भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮಧ್ಯವಕ್ಷ

(ಪ್ರಾ) ಕೀಟಗಳಲ್ಲಿ ಎದೆ ರೂಪಿಸುವ ಮೂರು ಕಾಯಖಂಡಗಳಲ್ಲಿ ನಡುವಿನದು

ಮಧ್ಯವಯಸ್ಸು

(ಮ) ವ್ಯಕ್ತಿಯ ಅಭಿವರ್ಧನೆಯಲ್ಲಿ ಆರನೆಯ ಹಂತ, ವಯೋಮಿತಿ ಸುಮಾರು ೩೦-೪೦. ನೋಡಿ: ಪ್ರಬುದ್ಧತೆ. ಪ್ರೌಢತೆ

ಮಧ್ಯವರ್ತಿ

(ರ) ರಾಸಾಯನಿಕ ಕ್ರಿಯೆ ಎಂದರೆ ಒಂದು ಸ್ಥಿರ ಸಂಯುಕ್ತ ಮತ್ತೊಂದು ಸ್ಥಿರ ಸಂಯುಕ್ತವಾಗಿ ಪರಿವರ್ತನೆ ಆಗುವ ಕ್ರಿಯೆ. ಆದರೆ, ಈ ಪ್ರಕ್ರಿಯೆಯು ನಡೆಯುವಾಗ ಮಧ್ಯಂತರ ದಲ್ಲಿ ಒಂದು ಇಲ್ಲವೆ ಅನೇಕ ಅಸ್ಥಿರ ಮಧ್ಯೋತ್ಪನ್ನಗಳು ಉಂಟಾಗ ಬಹುದು. ಈಥೈಲ್ ಆಲ್ಕಹಾಲ್‌ನಿಂದ ಈಥರ್ ತಯಾರಿಸುವಾಗ ಈಥೈಲ್ ಹೈಡ್ರೊಜನ್ ಸಲ್ಫೇಟ್ ಮಧ್ಯವರ್ತಿ. ಒಂದು ಪ್ರಕ್ರಿಯೆ ಯಿಂದ ಉತ್ಪತ್ತಿಯಾಗಿ ಇನ್ನೊಂದರಲ್ಲಿ ಭಾಗವಹಿಸುವ ಸಂಯುಕ್ತ

ಮಧ್ಯಾಂತ್ರ

(ವೈ) ಕಶೇರುಕಗಳಲ್ಲಿ ಆಹಾರ ಜೀರ್ಣ ವಾಗುವ ಹಾಗೂ ರಕ್ತಗತವಾಗುವ ಕ್ರಿಯೆಗಳಿಗೆ ಸಂಬಂಧಿಸಿದ, ಅನ್ನನಾಳದ ಮಧ್ಯಭಾಗ. ಸಣ್ಣಕರುಳಿನ ಹೆಚ್ಚಿನ ಅಂಶ ಇಲ್ಲಿರುತ್ತದೆ. ಸಂಧಿಪದಿಗಳ ಅನ್ನನಾಳದ ಮಧ್ಯಭಾಗ

ಮಧ್ಯಾಹ್ನ ವೃತ್ತ

(ಖ) ನೋಡಿ: ದಕ್ಷಿಣೋತ್ತರ

ಮಧ್ಯಾಹ್ನೋತ್ತರ

(ಖ) ದಿನದಲ್ಲಿ ಮಧ್ಯಾಹ್ನ (೧೨.೦೦ ಗಂಟೆ) ಹಾಗೂ ಮಧ್ಯರಾತ್ರಿಗಳ (೨೪.೦೦ ಗಂಟೆ) ನಡುವಿನ ಕಾಲಾವಧಿ

ಮನಃಕ್ಷೋಭೆ

(ವೈ) ನರವ್ಯೂಹದ ಅತೀವ ಉದ್ರಿಕ್ತ ಸ್ಥಿತಿ. ಆವೇಗಪರ ವರ್ತನೆ, ವಿಕಲ್ಪ ಮನೋವೃತ್ತಿ, ಆತಂಕ ಭಾವ ಇದರ ಲಕ್ಷಣ. ಅಂಜಿಕೆ

ಮನಶ್ಚಿಕಿತ್ಸೆ

(ವೈ) ಸುಯೋಜಿತ, ಸುಸಂಘಟಿತ ಮನಶ್ಶಾಸ್ತ್ರೀಯ ವಿಧಾನಗಳಿಂದ ಮಾನಸಿಕ ಮತ್ತು ಭಾವಾತ್ಮಕ ಕ್ಷೋಭೆಗೆ ನೀಡುವ ಚಿಕಿತ್ಸೆ. ಇದರಲ್ಲಿ ಮೊತ್ತಮೊದಲನೆಯದಾಗಿ ಚಿಕಿತ್ಸಕನು ರೋಗಿಯೊಂದಿಗೆ ಸಹೃದಯ ಸಂಬಂಧ ಏರ್ಪಡಿಸಿಕೊಂಡು ರೋಗಿಯೇ ತನ್ನ ಕ್ಷೋಭೆಯ ಮೂಲವನ್ನು ಅರ್ಥ ಮಾಡಿಕೊಂಡು ಅದನ್ನು ನಿವಾರಿಸಿಕೊಳ್ಳಲು ರೋಗಿಗೆ ನೆರವಾಗುತ್ತಾನೆ. ಮನೋರೋಗ ಚಿಕಿತ್ಸೆ

ಮನಸ್ಸು

(ವೈ) ಸಂವೇದನೆಗಳನ್ನು ಸ್ವೀಕರಿಸುವ, ಸಂಕೇತಿಸುವ ಹಾಗೂ ವ್ಯಾಖ್ಯಾನಿಸುವ, ಸಂಚಿತ ಮಾಹಿತಿಗಳನ್ನು ಸ್ಮರಿಸುವ ಹಾಗೂ ಸುಸಂಬದ್ಧಗೊಳಿಸುವ ಮತ್ತು ಅವುಗಳ ಮೇಲೆ ಕ್ರಿಯೆ ಜರಗಿಸುವ, ನರಸಂಬಂಧಿ ಪ್ರಕ್ರಿಯೆಗಳ ಮೊತ್ತ

ಮನಸ್ಸು

(ವೈ) ಶರೀರದಲ್ಲಿ ಭೌತಿಕವಲ್ಲದ್ದೆಲ್ಲವನ್ನೂ ಸಂಕೇತಿಸುವ ಚೈತನ್ಯ

ಮನಿಲಾ ನಾರು

(ಸ) ಮ್ಯೂಸೇಸೀ ಕುಟುಂಬಕ್ಕೆ ಸೇರಿರುವ ಮತ್ತು ಬಾಳೆಗಿಡವನ್ನು ಹೋಲುವ ಒಂದು ಬಗೆಯ ಗಿಡ. ಮ್ಯೂಸ ಟೆಕ್ಸ್‌ಟೈಲಿಸ್ ವೈಜ್ಞಾನಿಕ ನಾಮ. ಫಿಲಿಪೀನ್ಸ್ ತವರು. ಕಾಗದ, ಹಗ್ಗ ಹಾಗೂ ಚಾಪೆ ತಯಾರಿಕೆಯಲ್ಲಿ ಇದರ ಬಳಕೆ

ಮನೋಗುಣ

(ವೈ) ಭಾವ, ವಾಂಛೆ, ಆವೇಗ, ವರ್ತನ ರೀತಿ ಮುಂತಾದವನ್ನು ಕುರಿತಂತೆ ಒಬ್ಬ ವ್ಯಕ್ತಿಯ ಸಾಧಾರಣ ಪ್ರವೃತ್ತಿಗಳು. ಇವು ಒಟ್ಟಾರೆ ಅವನ ಮನೋದೈಹಿಕ ಗುಣಗಳು, ಆರೋಗ್ಯ, ಸಾಮಾಜಿಕ ಪರಿಸರಗಳನ್ನವಲಂಬಿಸಿ ಇರುತ್ತವೆ. ಉದಾ: ಉದ್ವೇಗ-ನಿರುದ್ವೇಗ, ಪ್ರೀತಿ-ದ್ವೇಷ, ಕ್ರೌರ್ಯ-ಕಾರುಣ್ಯ ಮುಂತಾದವು ಮನೋಗುಣಗಳು. ಒಬ್ಬನ ನಡೆವಳಿ, ಭಾವನೆ, ಆಲೋಚನಾ ರೀತಿಗಳ ಮೇಲೆ ಪ್ರಭಾವ ಬೀರುವ ದೇಹ-ಪ್ರಕೃತಿಯ ವೈಯಕ್ತಿಕ ಗುಣ. ಮನಃಪ್ರಕೃತಿ

ಮನೋಜನ್ಮತೆ

(ವೈ) ೧. ಮನಸ್ಸಿನ ಅಥವಾ ಮಾನಸಿಕ ಗುಣ ಅಥವಾ ಕ್ರಿಯೆಯ ಉಗಮ ಮತ್ತು ವಿಕಾಸ. ೨. ದೈಹಿಕ ಮೂಲಗಳಿಂದಲ್ಲದೆ, ಮಾನಸಿಕ ಮೂಲದಿಂದಾಗುವುದು

ಮನೋದೈಹಿಕ ಚಿಕಿತ್ಸೆ

(ವೈ) ದೈಹಿಕ ಮತ್ತು ಮಾನಸಿಕ ಕ್ರಿಯೆಗಳನ್ನು ಒತ್ತಿಹೇಳುವ ಮತ್ತು ಶಾರೀರಿಕ ಹಾಗೂ ಮಾನಸಿಕ ತಂತ್ರಗಳನ್ನು ಸಂಯೋಜಿಸುವ ಚಿಕಿತ್ಸಾ ಕ್ರಮ

ಮನೋಭ್ರಾಂತಿ

(ವೈ) ವಾಸ್ತವತೆಯ ಎಲ್ಲ ಮಿತಿಯನ್ನೂ ಮೀರಿದ ಮಹಾ ಆತ್ಮವೈಭವ ಭ್ರಾಂತಿ. ಸ್ಕಿಜೋಫ್ರೀನಿಯದಂಥ ಮಾನಸಿಕ ರೋಗಗಳಲ್ಲಿ ಕಂಡುಬರುತ್ತದೆ

ಮನೋಮಾಪನ ಶಾಸ್ತ್ರ

(ವೈ) ಮನೋವೈಜ್ಞಾನಿಕ ದತ್ತಾಂಶಗಳಿಗೆ, ಮುಖ್ಯವಾಗಿ ಮಾನಸಿಕ ಪರೀಕ್ಷಾ ಮತ್ತು ಪ್ರಾಯೋಗಿಕ ದತ್ತಾಂಶಗಳ ಕ್ಷೇತ್ರದಲ್ಲಿ, ಗಣಿತದ ಮತ್ತು ಸಂಖ್ಯಾಕಲನ ವಿಜ್ಞಾನದ ಕಲ್ಪನೆಗಳ ಅನ್ವಯ

ಮನೋರೋಗ ಚಿಕಿತ್ಸಕ

(ವೈ) ಮಾನಸಿಕ ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯ

ಮನೋರೋಗ ಚಿಕಿತ್ಸೆ

(ವೈ) ಮಾನಸಿಕ ಅಸ್ವಸ್ಥತೆಯ ಅಧ್ಯಯನ, ರೋಗ ನಿದಾನ, ಚಿಕಿತ್ಸೆ ಮತ್ತು ನಿವಾರಣೆಯನ್ನು ಕುರಿತ ವೈದ್ಯಕೀಯ ವಿಜ್ಞಾನ ವಿಭಾಗ

ಮನೋವಿಕಾರ

(ವೈ) ಮಾನಸಿಕ ಮತ್ತು ಭಾವನಾತ್ಮಕ ಕ್ರಿಯೆ ತೀವ್ರ ಆಘಾತಕ್ಕೀಡಾಗುವ ಮಾನಸಿಕ ರೋಗವನ್ನು ಬಣ್ಣಿಸಲು ಸಾಧಾರಣವಾಗಿ ಬಳಸುವ ಪದ

ಮನೋವಿಜ್ಞಾನ

(ವೈ) ಮಾನವನ ಮನಸ್ಸಿನ ಸ್ವರೂಪ, ಕ್ರಿಯೆ ಮತ್ತು ವ್ಯಾಪಾರಗಳನ್ನು ಕುರಿತ ಅಧ್ಯಯನ. ಪರಿಸರ ಕುರಿತಂತೆ ಜೀವಿಯ ವರ್ತನೆ ಮತ್ತು ಮನಸ್ಸಿನ ಎಲ್ಲ ಸ್ಥಿತಿಗಳನ್ನು ಅಭ್ಯಸಿಸುವ ವಿಜ್ಞಾನ

Search Dictionaries

Loading Results

Follow Us :   
  Download Bharatavani App
  Bharatavani Windows App