भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಯೂರಿಯ

(ರ) CO(NH2)2. ಪ್ರೋಟೀನ್ ಉಪಾಪಚಯದ ನೈಸರ್ಗಿಕ ಉತ್ಪನ್ನ. ಮೂತ್ರದಲ್ಲಿರುವುದು. ಬಿಳಿ ಸ್ಫಟಿಕಗಳಾಗಿ ಅಥವಾ ಪುಡಿಯಾಗಿ ಸಂಶ್ಲೇಷಿಸಬಹುದು. ದ್ರಬಿಂ ೧೩೨0 ಸೆ ಸಾಸಾಂ ೧.೩. ಕಾರ್ಬನ್ ಡೈಆಕ್ಸೈಡ್ ಮತ್ತು ಅಮೋನಿಯಗಳನ್ನು ಉನ್ನತ ಒತ್ತಡದಲ್ಲಿ ಕಾಸಿ ತಯಾರಿಸಲಾಗುತ್ತದೆ. ನೀರು, ಆಲ್ಕಹಾಲ್, ಬೆನ್ಝೀನ್‌ಗಳಲ್ಲಿ ವಿಲೇಯ. ರಸಗೊಬ್ಬರ, ಪ್ಲಾಸ್ಟಿಕ್‌ಗಳು, ಅಂಟು ಪದಾರ್ಥ, ಜ್ವಾಲಾ ನಿರೋಧಕಗಳು ಮತ್ತು ಔಷಧಿಗಳಲ್ಲಿ ಬಳಕೆ. ಕಾರ್ಬಮೈಡ್

ಯೂರಿಯ ಚಕ್ರ

(ರ) ಯಕೃತ್ತಿನಲ್ಲಿ ಜರಗುವ ೪ ಅಮೀನೋಆಮ್ಲಗಳ ಚಕ್ರೀಯ ಕ್ರಿಯೆಗಳ ಶ್ರೇಣಿ. ಪರಿಣಾಮವಾಗಿ ಭೂ-ಕಶೇರುಕಗಳಲ್ಲಿ ಅಧಿಕ ನೈಟ್ರೊಜನ್ ಯೂರಿಯವಾಗಿ ವಿಸರ್ಜಿತವಾಗುತ್ತದೆ. ಯೂರಿಯವು ಸ್ತನಿಗಳಲ್ಲೂ ಸ್ವಲ್ಪಮಟ್ಟಿಗೆ ಇತರ ಪ್ರಾಣಿಗಳಲ್ಲೂ ರೂಪುಗೊಳ್ಳುತ್ತದೆ. ಯಕೃತ್ತು ಅಮೋನಿಯವನ್ನು ಅಷ್ಟು ವಿಷಕಾರಿಯಲ್ಲದ ಯೂರಿಯವನ್ನಾಗಿ ಪರಿವರ್ತಿಸುತ್ತದೆ. ಇದು ಮೂತ್ರದಲ್ಲಿ ದ್ರಾವಣ ರೂಪದಲ್ಲಿ ವಿಸರ್ಜಿತವಾಗುತ್ತದೆ. ಆರ್ನಿಥೈನ್ ಚಕ್ರ

ಯೂರಿಯೇಸ್

(ರ) ಜಲವಿಭಜನೆಯಿಂದ ಯೂರಿಯವು ಅಮೋನಿಯ ಮತ್ತು ಕಾರ್ಬನ್ ಡೈಆಕ್ಸೈಡ್ ಆಗಿ ಆಗುವುದನ್ನು ತ್ವರೆಗೊಳಿಸುವ ಕಿಣ್ವ. ರಕ್ತದಲ್ಲಿಯ ಯೂರಿಯ ಪ್ರಮಾಣವನ್ನು ಅಳೆಯಲು ಬಳಸುವುದುಂಟು

ಯೂರೆತ್ರ

(ಪ್ರಾ) ಮೂತ್ರ ವಿಸರ್ಜನ ನಾಳ. ಮೂತ್ರಕೋಶ ದಿಂದ ಮೂತ್ರ ಹೊರಸಾಗುವ ನಾಳ. ಪುಂಕಶೇರುಕಗಳಲ್ಲಿ ರೇತಸ್ಸು ಸಾಗಲೂ ನೆರವಾಗುತ್ತದೆ

ಯೂರೊಕ್ರೋಮ್

(ರ) ಮೂತ್ರದ ಸಹಜ ಹಳದಿ ಬಣ್ಣಕ್ಕೆ ಕಾರಣವಾಗುವ ಮುಖ್ಯ ವರ್ಣದ್ರವ್ಯ. ಯೂರೊಬಿಲಿನ್ ಮತ್ತು ಅಮೈನೋಆಮ್ಲಗಳಿಂದ ರೂಪಿತ. C43H51O26

ಯೂರೊರುಬಿನ್

(ವೈ) ಅಪಸಾಮಾನ್ಯ ಸಂದರ್ಭಗಳ ವೇಳೆ ಮೂತ್ರದಲ್ಲಿ ಕಂಡುಬರುವ ಕೆಂಬಣ್ಣದ ದ್ರವ್ಯ

ಯೂರೊಸ್ತೆನಿಕ್

(ಪ್ರಾ) ನೀರಿನಲ್ಲಿ ದೇಹ ಮುನ್ನುಗ್ಗಲು ನೆರವಾಗುವಂತೆ ಬಲಿಷ್ಠ ಬಾಲವಿರುವ

ಯೂರೋಪಿಯಮ್

(ರ) ವಿರಳಧಾತು ಗುಂಪಿನ ಲೋಹಧಾತು. ಪ್ರತೀಕ eu. ಪಸಂ ೬೩, ಸಾಪರಾ ೧೫೧.೯೬, ವೇಲೆನ್ಸಿ ೨ ಮತ್ತು ೩. ಮೊನೋಜೈಟ್, ಗಾಡೋಲಿನೈಟ್, ಸಮರ್ಸ್ಕೈಟ್, ಕ್ಸಿನೊಟೈಮ್‌ಗಳಲ್ಲಿ ಲಭ್ಯ

ಯೂರೋಬಿಲಿನ್

(ಪ್ರಾ) ಕರುಳಿನ ಬ್ಯಾಕ್ಟೀರಿಯಗಳು ಬಿಲಿರೂಬಿನ್ನನ್ನು ಅಪಕರ್ಷಿಸುವುದರಿಂದ ಉತ್ಪಾದನೆಯಾಗುವ ಮತ್ತು ಮೂತ್ರಪಿಂಡಗಳು ಹೊರಹಾಕುವ ಇಲ್ಲವೇ ಯಕೃತ್ತು ಹೊರತೆಗೆಯುವ ಪಿತ್ತವರ್ಣಕ

ಯೂಸೈಕ್ಲಿಕ್

(ಸ) ಪ್ರತಿಯೊಂದೂ ಅಥವಾ ಒಂದು ಬಿಟ್ಟು ಒಂದು ವಲಯದಲ್ಲಿ ಒಂದೇ ಸಂಖ್ಯೆಯ ಭಾಗಗಳಿರುವ (ಪುಷ್ಪ)

ಯೂಸ್ಟೀಲ್

(ಸ) ನಗ್ನ ಹಾಗೂ ಆವೃತ ಬೀಜ ಸಸ್ಯಗಳ ಕಾಂಡದಲ್ಲಿ ವಿಶೇಷವಾಗಿ ಕಂಡುಬರುವ ಆಹಾರ ಮತ್ತು ನೀರು ಸಾಗುವ ನಾಳಗಳ ಕಂತೆ

ಯೂಸ್ಟೇಕಿಯನ್ ಕವಾಟ

(ಪ್ರಾ) ಸ್ತನಿಗಳಲ್ಲಿ ಉಚ್ಚ ಮಹಾಧಮನಿಯ ತೆರಪುಗಳನ್ನು ನೀಚ ಮಹಾಧಮನಿಯ ತೆರಪುಗಳಿಂದ ಪ್ರತ್ಯೇಕಿಸುವ ಅಪೂರ್ಣಾವಸ್ಥೆಯ ಕವಾಟ. ಇದು ಭ್ರೂಣದಲ್ಲಷ್ಟೇ ಕ್ರಿಯಾಶೀಲವಾಗಿದ್ದು ಜನನಾನಂತರ ನಿಷ್ಕ್ರಿಯವಾಗುವುದು

ಯೂಸ್ಟೇಕಿಯನ್ ನಾಳ

(ಪ್ರಾ) ಕಶೇರುಕಗಳಲ್ಲಿ ಗಂಟಲಿನ ಮೇಲ್ಭಾಗದಿಂದ ನಡುಗಿವಿಯ ಕುಹರಕ್ಕೆ ಹೋಗುವ ನಾಳ. ಇದು ಸಾಮಾನ್ಯ ವಾಗಿ ಮುಚ್ಚಿರುತ್ತದೆ. ಆದರೆ ನುಂಗುವಾಗ ತೆರೆದು ಗಾಳಿ ನಡುಗಿವಿಗೆ ಹೋಗಲು ನೆರವಾಗು ತ್ತದೆ. ಇದರಿಂದ ಟಿಂಪಾನಮ್‌ನ (ಕಿವಿ ತಮಟೆಯ) ಎರಡು ಪಕ್ಕಗಳಲ್ಲೂ ಒತ್ತಡ ಸಮವಾಗುತ್ತದೆ. ಇಟಲಿಯ ಅಂಗರಚನಾಶಾಸ್ತ್ರಜ್ಞ ಬಾರ್ಟೊಲೊಮಿಯ ಯೂಸ್ಟೇಕಿಯ (೧೫೨೦-೭೪) ಗೌರವಾರ್ಥ ಈ ಹೆಸರು

ಯೋಗಾಂತರಾನುಪಾತ

(ಗ) a:b :: c:d ಆಗಿದ್ದರೆ (a+b) : (a-b) :: (c+d):(c-d) ಅಂತೆಯೇ (a-b) : (a+b) :: (c-d) : (c+d) ಕೂಡ ಸಾಧು ಎಂಬ ನಿಯಮ

ಯೋಜಕ

(ಗ) ನೋಡಿ: ಸಂಕಲನ

ಯೋಜ್ಯ

(ಗ) ನೋಡಿ: ಸಂಕಲನ

ಯೋನಿ

(ಪ್ರಾ) ಸ್ತ್ರೀಯಲ್ಲಿ ಗರ್ಭಾಶಯದಿಂದ ಭಗದವರೆಗೆ ವ್ಯಾಪಿಸಿರುವ ಜನನಾಂಗದ ನಾಲೆ

ಯೋನಿತುಟಿ

(ಜೀ) ನೋಡಿ : ಲೇಬಿಯಮ್

ಯೋನಿಪೊರೆ

(ವೈ) ಕನ್ಯೆಯ ಯೋನಿಯ ಬಹಿರ್ದ್ವಾರವನ್ನು ಮುಚ್ಚಿರುವ ಪೊರೆ. ಯೋನಿ ಪಟಲ

Search Dictionaries

Loading Results

Follow Us :   
  Download Bharatavani App
  Bharatavani Windows App