भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮ್ಯಾಟ್ಟೆ

(ರ) ಸಲ್ಫೈಡ್ ಅದಿರುಗಳನ್ನು ಲೋಹೋದ್ಧರಣ ಗೊಳಿಸುವಾಗ ಉಂಟಾಗುವ ಮಧ್ಯಂತರ ಉತ್ಪನ್ನ

ಮ್ಯಾಡ್ರಿಪೋರ್

(ಪ್ರಾ) ಕಲ್ಲನ್ನು ಹೋಲುವ, ಕವಲು ಕವಲಾದ, ರಂಧ್ರಗಳಿರುವ ಹವಳಗಳ ಜಾತಿ. ಇಂಥ ಸರಂಧ್ರ ಪ್ರವಾಳಗಳನ್ನು ನಿರ್ಮಿಸುವ ಹವಳದ ಹುಳು

ಮ್ಯಾನಿಟಾಲ್

(ಸ) C6H8(OH)6. ಅನೇಕ ಸಸ್ಯಗಳಲ್ಲಿ ಕಂಡುಬರುವ, ಮರದ ಸಿಹಿರಸದ ಪ್ರಧಾನ ಭಾಗ ರೂಪಿಸುವ, ದ್ಯುತಿಪಟು ಪಾಲಿಹೈಡ್ರಿಕ್ ಆಲ್ಕಹಾಲ್. ನೀರಿನಲ್ಲಿ ವಿಲೇಯ. ದ್ರಬಿಂ ೧೬೮0 ಸೆ. ಮೂತ್ರವರ್ಧಕ, ಸುಖ ವಿರೇಚಕವಾಗಿ ಬಳಕೆ

ಮ್ಯಾನೊಮೀಟರ್

(ಭೌ) ಅನಿಲ ಅಥವಾ ದ್ರವದ ಒತ್ತಡವನ್ನು ಅಳೆಯುವ ಸಲಕರಣೆ. ಇದರಲ್ಲಿರುವ ನೀರು, ಎಣ್ಣೆ ಅಥವಾ ಪಾದರಸಭರಿತ ನಳಿಕೆಯ ಒಂದು ಭಾಗವನ್ನು ಒತ್ತಡ ಅಳೆಯಬೇಕಾದ ಅನಿಲ ಅಥವಾ ದ್ರವ ಇರುವ ಆವರಣಕ್ಕೆ ಸಂಬಂಧಿಸಲಾಗುತ್ತದೆ, ಮತ್ತೊಂದು ಭಾಗ ಮುಕ್ತವಾಗಿದೆ. ಇಲ್ಲವೇ ಅಳತೆ ದಾಖಲಿಸುವ ಉಪಕರಣಕ್ಕೆ ಜೋಡಿಸಿರಲಾಗುತ್ತದೆ. u ನಳಿಕೆ ಮ್ಯಾನೊಮೀಟರ್ ಅತ್ಯಂತ ಸರಳ ಮಾದರಿಯದು. ಅಳೆಯಬೇಕಾದ ಒತ್ತಡವನ್ನು u ನಳಿಕೆಯ ಒಂದು ಭಾಗದಲ್ಲಿ ಹಾಕಿ ಮತ್ತೊಂದು ಭಾಗವು ವಾತಾವರಣಕ್ಕೆ ತೆರೆದಿರುತ್ತದೆ. ಎರಡೂ ನಳಿಕೆಗಳಲ್ಲಿನ ದ್ರವ ಮಟ್ಟಗಳ ವ್ಯತ್ಯಾಸವು ವಾತಾವರಣದ ಒತ್ತಡಕ್ಕೆ ಸಾಪೇಕ್ಷವಾಗಿ ಅವ್ಯಕ್ತ ಒತ್ತಡದ ಪ್ರಮಾಣವನ್ನು ತಿಳಿಸುತ್ತದೆ. ಒತ್ತಡ ಮಾಪಕ

ಮ್ಯಾಫಿಕ್ ಶಿಲೆ

(ಭೂವಿ) ಕಬ್ಬಿಣ ಮತ್ತು ಮೆಗ್ನೀಸಿ ಯಮ್ ಖನಿಜಗಳಿರುವ ಕಪ್ಪು ಅಗ್ನಿಶಿಲೆ. ಉದಾ: ಡಾಲರೈಟ್

ಮ್ಯಾಮತ್

(ಪ್ರಾ) ಬೃಹತ್ ಗಾತ್ರದ ಅಳಿದಹೋದ ಆನೆ ಅಥವಾ ಆನೆ ಜಾತಿಯ ಪ್ರಾಣಿ. ಪ್ಲಿಯಿಸ್ಟೋಸೀನ್ ಪರ್ವದಲ್ಲಿ ಬಾಳಿತ್ತು. ಉದ್ದವಾದ ಮೇಲಕ್ಕೆ ಬಾಗಿದ ಕೋರೆಹಲ್ಲುಗಳು, ದಟ್ಟವಾದ ಕೇಶಾವರಣ ಇವುಗಳ ವೈಶಿಷ್ಟ್ಯ. ಈ ಪ್ರಾಣಿಯ ಹತ್ತು ಸಾವಿರ ವರ್ಷಗಳ ಹಿಂದಿನ ಈ ಪ್ರಾಣಿಯ ದೇಹ ಸಿಕ್ಕಿದೆ. ಆಧುನಿಕ ತಳಿ ತಂತ್ರಜ್ಞಾನ ಬಳಸಿ ಜೂಲಾನೆಯನ್ನು ಮರುಸೃಷ್ಟಿಸಲು ಯತ್ನಿಸಲಾಗುತ್ತಿದೆ. ಬೃಹದ್ಗಜ

ಮ್ಯಾರ್ಮಸೆಟ್

(ಪ್ರಾ) ಪ್ರೈಮೇಟ್ ಗಣಕ್ಕೆ ಸೇರಿದ ಹಲವಾರು ಜಾತಿಯ ಚಿಕ್ಕಗಾತ್ರದ ಮಂಗಗಳಿಗಿರುವ ಸಾಮಾನ್ಯ ಹೆಸರು. ಅಮೆರಿಕ ಖಂಡದ ಉಷ್ಣವಲಯದ ಕಾಡುಗಳಲ್ಲಿ ವಾಸಿಸುವ ಇವು ಕ್ಯಾಲಿತ್ರಿಕ್ಸ್, ಸೆಬುಯೆಲ, ಸ್ಯಾಗ್ವಿನಸ್ ಮತ್ತು ಲಿಯೊಂಟಿಡ್ಯೂಸ್ ಜಾತಿಗೆ ಸೇರಿವೆ. ಮೃದು ದಟ್ಟ ಕೂದಲು, ಕಿವಿ ಮೇಲೆ ರೋಮಗುಚ್ಛ, ಉದ್ದ ಬಾಲ ಇವುಗಳ ಲಕ್ಷಣ

ಮ್ಯಾಲಕೈಟ್

(ಭೂವಿ) ಸಜಲ ತಾಮ್ರದ ಕಾರ್ಬೊನೇಟ್ ಸಂಯೋಜನೆಯ ಖನಿಜ. Cu(OH)2. CuCO3. ಉಜ್ಜ್ವಲ ಹಸಿರು ಬಣ್ಣ. ಏಕನತ ವ್ಯವಸ್ಥೆಯಲ್ಲಿ ಸ್ಫಟಿಕೀಕರಣ. ತಾಮ್ರ ನಿಕ್ಷೇಪಗಳ ಉತ್ಕರ್ಷಣ ವಲಯದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸಾಸಾಂ ೪.೦೫, ಕಾಠಿಣ್ಯಾಂಕ ೩.೫-೪. ತಾಮ್ರದ ಉತ್ಪಾದನೆಯಲ್ಲಿ, ಪ್ರಶಸ್ತ ರತ್ನವಾಗಿ ಬಳಕೆ

ಮ್ಯಾಲಿಕ್ ಆಮ್ಲ

(ರ) ಸೇಬು ಮತ್ತಿತರ ಕೆಲವು ಅಪಕ್ವ ಹಣ್ಣುಗಳಲ್ಲೂ ಕೆಲವು ದ್ರಾಕ್ಷಾರಸಗಳಲ್ಲೂ ಕಂಡುಬರುವ ಆಮ್ಲ, ಸೂಜಿಯಂಥ ಬಿಳಿ ಸ್ಫಟಿಕ ರೂಪದಲ್ಲಿರುತ್ತದೆ. ಪ್ರತೀಕ HOOC.CH2.CH(OH).COOH. ದ್ರಬಿಂ. ೯೮0-೯೯0 ಸೆ

ಮ್ಯಾಲಿಯಸ್

(ಪ್ರಾ) ಧ್ವನಿ ಕಂಪನಗಳನ್ನು ಸ್ಥೂಣಾಸ್ಥಿ (ಇನ್‌ಕಸ್) ಎಂಬ ಎಲುಬಿಗೆ ರವಾನಿಸುವ ನಡುಕಿವಿಯೊಳಗಿನ ಕೊಡತಿ ಆಕಾರದ ಸಣ್ಣ ಎಲುಬು. ಮುದ್ಗರಾಸ್ಥಿ

ಮ್ಯಾಲೇಯಿಕ್ ಆಮ್ಲ

(ರ) ನಿರ್ವರ್ಣ ಸ್ಫಟಿಕ ರೂಪಿ ವಿಲೇಯ ಅಪರ್ಯಾಪ್ತ ಆಮ್ಲ. ಸೂತ್ರ HOOC.CH = CH.COOH. ದ್ರಬಿಂ. ೧೩೭0 ಸೆ. ಫ್ಯೂಮಾರಿಕ್ ಆಮ್ಲದ ಸಮಾಂಗಿ. ಸಂಶ್ಲೇಷಿತ ರಾಳಗಳ ತಯಾರಿಕೆಯಲ್ಲಿ ಬಳಕೆ

ಮ್ಯಾಲೋ

(ಸ) ಧೂಮ್ರ ವರ್ಣದ ಬಿಂದಿಗೆ ಹೂವಿನಂಥ ಹೂ ಬಿಡುವ ಕಾಡು ಅಥವಾ ತೋಟದ ಗಿಡ

ಮ್ಯಾಸೀಟರ್

(ಪ್ರಾ) ಉಚ್ಚ ಕಶೇರುಕಗಳಲ್ಲಿ, ಆಹಾರ ಜಗಿಯಲು ಬಾಯಿಯ ಕೆಳದವಡೆಯನ್ನು ಮೇಲೆತ್ತುವ ಸ್ನಾಯು

ಮ್ಯಾಸ್ಟಾಯ್ಡ್

(ಪ್ರಾ) ಕಿವಿಯ ಮೇಲ್ಭಾಗದಲ್ಲಿರುವ ತಲೆ ಎಲುಬಿನಲ್ಲಿಯ, ಮೊಲೆತೊಟ್ಟಿನಾಕಾರದ ಉಬ್ಬು. ಕಿವಿಯ ಮಧ್ಯಭಾಗದೊಂದಿಗೆ ಸಂಪರ್ಕವಿದೆ

ಮ್ಯಾಸ್ಟಿಕ್

(ರ) ಪಿಸ್ಟಾಸಿಯ ಲೆಂಟಿಸ್ಕಸ್ ಮರದ ತೊಗಟೆಯಿಂದ ತೆಗೆದ ತಿಳಿ ಹಳದಿ ರಾಳ. ನವುರಾದ ವಾರ್ನಿಷ್ (ಮೆರುಗೆಣ್ಣೆ) ತಯಾರಿಕೆಯಲ್ಲಿ ಬಳಕೆ

ಮ್ಯಾಸ್ಟೆಕ್ಟೋಮಿ

(ವೈ) ಶಸ್ತ್ರಕ್ರಿಯೆಯಿಂದ ಸ್ತ್ರೀಯ ರೋಗಗ್ರಸ್ಥ ಸ್ತನ ತೆಗೆದುಹಾಕುವುದು

ಮ್ಯಾಸ್ಟೊಡಾನ್

(ಪ್ರಾ) ಮಾಸ್ಟೊಡಾಂಟಿಡೀ ಕುಟುಂಬ, ಮ್ಯಾಮ್ಮತ್ ಜಾತಿಗೆ ಸೇರಿದ, ಆನೆಯನ್ನು ಹೋಲುವ ಸ್ತನಿ ಪ್ರಾಣಿ. ಉದ್ದ ದಂತದ, ಹಿಮಯುಗದ, ವಂಶನಷ್ಟವಾದ ಬೃಹದ್ಗಜ

ಮ್ಯೂಆನ್

(ಭೌ) 106MeVಗೆ ಸಮನಾದ ವಿರಾಮರಾಶಿ ಇರುವ ಮೂಲಕಣ. ಇತರ ಕಣಗಳೊಂದಿಗೆ ಪ್ರಬಲವಾಗಿ ವರ್ತಿಸದಂಥ ಲೆಪ್ಟಾನ್‌ಗಳಲ್ಲೊಂದು. ಋಣಾತ್ಮಕ ವಿದ್ಯುದಾವೇಶ (-1). ಆಯುಸ್ಸು ೨.೨x೧೦-೬ ಸೆಕೆಂಡ್. ಕ್ಷಯಿಸಿ ಎಲೆಕ್ಟ್ರಾನ್, ನ್ಯೂಟ್ರಿನೊ ಮತ್ತು ಆಂಟಿನ್ಯೂಟ್ರಿನೊ ರೂಪಿಸುತ್ತದೆ. ದುರ್ಬಲ ಅಂತರವರ್ತನೆಗಳಲ್ಲಷ್ಟೆ ಭಾಗವಹಿಸುತ್ತದೆ. ಆಂಟಿಮ್ಯೂವಾನ್‌ಗೆ ಧನಾತ್ಮಕ ವಿದ್ಯುದಾವೇಶವಿದ್ದು (+). ಪಾಸಿಟ್ರಾನ್, ನ್ಯೂಟ್ರಿನೊ, ಆಂಟಿನ್ಯೂಟ್ರಿನೋಗಳನ್ನು ರೂಪಿಸುತ್ತದೆ. ಮೇಸಾನ್ ಎಂದೂ ಇದಕ್ಕೆ ಹೆಸರುಂಟು. ಎಲೆಕ್ಟ್ರಾನ್‌ನ ರಾಶಿಯ ೨೦೭ ಪಟ್ಟು ರಾಶಿ. ಆರಂಭದಲ್ಲಿ ಮೇಸಾನ್‌ಗಳೆಂದು ವರ್ಗೀಕರಿಸಲಾಗಿತ್ತು. ಆದರೆ ಈ ಕಣಗಳು ೧/೨ ಗಿರಕಿ ಉಳ್ಳವಾದ್ದರಿಂದ ಲೆಪ್ಟಾನ್‌ಗಳೆಂದು ವರ್ಗೀಕೃತ

ಮ್ಯೂಕೊಸೀಲ್

(ವೈ) ಸ್ಥಳೀಯವಾಗಿ, ಉದಾಹರಣೆಗೆ ಪೊಳ್ಳು ಅಂಗದಲ್ಲಿ, ಸಂಚಯವಾದ ಲೋಳೆಸ್ರಾವ. ಅಂಥ ಅಂಗದ ಹೊರದ್ವಾರ ಮುಚ್ಚಿರುತ್ತದೆ

ಮ್ಯೂಟರೊಟೇಶನ್

(ರ) ಕೆಲವು ದ್ರಾವಣಗಳು, ಉದಾ: ಸಕ್ಕರೆ ದ್ರಾವಣಗಳು ಹಳತಾದಂತೆ ಸ್ವಪ್ರೇರಿತ ರಾಸಾಯನಿಕ ಕ್ರಿಯೆಯ ಫಲವಾಗಿ ಅವುಗಳ ದ್ಯುತಿಪಟುತ್ವದಲ್ಲಾಗುವ ಬದಲಾವಣೆ

Search Dictionaries

Loading Results

Follow Us :   
  Download Bharatavani App
  Bharatavani Windows App