भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234Next >

ಯಕೃತ್ತಿನ

(ವೈ) ಪಿತ್ತಜನಕಾಂಗಕ್ಕೆ ಸಂಬಂಧಿಸಿದ

ಯಕೃತ್ತಿನ ದ್ವಾರ

(ವೈ) ಯಕೃತ್ತಿನೊಳಕ್ಕೆ ನರ, ಧಮನಿ, ಸಿರ ಮತ್ತು ದುಗ್ಧರಸ ನಾಳಗಳನ್ನು ಕೂಡಿಸುವ ದ್ವಾರ

ಯಕೃತ್ತು

(ವೈ) ಅಕಶೇರುಕಗಳಲ್ಲಿ ಜೀರ್ಣಕಾರಕ ಗ್ರಂಥಿ ಅಥವಾ ಹೆಪಟೊಪ್ಯಾಂಕ್ರಿಯಾಸ್. ಕಶೇರುಕಗಳಲ್ಲಿ ಒಂದು ನಾಳೀಯ ಗ್ರಂಥಿ. ಜಠರದ ಬಲಭಾಗದಲ್ಲಿರುತ್ತದೆ. ಕಡುಗೆಂಪು ಬಣ್ಣದ್ದು. ಪ್ಯಾರಂಕೈಮಾ ದ್ರವ್ಯದಿಂದ ಸದಾ ಕೂಡಿದ್ದು ಕವಚದಿಂದ ಆವೃತ. ಪಿತ್ತರಸ ಸ್ರವಿಸುತ್ತದೆ. ಕೆಲವೊಂದು ರಕ್ತ ಪ್ರೋಟೀನ್‌ಗಳನ್ನೂ ಕಿಣ್ವಗಳನ್ನೂ ತಯಾರಿಸುತ್ತದೆ. ರಕ್ತ ಪರಿಚಲನೆಯಲ್ಲಿ ಇರಬಹುದಾದ ಜೀವಾಣು ವಿಷಗಳನ್ನು ನಿವಾರಿಸುತ್ತದೆ. ಗ್ಲೂಕೋಸನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ. ಉಪಾಪಚಯಕಗಳ ಸಂಗ್ರಹ ಹಾಗೂ ಸಂಶ್ಲೇಷಣೆಯಲ್ಲಿ ಮುಖ್ಯ ಪಾತ್ರ. ಪಿತ್ತಜನಕಾಂಗ. ಈಲಿ

ಯಂತ್ರ

(ಭೌ) ೧. ಒಂದು ಬಿಂದುವಿನಲ್ಲಿರುವ ರೋಧವನ್ನು (ಹೊರೆಯನ್ನು) ಮತ್ತೊಂದು ಬಿಂದುವಿನಲ್ಲಿ ಬಲ (ಯತ್ನ) ಅನ್ವಯಿಸುವ ಮೂಲಕ ನಿವಾರಿಸಿ ಯಾಂತ್ರಿಕ ಕಾರ್ಯ ನಿರ್ವಹಣೆಯನ್ನು ಹೆಚ್ಚು ಸುಲಭಗೊಳಿಸುವ ಸಾಧನ. ಇಳಿತಲ, ಬೆಣೆ, ಸನ್ನೆಕೋಲು, ರಾಟೆ, ತಿರುಪುಮೊಳೆ ಹಾಗೂ ಅಕ್ಷದಂಡ-ಗಾಲಿ ಇವು ಸರಳ ಯಂತ್ರಗಳು. ೨. ಪ್ರತಿಯೊಂದು ಭಾಗಕ್ಕೂ ಗೊತ್ತಾದ ಒಂದು ಕಾರ್ಯವಿರುವ ಅನೇಕ ಭಾಗಗಳಿದ್ದು ಯಾಂತ್ರಿಕ ಶಕ್ತಿಯನ್ನು ನಿಯೋಜಿಸಲಾಗುವ ಸಲಕರಣೆ. ಉದಾ: ಹೊಲಿಗೆ ಯಂತ್ರ, ಮುದ್ರಣ ಯಂತ್ರ ಇತ್ಯಾದಿ

ಯಂತ್ರ ಸ್ಥಗಿತತೆ

(ತಂ) ನಿರ್ವಹಿಸಬೇಕಾದ ಕಾರ್ಯವನ್ನು ಮಾಡದೆ ಯಂತ್ರವನ್ನು ಸುಮ್ಮನೆ ಚಾಲೂ ಇಟ್ಟಿರುವುದು. ಸ್ಥಗನ

ಯಂತ್ರವಿಜ್ಞಾನ

(ಭೌ) ಕಾಯಗಳ ಮೇಲೆ ವರ್ತಿಸುವ ಬಲಗಳ ಮತ್ತು ಅವು ಪ್ರೇರಿಸುವ ಚಲನೆಗಳ ಅಧ್ಯಯನ. ಯಾಂತ್ರ

ಯಂತ್ರಸಂಕೇತ

(ಕಂ) ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆ. ಇದರಲ್ಲಿಯ ಪ್ರತಿಯೊಂದು ಯಂತ್ರ-ಸಂಕೇತ ಆದೇಶವನ್ನು ಕಂಪ್ಯೂಟರ್ ಯಾವುದೇ ಮಧ್ಯವರ್ತಿಯ ಅನುವಾದದ ಆವಶ್ಯಕತೆ ಇಲ್ಲದೆಯೇ ಗುರುತಿಸಿ ಕಾರ್ಯಗತಗೊಳಿಸಬಲ್ಲದು

ಯಂತ್ರಸ್ಥಾವರ

(ತಂ) ಯಾಂತ್ರಿಕ ಅಥವಾ ರಚನಾ ಉದ್ಯೋಗದಲ್ಲಿ ಅಗತ್ಯವಾಗಿರುವ ಯಂತ್ರ ಸಲಕರಣೆ ಮತ್ತಿತರ ಪರಿಕರಗಳು, ಕಾರ್ಖಾನೆ ಕಟ್ಟಡಗಳೂ ಇದರಲ್ಲಿ ಸೇರಿರುತ್ತವೆ

ಯಂತ್ರಾಂಶ

(ಕಂ) ಕಂಪ್ಯೂಟರನ್ನು ರೂಪಿಸುವ ಭೌತ ಪದಾರ್ಥ. ಎಲ್ಲ ಯಾಂತ್ರಿಕ, ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಘಟಕಗಳ ಸಮುಚ್ಚಯ. ಕಂಪ್ಯೂಟರ್‌ನ ಒಡಲು. ಹಾರ್ಡ್‌ವೇರ್

ಯಥಾದೃಷ್ಟಿ ರೂಪಣ

(ಗ) ಗೊತ್ತಾದ ಸ್ಥಾನದಿಂದ ಒಂದು ಘನ ವಸ್ತುವನ್ನು ನೋಡಿದರೆ ಅದು ಹೇಗೆ ಕಾಣುವುದೊ, ಅದೇ ಪರಸ್ಪರ ಸಂಬಂಧವುಳ್ಳ ಸ್ಥಾನ, ಪ್ರಮಾಣ ಮೊದಲಾದವುಗಳಲ್ಲಿ ಕಾಣುವಂತೆ, ಆ ವಸ್ತುವನ್ನು ಸಮತಲದ ಮೇಲೆ ನಿರೂಪಿಸುವ ಕಲೆ

ಯಥಾರ್ಥ ಕೋಣಿಕಾಂತರ

(ಖ) ನೋಡಿ: ಕೋಣಿಕಾಂತರ; ಹೋಲಿಸಿ: ಮಾಧ್ಯ ಕೋಣಿಕಾಂತರ, ಉತ್ಕೇಂದ್ರೀಯ ಕೋಣಿಕಾಂತರ

ಯಥಾವತ್ ಗಣನೆ

(ಸಂ) ಜನಗಣತಿಯ ಸಂದರ್ಭದಲ್ಲಿ (ಆ ದಿನದಂದು) ವ್ಯಕ್ತಿ ಎಲ್ಲೇ ಇದ್ದರೂ ಆತನ ಸಾಮಾನ್ಯ ವಾಸಸ್ಥಳಕ್ಕೆ ಅನುಗುಣವಾಗಿ ಆತನನ್ನು ದಾಖಲಿಸಿ ಕೊಳ್ಳುವುದು. ಭಾರತದ ದಶವಾರ್ಷಿಕ ಜನಗಣತಿಗಳಲ್ಲಿ ಈ ವಿಧಾನವನ್ನು ಬಳಸುತ್ತಾರೆ

ಯಮಳ

(ಸಾ) ದ್ವಿಯುಗ್ಮ. ಜೋಡಿ

ಯಮಳನ

(ಸ) ಬೆಂಬಲಕ್ಕಾಗಿ ಒಂದು ಸಸ್ಯ ಮತ್ತೊಂದರ ಸುತ್ತ ಅಪ್ಪಿಕೊಂಡು ಬೆಳೆಯುವುದು. (ರ) ವೃದ್ಧಿ, ಪರಿವರ್ತನೆ ಅಥವಾ ಪರಮಾಣುತಲ ಸರಿತದ ಮೂಲಕ ಯಮಳ ಸ್ಫಟಿಕವನ್ನು ರೂಪಿಸುವುದು

ಯಾ

(ತಂ) ಊರ್ಧ್ವಾಕ್ಷ ಕುರಿತಂತೆ ವಿಮಾನದ ಅಥವಾ ಯಾವುದೇ ನೌಕೆಯ ಕೋನೀಯ ಚಲನೆ. ಹಡಗು, ವಿಮಾನ, ಅಂತರಿಕ್ಷ ನೌಕೆ ಇತ್ಯಾದಿಗಳು ನೇರವಾಗಿ, ದೃಢವಾಗಿ ಹೋಗದೆ ಓಲಾಡುತ್ತ ಹೋಗುವುದು

ಯಾಂತ್ರ

(ಭೌ) ನೋಡಿ : ಯಂತ್ರವಿಜ್ಞಾನ

ಯಾಂತ್ರಿಕ ಲಾಭ

(ಭೌ) ಯಾವುದೇ ಯಂತ್ರದಲ್ಲಿ ರೋಧ (ಅಥವಾ ಹೊರೆ) ಮತ್ತು ಅನ್ವಿತ ಬಲ (ಅಥವಾ ಯತ್ನ) ಇವುಗಳ ನಡುವಿನ ನಿಷ್ಪತ್ತಿ

ಯಾಂತ್ರೀಯ ಸಿದ್ಧಾಂತ

(ಭೌ) ಸಮಸ್ತ ಜೈವಿಕ ವಿದ್ಯಮಾನಗಳನ್ನೂ ಯಾಂತ್ರಿಕ, ಭೌತಿಕ ಹಾಗೂ ರಾಸಾಯನಿಕ ಕ್ರಿಯೆಗಳಿಂದ ವಿವರಿಸಲು ಸಾಧ್ಯವೆಂಬ ದೃಷ್ಟಿಕೋನ. ಜೀವತತ್ತ್ವ ಸಿದ್ಧಾಂತಕ್ಕೆ (ವೈಟಲಿಸ್ಟಿಕ್ ಥಿಯರಿ) ವಿರುದ್ಧವಾದುದು. (ಸಾ) ಸಮಸ್ತ ಜೈವಿಕ ವಿದ್ಯಮಾನಗಳೂ, ಯಂತ್ರಕಾರ್ಯದಂತೆ, ನಿರ್ದಿಷ್ಟ ನಿಯಮ ಗಳಿಂದ ನಿಯಂತ್ರಿತವಾದವು. ಹಾಗಾಗಿ ಪ್ರತಿಯೊಂದು ಘಟನೆಯೂ ಆ ಮುನ್ನಿನ ಘಟನೆಯ ಫಲಿತಾಂಶವಷ್ಟೇ ಆಗಿರುತ್ತದೆಂಬ ಸಿದ್ಧಾಂತ

ಯಾದೃಚ್ಛಿಕ ಚರ

(ಸಂ) ಸಂಭವತೆ ನಿಯಮಾನುಸಾರ ಬೇರೆ ಬೇರೆ ಮೌಲ್ಯಗಳನ್ನು ತೆಗೆದುಕೊಳ್ಳುವ ಅವಿಚ್ಛಿನ್ನ, ವಿಚ್ಛಿನ್ನ ಅಥವಾ ಮಿಶ್ರ ಚರ

ಯಾಸ್

(ವೈ) ಉಷ್ಣವಲಯದಲ್ಲಿಯ ಅತಿ ತಾಪ ಮತ್ತು ಆರ್ದ್ರ ವಾಯುಗುಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ತಾಗುವ ಸಾಂಕ್ರಾಮಿಕ ರೋಗ. ಕೆಂಪುಗುಳ್ಳೆಗಳೇಳುವ ಒಂದು ರೀತಿಯ ಚರ್ಮದ ಅಂಟುರೋಗ
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App