भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮನೋವಿಶ್ಲೇಷಣೆ

(ವೈ) ಮನಸ್ಸನ್ನು ಜಾಗೃತ ಮತ್ತು ಅಜಾಗೃತ ಎಂದು ಎರಡು ಭಾಗಗಳಾಗಿ ಪರಿಗಣಿಸಿ ಅವುಗಳ ಪರಸ್ಪರ ಕ್ರಿಯೆ-ಪ್ರತಿಕ್ರಿಯೆಗಳನ್ನು ಪರೀಕ್ಷಿಸುವ, ಫ್ರಾಯ್ಡ್ ಮೊದಲಾದವರು ಪ್ರತಿಪಾದಿಸಿರುವ ಮನಶ್ಶಾಸ್ತ್ರ

ಮನೋವೈಕಲ್ಯ

(ವೈ) ಮಿದುಳಿನ ಕಾಯಿಲೆಯಿಂದಾಗಿ ಅಥವಾ ಮಿದುಳಿಗೆ ಏಟುಬಿದ್ದ ಕಾರಣ ಚಾಲಕ ನರಕ್ರಿಯೆಗಳನ್ನೂ ಒಳಗೊಂಡಂತೆ ಕೇಂದ್ರ ನರಮಂಡಲ-ನಿಯಂತ್ರಿತ ಚಟುವಟಿಕೆ ಗಳೆಲ್ಲವುಗಳಲ್ಲಿ ತೋರುವ ಕ್ಷೀಣತೆ. ಕಲಿಕೆ ಸಾಮರ್ಥ್ಯ, ಸ್ಮರಣಶಕ್ತಿ ಮುಂತಾದವು ಕುಂದುತ್ತವೆ. ವಯಸ್ಸಾದಂತೆ ಮಿದುಳಿನ ದುರ್ಬಲತೆಯಿಂದಲೂ ಇದು ಕಾಣಿಸಿಕೊಳ್ಳುವುದು. ಚಿತ್ತಕ್ಷೀಣತೆ. ನೋಡಿ: ಬುದ್ಧಿರಾಹಿತ್ಯ

ಮನೋಸ್ಥಿತಿ

(ವೈ) ಮನಸ್ಸಿನ ಒಂದು ಸ್ಥಿತಿ. ಉದಾ: ಕೋಪ, ತಾಪ, ಶಾಂತಿ. ಮನೋಗುಣ

ಮಂಪರ

(ವೈ) ನಿದ್ರೆಗೂ ಎಚ್ಚರಕ್ಕೂ ನಡುವಿನ ಸ್ಥಿತಿ. ಅರೆನಿದ್ರಾವಸ್ಥೆ

ಮಮ್ಮಿಫಿಕೇಶನ್

(ವೈ) ಹೃದಯದಿಂದ ಸಾಕಷ್ಟು ರಕ್ತ ಪಡೆಯದೆ ಶರೀರದ ಒಂದು ಭಾಗ, ವಿಶೇಷವಾಗಿ ತೋಳು ಅಥವಾ ಕಾಲು, ನಿರ್ಜೀವಗೊಂಡು ಊತಕಗಳು ಒಣಗಿ ಹೋಗುವ ಪ್ರಕ್ರಿಯೆ. ಶುಷ್ಕ ಗ್ಯಾಂಗ್ರೀನ್. (ಸಾ) ಮೃತದೇಹದ ಸಂರಕ್ಷಣೆ

ಮಯಾರಿಯನ್

(ಪ್ರಾ) ಸ್ನಾಯುಗಟ್ಟುಗಳನ್ನಾಧರಿಸಿ ಪ್ರಾಣಿಗಳನ್ನು ವರ್ಗೀಕರಿಸುವ ವಿಧಾನ

ಮಯಾಸ್ತಿನಿಯ

(ವೈ) ಸ್ನಾಯುಗಳ ದುರ್ಬಲತೆ ಅಥವಾ ನಿಶ್ಶಕ್ತಿ. ಸ್ನಾಯು ನಿತ್ರಾಣ

ಮಯೊಕಾಮ

(ಪ್ರಾ) ಪಕ್ಕಪಕ್ಕದ ಎರಡು ಸ್ನಾಯು ಖಂಡಗಳ ನಡುವೆ ಇರುವ ಸಂಬಂಧಕ ಊತಕಗಳ ತೆಳುಭಿತ್ತಿ

ಮಯೊಕಾರ್ಡಿಯಮ್

(ಪ್ರಾ) ಕಶೇರುಕಗಳಲ್ಲಿ ಹೃದಯ ಸ್ನಾಯುದ್ರವ್ಯ, ಸ್ನಾಯುಭಿತ್ತಿ. ಹೃದಯ ಭಿತ್ತಿಯ ಸ್ನಾಯುಊತಕ

ಮಯೊಕಾರ್ಡಿಯೊಗ್ರಾಫ್

(ವೈ) ಹೃದಯದ ಸ್ನಾಯುಗಳ ಚಲನೆ ದಾಖಲಿಸುವ ಸಲಕರಣೆ

ಮಯೊಕಾರ್ಡೈಟಿಸ್

(ವೈ) ಹೃದಯ ಸ್ನಾಯು ಭಿತ್ತಿಯ ಉರಿಯೂತ

ಮಯೊಗ್ಲೊಬಿನ್

(ಜೀ) ಸ್ನಾಯುತಂತುಗಳಲ್ಲಿರುವ ಕಬ್ಬಿಣದ ಅಂಶವಿರುವ ಹಿಮೊಗ್ಲೊಬಿನ್‌ನಂಥ ಆಕ್ಸಿಜನ್‌ವಾಹಕ ಸಂಯುಕ್ತ ಪ್ರೋಟೀನ್

ಮಯೊಜೆನಿಸಿಸ್

(ವೈ) ನರಮಂಡಲದ ಪ್ರಚೋದನೆ ಇಲ್ಲದೆ ಸ್ವತಂತ್ರವಾಗಿ ಸ್ನಾಯುವಿನಲ್ಲಾಗುವ ಸಂಕೋಚನ. ಸ್ನಾಯು ಅಥವಾ ಇತರ ತಂತುಗಳ ಅಭಿವರ್ಧನೆ

ಮಯೊಜೆನ್

(ರ) ಶರೀರದ ಸ್ನಾಯುವಿನ ಜೀವದ್ರವ್ಯದಲ್ಲಿನ ದಾರದಂಥ ರಚನೆ ಪ್ರೋಟೀನ್. ಮಯೊಸಿನ್ ಉತ್ಪಾದನೆ ಮೂಲ

ಮಯೊಟಾಸಿಸ್

(ವೈ) ಶರೀರದಲ್ಲಿ ಸ್ನಾಯುಗಳ ಸೆಳೆತ, ಮಾಂಸಖಂಡದ ಬಿಗುಪು

ಮಯೊಟೋಮ್

(ಪ್ರಾ) ಕಶೇರುಕಗಳಲ್ಲಿ ಸ್ನಾಯು ಫಲಕ; ಮೆಟಾಮಿಯರ್‌ಗಳಿಂದಾದ ಅಕಶೇರುಕಗಳಲ್ಲಿ ಒಂದು ಮೆಟಾಮಿಯರ್‌ನ ಸ್ನಾಯುಗಳು. (ತಂ) ಸ್ನಾಯುವನ್ನು ವಿಭಜಿಸಲು ಬಳಸುವ ಸಲಕರಣೆ

ಮಯೊಫಿಬ್ರಿಲ್ಲ

(ಪ್ರಾ) ಸ್ನಾಯುಕೋಶವನ್ನು ರೂಪಿಸುವ ಆಕ್ಟಿನ್, ಮಯೊಸಿನ್ ಮತ್ತು ತತ್ಸಂಬಂಧಿತ ಪ್ರೋಟೀನ್‌ಗಳನ್ನ್ನು ಒಳಗೊಂಡ ಸಂಕೋಚಕ ತಂತು

ಮಯೊಬ್ಲಾಸ್ಟ್

(ಪ್ರಾ) ಸ್ನಾಯುತಂತುವಾಗಿ ಅಭಿವರ್ಧನೆ ಗೊಳ್ಳುವ ಆರಂಭಾವಸ್ಥೆಯ ಕೋಶ

ಮಯೊಲಜಿ

(ವೈ) ಸಹಜ ಹಾಗೂ ರೋಗಗ್ರಸ್ತ ಎರಡೂ ಸ್ಥಿತಿಗಳಲ್ಲಿ ಸ್ನಾಯುಗಳ ಅಧ್ಯಯನ ಮಾಡುವ ವಿಜ್ಞಾನ

ಮಯೊಸಿನ್

(ರ) ನಿರ್ಜೀವ ಸ್ನಾಯುವಿನಲ್ಲಿ ಮಯೊಜೆನ್ ನಿಂದ ರೂಪಿತಗೊಂಡ ಗ್ಲಾಬ್ಯುಲಿನ್ (ಒಂದು ಪ್ರೋಟೀನ್ ವರ್ಗ). ಮೃತ ಶರೀರದಲ್ಲಿ ಉಂಟಾಗುವ ತುಂಬ ಸೆಡೆತದ ಸ್ಥಿತಿಗೆ ಈ ಗ್ಲಾಬ್ಯುಲಿನ್ನೇ ಕಾರಣ ಎನ್ನಲಾಗಿದೆ

Search Dictionaries

Loading Results

Follow Us :   
  Download Bharatavani App
  Bharatavani Windows App