भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರೇಡಿಯೊ ತರಂಗಗಳು

(ಭೌ) ವಾಹಕದಲ್ಲಿ ಸುಮಾರು ೧೦ ಕಿಲೊಹರ್ಟ್ಸ್‌ನಿಂದ ಸುಮಾರು ೧೦,೦೦೦ ಮೆಗಾ ಹರ್ಟ್ಸ್‌ವರೆಗಿನ ವ್ಯಾಪ್ತಿಯಲ್ಲಿ ಬರುವ ಆವೃತ್ತಿಯಲ್ಲಿ ವಿದ್ಯುತ್ ಪ್ರವಾಹವನ್ನು ವಿಪರ್ಯಯಿಸುವುದರಿಂದ ಉತ್ಪಾದಿತವಾಗುವ ವಿದ್ಯುತ್ಕಾಂತೀಯ ತರಂಗಗಳು. ರೇಡಿಯೊ ಅಲೆಗಳು

ರೇಡಿಯೊ ದೂರದರ್ಶಕ

(ಭೌ) ಭೂಮಿಯ ವಾತಾವರಣದಲ್ಲಿನ ‘ರೇಡಿಯೊ ಗವಾಕ್ಷಿ’ಯ ಮೂಲಕ ಹಾದು ಬಂದು ಭೂಮಿಯ ಮೇಲ್ಮೈ ತಲಪಬಲ್ಲ ರೇಡಿಯೊ ಆವೃತ್ತಿಗಳ ವಿದ್ಯುತ್ಕಾಂತ ವಿಕಿರಣವನ್ನು ಪತ್ತೆ ಹಚ್ಚಲೂ ಅಳೆಯಲೂ ಬಳಸುವ ಉಪಕರಣ. ಇದರಲ್ಲಿ ಡಿಷ್ ಆಂಟೆನಾ, ದುರ್ಬಲ ಸಂಜ್ಞಾಗಳನ್ನು ಸಾವಿರಾರು ಪಟ್ಟು ಹಿಗ್ಗಿಸುವ ಪ್ರವರ್ಧಕಗಳು ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳಿರುತ್ತವೆ

ರೇಡಿಯೊ ನಿಯಂತ್ರಣ

(ತಂ) ನಿಂತ ಅಥವಾ ಚಲಿಸುತ್ತಿರುವ ವಸ್ತುಗಳನ್ನು ರೇಡಿಯೊ ಉತ್ಸರ್ಜಿತ ನಿಸ್ತಂತು ಸಂಜ್ಞಾಗಳ ಮೂಲಕ ನಿಯಂತ್ರಿಸುವುದು

ರೇಡಿಯೊ ನ್ಯೂಕ್ಲೈಡ್

(ಭೌ) ಅಸ್ಥಿರವಾಗಿದ್ದು ಸಹಜ ವಿಕಿರಣಪಟು ಕ್ಷಯಕ್ಕೊಳಗಾಗುವ ಯಾವುದೇ ನ್ಯೂಕ್ಲೈಡ್ (ಧಾತುವೊಂದರ ಸಮಸ್ಥಾನಿ). ಟೆಕ್ನಿಶಿಯಮ್-೯೯ ಒಂದು ಮುಖ್ಯ ರೇಡಿಯೊ ನ್ಯೂಕ್ಲೈಡ್. ಇದನ್ನು ವೈದ್ಯವಿಜ್ಞಾನದಲ್ಲಿ ರೋಗನಿದಾನ ಬಿಂಬೀಕರಣದಲ್ಲಿ ಬಳಸಲಾಗುತ್ತದೆ

ರೇಡಿಯೊ ಪ್ರಸಾರ

(ತಂ) ರೇಡಿಯೊ ಅಲೆ ಮಾಧ್ಯಮದ ಮೂಲಕ ಮಾಹಿತಿ ಧ್ವನಿ/ಚಿತ್ರವನ್ನು ಸಾರ್ವಜನಿಕ ಗ್ರಹಣೆಗಾಗಿ ಮಾಡುವ ಪ್ರಸಾರ. ನಿಸ್ತಂತು ಮಾಹಿತಿ ಪ್ರಸರಣ

ರೇಡಿಯೊ ಪ್ರೇಷಣೆ

(ಭೌ) ಪ್ರೇಷಕ ಏರಿಯಲ್‌ನಿಂದ ಗ್ರಾಹಕ ಏರಿಯಲ್‌ಗೆ ರೇಡಿಯೊ ಅಲೆಗಳ ಬಿತ್ತರ. ಪ್ರೇಷಕ ಏರಿಯಲ್‌ನಿಂದ ಪ್ರೇಷಿತವಾದ ಸಾಮಾನ್ಯ ಆವೃತ್ತಿಗಳ ರೇಡಿಯೊ ಅಲೆಗಳು ಅಯಾನ್‌ಗೋಲದಿಂದ ಪ್ರತಿಫಲಿತವಾಗಿ ಗ್ರಾಹಕ ಏರಿಯಲ್ ತಲಪುತ್ತವೆ. ಆದರೆ ಟಿವಿ ಪ್ರಸಾರದ ಪರಮ ಉನ್ನತ ಆವೃತ್ತಿ (UHF) ಮತ್ತು ಅತಿ ಉನ್ನತ ಆವೃತ್ತಿ (VHF) ತರಂಗಗಳು ಅಯಾನ್ ಗೋಲದಿಂದ ಹೆಚ್ಚು ಪ್ರತಿಫಲಿತವಾಗದೆ ಅದನ್ನು ಭೇದಿಸಿಕೊಂಡು ಹೋಗುವುದರಿಂದ ಟಿವಿ ಪ್ರಸಾರವನ್ನು ದೂರದೂರ ಪ್ರದೇಶಗಳಿಗೆ ಪ್ರೇಷಿಸಲು ಆಗದು. ಹಾಗಾಗಿ ದೀರ್ಘ ದೂರ ಟಿವಿ ಪ್ರಸಾರಗಳನ್ನು ಕೃತಕ ಉಪಗ್ರಹಗಳ ಮೂಲಕವಷ್ಟೆ ಮಾಡಲಾಗುತ್ತದೆ

ರೇಡಿಯೊ-ಇಮ್ಯುನೊ ನಿರ್ಧರಣೆ

(ವೈ) ವೈದ್ಯಕೀಯ ತಪಾಸಣೆಯಲ್ಲಿ ವಿಕಿರಣಶೀಲ ವಸ್ತುಗಳನ್ನು ಬಳಸಿಕೊಂಡು ಅತ್ಯಲ್ಪ ಪ್ರಮಾಣದ ರಾಸಾಯನಿಕ ವಸ್ತುಗಳನ್ನು

ರೇಡಿಯೊಆಕ್ಟೀನಿಯಮ್

(ರ) ಥೋರಿಯಮ್ ಸಮಸ್ಥಾನಿಯ ಸಾಂಪ್ರದಾಯಿಕ ನಾಮ. ಥೋರಿಯಂ ಕ್ಷಯಿಸಿದಾಗ ಉಂಟಾಗುತ್ತದೆ. ಆಕ್ಟೀನಿಯಮ್ ಶ್ರೇಣಿಯಲ್ಲಿ ಇರುವ ರಾಸಾಯನಿಕ ಧಾತು. ಪ್ರತೀಕ RdAc. ಸಾಪರಾ ೨೨೭. ಅರ್ಧಾಯು ೧೮.೯ ದಿನಗಳು

ರೇಡಿಯೊಗ್ರಾಫ್

(ಭೌ) ಎಕ್ಸ್-ಕಿರಣ ಹಾಗೂ ಗ್ಯಾಮ ಕಿರಣಗಳಂಥ ಹ್ರಸ್ವ ಅಲೆಯುದ್ದಗಳ ವಿಕಿರಣ ಮೂಡಿಸುವ ಬಿಂಬದ ಛಾಯಾಚಿತ್ರ ದಾಖಲೆ. ಇದು ರೋಗನಿದಾನದಲ್ಲೂ (ಎಕ್ಸ್-ಕಿರಣಗಳ ಬಳಕೆ) ಕೈಗಾರಿಕೋತ್ಪನ್ನಗಳಲ್ಲಿಯ ದೋಷ ಪತ್ತೆ ಹಚ್ಚುವುದರಲ್ಲೂ (ಉನ್ನತ ಶಕ್ತಿಯ ಎಕ್ಸ್-ಕಿರಣ, ಗ್ಯಾಮ ವಿಕಿರಣ, ನ್ಯೂಟ್ರಾನ್ ದಂಡ ಮತ್ತು ತೀರ ಈಚೆಗೆ ಆವೇಶಿತ ಕಣಗಳ ದಂಡಗಳ ಬಳಕೆ) ಉಪಯುಕ್ತ. ರೇಡಿಯೊಲೇಖ

ರೇಡಿಯೊಮೀಟರ್

(ಭೌ) ವಿದ್ಯುತ್ಕಾಂತ ವಿಕಿರಣ ಶಕ್ತಿ ಹಾಗೂ ಧ್ವನಿಕ ಶಕ್ತಿಗಳನ್ನು ಪತ್ತೆ ಹಚ್ಚಲೂ ಮಾಪನ ಮಾಡಲೂ ಬಳಸುವ ಸಲಕರಣೆ. ಉದಾ: ಥರ್ಮೊಪೈಲ್, ಬೋಲೊಮೀಟರ್, ಸೂಕ್ಷ್ಮ ರೇಡಿಯೊಮೀಟರ್, ನೋಡಿ: ಬೋಲೊಮೀಟರ್. ವಿಕಿರಣಮಾಪಕ

ರೇಡಿಯೊಸೋಂಡ್

(ಪವಿ) ವಾಯುಗೋಳದ ಉನ್ನತಮಟ್ಟಗಳಲ್ಲಿನ ಉಷ್ಣತೆ, ಒತ್ತಡ ಹಾಗೂ ಆರ್ದ್ರತೆಗಳನ್ನು ಅಳೆಯಲು ಬಳಸುವ ಉಪಕರಣ. ಇದನ್ನು ಬಲೂನ್‌ನಲ್ಲಿಟ್ಟು ಆಕಾಶಕ್ಕೆ ಹಾರಿಬಿಡಲಾಗುತ್ತದೆ. ಇದು ಆ ಎತ್ತರಗಳಲ್ಲಿ ತಾನು ಸಂಗ್ರಹಿಸಿದ ಮಾಹಿತಿಗಳನ್ನು ರೇಡಿಯೊ ಮೂಲಕ ಭೂಮಿಗೆ ಪ್ರೇಷಿಸುತ್ತದೆ. ಬಲೂನ್‌ನಲ್ಲಿ ರೇಡಿಯೊ ಲಕ್ಷ್ಯವನ್ನೂ ಅಳವಡಿಸಿರುವುದರಿಂದ ಎತ್ತರ ಮಟ್ಟಗಳಲ್ಲಿಯ ಮಾರುತಗಳ ಬಗೆಗಿನ ಮಾಹಿತಿಗಳನ್ನು ನೆಲದಿಂದಲೇ ಲೆಕ್ಕಹಾಕುವುದು ಸಾಧ್ಯ

ರೇತ್ರಜನಕ

(ಪ್ರಾ) ಪುಂಜನನ ಕೋಶಗಳ ಅಭಿವರ್ಧನೆಯಲ್ಲಿ ಒಂದು ಘಟ್ಟ. ಸ್ಪರ್ಮಟೊಗೋನಿಯಮ್‌ನ ಬೆಳವಣಿಗೆಯಿಂದ ಅಥವಾ ಇನ್ನೊಂದು ಸ್ಪರ್ಮಟೊಸೈಟ್‌ನ ವಿಭಜನೆಯಿಂದ ಸ್ಪರ್ಮಾಟಿಡ್‌ಗಳು ಉದ್ಭವಿಸುತ್ತವಾಗಿ ಈ ಘಟ್ಟ ಏರ್ಪಡುತ್ತದೆ

ರೇತ್ರನಾಳ ಛೇದನೆ

(ವೈ) ನೋಡಿ : ವ್ಯಾಸೆಕ್ಟಮಿ

ರೇಪ್‌ಸೀಡ್ ಎಣ್ಣೆ

(ಸ) ಬ್ರಾಸಿಕೇಸೀ ಕುಟುಂಬಕ್ಕೆ ಸೇರಿದ ಬ್ರಾಸ್ಸಿಕ ನೇಪಸ್ ಎಂಬ ಸಸ್ಯದ ಬೀಜದಿಂದ ತೆಗೆದ ಎಣ್ಣೆ. ಮೃದುಚಾಲಕವಾಗಿಯೂ ಸಾಬೂನು ಮತ್ತು ಇಂಡಿಯ ರಬ್ಬರುಗಳ ತಯಾರಿಕೆಯಲ್ಲಿಯೂ ಬಳಕೆ

ರೇಬಿಸ್

(ವೈ) ನಾಯಿಗಳಲ್ಲಿ ಪ್ರಧಾನವಾಗಿ ಕಂಡುಬರುವ ವೈರಸ್ ಅಂಟುಜಾಡ್ಯ. ಈ ಜಾಡ್ಯವಿರುವ ನಾಯಿ ಮನುಷ್ಯರನ್ನು ಕಚ್ಚಿದಾಗ ಜೊಲ್ಲಿನ ಮೂಲಕ ವೈರಸ್ ಮನುಷ್ಯರಲ್ಲೂ ಹರಡಿ ನರಗಳ ಮೂಲಕ ಸಾಗಿ ಮಿದುಳು ಅಥವಾ ಬೆನ್ನುಹುರಿಯನ್ನು ತಲಪುತ್ತದೆ. ನ್ಯೂರೊಟಾಕ್ಸಿನ್ ಎಂಬ ವಿಷವನ್ನು ಉತ್ಪಾದಿಸಿ ಜ್ವರ, ತಲೆನೋವು, ವಾಂತಿ, ಸುಸ್ತು ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಜಲದ್ವೇಷ, ಕಳವಳ, ಅಸ್ತಿಮಿತತೆ, ನಿದ್ರಾ ರಾಹಿತ್ಯ ಇತರ ಲಕ್ಷಣಗಳು. ರೋಗನಿರೋಧ ಕ್ರಮ ಕೈಗೊಳ್ಳದಿದ್ದಲ್ಲಿ ಇದು ಕೊನೆಗೆ ಪಾರ್ಶ್ವವಾಯು ಹಾಗೂ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ೧೪ ದಿನಗಳ ಕಾಲ ದಿನವೊಂದಕ್ಕೆ ೭-೧೪ ಮಿಲಿ ಲಸಿಕೆಯನ್ನು ಚುಚ್ಚುಮದ್ದು ರೂಪದಲ್ಲಿ ನೀಡುವುದು ಇದರ ರೋಗ ಉಪಚಾರ ವಿಧಾನ. ೧೮೮೫ರಲ್ಲಿ ಪಾಸ್ಟ್ಯುರರು ಕಂಡುಹಿಡಿದ ಈ ವಿಧಾನ ಈಗಲೂ ತುಸು ವ್ಯತ್ಯಾಸಗಳೊಂದಿಗೆ ಬಳಕೆಯಲ್ಲಿದೆ. ನಾಯಿ ಹುಚ್ಚು

ರೇಯಾನ್

(ತಂ) ಸೆಲ್ಯುಲೋಸ್‌ನಿಂದ ತಯಾರಿಸಿದ ರೇಷ್ಮೆಯಂಥ ಕೃತಕ ನಾರು. ಉಡುಪು ತಯಾರಿಕೆಯಲ್ಲಿ ಬಳಕೆ

ರೇಷ್ಮೆ

(ತಂ) ರೇಷ್ಮೆ ಹುಳುಗಳ ಗೂಡಿನ ನವುರಾದ ಎಳೆಗಳಿಂದ ಪಡೆಯಲಾದ ಪ್ರೋಟೀನ್ ನೂಲು. (ಭೂವಿ) ಮಾಣಿಕ್ಯವನ್ನೂ ಒಳಗೊಂಡಂತೆ ಕೆಲವು ಕುರಂದ ಖನಿಜಗಳಲ್ಲಿ ಕಂಡುಬರುವ ರೇಷ್ಮೆಯಂಥ ಹೊಳಪು. (ಪ್ರಾ) ನಾನಾ ಬಗೆಯ ಸಂಧಿಪದಿಗಳು ಸ್ರವಿಸುವ ದ್ರವವಸ್ತು. ಇದರಲ್ಲಿ ಫೈಬ್ರೊಯಿನ್, ಸೆರಿಸಿನ್ ಮತ್ತು ಇತರ ವಸ್ತುಗಳಿರುತ್ತವೆ. ಗಾಳಿಗೆ ಒಡ್ಡಿದಾಗ ಇದು ಗಟ್ಟಿಯಾಗಿ ದಾರವಾಗುತ್ತದೆ

ರೇಷ್ಮೆ ಗ್ರಂಥಿ

(ಪ್ರಾ) ಕೆಲವು ಕೀಟಗಳಲ್ಲಿ ಸ್ನಿಗ್ಧ ದ್ರವವನ್ನು ಸ್ರವಿಸುವ ಗ್ರಂಥಿ. ಈ ದ್ರವ ಹೊರಬಂದಾಗ ರೇಷ್ಮೆಯಂಥ ತಂತುಗಳ ರೂಪದಲ್ಲಿರುತ್ತದೆ. ಕೀಟಗಳಲ್ಲಿ ಇದು ಜೊಲ್ಲು ಗ್ರಂಥಿ, ಜೇಡರ ಹುಳುವಿನಲ್ಲಿ ಉದರ ಗ್ರಂಥಿ

ರೇಸಿಮಿಕ್ ಮಿಶ್ರಣ

(ರ) ದ್ಯುತಿಪಟುತ್ವ ಸಂಯುಕ್ತವೊಂದರ ಬಲಮುರಿ ಹಾಗೂ ಎಡಮುರಿ ಸಮಾಂಗಿ ಗಳು (ಐಸೊಮರ‍್ಸ್) ಸಮಪ್ರಮಾಣಗಳಲ್ಲಿ ಮಿಶ್ರಿತವಾದ ಮಿಶ್ರಣ. ಹಾಗಾಗಿ ಇದು ದ್ಯುತಿಪಟುವಲ್ಲ

ರೇಸ್

(ತಂ) ಜಲ ವಿದ್ಯುದಾಗಾರಗಳಲ್ಲಿ ಹೈಡ್ರಾಲಿಕ್ ಯಂತ್ರಗಳಿಗೆ ನೀರನ್ನು ಹಾಯಿಸುವ ಅಥವಾ ಅವುಗಳಿಂದ ನೀರನ್ನು ಹೊರಹಾಕುವ ನಾಲೆ

Search Dictionaries

Loading Results

Follow Us :   
  Download Bharatavani App
  Bharatavani Windows App