भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮಯೊಸಿಸ್

(ಜೀ) ಕೋಶವಿಭಜನೆಯ ಒಂದು ಪ್ರಕ್ರಿಯೆ. ಇದರಿಂದ ನಾಲ್ಕು ಜಂಪತಿಗಳು ಉತ್ಪಾದನೆಯಾಗುತ್ತವೆ. ಇವುಗಳ ಒಂದೊಂದರಲ್ಲೂ ಜನ್ಯಕೋಶದಲ್ಲಿ ಇದ್ದುದರ ಅರ್ಧದಷ್ಟು ಕ್ರೋಮೊಸೋಮ್‌ಗಳಿರುತ್ತವೆ

ಮಯೊಸೈಟ್

(ಪ್ರಾ) ಸ್ನಾಯುಕೋಶ. ಸ್ಪಂಜ್‌ಗಳಲ್ಲಿ, ಸಂಕೋಚನ ಶಕ್ತಿಯುಳ್ಳ ಕೋಶ; ಕೆಲವು ಪ್ರೊಟೊಜೋವಾಗಳಲ್ಲಿ, ಮಯೋನೀಮ್‌ಗಳಿರುವ ಎಕ್ಟೊಪ್ಲಾಸ್ಮ್‌ನ (ಬಹಿರ್ದ್ರವ್ಯ) ಒಳಭಾಗ

ಮಯೊಹೀಮಟಿನ್

(ವೈ) ಸ್ನಾಯುಗಳಲ್ಲಿರುವ ವರ್ಣದ್ರವ್ಯ. ರಕ್ತದ ಹೀಮಟಿನ್‌ನಂತೆ ಇದೂ ಆಕ್ಸಿಜನ್‌ನೊಂದಿಗೆ ಕೂಡಿಕೊಂಡಿರುತ್ತದೆ. ನೋಡಿ: ಸೈಟೊಕ್ರೋಮ್

ಮಯೋಪತಿ

(ವೈ) ಸ್ನಾಯುಗಳ ಒಂದು ರೋಗ. ವಿಶೇಷವಾಗಿ ರೇಖಿತ ಸ್ನಾಯುಗಳಲ್ಲಿ ಸವೆತವಾಗಿ ಮಾಂಸಖಂಡ ಗಳಲ್ಲಿ ಅಧಿಕಾಧಿಕ ಶಕ್ತಿ ನಷ್ಟವಾಗುವಂಥ ಸ್ಥಿತಿ

ಮಯೋಪಿಯ

(ವೈ) ಸಮೀಪ ದೃಷ್ಟಿದೋಷ. ವ್ಯಕ್ತಿ ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲಾರ. ಕಣ್ಣುಗುಡ್ಡೆ ಅಪಸಾಮಾನ್ಯವಾಗಿ ಉದ್ದವಾಗಿರುವುದು ಮುಂತಾದ ಕಣ್ಣಿನ ರಚನೆಯಲ್ಲಿಯ ದೋಷದಿಂದಾಗಿ, ಕಣ್ಣು ವಿಶ್ರಾಂತಸ್ಥಿತಿಯಲ್ಲಿ ಇದ್ದಾಗ, ದೂರದ ವಸ್ತುಗಳಿಂದ ಬರುವ ಬೆಳಕಿನ ಸಮಾಂತರ ಕಿರಣಗಳು ಅಕ್ಷಿಪಟದ ಮೇಲಲ್ಲದೆ ಅದರ ಮುಂಭಾಗದಲ್ಲಿ ನಾಭೀಕೃತವಾಗುವುದು ಇದಕ್ಕೆ ಕಾರಣ. ಬಿಂಬ ಹಿಂದಕ್ಕೆ ಹೋಗಿ ಅಕ್ಷಿಪಟದ ಮೇಲೆ ಸರಿಯಾಗಿ ಬೀಳುವಂತೆ ಮಾಡುವ ನಿಮ್ನ ಮಸೂರಗಳ ಕನ್ನಡಕ ಉಪಯೋಗಿಸುವ ಮೂಲಕ ಈ ದೋಷವನ್ನು ನಿವಾರಿಸಿಕೊಳ್ಳಬಹುದು. ನೋಡಿ: ಸಮೀಪದೃಷ್ಟಿ

ಮರ

(ಸ) ಪೂರ್ತಿ ಬೆಳೆದಾಗ ಕನಿಷ್ಠ ೬ ಮೀಟರ್ ಎತ್ತರ, ನೆಟ್ಟಗಿನ ಕಾಂಡ ಮತ್ತು ಸೊಂಪಾದ ಎಲೆಗಳು ದಟ್ಟೈಸಿರುವ ಸರ್ವಋತು ದಾರು. ವೃಕ್ಷ

ಮರ ಇರುವೆ

(ಪ್ರಾ) ಫಾರ್ಮಿಸಿಡೀ ಕುಟುಂಬಕ್ಕೆ ಸೇರಿದ ಕೆಂಪು ಇರುವೆ. ತೆಂಗು, ಮಾವು ಮರಗಳಲ್ಲಿ ಹೆಚ್ಚು ಇರುವುದು. ಗರಿಗಳನ್ನು ಒಟ್ಟುಗೂಡಿಸಿ ಗೂಡು ನೇಯ್ದು, ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಉನ್ನತ ಮಟ್ಟದ ಸಂಘ ಜೀವನ ಪ್ರದರ್ಶಿಸುತ್ತದೆ. ನೋಡಿ: ಕೆಂಜಿಗ

ಮರಣ

(ವೈ) ಜೀವಂತ ವಸ್ತುವನ್ನು ಲಕ್ಷಣಿಸುವ ಸಮಸ್ತ ಕ್ರಿಯೆಗಳೂ ಶಾಶ್ವತವಾಗಿ ನಿಲ್ಲುವುದು. ಸಾವು

ಮರಣ ದರ

(ಸಂ) ಒಂದು ಸಮಾಜದಲ್ಲಿ ಜನರ ಸಾವಿನ ವಿದ್ಯಮಾನವನ್ನು ಅಳೆಯುವ ದರ. ಉದಾ: ಮರಣಗಳ ವಾರ್ಷಿಕ ಸಂಖ್ಯೆಯನ್ನು ಮಧ್ಯವಾರ್ಷಿಕ ಜನಸಂಖ್ಯೆಯಿಂದ ಭಾಗಿಸಿದಾಗ ದೊರೆಯುವ ದರ. ವಯಸ್ಸು, ಸಾವಿನ ಕಾರಣ ಇತ್ಯಾದಿಗಳಿಗೆ ಅನುಗುಣವಾಗಿ ದರಗಳನ್ನು ಲೆಕ್ಕ ಹಾಕಿದರೆ ಇನ್ನೂ ಸೂಕ್ಷ್ಮ ಮಾನಗಳು ದೊರೆಯುತ್ತವೆ

ಮರಣಕೋಷ್ಟಕ

(ವೈ) ಆಯಾ ವಯಸ್ಸುಗಳಲ್ಲಿ ಸರಾಸರಿ ಆಯುಃಪ್ರಮಾಣದ ಅಂದಾಜನ್ನು ಗುರುತು ಮಾಡಿರುವ ಪಟ್ಟಿ

ಮರವಜ್ರ

(ಸಾ) ಚರ್ಮ, ಮೂಳೆ, ರಾಳ ಇತ್ಯಾದಿಗಳನ್ನು ನೀರಿನೊಡನೆ ಕುದಿಸಿ ತಯಾರಿಸಿದ, ಗಡುಸಾಗಿಯೂ ಭಿದುರ ವಾಗಿಯೂ ಇರುವ, ಬಿಸಿಯಲ್ಲಿ ಅಂಟಾಗಿ ಉಪಯೋಗಿಸುವ ಕಂದು ಬಣ್ಣದ ಜೆಲಟಿನ್. ಗೋಂದು. ಸರಿ

ಮರಳ ಕಣ

(ಭೂವಿ) ಮರಳು ಶಿಲೆಯ ಒಂದು ವಿಧ. ಸಾಮಾನ್ಯ ಮರಳಿನಲ್ಲಿ ಕಣಗಳು ಗುಂಡಗಿದ್ದರೆ, ಈ ವಿಧದ ಮರಳಿನಲ್ಲಿ ಅವು ಚೂಪು ತುದಿಯವು

ಮರಳು

(ಭೂವಿ) ಖನಿಜ ಅಥವಾ ಶಿಲೆಗಳ ಅಸಂಘಟಿತ ಸಣ್ಣಕಣಗಳು (ವ್ಯಾಸ ೦.೦೬ರಿಂದ ೨ ಮಿಮೀವರೆಗೆ). ಸಾಮಾನ್ಯ ವಾಗಿ ಬೆಣಚನ್ನೇ ಒಳಗೊಂಡಿರುವುದು. ನದಿ ಮತ್ತು ಸಮುದ್ರ ದಂಡೆಗಳಲ್ಲಿ ಕಾಣಬರುತ್ತದೆ. ಉಸುಬು. ಸಿಕತ

ಮರಳುಗಲ್ಲು

(ಭೂವಿ) ಮುಖ್ಯವಾಗಿ ೦.೦೬ರಿಂದ ೨ ಮಿಮೀ ವ್ಯಾಸದ ಬೆಣಚು ಕಲ್ಲಿನ ಕಣಗಳಿರುವ ದಟ್ಟ, ಬಂಧಿತ ಜಲಜ ಶಿಲೆ. ಇದರಲ್ಲಿ ನಾನಾ ಬಗೆಯ ‘ಭಾರ ಖನಿಜ’ ಕಣಗಳೂ ಇರುವುವು. ಬಂಧಿತ ಪದಾರ್ಥದ ಲಕ್ಷಣಕ್ಕೆ ಅನುಗುಣವಾಗಿ ಮರಳುಗಲ್ಲನ್ನು ಸುಣ್ಣಯುಕ್ತ, ಕಬ್ಬಿಣಯುಕ್ತ ಮತ್ತು ಸಿಲಿಕಯುಕ್ತ ಎಂದು ಗುರ್ತಿಸಬಹುದು. ಸಿಕತ ಶಿಲೆ

ಮರಳುಪೂರಿತ ಶಿಲೆ

(ಭೂವಿ) ವಿವಿಧ ಗಾತ್ರಗಳ ಹಾಗೂ ಬಗೆಗಳ ಮರಳು ಕಣಗಳೂ ಮರಳು ಕಲ್ಲುಗಳೂ ಘಟಕಗಳಾಗಿರುವ ಅವಸಾದನ ಶಿಲೆ

ಮರಾಸ್ಮಸ್

(ವೈ) ಆಹಾರದಲ್ಲಿ ದೀರ್ಘಕಾಲ ಪ್ರೋಟೀನ್ ಹಾಗೂ ಕ್ಯಾಲೊರಿಗಳ ಕೊರತೆಯಿಂದಾಗಿ ವಿಶೇಷವಾಗಿ ಶಿಶುಗಳಲ್ಲಿ ಕಂಡುಬರುವ ಮೈಸವೆತ ಅಥವಾ ದೇಹಕ್ಷಯ

ಮರೀಚಿಕೆ

(ಭೌ) ನೆಲದೊಂದಿಗೆ ಸಂಪರ್ಕದಲ್ಲಿರುವ ಬಿಸಿ ಗಾಳಿಯ ಆಳವಿಲ್ಲದ ಸ್ತರಗಳ ಮೇಲ್ಮೈಯಲ್ಲಿ ಬೆಳಕಿನ ಸಂಪೂರ್ಣ ಪ್ರತಿಫಲನದಿಂದಾಗಿ ಉಂಟಾಗುವ ವಿದ್ಯಮಾನ. ಇದರಿಂದಾಗಿ ನೆಲದ ಮೇಲೆ ನೀರಿನ ಹರವಿನ ಭ್ರಾಮಕ ಚಿತ್ರ ಮೂಡಿ ಹೆಚ್ಚು ದೂರದ ವಸ್ತುಗಳು ಇದರಲ್ಲಿ ತಲೆಕೆಳಕಾದ ಪ್ರತಿಬಿಂಬ ಮೂಡಿಸಿ ರುವಂತೆ ಕಾಣಬರುತ್ತದೆ. ನೆಲದ ಸಮೀಪದಲ್ಲಿ ಗಾಳಿಯ ದಟ್ಟವಾದ ಶೀತಲ ಸ್ತರವಿರುವ ಧ್ರುವ ಪ್ರದೇಶಗಳಲ್ಲಿ ಭಿನ್ನ ಮಾದರಿಯ ಮರೀಚಿಕೆಗಳು ಕಂಡುಬರುತ್ತವೆ. ಇಲ್ಲಿ ವಸ್ತುವಿನಿಂದ ಬರುವ ಬೆಳಕು ವೀಕ್ಷಕನತ್ತ ಕೆಳಕ್ಕೆ ಬಾಗುವುದರಿಂದ ವಸ್ತುವು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣಿಸುತ್ತದೆ. ಮೃಗಜಲ. ಬಿಸಿಲ್ಗುದುರೆ

ಮರುನೆಡು

(ವೈ) ಅಪಘಾತದಲ್ಲಿ ಹೊಡೆತ ಬಿದ್ದು ಹಲ್ಲು ಉದುರಿದರೆ ಅದನ್ನು ಶುದ್ಧ ನೀರಿನಲ್ಲಿ ತೊಳೆದು ಒಂದು ಗಂಟೆಯೊಳಗಾಗಿ ಯಥಾಸ್ಥಳಕ್ಕೆ ಸೇರಿಸುವ ಕ್ರಿಯೆ. (ಸ) ಸಸಿಯನ್ನು ಬುಡಸಮೇತ ಕಿತ್ತು ಬೇರೊಂದು ಕಡೆ ನೆಡುವುದು. ನಾಟಿ

ಮರುಪೂರಣ

(ಭೂವಿ) ಮಳೆ ನೀರು ನೆಲದೊಳಗೆ ಜಿನುಗಿ ಅಂತರ್ಜಲ ಮಟ್ಟವನ್ನು ಕೂಡಿಕೊಳ್ಳುವುದು. ಕೃತಕ ವಾಗಿಯೂ, ಉದಾ : ಗುಂಡಿ, ಹಳ್ಳ, ಕೊಳವೆ ಬಾವಿ, ಇವುಗಳ ಮೂಲಕ ನೀರನ್ನು ಶೇಖರಿಸಿ ಅದು ಭೂಮಿಯೊಳಕ್ಕೆ ಇಂಗುವಂತೆ ಮಾಡಿ ಮರುಪೂರಣ ಮಾಡಬಹುದು

ಮರುಭೂಮಿ

(ಭೂ) ಬಲುಕಡಿಮೆ ಮಳೆ, ಉಷ್ಣತೆಯಲ್ಲಿ ತೀವ್ರ ಏರಿಳಿತಗಳು ಮತ್ತು ಪ್ರಬಲ ಮಾರುತಗಳು ಇವೆಲ್ಲ ಸೇರಿ ಮೈದಳೆದಿರುವ ವಿಸ್ತಾರವಾದ ಬಂಜರು ಭೂಮಿ. ಉದಾ: ರಾಜಸ್ಥಾನದಲ್ಲಿರುವ ಥಾರ್ ಮರುಭೂಮಿ

Search Dictionaries

Loading Results

Follow Us :   
  Download Bharatavani App
  Bharatavani Windows App