भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮಂದಕ

(ತಂ) ಬೈಜಿಕ ಕ್ರಿಯಾಕಾರಿಯಲ್ಲಿ ಮುಕ್ತ ನ್ಯೂಟ್ರಾನ್‌ಗಳ ಚಲನೆಯನ್ನು ನಿಧಾನಗೊಳಿಸಿ ಅವು ಯುರೇನಿಯಮ್-೨೩೮ ಪರಮಾಣುಗಳಿಂದ ಹೀರಲ್ಪಡುವ ಸಂಭವವನ್ನು ಕಡಿಮೆ ಮಾಡಿ ಯುರೇನಿಯಮ್-೨೩೫ರ ಪರಮಾಣುಗಳ ವಿದಲನವನ್ನು ಉಂಟುಮಾಡುವ ಸಂಭವವನ್ನು ಹೆಚ್ಚಿಸುವ ವಸ್ತು. ಮಂದಕಗಳು ಸಾಮಾನ್ಯವಾಗಿ ಡ್ಯೂಟೀರಿಯಮ್ (ಭಾರಜಲದಲ್ಲಿ), ಗ್ರಾಫೈಟ್, ಬೆರಿಲಿಯಮ್‌ಗಳಂಥ ಲಘು ಧಾತುಗಳು. ನ್ಯೂಟ್ರಾನ್‌ಗಳು ಇವನ್ನು ಸಂಘಟ್ಟಿಸಿದಾಗ ಹೀರಲ್ಪಡದೆ ಅವುಗಳಿಗೆ ತಮ್ಮ ಚಲನಶಕ್ತಿಯನ್ನು ಸ್ವಲ್ಪ ಬಿಟ್ಟುಕೊಡುತ್ತವೆ. ಹೀಗೆ ಚಲನಶಕ್ತಿಗುಂದಿದ ನ್ಯೂಟ್ರಾನ್‌ಗಳಿಗೆ ಉಷ್ಣೀಯ ನ್ಯೂಟ್ರಾನ್ ಗಳೆಂದು ಹೆಸರು. ಮಂದಕಾರಿ

ಮಂದಗತಿ ಚಲಚ್ಚಿತ್ರ

(ತಂ) ಚಲಚ್ಚಿತ್ರದ ಶಿಷ್ಟ ಪ್ರಕ್ಷೇಪಣ ದರಕ್ಕಿಂತ (ಸೆಕೆಂಡಿಗೆ ೨೬ ಫ್ರೇಮ್‌ಗಳು) ಹೆಚ್ಚಿನ ವೇಗದಲ್ಲಿ ದೃಶ್ಯವನ್ನು ಛಾಯಾಗ್ರಹಣ ಮಾಡಿದ ಚಲಚ್ಚಿತ್ರ. ಇದನ್ನು ಎಂದಿನಂತೆ ಪ್ರಕ್ಷೇಪಣೆ ಮಾಡಿದಾಗ ದೃಶ್ಯ ಕ್ರಿಯೆ ನಿಧಾನವಾಗಿ ಜರಗುತ್ತಿರುವಂತೆ ಕಾಣಬರುತ್ತದೆ

ಮದಚಕ್ರ

(ಪ್ರಾ) ಲೈಂಗಿಕವಾಗಿ ಪಕ್ವಗೊಂಡ, ಗರ್ಭ ಧರಿಸಿರದ, ಹೆಚ್ಚಿನ ಸ್ತ್ರೀ ಸ್ತನಿಗಳಲ್ಲಿ ಕಂಡುಬರುವ ಸಂತಾನೋತ್ಪಾದಕ ಚಟುವಟಿಕೆಯ ಚಕ್ರ. ಇದು ನಾಲ್ಕು ಘಟ್ಟ ಗಳಲ್ಲಿ ಜರಗುತ್ತದೆ; ೧. ಅಂಡಾಶಯದಲ್ಲಿ ಪಕ್ವವಾಗುತ್ತಿರುವ ಅಂಡವನ್ನಾವರಿಸುವ ಚೀಲ ರಚನೆ. ೨. ಅಂಡಕೋಶಗಳ ಬಿಡುಗಡೆ. ಸ್ತ್ರೀಯು ಸಂಭೋಗಕ್ಕೆ ಸಿದ್ಧಳಾಗಿ ಪುರುಷನಿಗೆ ಲೈಂಗಿಕವಾಗಿ ಹೆಚ್ಚು ಆಕರ್ಷಕಳಾಗುತ್ತಾಳೆ. ೩. ಅಂಡಚೀಲ ಒಡೆದು ಅಂಡಗಳು ವಿಸರ್ಜನೆಗೊಂಡು ಸಂತಾನೋತ್ಪತ್ತಿಗೆ ಅವಶ್ಯವಾದ ಹೊಂದಾಣಿಕೆ ಗಳಾಗುತ್ತವೆ. ೪. ಗರ್ಭಾಶಯವು ಅಂಡಾಣುವಿನ ನೆಡುವಿಕೆಗೆ ಸಿದ್ಧಗೊಳ್ಳುತ್ತದೆ. (ಸಂತಾನ ಅಭಿವರ್ಧನೆ ಆಗಿದ್ದಲ್ಲಿ) ಕ್ರಮೇಣ ಚಕ್ರದ ಆರಂಭದೆಶೆಗೆ ಹಿಂದಿರುಗುವುದು. ಚಕ್ರದ ಅವಧಿ ಬೇರೆಬೇರೆ ಪ್ರಭೇದಗಳಿಗೆ ಬೇರೆಬೇರೆ. ದೊಡ್ಡ ಆಕಾರದ ಸ್ತನಿಗಳಲ್ಲಿ ವರ್ಷಕ್ಕೆ ಒಂದು ಚಕ್ರ. ಪುರುಷರಲ್ಲೂ ಲೈಂಗಿಕ ಚಟುವಟಿಕೆಯ ಇಂಥ ಚಕ್ರವಿದೆ. ಕೆಲವು ಪ್ರಭೇದಗಳಲ್ಲಿ ವರ್ಷದಲ್ಲಿ ಅನೇಕ ಚಕ್ರಗಳು ಇರುತ್ತವೆ. ಪುರುಷ ಇಡೀಕಾಲ ಲೈಂಗಿಕವಾಗಿ ಚುರುಕಾಗಿರುತ್ತಾನೆ

ಮಂದನ

(ತಂ) ಯಾಂತ್ರಿಕ ವ್ಯವಸ್ಥೆಯಲ್ಲಿ ಘರ್ಷಣೆ ಸ್ನಿಗ್ಧತೆಗಳನ್ನು, ವಿದ್ಯುತ್ ವ್ಯವಸ್ಥೆಯಲ್ಲಿ ಪ್ರತಿರೋಧವನ್ನು, ಬಳಸಿಕೊಂಡು ಶಕ್ತಿ ವಿಸರಣೆ ಅಥವಾ ಕ್ಷಯದ ಮೂಲಕ ವಸ್ತುವಿನ ಕಂಪನವನ್ನು ಕುಗ್ಗಿಸುವುದು. ಎರೆ ಬೀಡು ಕಬ್ಬಿಣವು ಮಂದನ ಸಾಮರ್ಥ್ಯ ಪಡೆದಿರುವುದರಿಂದಾಗಿ ಇದನ್ನು ಯಂತ್ರ ಸಲಕರಣೆಗಳ ತಯಾರಿಕೆಯಲ್ಲಿ ಬಳಸುವುದುಂಟು. ಉದಾ: ಲೇತ್‌ಪೀಠ. (ಭೌ) ಶಬ್ದ ಶಕ್ತಿಯನ್ನು ಶಾಖ ಶಕ್ತಿಯಾಗಿ ಪರಿವರ್ತಿಸುವುದು. ವಸ್ತುವಿನ ಮೂಲಕ ಸಾಗುತ್ತಿರುವ ಶಬ್ದ ಶಕ್ತಿಯನ್ನು ಪರಮಾಣು ಸ್ಥಾನಪಲ್ಲಟ ಪ್ರಕ್ರಿಯೆಗಳ ಮೂಲಕ ಮಂದನಗೊಳಿಸಿ ಶಾಖ ಶಕ್ತಿಯಾಗಿ ಪರಿವರ್ತಿಸುವುದು

ಮಂದನ

(ತಂ) ಸಂಘಟ್ಟನೆಯಿಂದ ಮಾತ್ರವೇ ಆಗುವ ಚಲನಶಕ್ತಿ ನಷ್ಟ. ಇದರಿಂದಾಗಿ ಕ್ರಿಯಾಕಾರಿಗಳಲ್ಲಿ ನ್ಯೂಟ್ರಾನ್‌ಗಳ ಚಲನೆ ನಿಧಾನಗೊಳ್ಳುತ್ತದೆ

ಮಂದಬುದ್ಧಿ

(ವೈ) ೭-೮ ವಯಸ್ಸಿನ ಮಗುವಿನ ಬುದ್ಧಿಸ್ಥಿತಿ ಮೀರದೆ, ಬುದ್ಧಿ ಬೆಳವಣಿಗೆ ನಿಂತುಹೋದ ಪ್ರಾಪ್ತ ವಯಸ್ಕ. ೫೦-೬೦ರ ನಡುವಿನ ಬುದ್ಧ್ಯಂಕ (ಐಕ್ಯೂ) ಉಳ್ಳವ್ಯಕ್ತಿ

ಮದ್ದು

(ವೈ) ಶರೀರದ ಅಥವಾ ಮನಸ್ಸಿನ ರೋಗಗ್ರಸ್ತ ಸ್ಥಿತಿಯನ್ನು ಇಲ್ಲವೇ ಮತ್ತಾವುದೇ ತೊಂದರೆಯನ್ನು ನಿವಾರಿಸಲು ಬಳಸುವ ಯಾವುದೇ ವಸ್ತು ಅಥವಾ ಚಿಕಿತ್ಸಾ ವಿಧಾನ. ಚಿಕಿತ್ಸೆ. ಔಷಧಿ

ಮದ್ದುಗುಂಡು

(ತಂ) ಹಠಾತ್ತನೆ ಸಿಡಿದು ಜನ, ಆಸ್ತಿ, ನಾಶಗೈಯುವ ಯುದ್ಧ ಸಾಮಗ್ರಿ

ಮದ್ಯತೆ

(ವೈ) ಮಿತಿಮೀರಿದ ಮದ್ಯ ಸೇವನೆಯ ಪರಿಣಾಮವಾದ ರೋಗಾವಸ್ಥೆ. ಆಲ್ಕಹಾಲ್ ಚಟ

ಮದ್ಯೋನ್ಮಾದ

(ವೈ) ತೀವ್ರ ಕುಡಿತ ಚಟದ ಪರಿಣಾಮವಾಗಿ ತಲೆದೋರುವ ಮಾನಸಿಕ ಉದ್ರೇಕ

ಮಧುಮೇಹ

(ವೈ) ಕಾರ್ಬೊಹೈಡ್ರೇಟ್ ಬಳಕೆಯಲ್ಲಿನ ನ್ಯೂನತೆಯ ಪರಿಣಾಮವಾಗಿ ದೈಹಿಕ ಉಪಾಪಚಯಕ ವ್ಯವಸ್ಥೆಯಲ್ಲಿ ಆಗುವ ಏರುಪೇರು. ಮೇದೋಜೀರಕಾಂಗದಲ್ಲಿ ಇನ್ಸುಲಿನ್‌ನ ಅಸಮರ್ಪಕ ಅಥವಾ ಅಪಸಾಮಾನ್ಯ ಅಲ್ಪ- ಉತ್ಪಾದನೆಗೆ ಇದು ಸಂಬಂಧಿಸಿದೆ. ಪರಿಣಾಮವಾಗಿ ರಕ್ತದಲ್ಲೂ ಮೂತ್ರದಲ್ಲೂ ಸಕ್ಕರೆಯ ಅಂಶ ಹೆಚ್ಚಾಗುತ್ತದೆ. ತೀವ್ರದಾಹ, ಅತಿಶಯ ಮೂತ್ರಸ್ರಾವ, ನಿಶ್ಶಕ್ತಿ ಮುಂತಾದವು ಈ ರೋಗದ ಲಕ್ಷಣಗಳು. ಇನ್ಸುಲಿನ್‌ಅನ್ನು ನೇರವಾಗಿ ತೆಗೆದುಕೊಳ್ಳುವ ಮೂಲಕ ಅಥವಾ ಇನ್ಸುಲಿನ್ ಉತ್ಪಾದಕ ಮದ್ದು ಅಥವಾ ಆಹಾರ ಸೇವಿಸುವ ಮೂಲಕ ಈ ರೋಗವನ್ನು ಹದ್ದುಬಸ್ತಿನಲ್ಲಿಡುವ ಸಾಧ್ಯತೆ ಇದೆ. ಸಿಹಿ ಮೂತ್ರರೋಗ. ಸಕ್ಕರೆ ರೋಗ

ಮಧ್ಯಚರ್ಮ

(ಪ್ರಾ) ಭ್ರೂಣದ ಪ್ರಾರಂಭಾವಸ್ಥೆಯಾದ ಗ್ಯಾಸ್ಟ್ರುಲಾದಲ್ಲಿ ಬಾಹ್ಯಚರ್ಮ ಅಂತಃಚರ್ಮಗಳ ನಡುವೆ ಇರುವ ಕೋಶಗಳ ಸ್ತರ. ಇದು ಕ್ರಮೇಣ ಸ್ನಾಯುಗಳಾಗಿ, ಪರಿಚಲನಾ ಹಾಗೂ ಲೈಂಗಿಕ ಅಂಗಗಳಾಗಿ ವಿಕಾಸಗೊಳ್ಳುತ್ತದೆ. ಕಶೇರುಕಗಳಲ್ಲಿ ವಿಸರ್ಜಕಾಂಗ ಅಸ್ಥಿಪಂಜರಗಳಾಗಿಯೂ ಬೆಳೆಯುತ್ತದೆ. ನೋಡಿ: ಮೆಸೊಬ್ಲಾಸ್ಟ್

ಮಧ್ಯತ್ವ

(ಗ) ಎರಡು ರಾಶಿಗಳ ನಡುವೆ ಇರುವುದು. ಉದಾ: ೩೩, ೨೨, ೧೭ ಸಂಖ್ಯೆಗಳಲ್ಲಿ ಸಾಂಖ್ಯಕ ಮೌಲ್ಯರೀತ್ಯ ೧೭ ಉಳಿದೆರಡರ ನಡುವೆ ಇದೆ

ಮಧ್ಯದಂಡ

(ತಂ) ಎಂಜಿನ್ ಅಥವಾ ಮೋಟರಿನಿಂದ ವಿವಿಧ ಯಂತ್ರಗಳಿಗೆ ಚಲನೆಯನ್ನು ಪಟ್ಟೆಗಳ ಮೂಲಕ ವರ್ಗಾಯಿಸುವಾಗ ನೆರವಾಗುವ ಮಧ್ಯವರ್ತಿ ದಂಡ. ಇದರಲ್ಲಿಯ ಚಕ್ರಗಳ ಗಾತ್ರ ಬದಲಾಯಿಸಿ ಚಲನದರವನ್ನು ಬೇಕಾದಂತೆ ಹೆಚ್ಚಿಸಬಹುದು ಅಥವಾ ತಗ್ಗಿಸಬಹುದು

ಮಧ್ಯದಂತೀ

(ಪ್ರಾ) ಕೀಟಗಳಲ್ಲಿ ಮಧ್ಯಮ ಗಾತ್ರದ ಹಲ್ಲಿನಂಥ ಭಾಗಗಳುಳ್ಳ. ಜೀವಿಗಳಲ್ಲಿ ಮಧ್ಯಮ ಗಾತ್ರದ ಹಲ್ಲುಗಳುಳ್ಳ

ಮಧ್ಯಪೀನ

(ಜೀ) ಒಂದು ಪಾರ್ಶ್ವ ಉಬ್ಬಿರುವುದು

ಮಧ್ಯಫಲಭಿತ್ತಿ

(ಸ) ಫಲಭಿತ್ತಿಯ (ಪೆರಿಕಾರ್ಪ್) ಮೂರು ಸ್ತರಗಳಲ್ಲಿ ಮಧ್ಯದ್ದು. ಬಹುವೇಳೆ ಮೆದು ತಿರುಳಿನಿಂದ ಕೂಡಿದುದು

ಮಧ್ಯಮ ತರಂಗ

(ಭೌ) ಷಾರ್ಟ್, ಮೀಡಿಯಮ್ ವ್ಯಾಪ್ತಿಯ ರೇಡಿಯೋ ಪ್ರಸರಣದಲ್ಲಿ ಬಳಸುವ ೧೦೦ ಮೀಟರ್ ಗಳಿಂದ ೧೦೦೦ ಮೀಟರ್‌ಗಳವರೆಗಿನ ಅಲೆಯುದ್ದದ ತರಂಗ

ಮಧ್ಯಮಂಡಲ

(ಖ) ವಾಯುಮಂಡಲದ ಸ್ತರಸೀಮೆ (ಸ್ಟ್ರಾಟೊಪಾಸ್) ಹಾಗೂ ಮಧ್ಯಸೀಮೆಗಳ (ಮೆಸೊಪಾಸ್) (೫೦-೮೫ ಕಿಮೀ) ನಡುವಿನ ವಲಯ. ಇಲ್ಲಿ ಸಾಮಾನ್ಯವಾಗಿ ಎತ್ತರ ಹೆಚ್ಚಿದಂತೆ ಉಷ್ಣತೆ ತಗ್ಗುತ್ತದೆ. ನೋಡಿ: ವಾಯುಮಂಡಲ

ಮಧ್ಯರೇಖೆ

(ಗ) ತ್ರಿಭುಜದ ಯಾವುದೇ ಶೃಂಗವನ್ನು ಎದುರು ಭುಜದ ಮಧ್ಯಬಿಂದುವಿಗೆ ಜೋಡಿಸುವ ರೇಖೆ. ತ್ರಿಭುಜದ ಮೂರು ಮಧ್ಯರೇಖೆಗಳೂ ಏಕಬಿಂದುವಿನಲ್ಲಿ ಸಂಧಿಸುತ್ತವೆ. (ಏಕಬಿಂದುಸ್ಥ)

Search Dictionaries

Loading Results

Follow Us :   
  Download Bharatavani App
  Bharatavani Windows App