भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮಹೋನ್ಮಾದ

(ವೈ) ವ್ಯಾಧಿಗ್ರಸ್ತ ಮನಸ್ಸಿನ ಒಂದು ಸ್ಥಿತಿ. ಈ ಸ್ಥಿತಿಯಲ್ಲಿ ವ್ಯಕ್ತಿ ತಾನೊಬ್ಬ ಸರ್ವಶಕ್ತ, ಮಹೋನ್ನತ ಹಾಗೂ ಅತ್ಯಂತ ಪ್ರಮುಖ ಎಂಬ ಭ್ರಾಂತಿಯಲ್ಲಿರುತ್ತಾನೆ. ಅತಿಸ್ವಪ್ರತಿಷ್ಠೆ

ಮಳಿ

(ಪ್ರಾ) ಸ್ಟ್ರೋಂಬಿಡೀ ಕುಟುಂಬಕ್ಕೆ ಸೇರಿದ ದೊಡ್ಡ ವರ್ಣಮಯ ಉದರಪದಿ ಮೃದ್ವಂಗಿಗಳ ಹಲವು ಪ್ರಭೇದಗಳ ಸಾಮಾನ್ಯ ಹೆಸರು. ಇದರ ಚಿಪ್ಪನ್ನು ಕಲ್ಲು ಕೆತ್ತನೆ ಹಾಗೂ ರತ್ನ ಕೆತ್ತನೆ ಕಾರ್ಯಗಳಲ್ಲೂ ಮತ್ತು ಪಿಂಗಾಣಿ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಚಿಪ್ಪುಮೀನು

ಮಳೆ

(ಪವಿ) ಮೋಡಗಳಿಂದ ನೀರು ಹನಿಗಳಾಗಿ ಸುರಿಯುವುದು. ಗಾಳಿ ಬಲು ತಂಪಾದುದರ ಪರಿಣಾಮವಾಗಿ ನೀರಿನ ಆವಿ ಸಾಂದ್ರೀಕೃತವಾಗಿ ಹನಿಗಳು ಒಟ್ಟಿಗೆ ಗುಂಪು ಕೂಡುತ್ತವೆ. ಇವುಗಳ ತೂಕವು ಇವನ್ನು ಮೇಲಕ್ಕೆ ತಳ್ಳಿದ ಗಾಳಿಯ ಒತ್ತಡವನ್ನು ಮೀರಿದಾಗ ಹನಿಯಾಗಿ ಕೆಳಕ್ಕೆ ಸುರಿಯುತ್ತವೆ. ವ್ಯಾಸ ೦.೫ ಮಿಮೀಗೂ ಹೆಚ್ಚಾದಾಗ ಹನಿಯಾಗಿ ಕಮ್ಮಿಯಾದಾಗ ತುಂತುರಾಗಿ ಕೆಳಬೀಳುತ್ತವೆ

ಮಳೆ ಕಾಡು

(ಸ) ಆರ್ದ್ರ ಉಷ್ಣವಲಯದ ನೈಸರ್ಗಿಕ ಕಾಡು ಪ್ರದೇಶ. ಮಳೆ ಸುರಿತ ವರ್ಷಕ್ಕೆ ೨೫೦೦ ಮಿಮೀಗೂ ಹೆಚ್ಚಿರುವಂಥ ಪ್ರದೇಶಗಳಲ್ಲಿ ಕಾಣಬರುತ್ತದೆ. ನಾನಾ ಪ್ರಭೇದಗಳ ಅಪಾರ ಪ್ರಾಣಿ ಹಾಗೂ ಸಸ್ಯ ಸಂಪತ್ತು, ೩೦ ಮೀಟರ್‌ಗೂ ಹೆಚ್ಚು ಎತ್ತರದ ಮರಗಳು, ನೆಲದಿಂದ ಮೇಲಕ್ಕೆ ಹಬ್ಬಿಕೊಂಡು ಹೋದ ಬಳ್ಳಿ ಸಸ್ಯಗಳು, ಪರೋಪಜೀವಿಗಳು, ಅಪ್ಪು ಗಿಡಗಳು ಇಲ್ಲಿಯ ವೈಶಿಷ್ಟ್ಯವಾಗಿರುತ್ತವೆ

ಮಳೆ ಗುರುತುಗಳು

(ಭೂವಿ) ಕೆಲವು ಭೂಸ್ತರಗಳ ಕೆಳಗಿನ ತಲಗಳಲ್ಲಿ ಉಂಟಾಗುವ ಹೆಚ್ಚು ಕಡಿಮೆ ಗುಂಡಾದ, ಲಂಬವಾದ ಇಲ್ಲವೇ ಇಳುಕಲಾದ ಗುಂಡಿಗಳು. ಗಡಸು ಮೆಕ್ಕಲು ಅಥವಾ ಜೇಡಿಮಣ್ಣಿನ ಮೇಲೆ ಬಿದ್ದ ಭಾರ ಮಳೆ ಹನಿಗಳು ಉಂಟುಮಾಡಿದ ಗುರುತುಗಳು ಇವು ಎಂದು ಊಹಿಸಲಾಗಿದೆ

ಮಳೆ ಸುರಿತ

(ಪವಿ) ಗೊತ್ತಾದ ಪ್ರದೇಶದಲ್ಲಿ ಗೊತ್ತಾದ ಕಾಲದಲ್ಲಿ ಬಿದ್ದ, ಬೀಳುವ, ಮಳೆಯ ಮೊತ್ತ. ಸಾಮಾನ್ಯವಾಗಿ ವರ್ಷಕ್ಕೆ ಇಷ್ಟು ಮಿಮೀಗಳೆಂದು ಅಳತೆ

ಮಳೆಮಾಪಕ

(ಪವಿ) ಗೊತ್ತಾದ ಕಾಲದಲ್ಲಿ (ಸಾಮಾನ್ಯವಾಗಿ ೨೪ ಗಂಟೆ) ಸುರಿದ ಮಳೆಯ ಮೊತ್ತವನ್ನು ಅಳೆಯುವ ಸಲಕರಣೆ. ಲಾಳಿಕೆಯ ರೂಪದಲ್ಲಿದ್ದು ಇದು ಅಂಶಾಂಕಿತ ನೀಳ ಕತ್ತಿನ ಪಾತ್ರೆ ಯೊಳಕ್ಕೆ ಇಳಿದಿರುತ್ತದೆ. ವೃಷ್ಟಿಮಾಪಕ. ಮಳೆಪಿಡಿ

ಮಾಕ್ಸ

(ವೈ) ಸಂಧಿವಾತ ರೋಗದಲ್ಲಿ ಉದ್ರೇಕವನ್ನು ತಗ್ಗಿಸಲು ಉಪಯೋಗಿಸುವ ಪದಾರ್ಥ. ‘ಮಾಕ್ಸ’ ಗಿಡದ ಎಲೆಗಳನ್ನು ಒಣಗಿಸಿ ತಯಾರಿಸುವ ಪದಾರ್ಥಕ್ಕೂ ಈ ಹೆಸರಿದೆ. ಇದನ್ನು ಚರ್ಮದ ಮೇಲಿಟ್ಟು ಸುಡುವುದು ಚಿಕಿತ್ಸಾ ಕ್ರಮ. ಜಪಾನಿನ ದೇಶೀಯ ವೈದ್ಯ ಪದ್ಧತಿಯಲ್ಲಿ ಆಚರಣೆಯಲ್ಲಿದೆ

ಮಾಂಗ್ರೆಲ್

(ಜೀ) ಒಂದು ಪ್ರಭೇದದ ಹಲವು ತಳಿಗಳ ಅಥವಾ ಜಾತಿಗಳ ಸೇರಿಕೆಯಿಂದ ಹುಟ್ಟಿದ ಬೆರಕೆ ಪ್ರಾಣಿ ಅಥವಾ ಸಸ್ಯ. ಗೊತ್ತಾದ ತಳಿಗೆ ಸೇರದ ಅಡ್ಡತಳಿಯ ನಾಯಿ

ಮಾಡ್ಯುಲನ

(ಭೌ) ಸಾಮಾನ್ಯವಾಗಿ ಒಂದು ರೇಡಿಯೋ ಆವೃತ್ತಿಯನ್ನು ಇನ್ನೊಂದು ರೇಡಿಯೋ ಆವೃತ್ತಿಗೆ ಬದಲಾಯಿಸುವ ಪ್ರಕ್ರಿಯೆ. ಇದರಲ್ಲಿ ಮೂರು ಮುಖ್ಯ ಮಾದರಿಗಳು ಇವೆ: ಪಾರ ಮಾಡ್ಯುಲನ; ಆವೃತ್ತಿ ಮಾಡ್ಯುಲನ; ಪ್ರಾವಸ್ಥಾ ಮಾಡ್ಯುಲನ. ಸಂಕೇತ, ಮಾತು, ದೃಶ್ಯ, ಮಾಹಿತಿ ಇತ್ಯಾದಿಗಳಲ್ಲಿಯ ಸಮಾಚಾರವನ್ನು ಅದಕ್ಕಿಂತ ಹೆಚ್ಚು ಉನ್ನತ ಆವೃತ್ತಿಯ ವಾಹಕದಲ್ಲಿ ಮೂಡಿಸುವ ಪ್ರಕ್ರಿಯೆ. ತಿರುವರ್ತನ

ಮಾಡ್ಯುಲಸ್

(ಭೌ) ಪೀಡನದಲ್ಲಿರುವ (ಸ್ಟ್ರೆಸ್) ವಸ್ತುವಿನ ವಿರೂಪಣೆಯನ್ನು ನಿರ್ಧರಿಸುವ ಸ್ಥಿರಾಂಕ. ಪೀಡನಕ್ಕೂ ಕೃಷ್ಟಿಗೂ (ಸ್ಟ್ರೈನ್) ನಡುವಿನ ನಿಷ್ಪತ್ತಿ. ಮಾಡ್ಯುಲಸ್ = ಪೀಡನ ¸ ಕೃಷ್ಟಿ. ನೋಡಿ: ಕೃಷ್ಟಿ, ಪೀಡನ

ಮಾಡ್ಯುಲಸ್

(ಗ) ೧. ಲಘುಗಣಕದ ಮಾಡ್ಯುಲಸ್. ೨. ಮಿಶ್ರ ಸಂಖ್ಯೆಯ ಮಾಡ್ಯುಲಸ್: a+ib ಮಿಶ್ರಸಂಖ್ಯೆಯ ಮಾಡ್ಯುಲಸ್ . ಮಿಶ್ರಸಂಖ್ಯೆಯನ್ನು r (cos( + isin ) ರೂಪದಲ್ಲಿ ನಿರೂಪಿಸಿದ್ದಾದರೆ ಇದರ ಮಾಡ್ಯುಲಸ್ r. 3. ಯಾವುದೇ ಸಂಖ್ಯೆಯ ಮಾಡ್ಯುಲಸ್ ಅದರ ಸಾಂಖ್ಯಕ ಮೌಲ್ಯ: -೫ರ ಮಾಡ್ಯುಲಸ್ ಇದಕ್ಕೆ ನಿರಪೇಕ್ಷ ಮೌಲ್ಯವೆಂದೂ ಹೆಸರಿದೆ. ನೋಡಿ: ಸಮಶೇಷತೆ

ಮಾಡ್ಯೂಲ್

(ತಂ) ೧. ಕಂಬದ ತಳತ್ರಿಜ್ಯ. ೨. ಯಂತ್ರ ಭಾಗಗಳ ರಚನೆಯಲ್ಲೂ ಕಟ್ಟಡಗಳ ಯೋಜನೆಯಲ್ಲೂ ಬಳಸುವ ಒಂದು ಏಕಮಾನ. ೩. ಅಂತರಿಕ್ಷ ನೌಕೆಯಲ್ಲಿ ಪ್ರತ್ಯೇಕವಾದ ಹಾಗೂ ಪ್ರತ್ಯೇಕಿಸಬಹುದಾದ ಒಂದು ಅಂಕಣ. ೪. ಗಿಯರ್ ವ್ಹೀಲ್‌ನಲ್ಲಿ (ಹಲ್ಲು ಚಕ್ರ) ಪಕ್ಕಪಕ್ಕದ ಎರಡು ಹಲ್ಲುಗಳ ನಡುವಿನ ಅಂತರವನ್ನು (ವ್ಯಾಸ) ಹಲ್ಲುಗಳ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ದೊರೆಯುವ ಸಂಖ್ಯೆ

ಮಾಣಿಕ್ಯ

(ಭೂವಿ) ರತ್ನ ಖನಿಜ. ಕುರಂದ ಖನಿಜದ ಒಂದು ಬಗೆ. ಕಡುಗೆಂಪು ಬಣ್ಣ. ಅಲ್ಯೂಮಿನಿಯಮ್ ಆಕ್ಸೈಡ್; ಸೂತ್ರ (AI2O3). ತ್ರಿಭುಜೀಯ ವ್ಯವಸ್ಥೆಯಲ್ಲಿ ಸ್ಫಟಿಕೀಕರಣ; ಅಲ್ಪ ಪ್ರಮಾಣದ ಕ್ರೋಮಿಯಮ್‌ನಿಂದ ಇದಕ್ಕೆ ಈ ಬಣ್ಣ. ಕೆಂಪು

ಮಾತೃ

(ವೈ) ಸ್ತ್ರೀ ಜನ್ಮದಾತೃ. ತನ್ನಂಥವೇ ಇತರ ಕಾಯಗಳನ್ನು ರೂಪಿಸುವ ಯಾವುದೇ ಕೋಶ ಅಥವಾ ಇತರ ರಚನೆ

ಮಾತೃ ದ್ರವ

(ರ) ಸ್ಫಟಿಕೀಕರಣದ ಮೂಲಕ ವಸ್ತುಗಳನ್ನು ಹೊರತೆಗೆದನಂತರ ಉಳಿದ ದ್ರಾವಣ

ಮಾತೃಕೆ

(ಜೀ) ಊತಕದ ಜೀವಕೋಶಗಳ ಮಧ್ಯೆ ಇರುವ ದ್ರವ್ಯ. ಯಾವುದೇ ವಸ್ತು ವಿಕಾಸವಾಗುವ, ಹೊಮ್ಮುವ ಸ್ಥಳ. ಗರ್ಭಕೋಶ. (ಭೂವಿ) ರತ್ನ ಮೊದಲಾದವನ್ನು ಒಳ ಗೊಂಡಿರುವ ಶಿಲೆ. ರತ್ನಗರ್ಭಶಿಲೆ. ಶಿಲೆಗಳಲ್ಲಿ ದಪ್ಪ ಘಟಕಗಳು ಹುದುಗಿರುವ ಸಣ್ಣ ಕಣಗಳ ಅವಿಚ್ಛಿನ್ನ ರಾಶಿ. (ತಂ) ೧. ಗಾರೆ ಅಥವಾ ಕಾಂಕ್ರೀಟಿನಲ್ಲಿ ಸಮಷ್ಟಿಯನ್ನು ಒಟ್ಟಾಗಿ ಬಿಗಿದಿರಿಸುವ ಸುಣ್ಣ ಅಥವಾ ಸಿಮೆಂಟ್. ೨. ಅನೇಕ ಸಂಜ್ಞಾಮೂಲಗಳನ್ನು ನಿರ್ದಿಷ್ಟ ಲೆಕ್ಕಾಚಾರಕ್ಕೆ ಅನುಗುಣವಾಗಿ ಸಂಯೋಜಿಸುವ ಉದ್ದೇಶದ, ಉದಾ: ವರ್ಣ ಟಿವಿ ವ್ಯವಸ್ಥೆಯಲ್ಲಿ ವರ್ಣ ಸಹನಿರ್ದೇಶಾಂಕಗಳನ್ನು ಪರಿವರ್ತಿಸುವ ಉದ್ದೇಶದ, ಎಲೆಕ್ಟ್ರಾನಿಕ್ ಮಂಡಲಗಳ ಜಾಲ. (ವೈ) ಊತಕ ಕೋಶಗಳು ಹುದುಗಿರುವ ಅಸ್ಥಿ ಮೃದ್ವಸ್ಥಿ ಊತಕಗಳ ಘಟಕ. (ರ) ಮಿಶ್ರ ಲೋಹದ ಪ್ರಧಾನ ಘಟಕ (ಗ) ಸಂಖ್ಯೆಗಳನ್ನು ಅಡ್ಡ ಮತ್ತು ನೀಟ ಸಾಲುಗಳಲ್ಲಿ ರಚಿಸಿರುವ ವ್ಯೂಹ. ಉದಾ: ಇಲ್ಲಿಯ ಬಿಡಿ ಪದಗಳಿಗೆ ಮಾತೃಕೆಯ ಧಾತುಗಳೆಂದು ಹೆಸರು. m ಅಡ್ಡಗಳೂ n ನೀಟಗಳೂ ಇರುವ ಮಾತೃಕೆಯ ದರ್ಜೆ m x n. ಮಾತೃಕೆಯ ಪ್ರತಿಯೊಂದು ಧಾತುವೂ ೦ ಆದಾಗ ಅದು ಶೂನ್ಯ ಮಾತೃಕೆ. ಅಡ್ಡ ಮತ್ತು ನೀಟ ಸಾಲುಗಳ ಸಂಖ್ಯೆ ವಿಭಿನ್ನವಾದಾಗ ಆಯತ ಮಾತೃಕೆ. ಒಂದೇ ಆಗಿರುವಾಗ ಚೌಕ ಮಾತೃಕೆ. ಒಂಟಿ ಅಡ್ಡ ಸಾಲು ಇರುವುದು ಅಡ್ಡಮಾತೃಕೆ. ಒಂಟಿ ನೀಟಸಾಲು ಇರುವುದು ನೀಟಮಾತೃಕೆ. ಚೌಕ ಮಾತೃಕೆಯಲ್ಲಿ ಎಡಮೇಲಿನಿಂದ ಬಲಕೆಳಕ್ಕೆ ಹಾದುಹೋಗುವ ಕರ್ಣದಲ್ಲಿರುವ ಧಾತುಗಳಿಗೆ ಪ್ರಧಾನ ಕರ್ಣಧಾತುಗಳೆಂದು ಹೆಸರು. ಇನ್ನೊಂದರಲ್ಲಿಯವು ದ್ವಿತೀಯಕ ಕರ್ಣಧಾತುಗಳು. ಚೌಕ ಮಾತೃಕೆಯಲ್ಲಿ ಪ್ರಧಾನ ಕರ್ಣಧಾತುಗಳ ಹೊರತಾಗಿ ಉಳಿದವು ೦ ಆದಾಗ ಅದು ಕರ್ಣಮಾತೃಕೆ; ಜೊತೆಗೆ ಪ್ರತಿಯೊಂದು ಕರ್ಣಧಾತುವೂ ಒಂದೇ ಆದಾಗ ಅದಿಶ ಮಾತೃಕೆ. ಪ್ರತಿಯೊಂದು ಕರ್ಣಧಾತುವೂ ೧ ಆದಾಗ ಅನನ್ಯ ಅಥವಾ ಏಕಮಾತೃಕೆ. ಚೌಕಮಾತೃಕೆಯ ನಿರ್ಧಾರಕ ೦ ಆದಾಗ ವಿಶಿಷ್ಟ ಮಾತೃಕೆ. ಆಗದಾಗ ಅವಿಶಿಷ್ಟ ಮಾತೃಕೆ. ಏಕಕಾಲಿಕ ಬೈಜಿಕ ಸಮೀಕರಣ ವ್ಯವಸ್ಥೆಯ ಸುಲಭ ಪರಿಹಾರ ಮಾತೃಕೆಯ ಅನೇಕ ಉಪಯೋಗಗಳ ಪೈಕಿ ಒಂದು

ಮಾತೃಕೆಯ ಪರಿವರ್ತಿ

(ಗ) ದತ್ತ ಮಾತೃಕೆಯ ನೀಟಸಾಲುಗಳು ಅಡ್ಡಸಾಲುಗಳಾಗಿರುವ ಮಾತೃಕೆ

ಮಾತೃಕೆಯ ಲಾಕ್ಷಣಿಕ ಸಮೀಕರಣ

(ಗ) ಚೌಕಮಾತೃಕೆ ಕುರಿತಂತೆ ಮಾತ್ರ ವ್ಯಾಖ್ಯಿತವಾಗಿದೆ. ದತ್ತ ಮಾತೃಕೆಯ ಪ್ರತಿಯೊಂದು ಕರ್ಣಧಾತು aiiಯನ್ನು aiixನಿಂದ ಪ್ರತಿಸ್ಥಾಪಿಸಿದಾಗ ಲಭಿಸುವ ಮಾತೃಕೆಯ ನಿರ್ಧಾರಕವನ್ನು ಶೂನ್ಯಕ್ಕೆ ಸಮೀಕರಿಸಿದರೆ ದೊರೆಯುವ ಸಮೀಕರಣ. ಇದರ ಮೂಲಗಳಿಗೆ ಗುಪ್ತ ಮೂಲಗಳು ಅಥವಾ ಐಗನ್ ಮೌಲ್ಯಗಳು ಎಂದು ಹೆಸರು

ಮಾತೃಕೋಶ

(ಪ್ರಾ) ವಿಭಜನೆಗೊಂಡು ಜನ್ಯಕೋಶ ಗಳನ್ನು ನೀಡಬಲ್ಲ ಯಾವುದೇ ಕೋಶ. ಬೀಜಕಗಳನ್ನು ಪರಾಗಕಣ ಗಳನ್ನು, ಯುಗ್ಮಕಗಳನ್ನು ಹಾಗೂ ರಕ್ತಕಣಗಳನ್ನು ನೀಡಲೋಸುಗ ವಿಭಜನೆಗೊಳ್ಳುವ ಕೋಶಗಳಿಗೆ ಅನ್ವಯ

Search Dictionaries

Loading Results

Follow Us :   
  Download Bharatavani App
  Bharatavani Windows App