भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಯಿಟರ್ಬಿಯಮ್

(ರ) ಲ್ಯಾಂಥನೈಡ್ ಗುಂಪಿಗೆ ಸೇರಿದ ಬೆಳ್ಳಿ ಬಿಳುಪಿನ ವಿರಳಧಾತು. ಪ್ರತೀಕ yb. ಪಸಂ ೭೦; ಪತೂ ೧೭೩.೦೪; ದ್ರಬಿಂ ೧೧೩೨0 ಸೆ; ಸಾಸಂ ೧೮.೯೫. ಗ್ಯಾಡೊಲಿನೈಟ್, ಮೊನಸೈಟ್ ಹಾಗೂ ಕ್ಸಿನೊಟೈಮ್‌ಗಳಲ್ಲಿ ಲಭ್ಯ. ಲೇಸರ್ ಮತ್ತು ಎಕ್ಸ್-ಕಿರಣ ನಳಿಕೆಗಳಲ್ಲಿ ಬಳಕೆ. ಜೆ.ಡಿ.ಜಿ. ಮಾರಿಗ್ನಾಕ್ ೧೮೭೮ರಲ್ಲಿ ಶೋಧಿಸಿದುದು

ಯಿಟ್ರಿಯಮ್

(ರ) ರಾಸಾಯನಿಕವಾಗಿ ವಿರಳ ಧಾತುಗಳ ಗುಂಪಿಗೆ ಸೇರಿದೆ. ಬಿಳಿ ಬೂದು ಬಣ್ಣದ ಲೋಹೀಯ ಧಾತು. ಪ್ರತೀಕ y. ಪಸಂ ೩೯; ಪತೂ ೮೮.೯೦೫. ದ್ರಬಿಂ ೧೫೨೩0 ಸೆ ಯುರೇನಿಯಮ್ ಅದಿರುಗಳಲ್ಲಿ ಲಭ್ಯ. ಫ್ರಿಡ್ರಿಕ್ ವೊಹ್ಲೆರ್ ೧೮೨೮ರಲ್ಲಿ ಶೋಧಿಸಿದರು. ಬಣ್ಣದ ಟಿವಿಗಳಲ್ಲಿ ಮತ್ತು ಅವಾಹಕಗಳಲ್ಲಿ ಬಳಕೆ

ಯೀಸ್ಟ್

(ವೈ) ಶಿಲೀಂಧ್ರ ಗುಂಪಿಗೆ ಸೇರಿದ ಏಕಕೋಶೀಯ ಸೂಕ್ಷ್ಮಜೀವಿಗಳು. ಇವು ಉತ್ಪಾದಿಸುವ ಕಿಣ್ವಗಳು ಸಕ್ಕರೆಯನ್ನು ಆಲ್ಕಹಾಲ್, ಕಾರ್ಬನ್ ಡೈಆಕ್ಸೈಡ್‌ಗಳಾಗಿ ಪರಿವರ್ತಿಸುತ್ತವೆ

ಯುಕ್ತ ತಂತ್ರವಿದ್ಯೆ

(ಸಾ) ನೋಡಿ : ಪರ್ಯಾಯ ತಂತ್ರವಿದ್ಯೆ

ಯುಕ್ಸೆನೈಟ್

(ರ) ಕಪ್ಪು-ಕಂದು ವರ್ಣದ ವಿರಳಧಾತು ಖನಿಜ. ನಿಯೋಬಿಯಮ್ ಟಾಂಟಲಮ್ ಹಾಗೂ ಯಿಟ್ರಿಯಮ್, ಎರ್ಬಿಯಮ್, ಸೆರಿಯಮ್, ಥೋರಿಯಮ್ ಮತ್ತು ಯುರೇನಿಯಮ್‌ಗಳ ಟೈಟನೇಟ್ – ಇವುಗಳ ಆಕ್ಸೈಡ್‌ಗಳನ್ನು ಒಳಗೊಂಡಿರುವುದರಿಂದ ಅಮೂಲ್ಯ

ಯುಗ

(ಭೂವಿ) ಭೂವಿಜ್ಞಾನದ ಒಂದು ಕಾಲಮಾನ. ಕಲ್ಪದ ಒಂದು ವಿಭಾಗ

ಯುಗಳರೂಪಿ

(ಪ್ರಾ) ದ್ವಿಪಾರ್ಶ್ವೀಯ ಸಮಮಿತಿ ಇರುವ. (ಸ) ಒಂದೇ ತೆರನಾದ ಭಾಗಗಳಾಗಿ ವಿಭಾಗವಾಗುವ ಹೂ

ಯುಗ್ಮ

(ಭೌ) ಸಮಾಂತರ ಆದರೆ ವಿರುದ್ಧ ದಿಶೆಗಳಲ್ಲಿ ವರ್ತಿಸುವ ಎರಡು ಸಮಬಲಗಳ ವ್ಯವಸ್ಥೆ. ಬಲರೇಖೆಗಳ ನಡುವಿನ ಲಂಬದೂರಕ್ಕೆ ಯುಗ್ಮದ ಬಾಹುವೆಂದು ಹೆಸರು. ಈ ಎರಡು ಬಲಗಳಲ್ಲೊಂದರ ಪರಿಮಾಣ ಮತ್ತು ಆ ಬಾಹುವಿನ ಉದ್ದ ಇವುಗಳ ಗುಣಲಬ್ಧವೇ ಯುಗ್ಮದ ಸಂವೇಗ; ಬಲಗಳ ಸಮತಲಕ್ಕೆ ಲಂಬವಾಗಿರುವ ಯಾವುದೇ ಸರಳರೇಖೆ ಯುಗ್ಮದ ಅಕ್ಷ. ವಸ್ತುವಿಗೆ ಯುಗ್ಮ ತಿರುಚು ಚಲನೆ ಕೊಡುತ್ತದೆ

ಯುಗ್ಮ ಪರಿಕರ್ಮ

(ಗ) ಯಾವುವೇ a, b s ಆಗಿದ್ದು , a,*bas* ಆಗಿದ್ದರೆ ಆಗ * ಎಂಬುದು s ಗಣದಲ್ಲಿ ಒಂದು ಯುಗ್ಮ ಪರಿಕರ್ಮ. ಉದಾ : ಸ್ವಾಭಾವಿಕ ಸಂಖ್ಯೆಗಳ ಗಣದಲ್ಲಿ ಸಂಕಲನ (+) ಮತ್ತು ಗುಣಾಕಾರ (x) ಯುಗ್ಮ ಪರಿಕರ್ಮಗಳು; ವ್ಯವಕಲನ ಭಾಗಾಹಾರಗಳು ಅಲ್ಲ

ಯುಗ್ಮ ಬೀಜಕ

(ಸ) ದಪ್ಪ ಭಿತ್ತಿಯ ವಿಶ್ರಾಂತ ಬೀಜಕ

ಯುಗ್ಮ ಸಂಯುಕ್ತ

(ರ) ಎರಡೇ ಧಾತುಗಳಿಂದ ಆದ ಸಂಯುಕ್ತ. ಇದರ ಹೆಸರಿನ ಮುಂದೆ – ಐಡ್ ಪ್ರತ್ಯಯವಿರುತ್ತದೆ. ಉದಾ: ಕ್ಯಾಲ್ಸಿಯಂ ಆಕ್ಸೈಡ್ CaO, ಕ್ಯಾಲ್ಸಿಯಂ ಕಾರ್ಬೈಡ್ CaC2, ಮೆಗ್ನಿಸಿಯಮ್ ನೈಟ್ರೈಡ್ Mg3N2, ಅಲ್ಯೂಮಿನಿಯಮ್ ಫಾಸ್ಫೈಡ್ AlP ಇತ್ಯಾದಿ

ಯುಗ್ಮಕ

(ಪ್ರಾ) ಸಂತಾನೋತ್ಪತ್ತಿಗೆ ಹೆಣ್ಣು ಒದಗಿಸುವ ಅಂಡ ಮತ್ತು ಗಂಡು ಒದಗಿಸುವ ರೇತ್ರಗಳಲ್ಲಿ ಒಂದು. ಜಂಪತಿ. ಯುಗ್ಮಕಗಳು ಅಗುಣಿತ, ಅಂದರೆ ಅವು ಸಹಜ (ದ್ವಿಗುಣಿತ) ಕ್ರೋಮೊಸೋಮ್ ಸಂಖ್ಯೆಯ ಅರ್ಧದಷ್ಟನ್ನು ಒಳಗೊಂಡಿರುತ್ತವೆ. ಹಾಗಾಗಿ ಎರಡೂ ಮಿಲನಗೊಂಡಾಗ ದ್ವಿಗುಣಿತ ಸಂಖ್ಯೆ ಪುನರ್‌ಸ್ಥಾಪಿತವಾಗುತ್ತದೆ. ಯುಗ್ಮಕಗಳು ಮಯೋಸಿಸ್‌ನಿಂದ ರೂಪುಗೊಳ್ಳುತ್ತವೆ. ಎರಡು ಯುಗ್ಮಕಗಳು ಸೇರಿ ಒಂದು ಯುಗ್ಮಜ (ಜೈಗೋಟ್) ಆಗುತ್ತದೆ

ಯುಗ್ಮಕ ಜನನ

(ಪ್ರಾ) ಮೂಲ ಲೈಂಗಿಕ ದ್ವಿಗುಣಿತ ವರ್ಣತಂತುಗಳುಳ್ಳ ಜೀವಕೋಶಗಳಿಂದ ಏಕಗುಣಿತ ಯುಗ್ಮಕ ಗಳನ್ನು ಉಂಟುಮಾಡುವ ಪ್ರಕ್ರಿಯೆ

ಯುಗ್ಮಕ ಸಮ್ಮಿಲನ

(ಜೀ) ಯುಗ್ಮಕ ಸಂಯೋಗದಿಂದ ಆಗುವ ಲೈಂಗಿಕ ಪ್ರಜನನ

ಯುಗ್ಮಕ ಸಸ್ಯ

(ಸ) ಲಿಂಗಕೋಶಗಳನ್ನು ಉತ್ಪಾದಿಸುವ ಸಸ್ಯ ಅಥವಾ ಪೀಳಿಗೆ ಪರ್ಯಾಯ ಪ್ರದರ್ಶಿಸುವ ಸಸ್ಯಗಳಲ್ಲಿ ಒಂದು ಘಟ್ಟ. ಒಂದು ಪೀಳಿಗೆಯಲ್ಲಿ ಲೈಂಗಿಕ ಅವಯವಗಳಿದ್ದು ಮುಂದಿನ ಪೀಳಿಗೆಯಲ್ಲಿ ಇಲ್ಲದಿರುವ ಸಸ್ಯ

ಯುಗ್ಮಕಪುಟಿ

(ಪ್ರಾ) ಕೆಲವು ಪ್ರೋಟೊಜೋವಗಳಲ್ಲಿ ಕೂಡುತ್ತಿರುವ ಎರಡು ಜಂಪತಿಗಳ (ಲೈಂಗಿಕ ಕೋಶಗಳ) ಸುತ್ತ ರೂಪುಗೊಂಡ ಸಂಚಿ. ಸ್ಪೋರೊಜೋವಾಗಳಲ್ಲಿ, ಆತಿಥೇಯ ಜೀವಿಯಲ್ಲಿ ಚಲಯುಗ್ಮಜ ಬದಲಾಗುವಂಥ ನಿಷ್ಕ್ರಿಯ ಮಜಲು

ಯುಗ್ಮಜ

(ಪ್ರಾ) ನಿಷೇಚಿತ ಅಂಡಾಣುವಿನಿಂದ

ಯುಗ್ಮನ

(ಜೀ) ಕೆಳದರ್ಜೆಯ ಸಸ್ಯ ಅಥವಾ ಪ್ರಾಣಿಗಳಲ್ಲಿ ವಂಶಾಭಿವೃದ್ಧಿಯ ಮೊದಲ ಹಂತವಾಗಿ ಎರಡು ಸಮಯುಗ್ಮಕಗಳು ಒಂದುಗೂಡುವುದು

ಯುಗ್ಮೋತ್ಪತ್ತಿ

(ಭೌ) ಪರಮಾಣು ಬೀಜದ ಒಳಕ್ಕೆ ಫೋಟಾನ್ ತೂರಿದಾಗ ಸಂಭವಿಸುವ ಪಾಸಿಟ್ರಾನ್ ಮತ್ತು ಎಲೆಕ್ಟ್ರಾನ್ ಸೃಷ್ಟಿ. ನೋಡಿ : ಕಾಂಪ್ಟನ್ ಪರಿಣಾಮ

ಯುಗ್ಯಾಮಿಕ್

(ಪ್ರಾ) ಪ್ರೌಢಾವಸ್ಥೆಯ ಕಾಲಕ್ಕೆ ಸಂಬಂಧಿಸಿದ

Search Dictionaries

Loading Results

Follow Us :   
  Download Bharatavani App
  Bharatavani Windows App