುನ್ನ ಶೀತ ಗಾಳಿ ದೇಹದ ಒಂದು ಭಾಗದಿಂದ ತಲೆಗೆ ಏರುತ್ತಿರುವಂತೆ ತೋರುವಿಕೆ. ಈ ಮುನ್ಸೂಚನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಕಿವಿಯಲ್ಲಿ ಮೊರೆತ, ಕಣ್ಣಿನ ಮುಂದೆ ಮಿಂಚಿನ ಬೆಳಕು, ತಲೆಸುತ್ತು ಇತ್ಯಾದಿಗಳಲ್ಲಿ ಒಂದು ಅಥವಾ ಹೆಚ್ಚಿನವು ಕಂಡುಬರಬಹುದು. ಆರ

ರೋಗನಿರೋಧ

(ವೈ) ರೋಗ ತಡೆಯುವ ಚಿಕಿತ್ಸೆ

ರೋಗರಕ್ಷೆ

(ವೈ) ರೋಗಕಾರಕ ಜೀವಿಗಳ ಸೋಂಕಿಗೆ ಅಥವಾ ಅವುಗಳ ವಿಷಗಳ ದುಷ್ಪರಿಣಾಮಗಳಿಗೆ ಪ್ರಾಣಿ ಒಳಗಾಗದ ಸ್ಥಿತಿ. ಆ ಪ್ರಾಣಿಯ ರಕ್ತದಲ್ಲಿ ಪ್ರತಿಕಾಯಗಳೂ ಬಿಳಿರಕ್ತಕೋಶಗಳು (ಲಿಂಫೊಸೈಟ್‌ಗಳು) ಇರುವುದನ್ನು ಇದು ಅವಲಂಬಿಸಿದೆ. ಹುಟ್ಟಿನಿಂದಲೇ ಬಂದುದು ಒಂದು ವಿಧದ ರೋಗರಕ್ಷೆಯಾದರೆ ಅನಂತರ ಪಡೆದುದು ಇನ್ನೊಂದು ಮಾದರಿ. ಪಡೆದ (ಆರ್ಜಿತ) ರೋಗ ರಕ್ಷಣೆಯಲ್ಲೂ “ಸಕ್ರಿಯ” “ನಿಷ್ಕ್ರಿಯ” ಎಂದು ಎರಡು ವಿಧಗಳುಂಟು. ಮೊದಲಿನದರಲ್ಲಿ ಪ್ರತಿಕಾಯಗಳು ರಕ್ತ ಪ್ರವಾಹದಲ್ಲಿ ಆಗಲೇ ಇದ್ದು ರಕ್ಷಣೆ ಒದಗಿಸುತ್ತವೆ. ಇದು ದೀರ್ಘಕಾಲಿಕ. ಎರಡನೆಯದು ನಿರ್ದಿಷ್ಟ ರೋಗಜನಕದಿಂದ ಆಗಲೇ ರಕ್ಷಿತನಾದ ವ್ಯಕ್ತಿಯಿಂದ ಪಡೆದ ಲಸಿಕೆಯನ್ನು ಚುಚ್ಚಿ ಒಳಸೇರಿಸಿದುದರಿಂದ ಉಂಟಾದುದು. ಇದು ಹ್ರಸ್ವಕಾಲಿಕ.

ರೋಗಲಕ್ಷಣ

(ವೈ) ನೋಡಿ : ಲಕ್ಷಣ

ರೋಗವಾಹಕ

(ವೈ) ರೋಗಜನಕಗಳನ್ನು ಒಂದು ಜೀವಿಯಿಂದ ಇನ್ನೊಂದಕ್ಕೆ ಜೈವಿಕವಾಗಿ ಅಥವಾ ಯಾಂತ್ರಿಕವಾಗಿ ಒಯ್ಯಬಲ್ಲ ಮಧ್ಯವರ್ತಿ, ವಿಶೇಷವಾಗಿ ಕೀಟಗಳು

ರೋಗವಿಜ್ಞಾನ

(ವೈ) ರೋಗದ ಕಾರಣ, ಸ್ವಭಾವ ಹಾಗೂ ಶರೀರದಲ್ಲಾಗುವ ಮಾರ್ಪಾಡುಗಳು ಇತ್ಯಾದಿಗಳನ್ನು ಅಧ್ಯಯನ ಮಾಡುವ ವಿಜ್ಞಾನ ವಿಭಾಗ

ರೋಗಸೂಚಕ

(ವೈ) ನೋಡಿ : ಅನಾರೋಗ್ಯ ಸ್ವಭಾವದ

Search Dictionaries

Loading Results

Follow Us :   
  Download Bharatavani App
  Bharatavani Windows App