भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮರುಭೂಮೀಕರಣ

(ಭೂ) ಹವಾಗುಣದ ಸಹಜ ಪರಿವರ್ತನೆಗಳ ಫಲವಾಗಿ ಅಥವಾ ಅರೆಶುಷ್ಕ ವಲಯದ ಅವ್ಯವಸ್ಥಿತ ನಿರ್ವಹಣೆಯ ಫಲವಾಗಿ ಶುಷ್ಕ ಬಂಜರು ಮರುಭೂಮಿ – ಸದೃಶ ಪರಿಸ್ಥಿತಿಗಳ ನಿರ್ಮಾಣ

ಮರುಸಂಯೋಗ

(ಭೌ) ಆವೇಶಗಳ ಸಂಯೋಜನೆಯಿಂದ ಅಥವಾ ಎಲೆಕ್ಟ್ರಾನ್‌ಗಳ ವರ್ಗಾವಣೆಯಿಂದ ಅನಿಲದಲ್ಲಿಯ ಅಯಾನ್‌ಗಳ ತಟಸ್ಥೀಕರಣ. (ಜೀ) ಯುಗ್ಮಕಗಳು ಅಥವಾ ಪುನರುತ್ಪಾದಕ ಕೋಶಗಳು ರೂಪುಗೊಂಡಾಗ ಜೀನ್‌ಗಳಲ್ಲಾಗುವ ಪುನರ್‌ವ್ಯವಸ್ಥೆ. ಪುನಃಸಂಯೋಗ

ಮರುಹೀರಿಕೆ

(ಭೂವಿ) ಶಿಲಾಪಾಕದ ಉಷ್ಣತೆ, ಒತ್ತಡ ಅಥವಾ ಸಂಯೋಜನೆಯಲ್ಲಿಯ ಬದಲಾವಣೆಗಳ ಪರಿಣಾಮವಾಗಿ ಅದರ ಖನಿಜ ಅಥವಾ ಶಿಲಾಚೂರುಗಳು ಮತ್ತೆ ಭಾಗಶಃ ಅಥವಾ ಪೂರ್ಣ ದ್ರವರೂಪ ತಾಳುವುದು. ಪುನರವಶೋಷಣ. (ಜೀ) ದೇಹದೊಳಗೆ ಊತಕಗಳು ಹೀರಿ ಹೋಗುವುದು, ಒಳಗೇ ಕರಗಿ ಹೋಗುವುದು

ಮರ್ಕ್ಯೂರಿಕ್ ಕ್ಲೋರೈಡ್

(ರ) HgCl2 ಕರೋಸಿವ್ ಸಬ್ಲಿಮೇಟ್. ರಸಕರ್ಪೂರ. ಉತ್ಪತನ ಹೊಂದುವ ವಿಷ ಪದಾರ್ಥವಾದ್ದರಿಂದ ಹೀಗೆ ಕರೆಯಲಾಗಿದೆ. ಬಿಳಿ ಹರಳುರೂಪಿ ವಿಲೇಯಘನ ಪೂತಿನಾಶಕವಾಗಿ ಬಳಕೆ

ಮರ್ಕ್ಯೂರಿಕ್ ಫಲ್ಮಿನೇಟ್

(ರ) ಮರ್ಕ್ಯೂರಿಕ್ ಐಸೊಸಯನೇಟ್. Hg(ONC)2. ಬಿಳಿ ಹರಳು ರೂಪಿ ಘನ. ಘರ್ಷಣೆಯಾದಾಗ ಸಿಡಿಯುವ ಗುಣ. ಸ್ಫೋಟನ ಉತ್ತೇಜಕ. ಆದ್ದರಿಂದ ವಿಸ್ಫೋಟಕವಾಗಿ ಬಳಕೆ

ಮರ್ಕ್ಯೂರಿಕ್ ಸಲ್ಫೈಡ್

(ರ) Hgs ಸಿನಬಾರ್ ಅದಿರು ರೂಪದಲ್ಲಿ ಲಭ್ಯ. ಅವಿಲೇಯ ಕೆಂಪು ಪುಡಿ. ದ್ರಬಿಂ. ೫೮೩.೩0 ಸೆ. ವರ್ಣದ್ರವ್ಯವಾಗಿ ಉಪಯುಕ್ತ

ಮರ್ತ್ಯತೆ

(ವೈ) ಯುದ್ಧದಿಂದ ಅಥವಾ ಜಾಡ್ಯದಿಂದ ಆದ ಭಾರಿ ಪ್ರಮಾಣದ ಸಾವು. ಪ್ರಾಣಹಾನಿ, ಸಾವಿನ ದರ

ಮರ್ಮರ

(ವೈ) ಎದೆಗೂಡಿನ ಮೇಲೆ ಸ್ಟೆತೊಸ್ಕೋಪ್ ಇಟ್ಟು ಹೃದಯದ ಮಿಡಿತವನ್ನು ಆಲಿಸಿದಾಗ ಮಿಡಿತದಲ್ಲಿ ಕೇಳಿಬರುವ ಲಯ ತಪ್ಪಿದ ಶಬ್ದ. ಸಾಮಾನ್ಯವಾಗಿ ಇದು ಹೃದಯ ಕವಾಟಗಳ ರೋಗವನ್ನು ಸೂಚಿಸುತ್ತದೆ. ರಕ್ತನಾಳಗಳಲ್ಲೂ ಇದೇ ರೀತಿಯ ಶಬ್ದ ಕೇಳಿ ಬರುವುದುಂಟು

ಮರ್ಸರೈಸೇಷನ್

(ತಂ) ಸಜಲ ಸೋಡಿಯಮ್ ಹೈಡ್ರಾಕ್ಸೈಡ್‌ಗಳಂಥ (ಕಾಸ್ಟಿಕ್ ಸೋಡ) ರಾಸಾಯನಿಕ ದ್ರವ್ಯಗಳನ್ನು ಬಳಸಿ ಜಗ್ಗಿ ಹಿಡಿದ ಹತ್ತಿ ಅಥವಾ ನೂಲು ಬಟ್ಟೆಗಳಿಗೆ ಹೊಳಪು ನೀಡಲೂ ಬಣ್ಣ ಗಟ್ಟಿಯಾಗಿ ನಿಲ್ಲುವಂತೆ ಮಾಡಲೂ ಜಾನ್ ಮರ್ಸರ್ ೧೮೪೪ರಲ್ಲಿ ಮೊದಲು ಬಳಕೆಗೆ ತಂದ ವಿಧಾನ

ಮಲಕಾರಕ ವಸ್ತು

(ವೈ) ಜಠರದಲ್ಲಿ ಜೀರ್ಣವಾಗದೆ ಉಳಿದ ಸೆಲ್ಯುಲೋಸ್ ಅಂಶ. ಉದಾ: ಧಾನ್ಯದ ತವುಡು, ಕಾಯಿಪಲ್ಯಗಳ ನಾರು, ಸೊಪ್ಪು. ಇವು ಕರುಳಿನ ಚಲನೆಗಳಿಗೆ ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತವೆ

ಮಲಕುಳಿ

(ಪ್ರಾ) ಕರುಳು, ಮೂತ್ರಸಂಬಂಧಿ ಪ್ರದೇಶ, ಪ್ರಜನನ ನಾಲೆ ಮುಂತಾದವುಗಳು ವಿಸರ್ಜಿಸುವ ತ್ಯಾಜ್ಯ ವಸ್ತುಗಳು (ಮಲ) ಸಂಗ್ರಹವಾಗುವ ಕುಳಿ. ಮಲಕೂಪ

ಮಲಬದ್ಧತೆ

(ವೈ) ಗುದದ್ವಾರದಿಂದ ವಿಸರ್ಜಿತ ವಾಗಬೇಕಾದ ತ್ಯಾಜ್ಯವಸ್ತುವು ಅತಿಶಯ ನಿರ್ದ್ರವ್ಯತೆಯಿಂದ ಗಡಸಾಗಿ ಕರುಳಿನೊಳಗೆ ಗಟ್ಟಿ ಕಟ್ಟುವ ಸ್ಥಿತಿ. ಇದರಿಂದಾಗಿ ಮಲವಿಸರ್ಜನೆ ಸರಿಯಾಗಿ ಆಗದಿರುವುದು

ಮಲಭಕ್ಷಕ

(ಪ್ರಾ) ಸೆಗಣಿ ಅಥವಾ ಲದ್ದಿ ತಿನ್ನುವ (ಉದಾ : ಜೀರುಂಡೆ)

ಮಲಮೂತ್ರಾದಿಗಳು

(ಪ್ರಾ) ದೇಹದ ತ್ಯಾಜ್ಯ ವಸ್ತುಗಳು

ಮಲವಾಸಿ

(ಪ್ರಾ) ಲದ್ದಿಯಲ್ಲಿ ಬಾಳುವ ಅಥವಾ ಬೆಳೆಯುವ

ಮಲವಿಸರ್ಜನೆ

(ಪ್ರಾ) ಶರೀರದಿಂದ ಅನವಶ್ಯ ವಸ್ತುಗಳ ಹೊರದೂಡಿಕೆ. ಶುದ್ಧೀಕರಣ

ಮಲಸಿಯಾ

(ವೈ) ೧. ರೋಗದಿಂದಾಗಿ ಶರೀರದ ಯಾವುದೇ ಅಂಗಭಾಗ ಅಥವಾ ಊತಕಗಳು ಅಪಸಾಮಾನ್ಯವಾಗಿ ಮೃದುವಾಗುವುದು. ೨. ಕೆಲವು ನಿರ್ದಿಷ್ಟ ಆಹಾರ ಪದಾರ್ಥಗಳನ್ನು, ವಿಶೇಷವಾಗಿ ಅನೈಸರ್ಗಿಕವಾದವನ್ನು, ತಿನ್ನುವ ಅಸ್ವಾಭಾವಿಕ ಅನಾರೋಗ್ಯಕರ ಬಯಕೆ

ಮಲೇರಿಯ

(ವೈ) ರಕ್ತದ ಕೆಂಪುಕಣಗಳಲ್ಲಿ ಪರೋಪಜೀವಿ ಯಾಗಿ ವಾಸಿಸುವ ಪ್ಲಾಸ್ಮೋಡಿಯಮ್ ಎಂಬ ಪ್ರೋಟೊಜೋವಾ ದಿಂದ ಬರುವ ಸೋಂಕುರೋಗ. ಜ್ವರ ಸತತವಾಗಿ ಅಥವಾ ಬಿಟ್ಟು ಬಿಟ್ಟು ಬರಬಹುದು. ಅನಾಫಿಲೀಸ್ ಹೆಣ್ಣು ಸೊಳ್ಳೆ ಕಡಿತದಿಂದ ಸಾಂಕ್ರಾಮಿಕವಾಗಿ ಹಬ್ಬುತ್ತದೆ

ಮಲ್ಟಂಗ್ಯುಲೇಟ್

(ಪ್ರಾ) ಮೂರು ಅಥವಾ ಹೆಚ್ಚು ವಿಭಜನೆಗಳಿರುವ ಗೊರಸು. ಉಪಯೋಗಕ್ಕೆ ಬರುವ ಎರಡಕ್ಕಿಂತ ಹೆಚ್ಚು ಗೊರಸುಗಳಿರುವ (ಪ್ರಾಣಿ)

ಮಲ್ಟಿಪ್ಲೆಕ್ಸ್

(ತಂ) (ಟೆಲಿಗ್ರಾಫ್ ಇತ್ಯಾದಿ ವ್ಯವಸ್ಥೆ ಕುರಿತಂತೆ) ಒಂದೇ ಕಾಲದಲ್ಲಿ ಒಂದೇ ತಂತಿ ಮೂಲಕ ಅನೇಕ ಟೆಲಿಗ್ರಾಮ್ ಇತ್ಯಾದಿಗಳನ್ನು ಕಳುಹಿಸಿಕೊಡಲು ಸಾಧ್ಯವಿರುವ. (ರೇಡಿಯೊ ಕುರಿತಂತೆ) ಒಂದೇ ಕಾಲದಲ್ಲಿ ಒಂದೇ ಸಾಧನದ ಮೂಲಕ ಅನೇಕ ಸ್ವತಂತ್ರ ಸಂeಗಳನ್ನು ಕಳುಹಿಸಿಕೊಡಲು ಅಥವಾ ಸ್ವೀಕರಿಸಲು ಸಾಧ್ಯವಿರುವ

Search Dictionaries

Loading Results

Follow Us :   
  Download Bharatavani App
  Bharatavani Windows App